ಈ ವಾರ ಕಿಚ್ಚನ ಪಂಚಾಯಿತಿಗೆ ರಜೆ..! ಜಡ್ಜ್ ಆಗಿ ದೊಡ್ಮನೆಗೆ ಬಂದ ಶ್ರುತಿ..! ಮನೆಯಿಂದ ಹೊರಗೆ ಹೋಗೋದು ಯಾರು?!

By ಶೃತಿ ಹರೀಶ್ ಗೌಡ

ಬಿಗ್ ಬಾಸ್ ಸೀಸನ್ 10 ಈಗ 80ನೇ ದಿನಕ್ಕೆ ಸಮೀಪಿಸುತ್ತಿದೆ ಒಂದು ವಾರ ಕಳೆದಿದ್ದು ಈಗೇನಿದ್ದರೂ ಮುಂದೆ ಸೆಮಿಫೈನಲ್‌ಗೆ ಯಾರು ಬರುತ್ತಾರೆ ಎಂಬುದಷ್ಟೇ ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ನಮ್ರತಾ‌ ಆಯ್ಕೆಯಾಗಿದ್ದಾರೆ. ಇನ್ನೂ ಈ ವಾರ ಸಂಗೀತಾ, ಪ್ರತಾಪ್, ಸಿರಿ, ತುಕಾಲಿ ಸಂತೋಷ್ , ವರ್ತೂರು ಸಂತೋಷ್, ಅವಿನಾಶ್ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಇಷ್ಟು ಮಂದಿಯಲ್ಲಿ ಮನೆಯಿಂದ ಹೊರಗೆ ಹೋಗೋದು ಯಾರು ಎಂಬ ಕುತೂಹಲ ವೀಕ್ಷಕರಲ್ಲೂ ಕೂಡ ಮನೆ ಮಾಡಿದೆ.

ಯಾಕೆಂದರೆ ಇನ್ನೇನಿದ್ದರೂ ಸೆಮಿ ಫೈನಲ್ ಗೆ ನಾಲ್ಕು ವಾರಗಳು ಇದ್ದು ಮನೆಯಿಂದ ಇನ್ಮುಂದೆ ಎರಡರಿಂದ ಮೂರು ಮಂದಿ ನಾಮಿನೇಟ್ ಆಗುತ್ತಾರೆ. ಕೊನೆಗೆ ಐವರಿಂದ ಆರು ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಅದರಲ್ಲಿ ಮೂರು ಮಂದಿ ಉಳಿದುಕೊಂಡು ರನ್ನರ್ ಆಫ್ ಹಾಗೂ ವಿಜೇತರನ್ನ ಘೋಷಣೆ ಮಾಡಲಾಗುತ್ತದೆ. ಸದ್ಯಕ್ಕೆ ಟಾಪ್ ಫೈವ್‌ನಲ್ಲಿ ವಿನಯ್, ಕಾರ್ತಿಕ್, ಸಂಗೀತ, ಪ್ರತಾಪ್ ತನಿಷಾ ಅಥವಾ ನಮ್ರತಾ ಬರುತ್ತಾರೆ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ. ಆದರೆ ಇದೆಲ್ಲದಕ್ಕೂ ಕೂಡ ಮುಂದೆ ಉತ್ತರ ಸಿಗಲಿದೆ ಕೆಲವೊಮ್ಮೆ ವೀಕ್ಷಕರ ಊಹೆಗೂ ಮೀರಿ ಸ್ಪರ್ಧಿಗಳು ಗೆಲುವನ್ನು ಸಾಧಿಸಬಹುದು.

Bigg Boss Kannada Season 10: Actress Shruthi new guest in Bigg Boss weekend show

ಇಂದು ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯಿತಿಗೆ ರಜೆ ಸಿಕ್ಕಿದೆ. ಯಾಕೆಂದರೆ ಕಿಚ್ಚ ಕ್ರಿಕೆಟ್ ಟೂರ್ನಮೆಂಟ್‌ಗೆ ಹೋಗಿದ್ದು ಇಂದು ಕಿಚ್ಚ ಸುದೀಪ್ ಅವರು ನ್ಯಾಯ ಪಂಚಾಯಿತಿ ತೀರ್ಮಾನ ಮಾಡಲು ಬಂದಿಲ್ಲ. ಆದರೆ ಇಲ್ಲಿಗೆ ಯಾರು ಬರುತ್ತಾರೆ ಎಂಬ ಕುತೂಹಲ ಇತ್ತು. ಅದಕ್ಕೆ ಕಲರ್ಸ್ ಕನ್ನಡದಲ್ಲಿ ಬಿಟ್ಟಿರುವ ಪ್ರೋಮೋದಲ್ಲಿ ಉತ್ತರ ಸಿಕ್ಕದೆ. ನಟಿ ಹಾಗೂ ಬಿಗ್ ಬಾಸ್ ವಿನ್ನರ್ ಶ್ರುತಿ ಅವರು ಬಿಗ್ ಬಾಸ್ ಮನೆಗೆ ಕೊಟ್ಟಿದ್ದಾರೆ. ಈಗ ಬಿಗ್ ಬಾಸ್ ಮನೆ ಕೋರ್ಟ್ ಆಗಿ ಪರಿವರ್ತನೆಯಾಗಿದ್ದು ಶ್ರುತಿ ಜಡ್ಜ್ ಆಗಿಬಆಗಮಿಸಿದ್ದಾರೆ. ಇಂದು ಶ್ರುತಿಯೇ ಬಿಗ್ ಬಾಸ್ ಮನೆಯಲ್ಲಿ ನ್ಯಾಯ ತೀರ್ಮಾನ ಮಾಡಲಿದ್ದಾರೆ.

ಇಂದು ಕಿಚ್ಚನ ಪಂಚಾಯ್ತಿಗೆ ರಜೆ

ಬಿಗ್ ಬಾಸ್ ಮನೆಗೆ ಜಡ್ಜಾಗಿ ಬಂದ ನಟಿ ಶ್ರುತಿ

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದಿದೆ ಇಂದು ಬಿಗ್ ಬಾಸ್ ಮನೆ ಕೋರ್ಟ್ ಆಗಿ ಪರಿವರ್ತನೆಯಾಗಿದೆ. ಸ್ಪರ್ಧಿಗಳು ಮಾಡಿರುವ ತಪ್ಪಿಗೆ ನ್ಯಾಯವನ್ನು ನೀಡಲು ಶ್ರುತಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಇಷ್ಟು ದಿನ ಒಂದು ಪ್ರಶ್ನೆಗೆ ಉತ್ತರ ದೊರಕಬೇಕಾಗಿತ್ತು ಆ ಪ್ರಶ್ನೆಯನ್ನು ಕಿಚ್ಚ ಸುದೀಪ್ ಅವರು ಎಲ್ಲಿಯೂ ಕೂಡ ಕೇಳಿರಲಿಲ್ಲ‌. ವೀಕ್ಷಕರು ಮಾತ್ರ ಪದೇ ಪದೇ ವಿನಯ್ ಕಿಚ್ಚ ಸುದೀಪ್ ಬಂದಾಗ ಸೈಲೆಂಟಾಗಿ ಇರುತ್ತಾರೆ ಎಂದು ಪ್ರಶ್ನೆಯನ್ನು ಹೊರ ಹಾಕುತ್ತಲೇ ಇದ್ದರೂ. ಆ ಪ್ರಶ್ನೆಗೆ ಇಂದು ಉತ್ತರ ಸಿಕ್ಕುವ ಸಮಯ ಬಂದಿದೆ.

Bigg Boss Kannada Season 10: Actress Shruthi new guest in Bigg Boss weekend show

ಶ್ರುತಿ ಅವರು ಜಡ್ಜ್ ಸ್ಥಾನದಲ್ಲಿ ಕುಳಿತುಕೊಂಡಿದ್ದು ವಿನಯ್ ಕಟಕಟೆಗೆ ಬಂದಿದ್ದಾರೆ ಈ ವೇಳೆ ವಿನಯ್ ಅವರಿಗೆ ಶ್ರುತಿ ಒಂದು ಪ್ರಶ್ನೆ ಕೇಳಿದ್ದಾರೆ. ವಿನಯ್ ವಾರ ಪೂರ್ತಿ ಅಗ್ರೇಸ್ಸಿವ್ ಆಗಿ ಇದ್ದು ವಾರದ ಕೊನೆಯಲ್ಲಿ ಕಿಚ್ಚನ ಪಂಚಾಯಿತಿ ಬಂದಾಗ ಅನುಕಂಪ‌ ಭರಿತವಾಗಿ ತುಂಬಿರುತ್ತದೆ. ಇದು ನಿಜವೋ ಇಲ್ಲವೋ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ವೀಕ್ಷಕರಂತೆ ಆಗಿದೆ ಎಷ್ಟೋ ಬಾರಿ ವೀಕ್ಷಕರು ವಿನಯ್ ಇದೇ ರೀತಿ ನಡೆದುಕೊಳ್ಳುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ಕೂಡ ಹೊರ ಹಾಕಿದ್ದಾರೆ. ಈ ವಿಚಾರವಾಗಿ ನಮ್ರತಾ ಹಾಗೂ ಸಂಗೀತಾ ಇಬ್ಬರೂ ಕೂಡ ಧ್ವನಿ ಎತ್ತಿ ಮಾತನಾಡಿದ್ದಾರೆ.

ಮೊದಲ ಬಾರಿ ವಿನಯ್ ವಿರುದ್ಧ ಮಾತನಾಡಿದ ನಮ್ರತಾ

ತನ್ನನ್ನು ತಾನು ಸಮರ್ಥಿಸಿಕೊಂಡ ವಿನಯ್

ಶ್ರುತಿ ತಮ್ಮ ಪ್ರಶ್ನೆಯನ್ನು ಮುಂದಿಟ್ಟಾಗ ನಮ್ರತಾ ಹಾಗೂ ಸಂಗೀತಾ ಹೌದು ಎಂದು ಉತ್ತರ ನೀಡಿದ್ದಾರೆ. ನಮ್ರತಾ ಎದ್ದು ನಿಂತವರೇ ಹೌದು ಮೇಡಂ ನಾನು ಈ ವೇರಿಯೇಷನ್ ಗಮನಿಸಿದ್ದೇನೆ ಸುದೀಪ್ ಸರ್ ಮಾತನಾಡುವಾಗ ತುಂಬಾ ಮೆಲೋಡವ್ನಾಗಿ ವಿನಯ್ ಮಾತನಾಡುತ್ತಾರೆ ಎಂದು ನಮ್ರತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಇದೇ ಮೊದಲ ಬಾರಿಗೆ ವಿನಯ್ ವಿರುದ್ಧ ನಮ್ರತಾ ಮಾತನಾಡಿದ್ದಾರೆ.

ನನ್ನ ಬಳಿ ಎಷ್ಟು ರೂಢಾಗಿ ಮಾತನಾಡುತ್ತಾರೆ ಆದರೆ ಸುದೀಪ್ ಸರ್ ಮುಂದೆ ಏನು ಮಾತನಾಡಿಯೇಇಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ ಎಂದು ಸಂಗೀತಾ ಹೇಳಿದ್ದಾರೆ. ಈ ವೇಳೆ ಶ್ರುತಿ ವಿನಯ್‌ಗೆ ಪ್ರಶ್ನೆ ಕೇಳಿದ್ದಾರೆ ತಪ್ಪುಗಳನ್ನು ಕವರ್ ಮಾಡಿಕೊಳ್ಳುವುದಕ್ಕೋಸ್ಕರ ನೀವು ಈ ರೀತಿ ಮಾತನಾಡುತ್ತೀರಾ ಎಂದು ಕೇಳಿದ್ದಕ್ಕೆ ವಿನಯ್ ಗರಂ ಆಗಿದ್ದಾರೆ. ನಾನೇನು ಆ ರೀತಿಯಲ್ಲ ನಡೆದುಕೊಳ್ಳೋದಿಲ್ಲ ಎಂದು ದನಿ ಏರಿಸಿ ಮಾತನಾಡಿದ್ದಾರೆ.‌ಇದಕ್ಕೆ ಶೃತಿ ಜಡ್ಜ್ ಮುಂದೆ ಈ ರೀತಿ ದನಿ ಏರಿಸಿ ಮಾತನಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಈವಾರ ಕಿಚ್ಚನ ಪಂಚಾಯಿತಿಗೆ ರಜೆ ಸಿಕ್ಕಿದ್ದು ಶ್ರುತಿ ಯಾವ ರೀತಿ ಸ್ಪರ್ಧಿಗಳಿಗೆ ನ್ಯಾಯವನ್ನು ಒದಗಿಸುತ್ತಾರೆ ನೋಡಬೇಕಾಗಿದೆ. ಈ ವಾರ ಮನೆಯಿಂದ ಹೊರಗೆ ಹೋಗೋರು ಯಾರು ಎಂಬುದಕ್ಕೆಲ್ಲ ಸಂಜೆ ಉತ್ತರ ಸಿಗಲಿದೆ.

More from Filmibeat

English summary
Shruthi new guest in Bigg Boss kannada weekend show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X