BBK10: ಗಟ್ಟಿಯಿದ್ದ ಬಾಂಧವ್ಯ ಕಳಚಿ ಬಿತ್ತು.. ಸಂಗೀತಾ ಟೀಂ ಬದಲಾಯಿಸಿದ್ದಕ್ಕೆ ನೋಡಿಗರ ಬೇಸರ..!
ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಸಿಕ್ಕಾಪಟ್ಟೆ ಧೈರ್ಯವಂತ ಹೆಣ್ಣು ಮಗಳು ಎಂದೇ ಬಿಂಬಿತವಾಗಿದ್ದರು. ಅದೇ ಕಾರಣಕ್ಕೆ ಕಡಿಮೆ ಸಮಯದಲ್ಲಿಯೇ ಕರುನಾಡ ಕ್ರಶ್ ಎಂಬ ಪಟ್ಟವನ್ನು ಅಲಂಕರಿಸಿಬಿಟ್ಟಿದ್ದರು. ಆದರೆ, ಅದರ ನಂತರದ ವಾರ ಅದ್ಯಾಕೋ ಸಪ್ಪೆ ಆಗಿ ಬಿಟ್ಟಿದ್ದರು. ಕಿಚ್ಚನಿಂದ ಬುದ್ದಿ ಮಾತನ್ನು ಕೇಳಿದ್ದರು.
ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಮತ್ತು ಕಾರ್ತಿಕ್ ನಡುವೆ ಸಂಥಿಂಗ್ ಸಂಥಿಂಗ್ ಅಂಥ ಹಲವರು ಹೇಳಿದ್ದರು ಇಬ್ಬರು ಒಬ್ಬರಿಗೊಬ್ಬರು ಬಿಟ್ಟುಕೊಡದಷ್ಟು ಬಾಂಧವ್ಯ ಅಂತು ಹೊಂದಿದ್ದರು. ಟಾಸ್ಕ್ ವಿಚಾರದಲ್ಲಿ, ಸಪೋರ್ಟ್ ಎಂಬವಿಚಾರದಲ್ಲಿ ಎಷ್ಟೇ ಕಿತ್ತಾಡಿದರು ಮತ್ತೆ ಮತ್ತೆ ಒಂದಾಗುತ್ತಿದ್ದರು. ಇಬ್ಬರಲ್ಲಿ ಒಬ್ಬರು ಮಾತನಾಡಿಸುವ ಪ್ರಯತ್ನ ಮಾಡುತ್ತಿದ್ದರು. ಆದರೆ ಇದೀಗ ಮತ್ತೆ ಸರಿ ಹೋಗುವ ಸೂಚನೆ ಕಾಣುತ್ತಿಲ್ಲ.

ಕಾರ್ತಿಕ್ ಟೀಂನಿಂದ ಅಂತರ ಕಾಯ್ದುಕೊಂಡ ಸಂಗೀತಾ
ತನಿಷಾ ಹಾಗೂ ಕಾರ್ತಿಕ್ ನಡುವೆ ಸಂಗೀತಾ ತುಂಬಾ ಖುಷಿಯಾಗಿದ್ದರು. ಎರಡ್ಮೂರು ಬಾರಿ ಭಿನ್ನಾಭಿಪ್ರಾಯಗಳು ಬಂದಿದ್ದರು ಸಹ ಮತ್ತೆ ಮತ್ತೆ ಸರಿಯಾಗಿದ್ದ ಬಾಂಧವ್ಯ ಈ ಬಾರಿ ಅದ್ಯಾಕೋ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿಯೇ ಕಡಿದು ಹೋಗಿದೆ. ಸಂಗೀತಾ ಮೊದಲಿದ್ದ ತಂಡದೊಂದಿಗೆ ಅಂತರ ಕಾಯ್ದುಕೊಂಡು, ನಮ್ರತಾ ಜೊತೆಗೆ ಹೆಚ್ಚಾಗಿ ಇರುತ್ತಿದ್ದರು. ಇದು ಬಿಗ್ ಬಾಸ್‌ಗೆ ಅರ್ಥವಾದಂತೆ ಕಾಣುತ್ತಿದೆ. ಹೀಗಾಗಿ ಟಾಸ್ಕ್‌ಗಾಗಿ ಮಾಡಿದ ಟೀಂ ನಲ್ಲಿ ಸಂಗೀತಾ ಅವರನ್ನು ವಿನಯ್ ಟೀಂಗೆ ಕಳುಹಿಸಿದ್ದಾರೆ.
ಟೀಂ ಬದಲಾಯಿಸಿದ್ದಕ್ಕೆ ಬೆಂಬಲಿಗರ ಬೇಸರ
ಸಂಗೀತಾ ಈಗಂತೂ ಹೆಚ್ಚು ನಮ್ರತಾ ಜೊತೆಗೆ ಸೇರುತ್ತಿದ್ದಾರೆ. ನಮ್ರತಾ ಬೇರೆ ತನಿಷಾ ಹಾಗೂ ಕಾರ್ತಿಕ್ ಬಗ್ಗೆ ಕೆಲವೊಂದಿಷ್ಟು ನೆಗೆಟಿವ್ ಪಾಯಿಂಟ್‌ಗಳನ್ನು ಆಗಾಗ ಹಾಕುತ್ತಾರೆ. ಇದು ನೋಡುಗರಿಗೆ ಬೇಸರ ತರಿಸಿದೆ. ಸಂಗೀತಾ ತಪ್ಪು ಮಾಡಿದ್ದಾರೆ. ನಮ್ರತಾ ಜೊತೆಗೆ ಸೇರಬಾರದಿತ್ತು ಅಂತೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಸಂಗೀತಾಗೆ ವಿನಯ್ ಟೀಂ ಸರಿ ಹೋಗಲ್ಲ ಎಂದೆಲ್ಲಾ ಟ್ರೋಲ್ ಮಾಡುತ್ತಾ ಇದ್ದಾರೆ.
ಊಟದ ವಿಚಾರಕ್ಕೂ ಕಣ್ಣೀರು
ಕಾರ್ತಿಕ್ ಹಾಗೂ ಸಂಗೀತಾ ನಡುವೆ ವುಯರತ್ವಕ್ಕೆ ದಾರಿ ಮಾಡಿಕೊಡುವಂಥ ಘಟನೆಗಳೇ ನಡೆಯುತ್ತಿವೆ. ಇವತ್ತಿನ ಉಗ್ರಂ ವೀರಂ ಟಾಸ್ಕ್ ನಲ್ಲೂ ತಲೆ ಬೋಳಿಸುವ ಟಾಸ್ಕ್ ಅನ್ನು ಅಂಗೀತಾ ನೀಡಿದಾಗ ಕಾರ್ತಿಕ್ ಹಾಗೂ ತುಕಾಲಿ ಓಕೆ ಎಂದು ಬಿಟ್ಟರು. ಸಂಗೀತಾ ನಿರೀಕ್ಷೆಯೂ ಮಾಡಿರಲಿಲ್ಲ. ಇದು ಕೂಡ ದ್ವೇಷಕ್ಕೆ ಕಾರಣವಾಯಿತು. ಬಳಿಕ ರಾತ್ರಿಯ ಊಟದ ವಿಚಾರಕ್ಕೂ ಮನಸ್ತಾಪ ಬಂದಿದೆ. ಸ್ನೇಹಿತ್ ಹೆಚ್ಚಿನ ಅನ್ನ ಬಡಿಸಿಕೊಂಡಿದ್ದು, ಕಾರ್ತಿಕ್ ಗೆ ಇಷ್ಟವಾಗಲಿಲ್ಲ. ಇದನ್ನ ಖಂಡಿಸಿದರು ಕಾರ್ತಿಕ್ . ಆದರೆ ಸಂಗೀತಾ ತನಗೆ ಹೇಳಿದ್ದು ಎಂದುಕೊಂಡು ಊಟ ಬಿಟ್ಟು, ಕಣ್ಣೀರು ಹಾಕಿದರು. ಕಾರ್ತಿಕ್ ಇದಕ್ಕೆಲ್ಲಾ ತಲೆಯನ್ನೇ ಕೆಡಿಸಿಕೊಳ್ಳದಷ್ಟು ಬದಲಾಗಿದ್ದಾರೆ.
ತರಕಾರಿ ವಿಚಾರಕ್ಕೂ ಜೋರು ಜಗಳ
ಟಾಸ್ಕ್ ಎಲ್ಲಾ ಮುಗಿದು ಕೊನೆಯಲ್ಲಿ ತರಕಾರಿ ಕಟ್ ಮಾಡಿಕೊಳ್ಳಬೇಕಿತ್ತು. ಈ ವಾರ ಕಾರ್ತಿಕ್ ಕ್ಯಾಪ್ಟನ್ ಆಗಿದ್ದಾರೆ. ಸಂಗೀತಾ ಅಡುಗೆ ಮನೆ ಉಸ್ತುವಾರಿಯಲ್ಲಿದ್ದಾರೆ. ಆದರೆ ಸಂಗೀತಾ, ತನಗೆ ಕೈ ನೋವು ಆಗುತ್ತಿದೆ. ತರಕಾರಿ ಕಟ್ ಮಾಡುವುದಕ್ಕೆ ಆಗಲ್ಲ. ಬೇಕಿದ್ದರೆ ಇನ್ನೊಬ್ಬರ ಉಸ್ತುವಾರಿಯನ್ನು ಅದಲು ಬದಲು ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಆಗ ಕಾರ್ತಿಕ್ ಬೇರೆ ಯಾರದ್ದೋ ಸಹಾಯ ಕೇಳುತ್ತೀನಿ ಅಂದಿರಲ್ಲ ಅದನ್ನು ಮಾಡಿ. ಕಳೆದ ಎರಡ್ಮೂರು ದಿನದಿಂದ ಕೆಲಸದಿಂದ ಹೇಗೆ ತಪ್ಪಿಸಿಕೊಳ್ಳುತ್ತಿದ್ದೀರಿ ಎಂಬುದನ್ನು ನೋಡಿದ್ದೇವೆ ಎಂದಿದ್ದಾರೆ. ಈ ಜಗಳ ಮಾತನಾಡಿಸುವುದಕ್ಕೂ ಇಷ್ಟವಿಲ್ಲ ಎಂಬ ಸತ್ಯದವರೆಗೂ ಸಾಗಿದೆ.


Click it and Unblock the Notifications











