ವಿನಯ್ ನನ್ನ ಗಂಡನ ದವಡೆ ಹಲ್ಲು ಮುರಿದಿದ್ದರು!: ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದ ಕಿರುತೆರೆ ನಟಿ

ಬಿಗ್ ಬಾಸ್ ಸೀಸನ್ 10 ಹಲವು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಜನರು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. ದೊಡ್ಮನೆಯ ಸದಸ್ಯರ ನಡವಳಿಕೆ ಬಗ್ಗೆ ಟೀಕೆಗಳು ಬರುತ್ತಿವೆ. ವಿನಯ್ ಗೌಡ ಅವರ ಮಿತಿ ಮೀರಿದ ವರ್ತನೆಗೆ ವೀಕ್ಷಕರು ಛೀಮಾರಿ ಹಾಕುತ್ತಿದ್ದಾರೆ. ಇತ್ತೀಚೆಗೆ ನಟಿ ಕಾವ್ಯಾ ಶಾಸ್ತ್ರಿ ಮಕ್ಕಳನ್ನು ಇಂತಹ ಶೋಗಳಿಂದ ದೂರವಿಡಿ ಎಂದಿದ್ದರು. ಇದರ ಬೆನ್ನಲ್ಲೇ ಕಿರುತೆರೆ ಮತ್ತು ಸಿನಿಮಾ ನಟಿ ಇಳಾ ವಿಟ್ಲಾ ಕೂಡ ವಿನಯ್ ಗೌಡರಿಂದ ಆದ ಕಹಿ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾಗ ಆದ ಕಹಿ ಅನುಭವವನ್ನು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ವಿವರವಾದ ಫೇಸ್‌ಬುಕ್ ಬರಹ ಹೀಗಿದೆ.

Bigg Boss Kannada Season 10: Actress Ilaa Vittla serious allegations on Bigg boss contestant Vinay Gowda


ಇಂತಹ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ!

"ನಾನೊಬ್ಬಳು ಕಲಾವಿದೆ ಆಗಿ ರಿಯಾಲಿ ಟೀ ಶೋಗಳನ್ನ ಮಾಡಿದ್ದಕ್ಕೆ ಹಾಗೇ ಸಾಮಾನ್ಯವಾಗಿ ಬಿಗ್ ಬಾಸ್ ನೋಡ್ತಿರೋ ಕಾರಣ ವಿನಯ್ ಅವರನ್ನ ಹತ್ತಿರದಿಂದ ನೋಡಿ ಅನುಭವಿಸಿರೋದಕ್ಕೆ ಪೋಸ್ಟ್ ಮಾಡ್ತಿದೀನಿ. ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಸುಮ್ನೆ ಬಿಡಲ್ಲ ಅಂತಾನೆ ಇರ್ತಾರಲ್ವಾ, ಆದ್ರೆ ಏನ್ ಮಾಡ್ತಿದ್ರು ಅವರಿಂದ ಬೇರೆಯವರಿಗೆ ತೊಂದರೆ ಆದ್ರೆ ಏನ್ ಮಾಡ್ಬೇಕಿತ್ತು?. ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತೆ. ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ. ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ ನಾನು ಗೆಲ್ಲಲೇ ಬೇಕು ಅನ್ನೋ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ" ಎಂದಿದ್ದಾರೆ.

"ರಿಯಾಲಿಟಿ ಶೋನೇ ಹಾಗೆ ಏನು ಮಾಡಕ್ಕಾಗಲ್ಲ. ಇಷ್ಟ ಇದ್ರೆ ಹೋಗ್ಬೇಕು ಇಲ್ಲ ಅಂದ್ರೆ ಸುಮ್ನಿರಬೇಕು. ಬಿಗ್ ಬಾಸ್ ಅಂದ್ರೆ ನನಗೆ ಮೊದಲಿಂದಾನು ಇಷ್ಟ. ನಮ್ಮ ಕಿರುತೆರೆ ಹೆಮ್ಮೆ. ಮೊದ್ಲು ಕಿರುತೆರೆ ಅಂತ ತಾತ್ಸಾರ ಮಾಡಿದವರನ್ನು ಕಿರುತೆರೆಗೆ ಕರ್ಕೊಂಡು ಬಂದಿರುವ ಹೆಮ್ಮೆಯ ಶೋ. ಕಿಚ್ಚ ಸುದೀಪ್ ಅವರು ಹೇಳುವ ಬುದ್ಧಿ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತೆ. ಬಿಗ್ ಬಾಸ್ ಗೆ ಹೋಗ್ಬೇಕು ಅಂತೇನಿಲ್ಲ ಸುಮ್ನೆ ಕೇಳಿಸಿಕೊಂಡರೆ ಸಾಕಾಗುತ್ತೆ" ಎಂದು ಹೊಗಳಿದ್ದಾರೆ.

ನನ್ನ ಗಂಡನ ದವಡೆ ಹಲ್ಲು ಮುರಿದ್ರು!

"ಇದೇ ವಿನಯ್ ಸೂಪರ್ ಜೋಡಿ ಟೈಮಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡ್ಕೊಂಡು ಬಂದು ನಮ್ಮತ್ರ ಹೇಳ್ತಾ ಇದ್ರು ನನಗೇನಾದ್ರೂ ಆದ್ರೆ ನಾನ್ ಯಾರನ್ನು ಸುಮ್ಮನೆ ಬಿಡಲ್ಲ ಅಂತ ಹೆದ್ರಿಸೋದು. ಆಮೇಲೆ ಅಂತ ಕೆಲಸ ಅವರೇ ಮಾಡೋದು. ಅವತ್ತು ವಿನಯ್ ಜೊತೆ ನಮ್ಮೆಜಮಾನ್ರು ಆಡಿದಾಗ ಆಟದಲ್ಲಿ ದವಡೆ ಹಲ್ಲು ಮುರಿದ್ರು. ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್ ಮಾಡಿದ್ರು, ಆದ್ರೂ ಅವರಿಗೆ ನಾವು ಒಂದು ಮಾತು ಏನು ಹೇಳಿಲ್ಲ. ಶೋ ಮುಗಿದ್ ಮೇಲೆ ನೋವು ಜಾಸ್ತಿ ಆಯ್ತು. ಆರು ತಿಂಗಳು ಸರಿಯಾಗಿ ಕೆಲಸ ಮಾಡಲು ಆಗದೇ ಆರ್ಯನ್ ಒದ್ದಾಡಿದ್ದಾರೆ. ಡಾಕ್ಟ್ರು ಏನು ಮಾಡಬಾರದು ರೆಸ್ಟ್ ಮಾಡಿ ಅಂತ ಹೇಳಿದ್ರು. ಅವತ್ತು ನಾನು ಎಷ್ಟು ಕಣ್ಣೀರು ಹಾಕ್ತ ಕೂತಿದ್ದೆ ಅನ್ನೋದು ಭಗವಂತನಿಗೆ ಮಾತ್ರ ಗೊತ್ತು. ಇದೇ ಪರಿಸ್ಥಿತಿ ಅವರಿಗೆ ಬಂದಿದ್ರೆ ಏನ್ ಮಾಡ್ತಿದ್ರು..?" ಎಂದು ತಮ್ಮ ನೋವು ಹೊರಹಾಕಿದ್ದಾರೆ.

Bigg Boss Kannada Season 10: Actress Ilaa Vittla serious allegations on Bigg boss contestant Vinay Gowda

"ನಾವು ಕಲಾವಿದರಾಗಿ ಆಗಿ ಹೋಗಿರೋ ಘಟನೆಗಳಿಗೆ ರಿಯಾಕ್ಷನ್ ಕೊಡೋದು, ದುರಹಂಕಾರದ ಮಾತುಗಳನ್ನ ಆಡೋದು ಒಬ್ಬರಿಗೊಬ್ರು ಜಗಳ ಮಾಡ್ಕೊಂಡು ಲೈಫ್ ಹಾಳ್ ಮಾಡ್ಕೊಳೋದು ಬೇಡ ಎಲ್ಲರೂ ಚೆನ್ನಾಗಿರ್ಲಿ ಅಂತ ಸುಮ್ನೆ ಇದ್ವಿ. ಅದ್ರಲ್ಲೂ ಅವರ ತಾಯಿ ತುಂಬಾ ಒಳ್ಳೆ ಮನಸ್ಸು ಇರೋರು ಯಾರ್ ಗೆದ್ರು ಪರ್ವಾಗಿಲ್ಲ ಎಲ್ಲಾ ನನ್ನ ಮಕ್ಕಳೇ ಅಂತ ಹೇಳಿರೋ ಮಾತು ಈಗಲೂ ನನಗೆ ನೆನಪಿದೆ. ಸೋ ಸ್ವಲ್ಪ ದಿನ ನೋವಿರುತ್ತೆ, ಆಮೇಲೆ ಇರೋದೇ ಜೀವನ ಅಂತ ಸುಮ್ಮನೆ ಇದ್ವಿ" ಎಂದು ಇಳಾ ವಿಟ್ಲಾ ಬರೆದುಕೊಂಡಿದ್ದಾರೆ.

"ಈ ತರ ಹೆದ್ರಿಸೋರಿಗೆ ನಂದೊಂದು ಮಾತು, ಒಂದು ವೇಳೆ ನೀವೇನಾದ್ರೂ ಮಾಡಿದ್ರೆ ಬೇರೆಯವರು ಕಡ್ಲೆಪುರಿ ತಿನ್ಕೊಂಡು ಕೂತಿರ್ತಾರಾ..? ಗೊತ್ತಿಲ್ಲದೆ ಆಟದಲ್ಲಿ ಏನೋ ಒಂದಾದರೆ ಈ ಮನುಷ್ಯನ ಯೋಗ್ಯತೆನೆ ಇಷ್ಟು ಹಾಳಾಗೋಗ್ಲಿ ಅಂತ ಬಿಡಬಹುದು ಆಟದಿಂದ ಹೊರಗೆ ಬಂದ ಮೇಲೆನೂ ಇವ್ರು ನಾ ನಿನ್ನ ಹೊರಗ್ ಹೋದ್ಮೇಲೆ ಸುಮ್ನೆ ಬಿಡಲ್ಲ ನಾನು ಸುಮ್ಮನೆ ಬಿಡಲ್ಲ ಅಂದ್ರೆ ಎದುರುಗಡೆಯವರು ಕೈಕಟ್ಟಿ ಕೂತ್ಕೊಂಡಿರ್ತಾರಾ..? ಅಯೋ ದೇವ್ರೇ ಅವರು ಅದಕ್ಕಿಂತ ದೊಡ್ಡ ರೌಡಿಗಳಾಗಿರುತ್ತಾರೆ ಬಿಡ್ತಾರಾ..? ಇವರೆಲ್ಲ ಲೈಫ್ ಹಾಳ್ ಮಾಡ್ಕೊಳಕ್ ಬಂದಿದ್ದಾರಾ ಜೀವನ ಮಾಡ್ಕೊಳ್ಳೋಕೆ ಬಂದಿದ್ದರೋ ಒಂದು ಅರ್ಥ ಆಗ್ತಿಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ನಾನು ಬದಲಾಗಿದ್ದಾರೆ ಎಂದುಕೊಂಡಿದ್ದೆ, ಆದರೆ, ಇವರು ಬದಲಾಗಲ್ಲ!

" ಫ್ಯಾಮಿಲಿ ಮುಖ್ಯ ಅಂತ 50 ಸರಿ ಹೇಳ್ತಿರಲ್ಲ, ಒಂದು ವೇಳೆ ನೀವೇನಾದರೂ ಮಾಡಿದ್ರಿ ಅಂತ ಇಟ್ಕೊಳಿ ಎದ್ರುಗಡೆ ಅವ್ರು ನಿಮ್ಮನ್ ಏನೋ ಒಂದು ಮಾಡ್ತಾರೆ. ಅಲ್ಲಿಗೆ ಯಾರಿಂದ ಯಾರು ಫ್ಯಾಮಿಲಿ ಹಾಳ್ ಮಾಡುದ್ರು..? ಅಷ್ಟು ತಲೆ ಇಲ್ವಾ ಇವರಿಗೆ..? ಕರ್ಮ, ಎಲ್ಲಾ ಆದ್ಮೇಲೆ ಏನು ಗೊತ್ತಿಲ್ಲದಂಗೆ ಸಾರಿ ಸರ್ ಸಾರಿ ಸರ್ ಅಂತ ಹೇಳೋದು ಅಷ್ಟೇ. ನಾನು ಬದಲಾಗಿದ್ದಾರೆ ಅನ್ಕೊಂಡಿದ್ದೆ. ಯಾಕೆಂದ್ರೆ ಒಬ್ಬ ಮನುಷ್ಯ ಅಂದ ಮೇಲೆ ತಪ್ಪು ಮಾಡೋದು ಸಹಜ ಒಂದು ಸಲ ಮಾಡಿದ್ಮೇಲೆ ಮತ್ತೆ ಅದೇ ತಪ್ಪನ್ನು, ಇವರು ಬದಲಾಗಲ್ಲ. ಯಾಕೆಂದ್ರೆ ಇಂಥ ಬಿಗ್ ಬಾಸ್ ಅಂತ ಶೋದಲ್ಲೂನು ಕಂಟ್ರೋಲ್ ಇಲ್ದೆ ಮಾತಾಡ್ತಿದ್ದಾರೆ ಅಂದ್ರೆ ಹೊರಗಡೆ ಹೇಗಿರಬಹುದು ಅಷ್ಟೇ ನನ್ನ ಪ್ರಶ್ನೆ, ಭಾಗವಂತ ಇನ್ನಾದರೂ ಒಳ್ಳೆ ಬುದ್ದಿ ಕೊಡ್ಲಿ" ಎಂದಿದ್ದಾರೆ.

"ನನ್ ಜೀವನದಲ್ಲಿ ನಾನು ಯಾರಿಗೂ ಹೆದರೋ ಮಾತಿಲ್ಲ. ನನ್ ಯಾರ್ ಸುದ್ದಿಗೂ ಹೋಗಲ್ಲ ಯಾಕೆಂದ್ರೆ ಎಲ್ಲರ ಫ್ಯಾಮಿಲಿನು ಚೆನ್ನಾಗಿರಬೇಕು. ಹೋಗುವಾಗ ಏನು ತಗೊಂಡ್ ಹೋಗಲ್ಲ ನಾವು ಅಂತ ತಿಳ್ಕೊಂಡಿರೋಳು ಬದುಕಿರೋದು ಇಷ್ಟು ದಿನ ಪ್ರೀತಿ ವಿಶ್ವಾಸ ನಂಬಿಕೆ ಇಂದಾನೆ ಜೀವನ ಮಾಡಬೇಕು ಅನ್ನೋದು. ನನ್ ಸುದ್ದಿಗೆ ಬಂದ್ರೆ ಡು ಆರ್ ಡೈ ಕೆಟ್ಟ ಕೆಲಸ ಮಾಡಿ ನೂರು ದಿನ ಬದುಕುವುದಕ್ಕಿಂತ ಒಳ್ಳೆ ಕೆಲಸ ಮಾಡಿ ಒಂದಿನ ಬದುಕೋದು ಗ್ರೇಟ್. ಮನಸ್ಸಿನಲ್ಲಿರೋದನ್ನ ಹೇಳಲೇಬೇಕು ಆಗಲೇ ನಂಗೆ ಸಮಾಧಾನ" ಎಂದು ಇಳಾ ವಿಟ್ಲಾ ತಮ್ಮ ಮನದ ನೋವನ್ನು ಹೊರಹಾಕಿದ್ದಾರೆ.

More from Filmibeat

English summary
Bigg Boss Kannada: Actress Ilaa Vittla serious allegations on Vinay Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X