ನಾನು ಬಿಗ್ ಬಾಸ್​ಗೆ ಹೋಗ್ತಾ ಇಲ್ಲ, ಸುಳ್ಳು ಸುದ್ದಿ!!: ನಟಿ ರಂಜನಿ ರಾಘವನ್ ಸ್ಪಷ್ಟನೆ

'ಬಿಗ್ ಬಾಸ್ ಕನ್ನಡ ಸೀಸನ್ 10'ಕ್ಕೆ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದ್ದು, ಅಭ್ಯರ್ಥಿಗಳು ಯಾರು ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಲೇ ಇದೆ. ಧಾರಾವಾಹಿಗಳನ್ನು ಮುಗಿಸಿರುವ ನಟಿಯರು, ವಿವಾದಕ್ಕೆ ಒಳಗಾಗಿರುವ ಕೆಲವರ ಹೆಸರುಗಳು ಇದರಲ್ಲಿ ಬರುತ್ತಿವೆ. ಅದರಲ್ಲೂ 'ಪುಟ್ಟಗೌರಿ ಮದುವೆ ಮತ್ತು ಕನ್ನಡತಿ' ಎಂಬ ಧಾರಾವಾಹಿಗಳಿಂದ ಖ್ಯಾತರಾಗಿರುವ ನಟಿ ರಂಜನಿ ರಾಘವನ್ ಹೆಸರು ಚರ್ಚೆಯಲ್ಲಿದೆ.

ನಟಿ ರಂಜನಿ ರಾಘವನ್ ಕನ್ನಡತಿ ಧಾರಾವಾಹಿ ಬಳಿಕ ಬೇರೆ ಯಾವುದೇ ಟಿವಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿಲ್ಲ. ಇದರ ಜೊತೆಗೆ ಅವರ ಅಭಿನಯದ ಟಕ್ಕರ್ ಸಿನಿಮಾ ಬಿಡುಗಡೆಯಾಗಿ ಹಲವು ದಿನಗಳಾಗಿವೆ. ಅವರು ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ. ಅದೇ ಕಾರಣಕ್ಕೆ ಅವರು ಈ ಬಾರಿ ಬಿಗ್‌ ಬಾಸ್‌ಗೆ ಹೋಗುತ್ತಾರೆ ಎಂದು ವದಂತಿ ಹಬ್ಬಿತ್ತು.

Bigg Boss Kannada Season 10: Actress Ranjani Raghavan clarification

ಬಿಗ್‌ಬಾಸ್‌ಗೆ ಹೋಗಲ್ಲವಂತೆ ನಟಿ ರಂಜನಿ ರಾಘವನ್

ಈಗಾಗಲೇ ಹಲವು ಕಲಾವಿದರ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಹಾಗಾಗಿ ಕೆಲವರು ತಾವು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈಗ 'ಕನ್ನಡತಿ' ರಂಜನಿ ರಾಘವನ್ ಕೂಡ ತಾವು ಬಿಗ್ ಬಾಸ್ ಮನೆಗೆ ತೆರಳುವುದಿಲ್ಲ. ನನ್ನ ಯೋಜನೆ ಬೇರೆನೇ ಇದೆ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.

'ನಾನು ಬಿಗ್ ಬಾಸ್​ಗೆ ಹೋಗ್ತಾ ಇಲ್ಲ. ಸುಳ್ಳು ಸುದ್ದಿ. ನನ್ನ ಕರಿಯರ್ ಪ್ಲಾನ್ ಬೇರೆ ಇದೆ. ಸೂಕ್ತ ಸಮಯದಲ್ಲಿ ತಿಳಿಸುವೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಹೀಗೆಯೇ ಇರಲಿ' ಎಂದು ರಂಜನಿ ರಾಘವನ್ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

ಅವರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದು, "ಬಿಗ್ ಬಾಸ್ ಗೆ ಹೋಗಿ ನಿಮ್ಮ ಇಮೇಜ್ ನಾ ನೀವೇ ಹಾಳ್ ಮಾಡ್ಳೋಬೇಡಿ.... ಒಳ್ಳೆ ನಿರ್ಧಾರ ತಗೊಂಡಿದ್ದೀರ ಸಹೋದರಿ" ಎಂದಿದ್ದಾರೆ. ಮತ್ತೊಬ್ಬರು, "ತುಂಬ ಒಳ್ಳೆಯ ನಿರ್ಧಾರ ರಂಜೂ, ನಮಗೂ ಇಷ್ಟ ಇಲ್ಲ ನೀನು ಬಿಗ್ ಬಾಸ್ ಹೋಗೋದು" ಎಂದಿದ್ದರೇ, ಮತ್ತೊಬ್ಬರು, "ನಂಗೆ ಗೊತ್ತಿತ್ತು.. ನೀವು ಅಂತ ಅರ್ಧ ಹುಚ್ಚರ ಸಂತೆಯಲ್ಲಿ ಹೋಗಲ್ಲ ಅಂತ....ಉತ್ತಮ ನಿರ್ಧಾರ ರಂಜಿನಿ" ಎಂದು ಹೇಳಿದ್ದಾರೆ.

"ಒಳ್ಳೇ ನಿರ್ಧಾರ ಮೇಡಂ ನಿಮ್ಮ ಮುಂದಿನ ಯೋಜನೆಗಳು ಯಶಸ್ವಿಯಾಗಲಿ, ಆ ಪ್ರೋಗ್ರಾಂ ನಾನು ನೋಡೋದೂ ಇಲ್ಲ. ಹೋಗದಿರೋದೆ ಒಳ್ಳೆಯದು, ವೇಸ್ಟ್ ಪ್ರೋಗ್ರಾಂ....", 'ಸಾರ್ವಜನಿಕ ಸಮಾರಂಭಗಳಿಗೆ ಹೋಗಿ ನಿಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಿ', 'ಒಳ್ಳೇದಾಯ್ತು, ನೀವು ಹೋಗದೆ ಇದ್ದದ್ದು, ನಿಮ್ಮ ಅಭಿಪ್ರಾಯ ಚೆನ್ನಾಗಿದೆ, ಅಲ್‌ ದಿ ಬೆಸ್ಟ್...', 'ಅದೊಂದು ಮೂರ್ಖರ ಅಡ್ಡೆ.... ನಿಮಗೆ ಬೇಡ...' ಹೀಗೆ ಹಲವು ಮಂದಿ ಕಾಮೆಂಟ್ ಮಾಡಿದ್ದಾರೆ.

ಬಿಗ್‌ಬಾಸ್‌ಗೆ ಹೋಗ್ತಿಲ್ಲ ಎಂದಿದ್ದ ರಾಜೇಶ್ ಧ್ರುವ

ಅಗ್ನಿಸಾಕ್ಷಿ ಖ್ಯಾತಿಯ ನಟ ರಾಜೇಶ್ ಧ್ರುವ ಕೂಡ ತಾವು ಬಿಗ್‌ಬಾಸ್‌ಗೆ ಹೋಗುತ್ತಿಲ್ಲ ಎಂದು ಗುರುವಾರ ಹೇಳಿದ್ದರು. "ಕೆಲವು ಮಾಧ್ಯಮಗಳಲ್ಲಿ ಅಂದಾಜಿಸಲ್ಪಟ್ಟ ಸ್ಪರ್ಧಿಗಳ ಪಟ್ಟಿಯಲ್ಲಿ ನನ್ನ ಹೆಸ್ರು ಚಾಲ್ತಿಯಲ್ಲಿದೆ ಅಂತ 'Bigboss ಗೆ ಹೋಗ್ತಿದೀರಂತೆ' ಅಂತ ತುಂಬಾ ಜನ ವಿಶ್ ತಿಳಿಸ್ತಾ ಇದೀರಿ, ಆದರೆ ನಾನು ಹೋಗ್ತಿಲ್ಲ. ಅದಕ್ಕೆ ಕಾರಣ ಕಿರುತೆರೆಯಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಮತ್ತೆ ಸಕ್ರಿಯ ಆಗ್ತಿದೀನಿ, ಉಳಿದೆಲ್ಲ ಮಾಹಿತಿ ಶೀಘ್ರದಲ್ಲಿ ತಿಳಿಸುವೆ. ನಿಮ್ಮ ಹಾರೈಕೆ - ಪ್ರೀತಿ ಸದಾ ನನ್ನ ಜೊತೆ ಹೀಗೆಯೇ ಇರಲಿ... ಧನ್ಯೋಸ್ಮಿ " ಎಂದು ನಟ ರಾಜೇಶ್ ಧ್ರುವ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು.

More from Filmibeat

English summary
Bigg Boss Kannada Season 10: Actress Ranjani Raghavan clarification.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X