Bigg Boss 10: ಪ್ರತಾಪ್ ಅಂಡ್ ತುಕಾಲಿ ಸಂತೋಷ್ ಆಸೆ ಈಡೇರಿಸಿದ ಬಿಗ್ ಬಾಸ್; ಕ್ಯಾಪ್ಟನ್ ರೂಮ್ ಓಪನ್

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಬರೀ ಜಗಳ, ಮನ:ಸ್ತಾಪಗಳೇ ಕಾಣಿಸುತ್ತಿತ್ತು. ಕಡೆಯ ವಾರ ಇದು. ಆದರೂ, ಮನೆಯೊಳಗಿರುವವರ ಮನಸ್ಸುಗಳು ಬದಲಾದಂತೆ ಕಾಣಿಸಲೇ ಇಲ್ಲ. ಫಿನಾಲೆಗೆ ಒಂದು ವಾರ ಇರುವಾಗಲೂ ಮನೆಯ ಋಣ ತೀರುತ್ತಿದೆ ಎಂಬ ಚಿಂತೆ ಇರಲಿಲ್ಲ. ಇದನ್ನೆಲ್ಲ ಗಮನಿಸಿದ ಬಿಗ್ ಬಾಸ್ ಕಡೆಗೆ ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿ ಮಾಡಿತ್ತು.

ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ಜಗಳ, ಮನ:ಸ್ತಾಪವಾಗಿದೆ. ಆ ಎಲ್ಲವನ್ನು ಕಳೆದುಕೊಳ್ಳಲು ಒಂದು ಅವಕಾಶ ನೀಡಿತ್ತು. ಕ್ಷಮೆ ಕೇಳಿ ಬಿರುಕು ಮೂಡಿದ ಸ್ನೇಹದಲ್ಲಿ ಮತ್ತೆ ಸ್ನೇಹ ಮೂಡುವಂತೆ ಮಾಡಿತ್ತು. ಫೋಟೋಗಳನ್ನು ನೋಡಿ ಹಿಂದಕ್ಕೆ ಹೋಗುವಂತೆ ಮಾಡಿದೆ. ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ.

Bigg Boss Kannada season 10 Bigg Boss gift to Tukali and Drone Prathap

ಆಸೆಗಳನ್ನು ಕೇಳಿ ಈಡೇರಿಸಿದ ಬಿಗ್ ಬಾಸ್

ಬಿಗ್ ಬಾಸ್ ಮನೆಯಲ್ಲಿ ಜರ್ನಿ‌ ಮುಗಿಯುವ ಸಮಯ. ಹೀಗಾಗಿ ಮನೆಯೊಳಗೆ ಮಿಸ್ ಮಾಡಿಕೊಂಡಿದ್ದನ್ನು ಕೊನೆಯ ಗಳಿಗೆಯಲ್ಲಿ ನೆರವೇರಿಸಿದೆ. ಕಾರ್ತಿಕ್, ತಂಗಿ ಮಗುವನ್ನು ತೋರಿಸಿದೆ. ಪ್ರತಾಪ್ ಇಷ್ಟವಾದ ಡ್ರೋನ್ ಕೂಡ ತರಿಸಿದೆ. ಹೀಗೆ ಬಿಗ್ ಬಾಸ್ ಮನೆ ಸದಸ್ಯರ ಆಸೆಗಳನ್ನು ಈಡೇರಿಸಿದೆ.

ತುಕಾಲಿ-ಪ್ರತಾಪ್‌ಗೆ ಬಿಗ್ ಬಾಸ್ ಉಡುಗೊರೆ

ಎಷ್ಟೋ ಜನಕ್ಕೆ ಕ್ಯಾಪ್ಟನ್ ಆಗುವ ಅವಕಾಶ ಸಿಗುವುದಿಲ್ಲ. ಈ ಸೀಸನ್‌ನಲ್ಲಿ ಅರ್ಹತೆ ಇದ್ದರೂ ಪ್ರತಾಪ್‌ಗೆ ಅವಕಾಶ ಸಿಗಲಿಲ್ಲ. ಅದೊಂದು ಕೊರಗು ಹಾಗೇ ಉಳಿದುಕೊಂಡು ಬಿಟ್ಟಿತ್ತು. ಈಗ ಬಿಗ್ ಬಾಸ್ ಆ ಅವಕಾಶವನ್ನು ನೀಡಿದೆ. ಒಂದು ರಾತ್ರಿ ಕ್ಯಾಪ್ಟನ್ ರೂಮಿನಲ್ಲಿ ಮಲಗಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ.

ಕ್ಯಾಪ್ಟನ್ ರೂಮಲ್ಲಿ ಪ್ರತಾಪ್ -ತುಕಾಲಿ ಫ್ಯಾಮಿಲಿ ಫೋಟೊ

ಮನೆಯಲ್ಲಿ ಯಾರೇ ಕ್ಯಾಪ್ಟನ್ ಆದರೂ ಅವರ ಫ್ಯಾಮಿಲಿ ಫೋಟೋ ಮನೆಗೆ ಬರುತ್ತಿತ್ತು. ಆದರೆ, ತುಕಾಲಿ ಫ್ಯಾಮಿಲಿ ಹಾಗೂ ಪ್ರತಾಪ್ ಫ್ಯಾಮಿಲಿಯ ಫೋಟೋ ಬಂದಿರಲಿಲ್ಲ. ಈಗ ಅವರಿಬ್ಬರ ಬ್ಯೂಟಿಫುಲ್ ಫ್ಯಾಮಿಲಿ ಫೋಟೋ ಬಂದಿದೆ. ಕ್ಯಾಪ್ಟನ್ ರೂಮಿನಲ್ಲಿ ಈಗ ಎಲ್ಲರ ಫೋಟೋಗಳು ಕಾಣಿಸುತ್ತಿವೆ. ಅದರಲ್ಲೂ ತುಕಾಲಿ ಹಾಗೂ ಅವರ ಪತ್ನಿಯ ಫೋಟೋ ನೋಡಿ ಎಲ್ಲರೂ ಶಾಕ್ ಆದರು. ಲಾಕ್‌ಡೌನ್‌ ಸಮಯದಲ್ಲಿ ಮದುವೆಯಾಗಿದ್ದ ಫೋಟೋ ಅದು. ನಾಳೆ ಹಾಗೂ ನಾಡಿದ್ದು ಮನೆ ಮಂದಿ ಫಿನಾಲೆಗೆ ರೆಡಿಯಾಗಿದ್ದಾರೆ.

ಬಿಗ್ ಬಾಸ್ ಋಣ ತೀರಿಸುವುದು ಹೇಗೆ?

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಅಂತ ಪ್ರತಾಪ್ ಸಾಕಷ್ಟು ಆಸೆ ಇಟ್ಟುಕೊಂಡಿದ್ದರು. ತುಕಾಲಿಗೆ ಆ ಆಸೆ ಇತ್ತು. ಆದರೆ, ಅದು ಸಾಧ್ಯವೇ ಆಗಲಿಲ್ಲ. ಇದೀಗ ಆ ಆಸೆಯನ್ನು ಈಡೇರಿಸಿದೆ. ಕ್ಯಾಪ್ಟನ್ ರೂಮಿನಲ್ಲಿ ಮಲಗಿದೆ ತುಕಾಲಿ ಸಂತೋಷ್ ಬಿಗ್ ಬಾಸ್ ಎಲ್ಲಾ ಆಸೆಗಳನ್ನು ಈಡೇರಿಸಿದ್ದಾರೆ ಅಲ್ವಾ ಅಣ್ಣ. ಸಂಪೂರ್ಣ ಆಗೋಯ್ತು. ಈ ಜನ್ಮದಲ್ಲಿ ನಾನು ಕ್ಯಾಪ್ಟನ್ ಆಗೋಕೆ ಆಗಲ್ಲ ಅಂತ ನಿನ್ನೆ ತಾನೇ ಹೇಳಿಕೊಂಡಿದ್ದೆ. ಬಿಗ್ ಬಾಸ್ ನಮ್ಮ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ. ಇವರ ಋಣ ಹೇಗೆ ತೀರಿಸುವುದು. ನಂಗೆ ದೃಷ್ಟಿಗೊಂಬೆ ಇದ್ದಂಗೆ ಇದೆ. ಒಬ್ಬರಿಗೂ ಊಟ ಹಾಕದಂತೆ ಮದುವೆ ಆಗಿದ್ದೀವಿ ಅಂತಾರೆ. ಈಗ ಇಂಥ ಫೋಟೋ ಬೇರೆ ಕಳ್ಸಿದ್ದೀಯಾ ಅಂತ ಹೆಂಡತಿಗೂ ಹೇಳಿದ್ದಾರೆ.

More from Filmibeat

English summary
BBK 10 Tukali and Prathap last captain:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X