ಎಲ್ಲಿ ತಪ್ಪಿತು ಸಂಗೀತಾ ಲೆಕ್ಕಾಚಾರ..? ಕಡಿಮೆ ದಿನಸಿಯಲ್ಲೇ ಒಂದು ವಾರ ಹೇಗಿರ್ತಾರೆ ಬಿಗ್ ಬಾಸ್ ಸ್ಪರ್ಧಿಗಳು!?

By Shruthi Harishgowda

ಅದ್ಯಾಕೋ ಕಾಣೆ, ಸಂಗೀತಾ ನಸೀಬೆ ಚೆನ್ನಾಗಿ ಇಲ್ಲ ಎಂದು ಅನಿಸುತ್ತದೆ ಬಿಗ್ ಬಾಸ್ ಮನೆಯಲ್ಲಿ ಬರೀ ವಿರೋಧ ಕಟ್ಟಿಕೊಳ್ಳುವುದೇ ಆಗಿದೆ. ಎಷ್ಟು ಬಾರಿ ತನಿಷಾ ಕೂಡ ಎಡವಿದ್ದು ಲಕ್ಸುರಿ ಬಜೆಟ್ ಅನ್ನ ಕಳೆದುಕೊಂಡಿದ್ದರು. ಕಳೆದ ವಾರ ನಮ್ರತಾ‌ ಕೂಡ ಸರಿಯಾದ ರೀತಿಯಲ್ಲಿ ಲಕ್ಷುರಿ ಬಜೆಟ್ ಪಡೆಯುವಲ್ಲಿ ವಿಫಲರಾದರು. ನಂತರ ಸಂಗೀತಾ ಹಾಗೂ ನಮ್ರತಾ ಕಣ್ಣೀರು ಹಾಕಿದ್ದರು.

ಆದರೆ, ಇಂದು ಕೂಡ ಮನೆಯ ಸದಸ್ಯರು ದಿನಸಿ ಸಾಮಾಗ್ರಿಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಮೊದಲೇ ಬಿಗ್ ಬಾಸ್ ಸರಿಯಾದ ರೀತಿಯಲ್ಲಿ ಸೂಚನೆಗಳನ್ನ ನೀಡಿತ್ತು ಮನೆಗೆ ಅವಶ್ಯಕತೆ ಇರುವ ದಿನಸಿ ಸಾಮಾಗ್ರಿಗಳು ಬಂದಾಗ ಬಜಾರ್ ಹೊತ್ತುವಂತೆ ಎಂದು ಹೇಳಿತ್ತು. ಈ ವೇಳೆ ತನಿಷಾ ಕೂಡ ಸರಿಯಾದ ರೀತಿ ಬಜಾರ್ ಒತ್ತಿದ್ದಾರೆ ಆದರೆ ಸಂಗೀತಾ ಯಾಕೋ ಎಡವಿದಂತೆ ಕಾಣುತ್ತಿದ್ದಾರೆ. ಇದೇ ವಿಚಾರವಾಗಿ ಸಂಗೀತಾ ವಿರುದ್ಧ ಮನೆ ಮಂದಿ ಕೋಪಗೊಂಡಿದ್ದಾರೆ.

 Bigg Boss Kannada Season 10: Bigg Boss Grocery task and Sangeetha Sringeri

ಯಾವಾಗಲೂ ವಿನಯ್ ಸಂಗೀತಾ ತಪ್ಪು ಮಾಡಿದರೆ ಮಾತನಾಡಲು ಕಾಯುತ್ತಾ ಇರುತ್ತಾರೆ. ಈಗ ವಿನಯ್ ಗೆ ಒಂದು ಚಾನ್ಸ್ ಸಿಕ್ಕಿದ್ದು ಸಂಗೀತಾ ವಿರುದ್ಧ ಮುಗಿಬಿದ್ದಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ದಿನಸಿ ಸಾಮಗ್ರಿಗಳು ಕಡಿಮೆ ಇದ್ದು ಸ್ಪರ್ಧಿಗಳು ದಿನದಿಂದ ದಿನಕ್ಕೆ ಸರಿಯಾದ ರೀತಿಯಲ್ಲಿ ಊಟ ಮಾಡಲು ಆಗುತ್ತಿಲ್ಲ. ಈ ವಾರವು ಕೂಡ ದಿನಸಿ ಸಾಮಾಗ್ರಿಗಳು ವಾಪಸ್ ಹೋಗಿದ್ದಕ್ಕೆ ವಿನಯ್ ಕೋಪ ಮಾಡಿಕೊಂಡಿದ್ದಾರೆ ವಾರಪೂರ್ತಿ ಇಷ್ಟೇ ದಿನಸಿಯಲ್ಲಿ ಊಟ ಮಾಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಸಂಗೀತಾ ದಿನಸಿ ಸಾಮಗ್ರಿಗಳ ಹೆಸರನ್ನು ಹೇಳುವಾಗ ಕನ್ಫ್ಯೂಸ್ ಮಾಡಿಕೊಂಡು ಬಜಾರನ್ನು ಒತ್ತಿಬಿಟ್ಟಿದ್ದಾರೆ. ಈ ವೇಳೆ ಮನೆಗೆ ಬರಬೇಕಾದ ಇತರ ಸಾಮಾಗ್ರಿಗಳ ಬದಲು ಹೆಚ್ಚು ಹೆಚ್ಚು ಸಾಮಗ್ರಿಗಳೇ ಬಂದಿದೆ ಅದಕ್ಕಾಗಿ ಮನೆಯಲ್ಲಿ ಜಗಳವಾಗಿದೆ. ಪದೇ ಪದೇ ಸುದೀಪ್ ಲಕ್ಷುರಿ ಬಜೆಟ್ ಕಳೆದುಕೊಳ್ಳುತ್ತಾ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ನಿಮ್ಮನ್ನ ನೋಡಿಕೊಂಡು ಈಗಾಗಲೇ ಕಳೆದ ಸೀಸನ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ನಗುತ್ತಾ ಇದ್ದಾರೆ ಎಂಬ ಮಾತನ್ನು ಕೂಡ ಆಡಿದ್ದರು. ಯಾರು ಚೆನ್ನಾಗಿ ಲೆಕ್ಕ ಹಾಕುತ್ತಾರೋ ಅವರೇ ಬರೆಯಿರಿ ಎಂಬುದನ್ನು ಹೇಳಿದ್ದರು. ಆದರೆ ಇಲ್ಲಿ ಸ್ಪರ್ಧಿಗಳು ಮತ್ತೆ ಎಡವಟ್ಟನ್ನ ಮಾಡಿಕೊಂಡಿದ್ದಾರೆ.

ಸಂಗೀತಾ ತಲೆಗೆ ಬಂತು ಲೆಕ್ಕಾಚಾರದ ತಪ್ಪು

ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ದಿನಸಿ ಸಾಮಾಗ್ರಿಗಳನ್ನು ಪಡೆಯುವಲ್ಲಿ ಸ್ಪರ್ಧಿಗಳು ವಿಫಲರಾಗುತ್ತಾ ಇದ್ದಾರೆ. ಇಂದು ಬಿಗ್ ಬಾಸ್ ದಿನಸಿ ಸಾಮಗ್ರಿ ಪಡೆಯಲು ಟಾಸ್ಕ್‌ನ್ನು ನೀಡಿತ್ತು ಅದರಲ್ಲಿ ನಾಲ್ಕು ಮಂದಿ ಭಾಗಿಯಾಗಿದ್ದರು. ಮೈಕಲ್, ತನಿಷಾ, ಕಾರ್ತಿಕ್ ಹಾಗೂ ಸಂಗೀತಾ ಈ ನಾಲ್ಕು ಮಂದಿಯ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ನಂತರ ನಾಲ್ಕು ಮಂದಿಯ ಮುಂದೆ ಒಂದೊಂದು ಬಜಾರ್‌ಗಳನ್ನು ಇಡಲಾಗಿತ್ತು. ಮನೆಗೆ ಅವಶ್ಯಕವಾಗಿರುವ ದಿನಸಿ ಸಾಮಾಗ್ರಿಗಳ ಹೆಸರು ಬಂದಾಗ ಬಜಾರ್ ಒತ್ತಲು ಸೂಚನೆಯನ್ನು ನೀಡಲಾಗಿತ್ತು. ಆದರೆ ಇಲ್ಲಿ ಸಂಗೀತಾ ಎಡವಟ್ಟು ಮಾಡಿಕೊಂಡಿದ್ದಾರೆ.

 Bigg Boss Kannada Season 10: Bigg Boss Grocery task and Sangeetha Sringeri

ಪ್ರತಾಪ್ ಬಿಗ್ ಬಾಸ್ ಮನೆಯ ಸ್ಪರ್ದಿಗಳು ಆಯ್ಕೆ ಮಾಡಿದ ದಿನಸಿ ಸಾಮಾಗ್ರಿಗಳನ್ನು ಬೋರ್ಡ್ ಬರೆಯುತ್ತಾ ಇದ್ದರು. ಇನ್ನು ಕುಳಿತಿರುವ ತುಕಾಲಿ ಸಂತೋಷ್ ಇಲ್ಲಿ ಪ್ರಮಾಣವನ್ನು ನೋಡಿಕೊಂಡು ಬಜಾರ್ ಒತ್ತಬೇಕು ಎಂದು ಹೇಳುತ್ತಾ ಇದ್ದಾರೆ.‌ ಏನಾದರೂ ಬಜಾರ್ ಒತ್ತಲಿಲ್ಲ ಎಂದರೆ ಅದರ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ ಎಂಬ ಮಾತನ್ನು ಕೂಡ ಆಡಿದ್ದಾರೆ. ಇದೇ ವೇಳೆ ಬಿಗ್ ಬಾಸ್ ಮನೆಗೆ ಅಗತ್ಯವಿರುವ ರಾಗಿಹಿಟ್ಟು, ಗೋಧಿಹಿಟ್ಟು, ಅಕ್ಕಿ, ಮೊಟ್ಟೆ ಕೋಳಿ ಇತ್ಯಾದಿ ಸಾಮಗ್ರಿಗಳ ಹೆಸರನ್ನು ಹೇಳುತ್ತಾ ಮುಂದೆ ಸಾಗುತ್ತಿದೆ. ಈ ವೇಳೆ ತನಿಷ ಕೆಲವೊಂದು ಅಷ್ಟು ಸಾಮಗ್ರಿಗಳಿಗೆ ಬಜಾರ್ ಒತ್ತಿದ್ದಾರೆ. ಸಂಗೀತಾ ಮಾತ್ರ ಬೇಡ ಎನ್ನುತ್ತಿದ್ದರು.

ಇಗೋನಲ್ಲೇ ಸಾಯ್ತಾರೆ ಎಂದ ವಿನಯ್

ಈ ಮೊದಲೇ ವಿನಯ್ ಸಂಗೀತಾಗೆ ಇದು ಮನೆಗೆ ಸಾಮಾಗ್ರಿಗಳನ್ನು ತರುವ ವಿಚಾರ ಎಂದು ಹೇಳಿದ್ದೆ ಎಂದಿದ್ದಾರೆ. ಮನೆಗೆ ಸಾಮಾಗ್ರಿಗಳನ್ನು ತರುವ ವಿಷಯ್ಲ್ಲಿ ತಮಾಷೆ ಬೇಡ ಎಂದು ವಿನಯ್ ಮಾತನಾಡಿದ್ದಾರೆ. ಈಗ ಬಂದಿರುವ ಸಾಮಾಗ್ರಿಗಳಲ್ಲಿ ವಾರಪೂರ್ತಿ ಯಾವ ರೀತಿ ಊಟ ಮಾಡೋದು ಎಂದು ಕೇಳಿದ್ದಾರೆ. ಇಲ್ಲೂ ಕೂಡ ಇಗೋನಲ್ಲೇ ಸಾಯ್ತಾರೆ ಎಂದು ವಿನಯ್ ಕೋಪ ಮಾಡಿಕೊಂಡಿದ್ದಾರೆ.

ಇನ್ನು ತುಕಾಲಿ ಸಂತೋಷ್ ಹಸಿವನ್ನ ಕಂಟ್ರೋಲ್ ಮಾಡಿಕೊಂಡು ಇರೋಣ ಎಂದು ಹೇಳಿದ್ದಾರೆ. ಆದರೆ ಇಲ್ಲಿ ಸಂಗೀತಾ ಲೆಕ್ಕಾಚಾರ ಯಾವ ರೀತಿ ತಪ್ಪಿತು ಎಂಬುದು ಮಾತ್ರ ಕುತೂಹಲವಾಗಿದೆ. ಪದೇಪದೇ ಸಂಗೀತಾ ಮಾತ್ರ ಇತರ ಸ್ಪರ್ಧಿಗಳ ಕೋಪಕ್ಕೆ ಗುರಿಯಾಗುತ್ತಲೇ ಇದ್ದಾರೆ. ಈಗ ಮನೆಗೆ ಬೇಕಾದಂತಹ ಸಾಮಗ್ರಿಗಳನ್ನು ಬಿಗ್ ಬಾಸ್ ಸ್ಪರ್ಧಿಗಳು ಕಳೆದುಕೊಂಡಿದ್ದು ಪಶ್ಚಾತಾಪ ಪಡುತ್ತಾ ಇದ್ದಾರೆ. ವಾರಪೂರ್ತಿ ಬಂದಿರುವ ಸಾಮಗ್ರಿಗಳಲ್ಲೇ ಯಾವ ರೀತಿ ಅಡುಗೆ ಮಾಡಿ ಊಟ ಮಾಡುತ್ತಾರೆ ನೋಡಬೇಕಾಗಿದೆ.

More from Filmibeat

English summary
Bigg boss season 10: bigg boss contestant Grocery task update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X