14 ನೇ ವಾರ ಆರು ಮಂದಿ ನಾಮಿನೇಟ್: ವಿನಯ್ ಟಾರ್ಗೆಟ್ ಮಾಡಿದ್ದ ಡ್ರೋನ್ ಪ್ರತಾಪ್‌ನನ್ನು ಸೇವ್ ಮಾಡಿದ ಸಂಗೀತಾ!

By Shruthi Harishgowda

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ವಿಚಾರ ಬಂದಾಗ ಸ್ಪರ್ಧಿಗಳು ಯಾವುದೇ ರೀತಿಯಲ್ಲಿ ರಾಜಿ ಆಗೋದಿಲ್ಲ. ಆದರೆ ನಮ್ರತಾ ಮಾತ್ರ ವಿನಯ್ ಅವರನ್ನು ಗೆಲ್ಲಿಸಲು ಬಂದಿರುವಂತೆ ಕಾಣಿಸುತ್ತಿದೆ. ಇಲ್ಲಿವರೆಗೂ ಕೂಡ ಒಮ್ಮೆಯೂ ವಿನಯ್ ಅವರನ್ನು ನಮ್ರತಾ ನಾಮಿನೇಟ್ ಮಾಡಿಲ್ಲ. ವಿನಯ್ ಕೂಡ ಅಷ್ಟೇ ನಮ್ರತಾನನ್ನು ನಾಮಿನೇಟ್ ಮಾಡುವ ಗೋಜಿಗೆ ಹೋಗೋದಿಲ್ಲ. ಏನೇ ಇದ್ದರೂ ವಿನಯ್ ಟಾರ್ಗೆಟ್ ಪ್ರತಾಪ್ ಮಾತ್ರ. ಪದೇ ಪದೇ ಯಾವುದೇ ವಿಚಾರ ಬಂದರೂ ಪ್ರತಾಪ್ ಅವರನ್ನೇ ವಿನಯ್ ಟಾರ್ಗೆಟ್ ಮಾಡಿ ಮಾತನಾಡುತ್ತಾ ಇರುತ್ತಾರೆ. ಒಮ್ಮೆ ನಮ್ರತಾ ವಿನಯ್ ಅವರು ನನ್ನ ವಿರುದ್ಧ ಮಾತನಾಡುವುದನ್ನ ನೋಡಬೇಕು ಎಂದು ಕೂಡ ಸಂಗೀತಾ ಹೇಳಿದ್ದರು ಆದರೆ ಅದು ಇಂದಿಗೂ ಕೂಡ ಸಾಧ್ಯವಾಗಿಲ್ಲ.

ತನಿಷಾ ವಿಚಾರದಲ್ಲಿ ಕಾರ್ತಿಕ್ ಎಲ್ಲೋ ಎಡವಿದಂತೆ ಕಾಣಿಸುತ್ತಾ ಇದೆ. ತನಿಷಾ ಮಾತ್ರ ಕಾರ್ತಿಕ್ ಅವರನ್ನು ರಕ್ಷಣೆ ಮಾಡಿಕೊಂಡೆ ಬರುತ್ತಾ ಇದ್ದರು. ಅವರು ಕ್ಯಾಪ್ಟನ್ ಆಗಿದ್ದ ಸಂದರ್ಭದಲ್ಲಿ ಮೈಕಲ್ ಹಾಗೂ ಕಾರ್ತಿಕ್ ಇಬ್ಬರು ಕೂಡ ನಾಮಿನೇಟ್ ಆಗಿದ್ದರು. ಈ ವೇಳೆ ನೀವು ಯಾರನ್ನು ಉಳಿಸುತ್ತೀರಾ ಎಂದು ಬಿಗ್ ಬಾಸ್ ಕೇಳಿದಾಗ ಕಾರ್ತಿಕ್ ಅವರನ್ನೇ ಉಳಿಸಿದ್ದರು. ಆದರೂ ಕೂಡ ಅವರ ಕಾರ್ತಿಕ್ ನಾಮಿನೇಟ್ ಆಗಿದ್ದರೂ. ಈ ವಾರ ಕಾರ್ತಿಕ್ ಮಾಡಿದ ಒಂದೇ ಒಂದು ತಪ್ಪು ತನಿಷಾ ಕಣ್ಣಲ್ಲಿ ನೀರನ್ನು ತರಿಸಿದೆ. ತನಿಷಾ ಮಾತ್ರ ಮನಸ್ಸಿಗೆ ಬಹಳ ನೋವು ಮಾಡಿಕೊಂಡು ಕಣ್ಣೀರನ್ನು ಹಾಕಿದ್ದಾರೆ.

Bigg Boss Kannada Season 10: Bigg Boss 14th week Nomination update

ಎಲ್ಲರ ನಿರೀಕ್ಷೆಯಂತೆ ವರ್ತೂರು ಸಂತೋಷ್ ಹಾಗೂ ಪ್ರತಾಪ್ ಇಬ್ಬರೂ ಕೂಡ ಮನೆಯ ಸದಸ್ಯರ ಟಾರ್ಗೆಟ್ ಆಗಿದ್ದಾರೆ. ಪ್ರತಾಪ್ ಅವರಿಗೆ ಮನೆಯ ಇತರ ಸದಸ್ಯರ ಮೇಲೆ ಯಾವ ಅಭಿಪ್ರಾಯ ಇದೆ ಎಂಬುದು ನಾಮಿನೇಟ್ ಮಾಡುವ ವೇಳೆ ಹೊರ ಬಂದಿದೆ. ಪ್ರತಾಪ್ ಸಿಂಪತಿ ಕಾರ್ಡ್ ಪ್ಲೇ ಮಾಡಿಕೊಂಡು ಬಂದು ಇಲ್ಲಿಯ ತನಕ ಬಂದಿದ್ದಾರೆ. ಅವರು ಯಾವುದೇ ರೀತಿಯಲ್ಲಿ ಚಟುವಟಿಕೆಗಳನ್ನು ನಡೆಸಿಲ್ಲ ಎಂಬುವುದು ಬಿಗ್ ಬಾಸ್ ಮನೆಯ ಸ್ಪರ್ಧಿಗಳ ವಾದ. ಆದರೆ ಪ್ರತಾಪ್ ಅವರ ಲಕ್ ತುಂಬಾ ಚೆನ್ನಾಗಿದೆ ಅನಿಸುತ್ತಿದೆ ಈ ವಾರವು ಕೂಡ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಅರ್ಹತೆ ಪಡೆದುಕೊಂಡಿದ್ದಾರೆ.

ತನಿಷಾರನ್ನು ನಾಮಿನೇಟ್ ಮಾಡಿದ ಕಾರ್ತಿಕ್

ಕ್ಯಾಪ್ಟನ್ ಆಗಿದ್ದ ಸಂಗೀತಾ ಅವರನ್ನು ಹೊರತುಪಡಿಸಿ ಉಳಿದ ಮನೆಯ ಎಲ್ಲ ಸದಸ್ಯರು ಕೂಡ ನಾಮಿನೇಟ್ ಆಗಿದ್ದರು. ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್, ಪ್ರತಾಪ್, ತನಿಷಾ, ಕಾರ್ತಿಕ್, ನಮ್ರತಾ ಮನೆಯ ಇಷ್ಟು ಮಂದಿ ಕೂಡ ನಾಮಿನೇಟ್ ಆಗಿದ್ದರೂ ನಾಮಿನೇಷನ್ ಎಂದು ಬಂದಾಗ ಇಲ್ಲಿ ಇರುವ ಸ್ಪರ್ದಿಗಳು ನಡೆದುಕೊಳ್ಳುವ ರೀತಿಯೇ ಬೇರೆಯದ್ದಾಗಿದೆ. ಪಂದ್ಯಕ್ಕೆ ಕಾರ್ತಿಕ್ ಹಾಗೂ ವಿನಯ್ ಇಬ್ಬರು ಒಬ್ಬರಿಗೊಬ್ಬರನ್ನು ಬಿಟ್ಟುಕೊಡದ ರೀತಿಯಲ್ಲಿ ಗೇಮ್ ಆಡುತ್ತಾ ಇದ್ದಾರೆ. ಈ ಮೊದಲೇ ವಿನಯ್ ಒಂದು ಕೈ ನಿನ್ನದಾಗಿದ್ದರೆ ಮತ್ತೊಂದು ಕೈ ನನ್ನದಾಗಿರಬೇಕು ಎಂದು ಹೇಳಿದ್ದರು. ಅದೇ ರೀತಿ ಈಗ ಆಟವನ್ನು ಆಡುತ್ತಾ ಇರುವಂತೆ ಕಾಣಿಸುತ್ತಿದೆ.

Bigg Boss Kannada Season 10: Bigg Boss 14th week Nomination update

ಕಾರ್ತಿಕ್ ಎಂದಿಗೂ ಕೂಡ ನಮ್ಮನ್ನು ನಾಮಿನೇಟ್ ಮಾಡೋಲ್ಲ ಎಂದು ತನಿಷಾ ಅಂದುಕೊಂಡಿದ್ದರು.‌ಆದರೆ ಕಾರ್ತಿಕ್ ತನಿಷಾ ಹೆಸರನ್ನು ನಾಮಿನೇಷನ್ ಮಾಡಿದ್ದು ಕಣ್ಣೀರು ತರಿಸಿದೆ. ನಾನು ಸ್ನೇಹಿತ ಎಂದುಕೊಂಡು ಇದ್ದೇ ಆದರೆ ಕಾರ್ತಿಕ್ ಅವರು ನನ್ನನ್ನು ಆ ರೀತಿ ಇಂದು ನೋಡದೆ ಇರುವುದು ಬೇಸರ ತರಿಸಿದೆ ಎಂದು ಕಣ್ಣೀರು ಹಾಕಿದ್ದಾರೆ. ನಮ್ರತ ಕೂಡ ಈ ವಾರ ಹಾಗಿದ್ದಾರೆ ವಾರಗಳಿಂದ ನಮ್ರತಾ ನಾಮಿನೇಟ್ ಆಗಿರಲಿಲ್ಲ ಈಗ ನಾಮಿನೇಟ್ ಆಗಿರುವುದು ನಮ್ರತಾ ಕಣ್ಣಲ್ಲು ಕೂಡ ಕಣ್ಣೀರು ತರಿಸಿದೆ.

ಸಂಗೀತಾ ಕೃಪೆಯಿಂದ ಪ್ರತಾಪ್ ಸೇಫ್, ಇದು ನಿನ್ನ ಲಕ್ ಎಂದ ನಮ್ರತಾ!

ಪ್ರತಾಪ್ ಕೂಡ ಈ ವಾರ ನಾಮಿನೇಟ್ ಆಗಿದ್ದರೂ ಸಂಗೀತ ಅವರು ಕ್ಯಾಪ್ಟನ್ ಆಗಿರುವುದರಿಂದ ಸಂಗೀತಾಗೆ ಒಂದು ವಿಶೇಷ ಅಧಿಕಾರವನ್ನು ಬಿಗ್ ಬಾಸ್ ನೀಡಿತ್ತು. ಅದು ಏನೆಂದರೆ ಈ ವಾರ ನಿಮಗೆ ಆಗಿರುವ ಸದಸ್ಯರಲ್ಲಿ ಒಬ್ಬರನ್ನು ಸೇವ್ ಮಾಡುವ ಅಧಿಕಾರವನ್ನು ನೀಡಿದ್ದೇವೆ ಎಂದು ಹೇಳಿದ್ದರು ಅದರಂತೆ ಪ್ರತಾಪ್ ಅವರನ್ನು ಸಂಗೀತಾ ಸೇಫ್ ಮಾಡಿದ್ದಾರೆ.

ಪ್ರತಾಪ್ ಸೇವ್ ಆದ ಕೂಡಲೇ ಮನೆಯ ಸದಸ್ಯರೆಲ್ಲರೂ ಕೂಡ ಉರಿದುಕೊಂಡಿದ್ದಾರೆ. ಸಂಗೀತಾ ಮಾತ್ರ ಅವನು ನನ್ನಂತೆ ಸೋಲೋ ಆಗಿ ಹೋರಾಟ ಮಾಡುತ್ತಾ ಇದ್ದಾನೆ. ಅದಕ್ಕಾಗಿ ನಾನು ಅವನನ್ನು ಸೇವ್ ಮಾಡುತ್ತಿದ್ದೇನೆ ಎಂಬ ಕಾರಣವನ್ನು ಕೊಟ್ಟಿದ್ದಾರೆ. ನಮ್ರತಾ ಅವರು ಪ್ರತಾಪ್ ಬಳಿ ಬಂದು ಇದು ನಿನ್ನ ಲಕ್ ಎಂದು ಹೇಳಿದ್ದಾರೆ. ಈ ವಾರ ಪ್ರತಾಪ್ ಹಾಗೂ ಸಂಗೀತಾ ಸೇಫ್ ಆಗಿದ್ದು ಉಳಿದ ಆರು ಮಂದಿ ನಾಮಿನೇಟ್ ಆಗಿದ್ದಾರೆ.

More from Filmibeat

English summary
Bigg Boss Kannada 10: Details about 14th week Nomination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X