BBK10: ಕಳಪೆ ಹೊತ್ತು ಜೈಲಿಗೋದಾ ತುಕಾಲಿ; ಪಂತುಗೆ ಪ್ರತಾಪ್ ಮೇಲೆ ಬಂತು ಕೋಪ

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೇನು ತೆರೆ ಬೀಳಲಿದೆ. ನಾಳೆ ಕಿಚ್ಚನ ಪಂಚಾಯ್ತಿಯಲ್ಲಿ ಏನೆಲ್ಲಾ ವಿಚಾರಗಳು ಬರಲಿವೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ದಿನಗಳು ಉರುಳುತ್ತಿದ್ದಂತೆ ಕಿಚ್ಚ ಸುದೀಪ್ ಸಲಹೆ ಕೊಡುತ್ತಾರಾ, ಬೂಸ್ಟ್ ಮಾಡುತ್ತಾರಾ ಎಂಬ ಪ್ರಶ್ನೆಗಳು ಇದಾವೆ. ಇದರ ಜೊತೆಗೆ ಇಂದು ಹಲವು ಟಾಸ್ಕ್‌ಗಳು ನಡೆದಿವೆ. ಅದರಲ್ಲಿ ಉತ್ತಮ ಹಾಗೂ ಕಳಪೆ ಗಮನ ಸೆಳೆದಿವೆ.

ಟಿಕೆಟ್ ಟು ಫಿನಾಲೆ ನಡೆಯುತ್ತಿದೆ. ಈ ಟಾಸ್ಕ್‌ನಲ್ಲಿ ಹೆಚ್ಚು ಅಂಕ ಪಡೆದವರು ಈ ವಾರ ಸೇವ್ ಆಗುತ್ತಾರೆ. ಹೀಗಾಗಿ ಒಬ್ಬೊಬ್ಬರು ಸ್ಪರ್ಧೆಗಳ ರೀತಿ ಆಡುತ್ತಿದ್ದಾರೆ. ದೋಸ್ತಿಗಳು ಅಂತಾನು ನೋಡುತ್ತಿಲ್ಲ, ಅಂಕಗಳು ಹತ್ತಿರತ್ತಿರ ಇದ್ದರೆ ಅವರನ್ನೇ ದೂರ ಇಡುತ್ತಿದ್ದಾರೆ. ಅದರಲ್ಲಿ ಪ್ರತಾಪ್ - ಸಂಗೀತಾರನ್ನು, ನಮ್ರತಾ -ವಿನಯ್‌ರನ್ನು ದೂರವಿಟ್ಟಿದ್ದರು. ಅಷ್ಟೇ ಯಾಕೆ ವರ್ತೂರು ಸಂತೋಷ್-ತುಕಾಲಿಯನ್ನೇ ಇಟ್ಟಿದ್ದರು. ಇದೀಗ ಪ್ರತಾಪ್ ಮಾತಿಗೆ ವರ್ತೂರು ಕೆಂಡಕಾರುತ್ತಿದ್ದಾರೆ.

Bigg Boss Kannada Season 10 again Tukali Santhosh got Kalape

ಈ ವಾರದ ಕಳಪೆಯಾದ್ರು ತುಕಾಲಿ

ಶುಕ್ರವಾರ ಬಂತು ಎಂದರೆ ಮನೆ ಮಂದಿಗೆಲ್ಲಾ ಸ್ವಲ್ಪ ಭಯ ಜಾಸ್ತಿಯಾಗುತ್ತದೆ. ಒಂದು ಕಡೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸುವುದು. ಮತ್ತೊಂದು ಉತ್ತಮ ಸಿಗುವ ಸಂತಸ. ಈ ವಾರ ಕಳಪೆ ತೆಗೆದುಕೊಳ್ಳುವವರ ವಿಚಾರದಲ್ಲಿ ಕೊಂಚ ಭಯ ಕೂಡ ಜಾಸ್ತಿ ಇದೆ. ಮನೆಯಿಂದ ಹೊರಗೆ ಹೋಗುವ ಭಯ. ಈ ವಾರ ತುಕಾಲಿ ಸಂತು ಕಳಪೆ ತೊಟ್ಟು ಜೈಲಿಗೆ ಹೋಗಿದ್ದಾರೆ.

ಮನೆ ಮಂದಿಯೆಲ್ಲಾ ತುಕಾಲಿ ಮೇಲೆ ಆರೋಪ

ಮನೆ ಮಂದಿಯಲ್ಲೆಲ್ಲಾ ಹೆಚ್ಚು ಜನರು ತುಕಾಲಿ ಸಂತು ಅವರನ್ನೇ ಕಳಪೆ ಸ್ಥಾನಕ್ಕೆ ಸೂಚಿಸಿದ್ದಾರೆ. ಈ ವಾರ ಟಾಸ್ಕ್‌ಗಳಲ್ಲೂ ಅಷ್ಟಾಗಿ ಏನು ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣವೂ ಟಿಕೆಟ್ ಟು ಫಿನಾಲೆ ಇದ್ದಿದ್ದರಿಂದ ಹೆಚ್ಚಿನದಾಗಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ತುಕಾಲಿಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ.

ಪ್ರತಾಪ್ ಮಾತಿಗೆ ಕೆಂಡಕಾರಿದ ವರ್ತೂರು

ಪ್ರತಾಪ್ ಕೂಡ ತುಕಾಲಿ ಸಂತೋಷ್ ಅವರಿಗೇನೆ ಕಳಪೆ ನೀಡಿದ್ದಾರೆ. ಅಂಕಗಳ ವಿಚಾರವನ್ನು ತೆಗೆದುಕೊಂಡು ತುಕಾಲಿ ಅವರನ್ನು ಕಳಪೆ ಎಂದಿದ್ದಾರೆ. ಕಡೆಗೂ ಎಲ್ಲರ ಅಭಿಪ್ರಾಯದಿಂದ ತುಕಾಲಿ ಜೈಲು ಸೇರಿದ್ದಾರೆ. ತುಕಾಲಿಗೆ ಜೈಲಿಗೆ ಹೋಗುವುದೇನು ಇಷ್ಟವಿರಲಿಲ್ಲ. ಆದರೂ ಫಿನಾಲೆಗೆ ಹತ್ತಿರತ್ತಿರ ಇರುವಾಗಲೇ ಜೈಲು ಸೇರಿದ್ದಾರೆ. ಇದು ಬೇಸರಕ್ಕೆ ಕಾತಣವಾಗಿದೆ. ಆದರೆ ಈ ವಾರ ತುಕಾಲಿ ಸಂತೋಷ್ ಅಷ್ಟಾಗಿ ಆಕ್ಟೀವ್ ಆಗಿಲ್ಲದೆ ಇರುವ ಕಾರಣ ಈ ಒಂದು ಪಟ್ಟ ನೀಡಲಾಗಿದೆ.

Bigg Boss Kannada Season 10 again Tukali Santhosh got Kalape

ಪಂತುಗೆ ಸಂತು ಮೇಲೆ ಪ್ರೀತಿ

ಸಂತು ಪಂತು ಜೊತೆಗೆ ಇದ್ದರೆ ಮುಗೀತು. ಮನೆಯಲ್ಲಿ ಸದಾ ಜೊತೆಯಲ್ಲಿ ಇರುವುದು ಸಂತು ಮತ್ತು ಪಂತುನೆ. ಜೊತೆಗೆ ಕುಂತಾಗ ಬರೀ ಗಾಸಿಪ್‌ಗಳನ್ನೇ ಮಾತನಾಡುತ್ತಾರೆ. ಅವರು ಹಾಗೇ ಇವರು ಹೀಗೆ ಅಂತ. ಯಾರ ಬಗ್ಗೆಯೂ ಪಾಸಿಟಿವ್ ಆಗಿ ಮಾತನಾಡುವುದಿಲ್ಲ‌. ಆದರೆ ಈಗ ಪ್ರತಾಪ್ ಹೇಳಿದ ಒಂದು ಮಾತಿಗೆ ಪಂತು ಸಿಕ್ಕಾಪಟ್ಟೆ ರೊಚ್ಚಿಗೆದ್ದಿದ್ದಾರೆ‌. ಇದು ತಪ್ಪು ಪ್ರತಾಪ್ ಎಂದು ಹೇಳಿದ್ದಾರೆ. ಆದರೆ ಪಂತುನೆ ಇತ್ತೀಚೆಗೆ ಸಂತುನನ್ನು ದೂರವಿಟ್ಟಿದ್ದರು. ಅಂಕಗಳ ವಿಚಾರಕ್ಕೆ ಸಂತೂನ ದೂರವಿಟ್ಟಾಗ, ಮಾತೇ ಬಿಟ್ಟಿದ್ದರು. ಆದರೆ ಈಗ ಪ್ರತಾಪ್ ಮಾತಿಗೆ ಮಾತ್ರ ರೊಚ್ಚಿಗೆದ್ದಿದ್ದಾರೆ.

More from Filmibeat

English summary
BBK 10 tukali santhosh kalape
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X