ಇದ್ದಕ್ಕಿದ್ದಂತೆ ಏನಾಯ್ತು ಬಿಗ್ ಬಾಸ್ ಮನೆಯಲ್ಲಿ..! ಡ್ರೋನ್ ಪ್ರತಾಪ್ ಆದ್ರೂ ಎಲ್ಲರ ಟಾರ್ಗೆಟ್..!?
ಬಿಗ್ ಬಾಸ್ ಮನೆಗೆ ಪ್ರತಾಪ್ ಎಂಟ್ರಿ ಕೊಟ್ಟಾಗ ಅಸಮರ್ಥರ ಗುಂಪಿನಲ್ಲಿ ಇದ್ದರು. ಇನ್ನೂ ಅಸಮರ್ಥರ ಗುಂಪಿನಲ್ಲಿ ಇದ್ದ ಸಂಗೀತಾ ಹಾಗೂ ಕಾರ್ತಿಕ್ ಜೊತೆಗೆ ಅವರು ಒಂದು ಬಾಂಧವ್ಯ ಹೊಂದಿದ್ದರು. ಇನ್ನು ತನಿಷಾ ಜೊತೆಗೂ ಕೂಡ ಚೆನ್ನಾಗಿಯೇ ಮಾತನಾಡುತ್ತಾ ಇದ್ದರು . ಅಸಮರ್ಥರೆಲ್ಲರೂ ಕೂಡ ಒಂದು ಟೀಮ್ ಆಗಿ ಆಟ ಆಡುತ್ತಾ ಸಮರ್ಥರ ತಂಡಕ್ಕೆ ಸವಾಲು ಹಾಕಿದಂತೆ ಕಾಣಿಸುತ್ತಿದ್ದರು. ಪ್ರತಾಪ್ ಮಾಡುವ ಕೆಲವೊಂದು ಸ್ಟ್ಯಾಟಜಿದಿಂದ ತಂಡ ಗೆಲುವು ಕೂಡ ಪಡೆದಿತ್ತು.
ಇನ್ನು ನಾಮಿನೇಷನ್ ಪಾಸ್ ವಿಚಾರಕ್ಕೆ ಬಂದಾಗ ಪ್ರತಾಪ್ ಕೆಲವು ಬಾರಿ ಸಿರಿ ಹಾಗೂ ಭಾಗ್ಯಶ್ರೀ ಅವರನ್ನ ಉಳಿಸಿಕೊಂಡೇ ಬಂದಿದ್ದರು. ಮನೆಯಲ್ಲಿರುವ ಹೆಣ್ಣು ಮಕ್ಕಳಿಗಂತೂ ಜೀವದಾನವನ್ನೇ ಮಾಡಿ ನಾಮಿನೇಷನ್ ನಿಂದ ಪಾರು ಮಾಡಿದ್ದರು. ಈ ರೀತಿ ಮನಸ್ಸುಳ್ಳ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ಟಾರ್ಗೆಟ್ ಆಗುತ್ತಿದ್ದಾರೆ. ಪ್ರತಾಪ್ ಮಾಡಿದ ಒಂದೇ ಒಂದು ತಪ್ಪು ಎಂದರೆ ಕ್ಯಾಪ್ಟನ್ಸಿ ಟಾಸ್ಕ್ ಗಾಗಿ ತಂಡವನ್ನು ರಚನೆ ಮಾಡಿದಾಗ ನಮ್ರತಾ ಅವರನ್ನು ಹೊರಗೆ ಇಟ್ಟಿದ್ದು, ಇದೊಂದು ರೀಸನ್ ಗೆ ಪ್ರತಾಪ್ ಮೇಲೆ ನಮ್ರತಾ ಕೋಪ ಇನ್ನೂ ಹೆಚ್ಚಾದಂತೆ ಕಾಣಿಸುತ್ತಾ ಇದೆ. ಪ್ರತಿ ವಾರವು ಕೂಡ ಏನಾದರೂ ಒಂದು ವಿಚಾರ ಬಂದಾಗ ಟಾರ್ಗೆಟ್ ಮಾಡಿ ಮಾತನಾಡುತ್ತಾ ಇರುತ್ತಾರೆ.

ಪ್ರತಾಪ್ ತುಕಾಲಿ ಸಂತೋಷ್ ಜೊತೆಯಲ್ಲೂ ಕೂಡ ಮೊದಮೊದಲು ತುಂಬಾ ಚೆನ್ನಾಗಿ ಇದ್ದರು. ಪ್ರತಾಪ್‌ಗೆ ಅತಿ ಹೆಚ್ಚು ವೋಟ್ ಬಂದಿದೆ ಎಂಬ ವಿಚಾರ ಗೊತ್ತಾದಾಗ ತುಕಾಲಿ ಸಂತೋಷ್ ಪ್ರತಾಪ್ ಜೊತೆ ಒಳ್ಳೆಯ ಸ್ನೇಹ ಬಯಸಿದ್ದರು. ಆದರೆ ತುಕಾಲಿ ಸಂತೋಷ್ ಜೊತೆಗೆ ಪ್ರತಾಪ್ ಯಾಕೋ ಅಷ್ಟಾಗಿ ಕನೆಕ್ಟ್ ಆದಂತೆ ಕಾಣುತ್ತಿಲ್ಲ. ಪ್ರತಾಪ್ ಚೆನ್ನಾಗಿಯೇ ಇದ್ದರು ಕೂಡ ತುಕಾಲಿ ಸಂತೋಷ್ ಹಾಗೂ ವಿನಯ್ ಇಬ್ಬರು ಕೂಡ ಪ್ರತಾಪ್ ಅವರನ್ನ ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಅವರ ಸಾಲಿಗೆ ಈಗ ಮೈಕಲ್ ಕೂಡ ಸೇರಿಕೊಂಡಿದ್ದಾರೆ.
ಸೆಮಿ ಫೈನಲ್‌ವರೆಗೂ ಇರಲ್ವಾ ಡ್ರೋನ್?
ಪ್ರತಾಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಲೇ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರಹಾಕಿದ್ದರು. ಇನ್ನು ಈಗಂತೂ ಸೆಮಿ ಫೈನಲ್ ಹತ್ತಿರವಾಗುತ್ತಿರುವಾಗಲೇ ತುಕಾಲಿ ಸಂತೋಷ್, ನಮ್ರತಾ, ತನಿಷಾ ಹಾಗೂ ಮೈಕಲ್, ವಿನಯ್ ಅಸಮಾಧಾನವನ್ನು ಹೊರಹಾಕಿದ್ದಾರೆ. ಪ್ರತಾಪ್ ಸಿಂಪತಿಯಿಂದ ಮನೆಯಲ್ಲಿ ಇದ್ದಾರೆ ಎಂಬ ಮಾತು ಆಡಿದ್ದಾರೆ. ಹಳ್ಳಿ ಕಾರ್ಡ್ ಪ್ಲೇ ಮಾಡಿಕೊಂಡು ಪ್ರತಾಪ್ ಜನರ ಮನಸ್ಸು ಗೆಲ್ಲಲು ನೋಡುತ್ತಾ ಇದ್ದಾರೆ ಅವನು ಬಿಗ್ ಬಾಸ್ ಮನೆಗೆ ಕೊಟ್ಟಿರುವ ಕೊಡುಗೆ ಸೂನ್ಯ ಎಂಬಂತೆ ಮಾತನಾಡಿದ್ದಾರೆ.

ಇನ್ನು ನಮ್ರತಾ ಕೂಡ ಸಿಂಪತಿಯಿಂದಲೇ ಪ್ರತಾಪ್ ಇರುವುದು ಅವನಿಗೆ ಆಟವಾಡಲು ಬರುವುದಿಲ್ಲ ಎಲ್ಲರನ್ನೂ ದೀದಿ ಅಣ್ಣ ಎಂದುಕೊಂಡೆ ಕಾಲ ಕಳೆಯುತ್ತಿದ್ದಾರೆ ಎಂದಿದ್ದಾರೆ. ತುಕಾಲಿ ಸಂತೋಷ್ ಕೂಡ ಪ್ರತಾಪ್ ಫೇಕ್ ಎಂದು ಹೇಳಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋದ ಮೈಕಲ್ ಅಂತೂ ಪ್ರತಾಪ್ ನನಗೆ ಸ್ಪರ್ಧಿಯ ರೀತಿ ಕಾಣುತ್ತಿಲ್ಲ ನಾನು ವಿರೋಧಿಯಂತೆ ಅವನನ್ನ ನೋಡಿಯೇ ಇಲ್ಲ ಎಂಬ ಮಾತನ್ನು ಆಡಿದ್ದಾರೆ. ಇದೇ ಮೈಕಲ್ ಪ್ರತಾಪ್ ಫ್ರೆಂಡ್ಸ್ ಗೆ ಒಮ್ಮೆ ಧನ್ಯವಾದ ಅರ್ಪಿಸಿದ್ದರು. ಮೈಕಲ್ ನಾಮಿನೇಟ್ ಆದಾಗ ಪ್ರತಾಪ್ ಫ್ರೆಂಡ್ಸ್ ಕೂಡ ನನಗೆ ವೋಟ್ ಮಾಡಿದ್ದಾರೆ ಎಂದು ಹೇಳಿದ್ದರು ಆದರೆ ಈಗ ಮೈಕಲ್ ಉಲ್ಟಾ ಹೊಡೆಯುತ್ತಿದ್ದಾರೆ.
ಪ್ರತಾಪ್ ಮೇಲೆ ತನಿಷಾಗೂ ಕೋಪ, ಮುದ್ದೆ ಮಾಡಿದ್ದೇ ತಪ್ಪಾಯ್ತಾ..?
ಪ್ರತಾಪ್ ಜೊತೆ ತನಿಷಾ ಒಂದು ಉತ್ತಮವಾದ ಬಾಂಡಿಂಗ್ ಹೊಂದಿದ್ದರು. ಆದರೆ ಪ್ರತಾಪ್ ಯಾವಾಗ ಬಿಗ್ ಬಾಸ್ ಮನೆಯಲ್ಲಿ ಮುದ್ದೆ ಮಾಡಿದರೋ ಆ ದಿನದಿಂದ ಪ್ರತಾಪ್ ನಡವಳಿಕೆ ತನಿಷಾಗೆ ಇಷ್ಟವಾಗಿಲ್ಲ. ಇದಕ್ಕಾಗಿ ಪ್ರತಾಪ್‌ನನ್ನ ನಾನು ದ್ವೇಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈಗ ಪ್ರತಾಪ್‌ಗೆ ನಾನು ಎಂಬ ಅಹಂ ಹೆಚ್ಚಾಗಿದೆ ಎಂಬುದನ್ನು ಕೂಡ ಹೇಳಿದ್ದಾರೆ. ಇದಕ್ಕೂ ಮೊದಲು ಎಲ್ಲೂ ಕೂಡ ಅವರು ಪ್ರತಾಪ್ ಬಗ್ಗೆ ಆ ರೀತಿ ಹೇಳಿರಲಿಲ್ಲ.
ಪ್ರತಾಪ್ ಮುದ್ದೆ ಮಾಡಿದ್ದೆ ತಪ್ಪಾಯ್ತಾ? ಎಂದು ಪ್ರತಾಪ್‌ಗೆ ಅನಿಸುವ ಮಟ್ಟಿಗೆ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳು ಪ್ರತಾಪ್ ಅವರನ್ನ ಟಾರ್ಗೆಟ್ ಮಾಡುತ್ತಾ ಇದ್ದಾರೆ. ಮೊದಲು ಸ್ನೇಹಿತ್, ನಮ್ರತಾ, ವಿನಯ್ ಈಗ ಇವರ ಸಾಲಿಗೆ ತನಿಷಾ ಹಾಗೂ ತುಕಾಲಿ ಸಂತೋಷ್, ಮೈಕಲ್ ಸೇರಿಕೊಂಡಿದ್ದಾರೆ. ಪ್ರತಾಪ್ ಜನರ ಮನಸ್ಸು ಗೆದ್ದು ಸೆಮಿ ಫೈನಲ್‌ವರೆಗೂ ಇರುತ್ತಾರಾ ನೋಡಬೇಕಾಗಿದೆ.


Click it and Unblock the Notifications











