BBK10: ಕಾರ್ತಿಕ್ ಯಾಕೆ ಗೆಲ್ಲಬೇಕು..? ಫ್ರೆಂಡ್ಸ್ ಹೇಳ್ತಾ ಇರೋದು ಏನು..?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ರಿಯಲ್ ಆಟ ಶುರುವಾಗಿದೆ ಅಂತಾನೇ ಹೇಳಬಹುದು. ಆಟಕ್ಕೆ ಮಹತ್ವ ಬಂದಿದೆ ಅಂತಾನೇ ಗುರುತಿಸಲಾಗುತ್ತಿದೆ. ಇಷ್ಟು ದಿನಗಳು ಇದ್ದ ಫ್ರೆಂಡ್‌ಶಿಪ್, ಬಾಂಧವ್ಯ, ಸಲಿಗೆ ಎಲ್ಲವೂ ಆಟದ ಮೇಲಷ್ಟೇ ಫೋಕಸ್ ಆಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಕಾರ್ತಿಕ್ ಹಾಗೂ ಸಂಗೀತಾ.

ಸಂಗೀತಾ ಮೊದಲಿದ್ದ ಹಾಗೇಯೇ ಇದ್ದಾರೆ. ಅದೇ ಕಾಳಜಿ, ಅದೇ ಸಲಿಕೆ, ಅದೇ ಹಠಮಾರಿತನ. ಆದರೆ ಕಾರ್ತಿಕ್ ಸಂಪೂರ್ಣವಾಗಿ ಸಂಗೀತಾರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮಾತು ಬಿಟ್ಟರೆ ಕಡಿಮೆ ಸಮಯದಲ್ಲಿಯೇ ಮತ್ತೆ ಮಾತು ಮುಂದುವರೆಸುತ್ತಿದ್ದ ಕಾರ್ತಿಕ್ ಹಾಗೂ ಸಂಗೀತಾ, ಈಗ ಜಪ್ಪಯ್ಯ ಎಂದರೂ, ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ಸಂಗೀತಾ ಮೇಲೆ ಮನ:ಸ್ತಾಪ ಇರುವಂತೆಯೇ ನಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಕಾರ್ತಿಕ್ ಗೆಲ್ಲಬೇಕೆಂದು ಸ್ನೇಹಿತರ ಹಾರೈಕೆಗಳು ಶುರುವಾಗಿವೆ.

Bigg Boss Karthik Siri Raju Sooraj Support

ಸಿರಿ ರಾಜು ಕಡೆಯಿಂದ ಫುಲ್ ಸಪೋರ್ಟ್

"ಎಲ್ಲರಿಗೂ ನಮಸ್ಕಾರ. ಈ ವಿಡಿಯೋ ಬಂದು ಕಾರ್ತಿಕ್ ಅವರಿಗೋಸ್ಕರ. ನನ್ನ ಆತ್ಮೀಯ ಸ್ನೇಹಿತ. ಆದರೆ ಸ್ನೇಹಿತ ಎನ್ನುವ ಕಾರಣಕ್ಕೆ ಈ ವಿಡಿಯೋ ಮಾಡುತ್ತಿಲ್ಲ. ಅವರು ಬಿಗ್ ಬಾಸ್ ಮನೆಯಲ್ಲಿ ಹೇಗಿದ್ದಾರೋ, ಹೊರಗಡೆ, ಫ್ರೆಂಡ್ಸ್ ಜೊತೆಗೂ ಹಾಗೇ ಇದ್ದಾರೆ. ಟಾಸ್ಕ್ ವಿಚಾರ ಬಂದಾಗಲೂ ಎಲ್ಲದಕ್ಕೂ ಮುಂದೆ ಇರುತ್ತಾರೆ‌. ಒಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದಾರೆ ಅಂದ್ರೆ ಅದು ನಮ್ಮ ಕಾರ್ತಿಕ್ ಮಹೇಶ್ ಅಲ್ವಾ. ನಂಗೆ ತುಂಬಾ ಖುಷಿಯಾಗುತ್ತದೆ. ಬಿಗ್ ಬಾಸ್ ನಲ್ಲಿ ಕಾರ್ತಿಕ್‌ ಅನ್ನು ಆ ರೀತಿ ನೋಡುವುದಕ್ಕೆ. ಎಲ್ಲದರಲ್ಲೂ 100% ಕೊಡುತ್ತಾ ಇದ್ದೀಯಾ" ಎಂದು ಸಿರಿ ರಾಜು ಹೇಳಿದ್ದಾರೆ.

ಬಿಗ್ ಬಾಸ್ ಗೆಲುವಿಗೆ ಹಾರೈಕೆ

"ಮನೆಯಲ್ಲಿ ಎಲ್ಲರಿಗೂ ಅಡುಗೆ ಮಾಡಿ ಕೊಡುತ್ತೀಯ. ಇದನ್ನು ನೋಡುವುದಕ್ಕೆ ಖುಷಿ ಆಗುತ್ತೆ. ಬಿಗ್ ಬಾಸ್ ಸೀಸನ್ 10ನಲ್ಲಿ ಫಿನಾಲೆ ತನಕ ಇದ್ದು, ಬಿಗ್ ಬಾಸ್‌ನ ನೀನು ಗೆದ್ದು ಬರಬೇಕು ಅಂತ ನಾನು ಕೂಡ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಆಲ್ ದಿ ವೆರಿ ಬೆಸ್ಟ್ ಕಾರ್ತಿ ಗೆದ್ದು ಬಾ" ಎಂದು ಸಿರಿ ರಾಜು ಮನ:ಸ್ಫೂರ್ತಿಯಾಗಿ ಹಾರೈಸಿದ್ದಾರೆ.

ಗೆಳೆಯನ ಬಗ್ಗೆ ಸೂರಜ್ ಹೇಳಿದ್ದೇನು..?

"ಹಾಯ್.. ಬಿಗ್ ಬಾಸ್ ಸೀಸನ್ 10 ಬರುತ್ತಾ ಇದೆ. ಅದರಲ್ಲಿ ನನ್ನ ಸ್ನೇಹಿತ ಕಾರ್ತಿಕ್ ಇದಾನೆ. ಬರೀ ಫ್ರೆಂಡ್ ಅಲ್ಲ ಸಮರ್ಥ. ನಾನು ಒಬ್ಬ ಫ್ರೆಂಡ್ ಆಗಿ ನನಗೆ ಗೊತ್ತಿರಲಿಲ್ಲ ಇಷ್ಟೊಂದು ಶಕ್ತಿವಂತ ಅಂತ. ತುಂಬಾ ಚೆನ್ನಾಗಿ ಟಾಸ್ಕ್ ಗಳನ್ನು ಆಡುತ್ತಾ ಇದ್ದಾನೆ. ತುಂಬಾ ಚೆನ್ನಾಗಿ ಮನೆಯಲ್ಲಿ ಇದ್ದಾನೆ. ಅವನು ಮನೆಯಲ್ಲಿ ಇರುವ ರೀತಿಯೇ ಇಷ್ಟವಾಗುತ್ತಿದೆ. ತುಂಬಾ ಪ್ರಾಮಾಣಿಕವಾಗಿ ಆಡುತ್ತಿದ್ದಾನೆ" ಎಂದು ಸೂರಜ್ ಬೆಂಬಲ ನೀಡಿದ್ದಾರೆ.

ಕಾರ್ತಿಕ್ ಗೆಲ್ಲಲೇಬೇಕೆಂದು ಹೇಳಿದ್ಯಾಕೆ..?

"ಅವನು ತೆಗೆದುಕೊಳ್ಳುತ್ತಿರುವ ನಿಲುವುಗಳು ತುಂಬಾ ಚೆನ್ನಾಗಿದೆ. ಕೋಪ ಬಂದರೂ ಕೂಡ ಅದಕ್ಕೊಂದು ಪ್ರಾಮಾಣಿಕ ಕಾರಣವಿದೆ. ಅವನು ಕೊಡುತ್ತಿರುವ ಮನರಂಜನೆಗೆ, ಅವನಿಗಿರುವ ಪ್ರತಿಭೆಗೆ ನಾನು ಕಾರ್ತಿಕ್‌ಗೆ ವೋಟ್ ಮಾಡುತ್ತಿದ್ದೇನೆ. ನೀವೂ ಕೂಡ ವೋಟ್ ಮಾಡಿ" ಎಂದು ಮನವಿ ಮಾಡಿದ್ದಾರೆ. ಸೂರಜ್ ಹಾಗೂ ಸಿರಿ ರಾಜು ಮಾಡಿದ ವಿಡಿಯೋಗೆ ಅಭಿಮಾನಿಗಳಿಂದಾನೂ ಸ್ಪಂದನೆ ಸಿಕ್ಕಿದೆ.

More from Filmibeat

English summary
Bigg Boss Kannada Season 10 actress Siri and Sooraj supporting Karthik
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X