BBK10: ದಿನಸಿಗಾಗಿ ತನಿಷಾ ಮೇಕಪ್ ಕಿಟ್ ಪಡೆದ ಬಿಗ್ ಬಾಸ್; ದಿನಸಿಗಿಂತ ಮೇಕಪ್ ಮುಖ್ಯ ಎಂದ 'ಬೆಂಕಿ'!
ಬಿಗ್ ಬಾಸ್ ಮನೆಯಲ್ಲಿ ದುಬಾರಿ ಬಜೆಟ್ ನೀಡಲಾಗುತ್ತದೆ. ನೂರು ದಿನಗಳ ಆಟದಲ್ಲಿ ಪ್ರತಿ ವಾರವೂ ಲಕ್ಷುರಿ ಬಜೆಟ್ ಕೊಡುತ್ತಾರೆ. ಆದರೆ, ಸೀಸನ್ 10ರ ಸ್ಪರ್ಧಿಗಳು ಲಕ್ಸುರಿ ಬಜೆಟ್ ಪಡೆಯದೆ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ಪ್ರತಿ ವಾರವೂ ಶುಭಾಶಯ ತಿಳಿಸಿದ್ದಾರೆ. ಬಿಗ್ ಬಾಸ್ ಅಂತು ಸುಸ್ತಾಗಿ ಹೋಗಿದ್ದಾರೆ.
ಟಾಸ್ಕ್ ಆಡುವ ಮೂಲಕ ದುಬಾರಿ ಬಜೆಟ್ ಪಡೆದುಕೊಂಡರು ಸಹ ಲೆಕ್ಕಚಾರದಲ್ಲಿ ಲಕ್ಷುರಿ ಬಜೆಟ್ ಮಿಸ್ ಆಗುತ್ತಲೇ ಇದೆ. ದುಬಾರಿ ಬಜೆಟ್ ಅಂತು ಒಮ್ಮೆಯೂ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ. ವಾರದ ದಿನಸಿಯನ್ನ ತೆಗೆದುಕೊಳ್ಳಲು ಬಹಳ ಅಮೂಲ್ಯವಾದ ವಸ್ತುವನ್ನೇ ತ್ಯಾಗ ಮಾಡಬೇಕಾದ ಅನಿವಾರ್ಯತೆ ಬಂದಿದೆ. ದಿನಸಿ ಇಲ್ಲದೆ ಇದ್ದರು ಓಕೆ ಮೇಕಪ್ ಕಿಟ್ ಬೇಕೆ ಬೇಕು ಎನ್ನುತ್ತಿದ್ದಾರೆ ತನಿಷಾ.

ವಾರದ ದಿನಸಿಯನ್ನು ಕೊಡುವ ಸಮಯ
ಬಿಗ್ ಬಾಸ್ ಮನೆಗೆ ಬೇಕಾದ ಸಾಮಗ್ರಿಯನ್ನು ವಾರಕ್ಕೆ ಒಮ್ಮೆ ನೀಡಲಿದೆ. ಹಾಗಂತ ತೆಗೆದುಕೊಳ್ಳಿ ನಿಮಗೆ ದಿನಸಿ ಕಾಲಿಯಾಗಿದೆಯಾ ಎಂಬಂತೆ ಏನು ನೀಡುವುದಿಲ್ಲ. ಬದಲಿಗೆ ಟಾಸ್ಕ್ ಗಳನ್ನು ಆಡಿಸುತ್ತಾರೆ. ಈ ಸೀಸನ್‌ನಲ್ಲಿ ಲಕ್ಷುರಿ ಬಜೆಟ್ ಅಂತು ಪೂರ್ಣಗೊಳಿಸುವುದಕ್ಕೆ ಆಗಿಲ್ಲ. ವಾರದ ದಿನಸಿಯಲ್ಲೂ ಎಷ್ಟೋ ಸಲ ನಿಯಮ ಮೀರಿ, ಅದನ್ನು ಕಳೆದುಕೊಂಡಿದ್ದಾರೆ. ಈ ವಾರ ದಿನಸಿಗಾಗಿ ದೊಡ್ಡಮಟ್ಟದ ಡಿಮ್ಯಾಂಡ್ ಅನ್ನೇ ಇಟ್ಟಿದೆ.
ಮೇಕಪ್ ಕಿಟ್ ಕೇಳಿದ ಬಿಗ್ ಬಾಸ್
ಪ್ರತಿಸಲ ಟಾಸ್ಕ್ ಮೂಲಕ ದಿನಸಿ ಸಾಮಾಗ್ರಿಗಳನ್ನು ನೀಡುತ್ತಾ ಇತ್ತು. ಆದರೆ ಈ ಬಾರಿ ದುಬಾರಿ ಬೆಲೆಯ ವಸ್ತುವನ್ನೇ ಮನೆ ಮಂದಿ ಬಳಿ ಕೇಳಿದೆ. ಹೆಣ್ಣು ಮಕ್ಕಳು ಮೇಕಪ್ ಕಿಟ್ ಕೊಟ್ಟರೆ ದಿನಸಿ ಪದಾರ್ಥಗಳು ಸಿಗಲಿವೆ. ಪ್ರತಿ ದಿನ ಸಿಕ್ಕಾಪಟ್ಟೆ ಇಷ್ಟಪಡುವಂತಹ ವಸ್ತುವನ್ನೇ ಬಿಗ್ ಬಾಸ್ ಬೇಕು ಎನ್ನುತ್ತಿದೆ.

ತನಿಷಾ ಮೇಕಪ್ ಕಿಟ್ ಕೇಳಿದ ಬಿಗ್ ಬಾಸ್
ಮೇಕಪ್ ಕಿಟ್ ಕೊಟ್ಟರೆ ದಿನಸಿ ಕಿಟ್ ಕೊಡುತ್ತೇವೆ ಎಂದಿರುವ ಬಿಗ್ ಬಾಸ್, ಮನೆ ಮಂದಿಗೆ ಆಯ್ಕೆಯನ್ನು ಬಿಟ್ಟಿದೆ. ಯಾರ ಮೇಕಪ್ ಕಿಟ್ ಕೊಟ್ಟು ದಿನಸಿಯನ್ನು ಪಡೆಯುತ್ತೀರಾ ಎಂಬುದಾಗಿ ಕೇಳಿದೆ. ಅದರಲ್ಲಿ ಹೆಚ್ಚಾಗಿ ಹೆಸರು ಬಂದಿದ್ದೇ, ತನಿಷಾ ಅವರದ್ದು. ಸಂಗೀತಾ, ಪ್ರತಾಪ್, ವರ್ತೂರು ಸಂತೋಷ್ ಕೂಡ ತನಿಷಾ ಅವರದ್ದೇ ಮೇಕಪ್ ಕಿಟ್ ಬಗ್ಗೆ ಹೇಳಿದ್ದಾರೆ. ಮನೆಯವರೆಲ್ಲ ಅಭಿಪ್ರಾಯದ ಮೇರೆಗೆ ಬಿಗ್ ಬಾಸ್ ಕೂಡ ತನಿಷಾ ಅವರಿಗೆ ಸೂಚನೆ ನೀಡಿದೆ. "ತನಿಷಾ ನಿಮ್ಮ ಮೇಕಪ್ ಕಿಟ್ ತಂದು ಕೊಡಿ" ಎಂದು ಹೇಳಿದೆ.
ಕೊಡಲ್ಲ ಎಂದು ಹಠ ಮಾಡಿದ ಬೆಂಕಿ
ಇದೇ ಸೀಸನ್‌ನಲ್ಲಿ ಬಿಗ್ ಬಾಸ್ ಒಮ್ಮೆ ಕಠಿಣ ಟಾಸ್ಕ್ ನೀಡಿತ್ತು. ಎದುರಾಳಿಗಳು ಒಪ್ಪಿಗೆಯನ್ನೇ ನೀಡದಂತ ಟಾಸ್ಕ್ ಗಳನ್ನು ನೀಡಬೇಕು ಎಂದು ಸೂಚನೆ ನೀಡಿತ್ತು. ಆಗ ತನಿಷಾ ಮೇಕಪ್ ಕಿಟ್ ಅನ್ನು ನೀರಿಗೆ ಹಾಕಬೇಕು ಎಂದು ಕೊಟ್ಟ ಟಾಸ್ಕ್ ಅನ್ನು ನಿರಾಕರಿಸಿದ್ದರು. ಲಕ್ಷ ಲಕ್ಷ ಬೆಲೆ ಅದಕ್ಕೆ ಅಂತ ಹೇಳಿದ್ದರು. ಈಗ ನೋಡಿದರೆ ಬಿಗ್ ಬಾಸ್ ಅದೇ ಮೇಕಪ್ ಕಿಟ್ ಕೇಳಿದೆ. ಅದರ ಜೊತೆಗೆ ಫ್ರೆಂಡ್ಸ್ ಎಂದುಕೊಂಡವರೇ ಹೆಸರನ್ನು ಸೂಚಿಸಿದ್ದಾರೆ. ದಿನಸಿಗಿಂತ ನನಗೆ ನನ್ನ ಮೇಕಪ್ ಕಿಟ್ ಮುಖ್ಯ ಎಂದು ಕಣ್ಣೀರು ತನಿಷಾ ಹಾಕಿದ್ದಾರೆ.


Click it and Unblock the Notifications











