Bigg Boss 10 Finale: ಸ್ಪರ್ಧಿಗಳ ಆಸೆ ಈಡೇರಿಸುತ್ತಿರುವ ಬಿಗ್ ಬಾಸ್: ದೊಡ್ಮನೆಗೆ ಬರುತ್ವಾ ಹಳ್ಳಿಕಾರ್ ಹೋರಿಗಳು?

By Shruthi Harishgowda

ಬಿಗ್ ಬಾಸ್ ಸೀಸನ್ 10 ಹಲವು ವಿಷಯಗಳಿಂದ ಪ್ರತಿದಿನವೂ ಕೂಡ ಸುದ್ದಿಯಲ್ಲಿದೆ. ಪ್ರಸಾರವಾದ ದಿನದಿಂದಲೂ ಇಲ್ಲಿಯವರೆಗೂ ಕೂಡ ಸುದ್ದಿಯಲ್ಲಿಯೇ ಇದ್ದು ವೀಕ್ಷಕರಿಗೆ ಮನರಂಜನೆ ನೀಡಿದೆ. ಈಗ ಬಿಗ್ ಬಾಸ್ ಸ್ಪರ್ಧೆಗಳಿಗೆ ಅವರ ಆಸೆ ಏನು ಎಂಬುದನ್ನು ಕೇಳಿದ್ದು ಅದರಂತೆ ಒಬ್ಬೊಬ್ಬರ ಆಸೆ ಈಡೇರಿಸುತ್ತಿದ್ದಾರೆ.

ಕಾರ್ತಿಕ್ ಅವರ ಆಸೆ ಈಡೇರಿದ್ದು ಅವರ ತಂಗಿಯ ಜೊತೆಯಲ್ಲಿ ನಿನ್ನೆ ಅವರು ಮಾತನಾಡಿದ್ದಾರೆ. ಕಾರ್ತಿಕ್ ಅವರು ಎಲ್ಲರ ಜೊತೆ ಮಾತನಾಡುತ್ತಾ ನಿಂತಿರುವಾಗ ವಿಡಿಯೋ ಕಾಲ್ ಮೂಲಕ ಕಾರ್ತಿಕ್ ಅವರ ತಂಗಿ ಮಾತನಾಡಿದ್ದಾರೆ. ಇಂದು ಉಳಿದವರ ಆಸೆಯನ್ನು ಈಡೇರಿಸಲು ಬಿಗ್ ಬಾಸ್ ತೀರ್ಮಾನಿಸಿದ್ದಾರೆ.

Bigg Boss Kannada Season 10: Bigg Boss gives surprise to finale contestants

ಬಿಗ್ ಬಾಸ್ ಮನೆಯಲ್ಲಿರುವ ವರ್ತೂರು ಸಂತೋಷ್, ವಿನಯ್, ಸಂಗೀತಾ, ಪ್ರತಾಪ್, ತುಕಾಲಿ ಸಂತೋಷ್ ಇಷ್ಟು ಜನರು ಕೂಡ ತಮ್ಮ ಮನಸ್ಸಿನಲ್ಲಿ ಇರುವ ಆಸೆಯನ್ನ ಬಿಗ್ ಬಾಸ್ ಬಳಿ ಹೇಳಿಕೊಂಡಿದ್ದರು. ವರ್ತೂರು ಸಂತೋಷ್ ಒಂದು ಕೈ ಮುಂದೆ ಹೋಗಿ ನಾನು ಬಿಗ್ ಬಾಸ್ ಅವರನ್ನೇ ನೋಡಬೇಕು ಎಂದು ಹೇಳಿದಾಗ ಬಿಗ್ ಬಾಸ್ ಕೆಲಸ ಆಗೋದಿಲ್ಲ ನೀವು ಬೇರೆ ಆಸೆಯನ್ನ ವ್ಯಕ್ತಪಡಿಸಿ ಎಂದಿದ್ದರು. ವರ್ತೂರು ಸಂತೋಷ್ ಅವರಿಗೆ ತಮ್ಮ ಹಳ್ಳಿಕಾರ್ ಹಸುಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಆಸೆಯನ್ನು ಪಟ್ಟಿದ್ದಾರೆ. ಆ ಆಸೆಗೆ ಬಿಗ್ ಬಾಸ್ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದೇ ಕುತೂಹಲವಾಗಿದೆ.

ಬಿಗ್ ಬಾಸ್ ಮನೆಗೆ ಬಂತು ಪ್ರತಾಪ್ ಡ್ರೋನ್

ಬಿಗ್ ಬಾಸ್ ಮನೆಗೆ ಎರಡನೇ ಬಾರಿ ಪ್ರತಾಪ್ ಅವರು ತಯಾರಿಸಿದ ಡ್ರೋನ್ ಬಂದಿದೆ. ಮೊದಲನೆಯ ಬಾರಿಗೆ ಅವರ ಅಪ್ಪ ಅಮ್ಮನ ಜೊತೆಗೆ ಡ್ರೋಣ್‌ನ್ನು ಕೂಡ ಆರಿಸಲಾಗಿತ್ತು, ತನ್ನ ಡ್ರೋನ್ ಬಂದಿದ್ದನ್ನ ನೋಡಿದ ಪ್ರತಾಪ್ ತುಂಬಾನೇ ಖುಷಿ ಪಟ್ಟಿದ್ದರು. ನನ್ನ ಡ್ರೋನ್ ಬಂತು ನನ್ನ ಡ್ರೋನ್ ಬಂತು ಎಂದು ತುಂಬಾ ಖುಷಿಯಾಗಿ ಇದ್ದರು. ಈಗ ಮತ್ತೊಮ್ಮೆ ಪ್ರತಾಪ್ ಆಸೆಯನ್ನ ಈಡೇರಿಸಲು ಬಿಗ್ ಬಾಸ್ ಮನೆಗೆ ಡ್ರೋನ್ ಕಳುಹಿಸಲಾಗಿದೆ. ಸಪ್ರೈಸ್ ಆಗಿ ಬಿಗ್ ಬಾಸ್ ಮನೆಯಲ್ಲಿ ಡ್ರೋಣ್ ಇಡಲಾಗಿದೆ ಪ್ರತಾಪ್ ಅದನ್ನು ನೋಡಿದ ಕೂಡಲೇ ಖುಷಿಪಟ್ಟಿದ್ದಾರೆ.

Bigg Boss Kannada Season 10: Bigg Boss gives surprise to finale contestants

ಬಿಗ್ ಬಾಸ್ ಮನೆಯಲ್ಲಿ ರಾಜನಾದ ತುಕಾಲಿ ಸಂತು

ತುಕಾಲಿ ಸಂತೋಷ್‌ಗೆ ಒಂದೇ ಒಂದು ಆಸೆ ಇತ್ತು ಅದು ಏನೆಂದರೆ ಕ್ಯಾಪ್ಟನ್ ಆಗಬೇಕು ಇಲ್ಲದಿದ್ದರೆ ಒಂದು ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ರಾಜನಂತೆ ಇರಬೇಕು ಎಂದು ಆಸೆ ಪಟ್ಟಿದ್ದರು. ಅದರಂತೆ ತುಕಾಲಿ ಸಂತೋಷ್ ಅವರು ರಾಜನಾಗಿ ಎಲ್ಲರೂ ಅವರ ಸೇವೆ ಮಾಡಬೇಕು ಎಂದು ಬಿಗ್ ಬಾಸ್ ಆದೇಶ ಮಾಡಿದ್ದು ತುಕಾಲಿ ಸಂತೋಷ್ ಮನೆಯ ಎಲ್ಲಾ ಸದಸ್ಯರಿಂದಲೂ ಕೂಡ ಸೇವೆಯನ್ನು ಮಾಡಿಸಿಕೊಳ್ಳುತ್ತಾ ಇದ್ದಾರೆ. ಈಗ ತುಕಾಲಿ ಸಂತೋಷ ಅವರ ಆಸೆ ಈಡೇರಿದ್ದು ತುಕಾಲಿಗಂತು ತುಂಬಾನೇ ಖುಷಿಯಾಗಿದೆ.

ದೊಡ್ಮನೆಗೆ ಬರ್ತಾವ ಹಳ್ಳಿಕಾರ್ ಹೋರಿಗಳು?

ವರ್ತೂರು ಸಂತೋಷ್ ಅವರಿಗೆ ಮೂರು ಹೊತ್ತು ತಮ್ಮ ಹಳ್ಳಿಕಾರ್ ಹೋರಿಗಳದ್ದೇ ನೆನಪು. ಆಸೆ ಏನು ಎಂದು ಕೇಳಿದಾಗ ಡ್ರೋನ್ ಪ್ರತಾಪ್ ಡ್ರೋನ್ತರ ನನ್ನ ಹಳ್ಳಿಕಾರ್ ಹೋರಿಗಳು ಕೂಡ ಬಿಗ್ ಬಾಸ್ ಮನೆಗೆ ಬಂದರೆ ತುಂಬಾ ಚೆನ್ನಾಗಿ ಇರುತ್ತದೆ ಎಂದು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ಇಡೀ ಕರ್ನಾಟಕದ ಜನತೆಗೂ ಕೂಡ ಹಳ್ಳಿಕಾರ್ ಎತ್ತುಗಳನ್ನ ತೋರಿಸಬೇಕು ಎಂಬ ಆಸೆ ಇದೆ ಎಂದು ಅಂದಿದ್ದಾರೆ. ಇದರ ನಂತರ ನಾನು ಹಳ್ಳಿಕಾರ್ ಹೋರಿಗಳ ಒಂದು ಸ್ಪರ್ಧೆಯನ್ನು ಇಟ್ಟಿದ್ದೆ ಅದರ ವಿಡಿಯೋವನ್ನು ಆದರೂ ಪ್ರಸಾರ ಮಾಡಿ ಎಂದು ವರ್ತೂರು ಸಂತೋಷ್ ಕೇಳಿಕೊಂಡಿದ್ದಾರೆ. ಈ ಎರಡು ಆಸೆಗಳಲ್ಲಿ ವರ್ತೂರು ಅವರ ಯಾವ ಆಸೆ ಈಡೇರಲಿದೆ ನೋಡಬೇಕಾಗಿದೆ.

More from Filmibeat

English summary
BBK 10 Finale: Bigg Boss gives surprise to finale contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X