Varthur Santhosh: ಬಿಗ್ ಬಾಸ್‌ಗೆ ವಾಪಸ್ ಬಂದ ವರ್ತೂರು ಸಂತೋಷ್ ಮೇಲೆ ಕೆಂಗಣ್ಣು, ಗೆಟೌಟ್ ಎಂದ ಸ್ಪರ್ಧಿಗಳು!?

ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಈ ಬಾರಿ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಮನೆಯಿಂದಲೇ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದಲ್ಲಿ ಪೊಲೀಸರು ವರ್ತೂರು ಸಂತೋಷ್‌ ಅವರನ್ನು ಬಂಧಿಸಿದ್ದರು. ಇದು ಸ್ಯಾಂಡಲ್‌ವುಡ್‌ನಲ್ಲಿಯೂ ಭಾರಿ ಸಂಚಲನಕ್ಕೆ ಕಾರಣವಾಗಿತ್ತು.

ಸದ್ಯ ಜಾಮೀನ ಮೇಲೆ ವರ್ತೂರು ಸಂತೋಷ್‌ ಬಿಡುಗಡೆಯಾಗಿದ್ದು, ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಅದು ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದು ಮತ್ತೆ ಬಿಗ್ ಬಾಸ್ ಮನೆಗೆ ಹೋದ ಮೊದಲ ಅಭ್ಯರ್ಥಿಯಾಗಿದ್ದಾರೆ. ಆದರೆ, ಮತ್ತೆ ಮನೆ ಪ್ರವೇಶಿಸಿರುವ ಅವರನ್ನು ಇತರ ಸ್ಪರ್ಧಿಗಳು ಟಾರ್ಗೆಟ್ ಮಾಡುತ್ತಿದ್ದಾರೆ!.

targeting-varthur-santhosh

ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಟಾರ್ಗೆಟ್

ಹುಲಿ ಉಗುರು ಪ್ರಕರಣದಲ್ಲಿ ಜಾಮಿನು ಪಡೆದು ವಾಪಸ್ ಮನೆಗೆ ಬಂದಿರುವ ವರ್ತೂರು ಸಂತೋಷ್ ಅವರನ್ನು ಇತರ ಸ್ಪರ್ಧಿಗಳು ನಡೆಸಿಕೊಳ್ಳುತ್ತಿರುವ ರೀತಿ ವೀಕ್ಷಕರಲ್ಲಿ ಆಶ್ಚರ್ಯ ಉಂಟುಮಾಡಿದೆ. ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋಗೆ ಬಿಗ್ ಬಾಸ್ ವೀಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದ ವರ್ತೂರ್ ಸಂತೊಷ್ ಅವರಿಗೆ ಮೊದಲಿಗೆ ಸ್ಪರ್ಧಿಗಳು ಭರ್ಜರಿ ವೆಲ್‌ಕಮ್ ನೀಡಿದ್ದಾರೆ. ತುಕಾಲಿ ಸಂತೊಷ್, ವಿನಯ್, ರಕ್ಷಕ್ ಬುಲೆಟ್, ಟ್ರೋನ್ ಪ್ರತಾಪ್ ಸೇರಿದಂತೆ ಹಲವರು ಅವರನ್ನು ಅಪ್ಪಿಕೊಂಡು ಖುಷಿ ಹಂಚಿಕೊಂಡಿದ್ದಾರೆ. ಬಳಿಕ ಅವರನ್ನು ಹಲವು ಪ್ರಶ್ನೆಗಳ ಮೂಲಕ ಟಾರ್ಗೆಟ್ ಮಾಡುತ್ತಿದ್ದಾರೆ.

ನಿಮ್ಮ ಚಿನ್ನ ಎಲ್ಲಾ ತೆಗೆದುಕೊಂಡು ಹೋದ್ರಾ...?

ವರ್ತೂರು ಸಂತೊಷ್ ಒಂದು ವಾರ ಮನೆಯಲ್ಲಿ ಏಕೆ ಇರಲಿಲ್ಲ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು, ಹಲವು ಪ್ರಶ್ನೆಗಳ ಬಾಣ ಎದುರಿಸಬೇಕಿದೆ. ವಿನಯ್ ಅವರು 'ಬ್ಯುಸಿನೆಸ್​ ವಿಚಾರಕ್ಕೆ ಹೊರಗೆ ಹೋಗಿದ್ರಾ ಅಥವಾ ಆರೋಗ್ಯದ ಸಮಸ್ಯೆ ಕಾಡಿತ್ತಾ' ಎಂದು ಪ್ರಶ್ನೆ ಮಾಡಿದ್ದಾರೆ.

targeting-varthur-santhosh

ಇನ್ನು, ನಟಿ ನಮ್ರತಾ ಕೂಡ 'ನಿಮ್ಮ ಚಿನ್ನವನ್ನು ತೆಗೆದುಕೊಂಡು ಹೋದ್ರಾ..?' ಎಂದು ಪ್ರಶ್ನಿಸಿದ್ದಾರೆ. ಇದು ವರ್ತೂರು ಸಂತೋಷ್ ಅವರಿಗೆ ಇರಿಸು ಮುರುಸು ಉಂಟಾಗುವಂತೆ ಮಾಡಿದೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಮನೆಯವರ ಪ್ರಶ್ನೆಗಳು ಮತ್ತಷ್ಟು ಚುಚ್ಚುತ್ತಿವೆ.

ವರ್ತೂರು ಸಂತೋಷ್ ನಾಮಿನೇಟ್ ಆಗಬೇಕು!

ಇನ್ನು, ವರ್ತೂರು ಸಂತೋಷ್ ಮನೆಗೆ ಬಂದ ನಂತರ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದ್ದು, ಸ್ಪರ್ಧಿಗಳು ಯಾರು ಯಾರನ್ನು ನಾಮಿನೇಷನ್ ಮಾಡಬೇಕು ಎಂಬ ವಿಚಾರಕ್ಕೆ ವಿನಯ್, ಮೈಕಲ್, ಸಂಗೀತಾ ಎಲ್ಲರೂ ವರ್ತೂರು ಸಂತೋಷ್ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.

ಒಂದು ವಾರ ಅವರು ಬಿಗ್ ಬಾಸ್ ಮನೆಯಲ್ಲಿ ಇಲ್ಲದ ಕಾರಣ ಯಾವುದೇ ಕೊಡುಗೆ ನೀಡಿಲ್ಲ. ಹೀಗಾಗಿ ಅವರನ್ನು ನಾಮಿನೆಟ್ ಮಾಡಬೇಕು ಎಂಬುದು ಮನೆಯವರ ಮಾತು. 'ನಾವು ಒಂದು ವಾರ ಮನೆಯಲ್ಲಿ ಕಷ್ಟ ಪಟ್ಟಿದ್ದೇವೆ. ಇದಕ್ಕೆ ಸಂತೋಷ್ ಅವರ ಕೊಡುಗೆ ಏನೂ ಇಲ್ಲ. ಹೀಗಾಗಿ ಅವರು ನಾಮಿನೇಟ್ ಆಗಬೇಕು' ಎಂದು ಬಹುತೇಕ ಸ್ಪರ್ಧಿಗಳ ಮಾತು.

ಸ್ಪರ್ಧಿಗಳ ಅಭಿಪ್ರಾಯ ಕೇಳುತ್ತಿದ್ದರೇ ವರ್ತೂರು ಸಂತೋಷ್ ನಾಮಿನೇಟ್ ಆಗುವುದು ಬಹುತೇಕ ಖಚಿತ ಎನ್ನಬಹುದು. ಆದರೆ, ಕಲರ್ಸ್ ಕನ್ನಡ ಪ್ರೋಮೋಗೆ ಬಂದಿರುವ ಕಾಮೆಂಟ್‌ಗಳಲ್ಲಿ ಎಲ್ಲರೂ ಸಂತೋಷ್ ಅವರನ್ನೇ ಬೆಂಬಲಿಸಿದ್ದಾರೆ. ಹೀಗಾಗಿ ಮುಂದೆ ಏನಾಗಲಿದೆ ಎಂಬುದು ಇಂದಿನ (ಅಕ್ಟೋಬರ್ 31) ಸಂಚಿಕೆಯಲ್ಲಿ ತಿಳಿಯಲಿದೆ.

More from Filmibeat

English summary
Bigg boss kannada season 10 contestants targeting Varthur Santhosh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X