Bigboss kannada season 10: ಜೈಲು ಸೇರಿದ ಭಾಗ್ಯಶ್ರೀ.. ವಯಸ್ಸಿನ ಮ್ಯಾಟರ್‌ಗೆ ಕಣ್ಣೀರು..!

By ಎಸ್ ಸುಮಂತ್

ಬಿಗ್ ಬಾಸ್ ನಲ್ಲಿ ವಾರಪೂರ್ತಿ ಚೆನ್ನಾಗಿ ಆಟ ಯಾಕೆ ಆಡಬೇಕು ಎಂದರೆ ವಾರದ ಕೊನೆಯಲ್ಲಿ ಬಿಗ್ ಬಾಸ್ ಕಡೆಯಿಂದ ಒಂದು ಅವಾರ್ಡ್ ಬರುತ್ತದೆ. ಅದುವೆ ಬೆಸ್ಟ್ ಅಂಡ್ ವರ್ಸ್ಟ್ ಅವಾರ್ಡ್. ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಎರಡು ಟೀಂ ಇದೆ. ಅದುವೆ ಸಮರ್ಥರು ಹಾಗೂ ಅಸಮರ್ಥರು ಎಂಬ ಟೀಂ.

ಮನೆಯ ಸದಸ್ಯರೆಲ್ಲ ಸೇರಿ ಕಳಪೆ ಹಾಗೂ ಉತ್ತಮ ಅವಾರ್ಡ್ ಅನ್ನು ನೀಡಬೇಕಿದೆ. ಇದರಲ್ಲಿ ಅಸಮರ್ಥರು ಭಾಗಿಯಾಗುವಂತೆ ಇಲ್ಲ. ಆದರೆ, ಉತ್ತಮ ಎಂಬುದನ್ನು ಅಸಮರ್ಥರಲ್ಲಿ ಒಬ್ಬರಿಗೆ ನೀಡಬೇಕು. ಕಳಪೆ ಬೋರ್ಡ್ ಅನ್ನು ಸಮರ್ಥರಿಗೆ ನೀಡಬೇಕಿದೆ.

bigg-boss-kannada-season-10-bhagyshree-in-jail

ತನಿಷಾ ಉತ್ತಮ ಆಟಗಾರ್ತಿ

ಅಸಮರ್ಥರೇ ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡಬೇಕಿದೆ. ಅದು ಅಡುಗೆಯಿಂದ ಹಿಡಿದು ಕ್ಲೀನಿಂಗ್ ತನಕ. ಅಡುಗೆಯ ಜವಾಬ್ದಾರಿಯನ್ನು ತನಿಶಾ, ಸಂಗೀತ, ಕಾರ್ತೀಕ್ ವಹಿಸಿಕೊಂಡಿದ್ದಾರೆ. ಇವರಲ್ಲಿ ಉತ್ತಮ ಎನಿಸಿಕೊಂಡಿದ್ದು ತನಿಶಾ. ಆಯ್ಕೆ ಮಾಡಿದವರಿಂದ ಒನ್ ಆಫ್ ದಿ ಬೆಸ್ಟ್ ಕುಕ್, ಎಲ್ಲಾ ಕಡೆಯಲ್ಲೂ ಆಕ್ಟೀವ್ ಆಗಿರುತ್ತಾರೆ. ಕುಕ್ಕಿಂಗ್ ಎಲ್ಲಾ ಚೆನ್ನಾಗಿ ಮಾಡುತ್ತಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಎಲ್ಲವನ್ನು ಸಮಾನವಾಗಿ ನಿಭಾಯಿಸುತ್ತಾ ಇದ್ದಾರೆ. ಹೀಗೆ ಪಾಸಿಟಿವ್ ಕಮೆಂಟ್ಸ್ ಬಂದಿದೆ.

ಜೈಲು ಸೇರಿದ ಮೊದಲ ವ್ಯಕ್ತಿ ಭಾಗ್ಯಶ್ರೀ

ಇನ್ನು ಸಮರ್ಥರ ಪೈಕಿ ಕಳಪೆ ಬಂದಿದ್ದು ಭಾಗ್ಯಶ್ರೀಗೆ. ಯಾವ ವಿಚಾರವನ್ನು ಸ್ಪೋಟವಾಗಿ ತೆಗೆದುಕೊಳ್ಳಲ್ಲ. ಸೆಂಟಿಮೆಂಟ್ ಆಗಿನೇ ತೆಗೆದುಕೊಳ್ಳುತ್ತಾರೆ. ಯಾವ ಟಾಸ್ಕ್ ಅನ್ನು ನಾನು ಮಾಡ್ತೀನಿ ಅಂತ ಮುಂದೆ ಬರಲ್ಲ. ನಮಗೆ ಬರಬೇಕಾದ ಲಕ್ಸುರಿ ಮಿಸ್ ಆಯ್ತು ಎಂಬೆಲ್ಲಾ ಕಾರಣಗಳನ್ನು ನೀಡಿದ್ದಾರೆ.

ಸಂತು ಮಾತಿಗೆ ಭಾಗ್ಯಶ್ರೀ ನಕಾರ

ಯಾರನ್ನಾದರೂ ಎಲಿಮಿನೇಟ್ ಮಾಡಬೇಕಾದರೆ, ಕಳಪೆ ಎನ್ನುವಾಗ, ಉತ್ತಮ ನೀಡುವಾಗ ಸೂಕ್ತ ಕಾರಣ ನೀಡಲೇಬೇಕು. ಭಾಗ್ಯಶ್ರೀ ಕಳಪೆ ಎನಿಸಲು ಹಲವರು ಹಲವು ಕಾರಣ ನೀಡಿದರು. ಆದರೆ, ತುಕಾಲಿ ಸಂತು ಮಾತ್ರ ಎಮೋಷನಲ್ ಜಾಸ್ತಿ ಎಂಬ ಕಾರಣ ಕೊಟ್ಟರು. ಇದು ಭಾಗ್ಯಶ್ರಿಗೆ ಇಷ್ಟವಾಗಲಿಲ್ಲ. "ಸಂತು ಕೊಟ್ಟಿದ್ದು ಇಷ್ಟವಾಗಲಿಲ್ಲ. ಸೆಂಟಿಮೆಂಟ್ ಆಗಿ‌ ಇರುವುದು ಇಷ್ಟವಾಗಲಿಲ್ಲ. ಎಲ್ಲದಕ್ಕೂ ನಾವೇ ಫಸ್ಟ್ ಅಂತ ಹೋಗುತ್ತಾರೆ. ಸೆಂಟಿಮೆಂಟ್ ಅಂತ ಯಾಕೆ ಕೊಡುತ್ತಾರೆ" ಎಂದು ಸಿರಿ ಬಳಿ ಹೇಳಿದ್ದಾರೆ. ಸಂತು ಬಂದಾಗಲೂ ಅದನ್ನು ವಿವರಿಸಿದ್ದಾರೆ. "ಟಾಸ್ಕ್ ತೆಗೆದುಕೊಂಡರೂ ನನಗೆ ಏನು ಅನ್ನಿಸ್ತಾ ಇರಲಿಲ್ಲ" ಎಂದಿದ್ದಾರೆ.

"ನನ್ನ ಯಾರು ಅಮ್ಮ ಎನ್ನಬೇಡಿ"

ತುಕಾಲಿ ಸಂತು ಮಾತನಾಡುವಾಗ ನಿಮ್ಮ ವಯಸ್ಸಿಗೂ ಟಾಸ್ಕ್ ಗೂ ಎಂಬ ಮಾತನ್ನ ಹೇಳಿದರು. ಇದಕ್ಕೆ ಬೇಸರ ಮಾಡಿಕೊಂಡ ಭಾಗ್ಯಶ್ರೀ, "ನಂಗೆ ತುಂಬಾ ವಯಸ್ಸೇನು ಆಗಿಲ್ಲ. ಇಲ್ಲಿ ಅಜ್ಜಿ ಅಂತ ಏನು ಹೇಳಬೇಡಿ. ಎಮೋಷನಲ್ ಆಗಿರುತ್ತಾರೆ. ಇಲ್ಲಿ ಅದೆಲ್ಲ ವರ್ಕ್ ಆಗಲ್ಲ ಅಂತೀರಾ. ಈಗ ವಿನಯ್ ಗೆದ್ದಿದ್ದಾರಾ..? ನಾನು ನಮ್ರತಾ ಬಳಿಯೂ ಕೇಳಿದ್ದೀನಿ ಆಡ್ತೀನಿ ಅಂತ. ಆದ್ರೆ, ಅವರವರೇ ಟೀಂ ಮಾಡಿಕೊಂಡು ಆಡುತ್ತಾರೆ. ನಾನು ಸಿರಿ ಫ್ರೆಂಡ್ ಅಂತ ನಮ್ಮಿಬ್ಬರನ್ನೇ ಬಿಡುತ್ತಾರೆ. ಸೀರೆ ಉಟ್ಟುಕೊಂಡರೆ ತಪ್ಪಾ. ಇನ್ನು ಮುಂದೆ ನನ್ನನ್ನು ಯಾರು ಅಮ್ಮ ಅಂತ ಕರೆಯಬೇಡಿ. ಇಲ್ಲಿ ನಾನು ಕೂಡ ಯಾವ ಸಂಬಂಧ ಬೆಳೆಸುವುದಕ್ಕೆ ಬಂದಿಲ್ಲ. ಎಮೋಷನಲ್ ಆಗಿರುವುದನ್ನೇ ವೀಕ್ನೆಸ್ ಎಂದುಕೊಂಡರೆ ಹೇಗೆ" ಎಂದು ಕಣ್ಣೀರು ಹಾಕಿದ್ದಾರೆ.

More from Filmibeat

English summary
Bigg Boss Kannada Season 10: Bhagyshree in jail Movement
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X