'ನಾಮಿನೇಷನ್ ಮಸಿ'ಯಲ್ಲಿ ಸ್ನಾನ ಮಾಡಿದ ಸ್ಪರ್ಧಿಗಳು: ಸಂಗೀತಾ ಆಯ್ತು ಈಗ ಡ್ರೋನ್ ಪ್ರತಾಪ್ ಮೇಲೆ ವಿನಯ್ ಕಣ್ಣು..!
ಬಿಗ್ ಬಾಸ್ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ. ಬಿಗ್ ಬ್ರೇಕಿಂಗ್ ನ್ಯೂಸ್ ಟಾಸ್ಕ್‌ನಲ್ಲಿ ಸ್ಪರ್ಧಿಗಳಿಗೆ ಎಂತಹ ಅಭಿಪ್ರಾಯವಿದೆ ಎಂಬುದನ್ನು ಹೊರಹಾಕಿದ್ದಾರೆ. ಪದೇ-ಪದೇ ಸಿರಿ ಅವರನ್ನೇ ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಟಾರ್ಗೆಟ್ ಮಾಡುತ್ತಿದ್ದು ಅದು ಸಿರಿಗೂ ಕೂಡ ಚೆನ್ನಾಗಿ ಗೊತ್ತಿದೆ. ಇದಕ್ಕಾಗಿ ತುಕಾಲಿ ಸಂತೋಷ್‌ರವರಿಗೆ ನೀವು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಂದಿಡುವ ಕೆಲಸ ಮಾಡುತ್ತೀರಿ ಎಂದು ಕಿಡಿ ಕಾರಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಕೋಪ ಮಾಡಿಕೊಂಡು ಸಿರಿ ಅವರ ಮೇಲೆ ಕೂಗಾಡಿದ್ದಾರೆ. ಇನ್ನು ಎಂದಿನಂತೆ ವಿನಯ್ ಸಂಗೀತಾ ಅವರ ಹೆಸರನ್ನ ತೆಗೆದುಕೊಂಡಿದ್ದಾರೆ. ಆದರೆ ಇಲ್ಲಿ ಸಂಗೀತಾ ಕಾರ್ತಿಕ್‌ಗೆ ಕ್ಷಮೆ ಕೇಳಿದ್ದಾರೆ. ಮತ್ತೆ ಮೊದಲಿನಂತೆ ಕಾರ್ತಿಕ್ ಜೊತೆಗೆ ಇರಬೇಕು ಎಂದು ಬಯಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವಾರದ ಎರಡನೇ ದಿನವೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಯಾಕೆಂದರೆ ಬಿಗ್ ಬಾಸ್ 11ನೇ ವಾರಕ್ಕೆ ಕಾಲಿಟ್ಟಿದ್ದು 70 ದಿನಗಳನ್ನು ಪೂರೈಸಿದೆ. ಎಲಿಮಿನೇಷನ್ ಪ್ರಕ್ರಿಯೆ ಕೂಡ ಅಷ್ಟೇ ಸ್ಟ್ರಾಂಗ್ ಆಗಿ ಇರುತ್ತದೆ. ಪ್ರತಿ ವಾರವೂ ಬಿಗ್ ಬಾಸ್ ಮನೆಯಿಂದ ಒಬ್ಬರು ಅಥವಾ ಇಬ್ಬರು ಅಥವಾ ಮೂವರು ಮನೆ ಬಿಟ್ಟು ಹೋಗುವ ಪ್ರಸಂಗವು ಕೂಡ ಬರುತ್ತದೆ. ಕೊನೆಗೆ ಐದು ಮಂದಿ ಮನೆಯಲ್ಲಿ ಉಳಿದುಕೊಂಡು ಅವರಲ್ಲಿ ಇಬ್ಬರನ್ನು ಆಯ್ಕೆ ಮಾಡಿಕೊಂಡು ಒಬ್ಬರನ್ನ ವಿಜೇತರನ್ನಾಗಿ ಘೋಷಣೆ ಮಾಡಲಾಗುತ್ತದೆ. ಸದ್ಯಕ್ಕೆ ಇನ್ನು 30 ದಿನಗಳು ಬಾಕಿ ಇದ್ದು ಯಾರು ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎಂಬುದು ಕುತೂಹಲವಾಗಿದೆ.

ಇನ್ನು ಮನೆಯಲ್ಲಿ ಬಣಗಳಾಗಿ ಮೊದಲು ಆಟಗಳನ್ನ ಆಡುತ್ತಿದ್ದರು ಕಾಲ ಕಳೆದಂತೆ ಶತ್ರುಗಳೆಲ್ಲ ಮಿತ್ರರಾಗುತ್ತಿದ್ದಾರೆ. ಮಿತ್ರರೆಲ್ಲಾ ಶತ್ರುಗಳಾಗುತ್ತಾ ಇದ್ದಾರೆ ಈಗ ಕಾರ್ತಿಕ್ ತನಿಶಾ ಹಾಗೂ ಸಂಗೀತಾ ನಡುವೆಯೂ ಕೂಡ ಒಂದು ಅಂತರವಿದೆ. ಒಳ್ಳೆಯ ಸ್ನೇಹಿತರಾಗಿದ್ದು ಸಂಗೀತಾ ಆಡಿದ ಒಂದೇ ಒಂದು ಮಾತಿಗೆ ದೂರವಾಗಿದ್ದಾರೆ. ಇದು ಕೂಡ ನಾಮಿನೇಷನ್ ಪ್ರಕ್ರಿಯೆಯಲ್ಲಿ ಒಂದು ದಳವಾಗಿ ಬಳಸಿಕೊಳ್ಳಬಹುದು. ಇಂದು ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿದೆ. ಬಕೆಟ್ ನಲ್ಲಿ ಮಸಿಯ ನೀರನ್ನು ಇಟ್ಟಿದ್ದು ಯಾರು ನಾಮಿನೇಟ್ ಆಗುತ್ತಾರೋ ಅಂತವರ ಮೇಲೆ ಆ ನೀರನ್ನು ಹಾಕಲಾಗುತ್ತಿದೆ.
ಮಸಿ ನೀರಿಯಲ್ಲಿ ಸ್ನಾನ ಮಾಡಿದ ಸ್ಪರ್ಧಿಗಳು
ವಿನಯ್ ಟಾರ್ಗೆಟ್ ಆದ ಡ್ರೋಣ್ ಪ್ರತಾಪ್
ಇಂದು ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿದೆ, ಇನ್ನೂ ಒಂದು ಜಾಗದಲ್ಲಿ ಬಂದು ಸ್ಪರ್ದಿಗಳು ಕುಳಿತುಕೊಳ್ಳುತ್ತಾರೆ. ಅವರು ನಾಮಿನೇಟ್ ಆಗುವವರು ಆಗಿದ್ದರೆ ಅಂತವರ ಮೇಲೆ ಬಕೆಟ್ ನಿಂದ ಮಸಿಯ ನೀರನ್ನ ಸುರಿಯಲಾಗುತ್ತಿದೆ. ವಿನಯ್ ಅವರು ಪ್ರತಾಪ್ ಅವರ ಹೆಸರನ್ನ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೆ ನಾನು ಪ್ರತಾಪ್ ಅವರನ್ನು ನಾಮಿನೇಟ್ ಮಾಡುತ್ತೇನೆ ಎಂದು ಸಹ ಹೇಳಿದ್ದಾರೆ. ಪ್ರತಾಪ್ ಇತ್ತೀಚಿನ ದಿನಗಳಲ್ಲಿ ನಮ್ಮೂರು.. ನಮ್ಮ ಹಳ್ಳಿ.. ಅಮ್ಮ.. ಅಪ್ಪ.. ಎಂಬ ಕಾರ್ಡ್‌ನ್ನು ಪ್ಲೇ ಮಾಡುತ್ತಾ ಇದ್ದಾರೆ ಎಂದು ಹೇಳಿದ್ದಾರೆ.
ಪ್ರತಾಪ್ ಹಳ್ಳಿ ಪ್ಲೇವರ್ ಅನ್ನು ಹಿಂದೆ ಇಟ್ಟುಕೊಂಡು ಗೇಮ್ ಆಡುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅದು ಯಾಕೋ ಗೊತ್ತಿಲ್ಲ ವಿನಯ್, ನಮ್ರತಾ ಪದೇ ಪದೇ ಡ್ರೋನ್ ಪ್ರತಾಪ್ ಹೆಸರನ್ನು ಯಾವುದಾದರೂ ವಿಚಾರಕ್ಕೆ ತೆಗೆದುಕೊಳ್ಳಲೇ ಇರುತ್ತಾರೆ. ಈಗ ತನಿಶಾ ಕೂಡ ಈ ಸಾಲಿಗೆ ಸೇರಿದ್ದು, ಪ್ರತಾಪ್ ಕಂಡರೆ ತನಿಷಾಗೂ ಇಷ್ಟವಾಗುತ್ತಾ ಇಲ್ಲ. ಮೊದಮೊದಲು ಪ್ರತಾಪ್ ಅವರ ಜೊತೆಗೆ ಚೆನ್ನಾಗಿದ್ದರೂ ಆದರೆ ಈ ನಡುವೆ ಪ್ರತಾಪ್‌ಯಿಂದ ಅಂತರ ಕಾಯ್ದುಕೊಳ್ಳುತ್ತಾ ಇದ್ದಾರೆ.

ಕಾರ್ತಿಕ್ ಮೇಲೆ ಕೆಂಡ ಕಾರುತ್ತಿರುವ ಮೈಕಲ್
ಮೈಕಲ್‌ರನ್ನು ನಾಮಿನೇಟ್ ಮಾಡಿದ ಕಾರ್ತಿಕ್
ಮೈಕಲ್ ಯಾಕೋ ಕಾರ್ತಿಕ್ ಮೇಲೆ ದ್ವೇಷ ಕಾರುತ್ತಿರುವಂತೆ ಕಾಣುತ್ತಿದೆ. ಅದು ಯಾಕೋ ಗೊತ್ತಿಲ್ಲ ಈಗಂತೂ ಸಂಗೀತಾಯಿಂದ ಕಾರ್ತಿಕ್ ದೂರವಾದ ಮೇಲಂತೂ ಮೈಕಲ್ ಸಂಗೀತಾ ಅವರ ಹೆಸರನ್ನೇ ತೆಗೆದುಕೊಂಡು ಪ್ರಶ್ನೆ ಕೇಳುತ್ತಿದ್ದಾರೆ. ಮೈಕಲ್ ಸಂಗೀತಾ ಹೆಸರು ಹಿಡಿದುಕೊಂಡು ಪ್ರಶ್ನೆ ಕೇಳಿದಾಗಲೆಲ್ಲ ಕಾರ್ತಿಕ್ ಉತ್ತರ ನೀಡುತ್ತಲೇ ಇದ್ದರು. ಇಂದು ಕೂಡ ಮೈಕಲ್ ಕಾರ್ತಿಕ್ ಅವರು ಒಂದು ಫೇಕ್ ಫ್ರೆಂಡ್ಶಿಪ್ ಒಳಗಡೆ ಇದ್ದಾರೆ ಎಂದು ಅನಿಸುತ್ತದೆ ಎಂಬ ಕಾರಣ ಹೇಳಿ ನಾಮಿನೇಟ್ ಮಾಡಿದ್ದಾರೆ.
ಕಾರ್ತಿಕ್ ಸರದಿ ಬಂದಾಗ ಮೈಕಲ್ ಅವರ ಹೆಸರನ್ನು ತೆಗೆದುಕೊಂಡ ಕಾರ್ತಿಕ್ ಮೈಕಲ್ ಕಾರಣವೇ ಇಲ್ಲದೆ ಒಪಿನಿಯನ್ ಹೇಳಲು ಬರುತ್ತಾರೆ. ನಾಮಿನೇಷನ್ ಮಾಡೋದಕ್ಕೆ ಸರಿಯಾದ ರೀಸನ್ ಕೊಡಲು ಬಂದಿಲ್ಲ ಸ್ಪರ್ಧಿ ಬಿಗ್ ಬಾಸ್ ಮನೆಯಲ್ಲಿ ಇರಲು ಲಾಯಕ್ ಅಲ್ಲ ಎಂದಿದ್ದಾರೆ. ನಂತರ ಮೈಕಲ್ ಮುಖ ನೋಡಿಕೊಂಡು ಕಾರಣ ಕೊಡೋದು ಹೀಗೆ ಎಂದು ಹೇಳಿ ಬಕೆಟ್ ನಲ್ಲಿದ್ದ ಮಸಿ ನೀರನ್ನು ತೆಗೆದುಕೊಂಡು ಮೈಕಲ್ ಮೇಲೆ ಸುರಿದಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆ ಸಂಕೀರ್ಣವಾಗುತ್ತಾ ಹೋಗುತ್ತಿದೆ. ಉಳಿಯುವವರು ಯಾರು... ಹೋಗುವ ಯಾರು... ಇದೆಲ್ಲ ವೀಕ್ಷಕರ ಕೈಯಲ್ಲಿ ಇದೆ.


Click it and Unblock the Notifications











