BBK10: ಮನುಷ್ಯತ್ವವನ್ನೇ ಮರೆತ್ರಾ ಬಿಗ್ ಬಾಸ್ ಸದಸ್ಯರು? ವಿನಯ್ ಕಾರ್ತಿಕ್ ನಡುವೆ ಏನಿದು ಕಿತ್ತಾಟ?

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 10ರಲ್ಲಿ ಟಾಸ್ಕ್‌ಗಳ ವಿಚಾರದಲ್ಲಿ ಮನುಷ್ಯತ್ವವನ್ನೇ ಮರೆಯುತ್ತಿದ್ದಾರೆ. ಇಷ್ಟು ಸೀಸನ್‌ಗಳಲ್ಲಿ ಸ್ಪರ್ಧಿಗಳು ತಪ್ಪು ಮಾಡುತ್ತಿರಲಿಲ್ಲ ಅಂತಲ್ಲ. ತಪ್ಪನ್ನು ಮಾಡುತ್ತಿದ್ದರು. ಆದರೆ, ಒಮ್ಮೆ ಅದು ತಪ್ಪು ಎಂದು ಗೊತ್ತಾದ ಮೇಲೆ ಮತ್ತೆ ತಪ್ಪು ಮಾಡುತ್ತಿರಲಿಲ್ಲ. ಈ ಬಾರಿಯ ಸೀಸನ್‌ನಲ್ಲಿ ಅದು ಅತಿರೇಕಕ್ಕೆ ಹೋಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸಾಕಷ್ಟು ಬಾರಿ ಮನುಷ್ಯತ್ವ ಕಳೆದುಕೊಂಡು ಆಗಿದೆ. ಅದರ ಪರಿಣಾಮವಾಗಿಯೇ ಹಲವರಿಗೆ ದೇಹಕ್ಕೆ ಪೆಟ್ಟಾಗಿದೆ. ನೀರು ಎರಚಿ ಡಿಸ್ಟರ್ಬ್ ಮಾಡಬೇಕು ಎಂಬ ಆಟದಲ್ಲಿ ಈ ಹಿಂದೆಯೂ ಮನುಷ್ಯತ್ವ ಬಿಟ್ಟಿದ್ದರು. ಇವತ್ತಿನ ಗಂಧರ್ವರು ಹಾಗೂ ರಾಕ್ಷಸರ ವಿಚಾರದಲ್ಲಂತೂ ಇನ್ನಷ್ಟು ಮನುಷ್ಯತ್ವ ಬಿಟ್ಟಿದ್ದಾರೆ.

Bigg Boss Kannada Season 10 Bigg Boss members have forgotten their humanity

ನೀರು ಎರಚುವಾಗ ಮುಖ ನೋಡಲಿಲ್ಲ

ಇವತ್ತಿನ ಚಿಯರ್ ಅಪ್ ಟಾಸ್ಕ್‌ನಲ್ಲಿ ಗಂಧರ್ವರನ್ನು ರಾಕ್ಷಸರು ಎದ್ದೇಳಿಸಬೇಕಿತ್ತು. ಕುರ್ಚಿಯ ಮೇಲೆ ಕುಳಿತ ಗಂಧರ್ವರಿಗೆ ನೀರನ್ನು ಎರಚುವ ಮೂಲಕ ಎದ್ದೇಳಿಸುವ ಟಾಸ್ಕ್ ಅದಾಗಿತ್ತು. ಪವಿ ಅವರ ಸರದಿಯಾಗಿತ್ತು. ಈ ವೇಳೆ ತನಷಾ, ನೀರನ್ನು ಎರಚಿ ಎದ್ದೇಳಿಸುವ ಪ್ರಯತ್ನ ಮಾಡಿದರು. ಕಿವಿಗೆ ನೀರು ಹೋಗುತ್ತಿದೆ, ಈ ರೀತಿಯಾಗಿ ನಡೆದುಕೊಳ್ಳಬೇಡಿ ಎಂದು ಹೇಳಿದರು ತನಿಷಾ ಕೇಳಲಿಲ್ಲ. ನಾವೇನು ಸ್ನಾನ ಮಾಡಿಸುವುದಕ್ಕೆ ಬಂದಿದ್ದೀವಾ ಎಂದೇ ನೀರನ್ನು ಎರಚಿದರು.

ಪವಿಗೆ ಉಸಿರುಗಟ್ಟುವ ವಾತಾವರಣ

ಬಳಿಕ ಪವಿ ಅಲ್ಲಿಯೇ ಕುಳಿತಿದ್ದರು. ಸಂಗೀತಾ ಹಾಗೂ ಅವಿನಾಶ್ ನೀರು ಎರಚುವುದಕ್ಕೆ ಬಂದರು. ಆಗಲೂ ಕೂಡ ಫೋರ್ಸ್ ಆಗಿ ನೀರನ್ನು ಹಾಕಿದ್ದಾರೆ. ಉಸಿರು ಕಟ್ಟುತ್ತಾ ಇದ್ದಾರೆ ಎಂದರು ಸುಮ್ಮನೆ ಆಗುತ್ತಿರಲಿಲ್ಲ. ನಮಗೆ ಮತ್ತೆ ಸಮಯ ಸಿಗಲ್ಲ ಎಂದು ಜೋರಾಗಿಯೇ ಎರಚಿದ್ದಾರೆ. ಸ್ನೇಹಿತ್ ಕೂಡ ಅದನ್ನು ಹೇಳಿದ್ದರು. ಜೋರಾಗಿ ನೀರನ್ನು ಎರಚಬೇಡಿ ಉಸಿರುಗಟ್ಟುತ್ತಾ ಇದ್ದಾರೆ ಅಂತ. ಅವರು ನಿಲ್ಲಿಸಿ ಎಂದಾಗ ಆಟವಾಡುವುದಕ್ಕೆ ಆಗಲ್ವಾ? ಎಂದು ಹೇಳಿ ನೀರು ಎರಚಿದರು.

Bigg Boss Kannada Season 10 Bigg Boss members have forgotten their humanity

ಅಕ್ಕ - ಅಮ್ಮ ಎಂದ್ರಾ ಕಾರ್ತಿಕ್?

ಆಟದ ನಡುವೆ ವಿನಯ್ ಹಾಗೂ ಸಂಗೀತಾ ಮೈಮೇಲೆ ಬಿದ್ದು ಜಗಳಕ್ಕೆ ನಿಂತರು. "ಯಾವಳೋ ಅವಳು ಅಂತ ಫುಲ್ ರೈಸ್" ಆದರು. ಇದರ ನಡುವೆ ಕಾರ್ತಿಕ್ ಒಂದು ಮಾತು ಹೇಳಿದರು. ಹೆಣ್ಣು ಮಕ್ಕಳನ್ನು ಬಿಟ್ಟು ಆಡಿಸುತ್ತಿರಲ್ಲ ಅಂತ. ಇದು ವಿನಯ್ ಕೋಪಕ್ಕೂ ಕಾರಣವಾಗಿದೆ. ಇಬ್ಬರು ಜೋರು ಧ್ವನಿಯಲ್ಲಿಯೇ ಜಗಳವಾಡಿದ್ದಾರೆ. "ಹೆಣ್ಣು‌ಮಕ್ಕಳನ್ನು ಬಿಟ್ಟು ಆಡಿಸ್ತೀಯಾ ಅಂತ ಕೇಳುತ್ತಾನೆ. ಕಿತ್ತೋದ್ ನನ್ ಮಗ ಅವನು. ಅಮ್ಮ ಅಕ್ಕ ಅಂತ ಎಲ್ಲಾ ಅಂತಾನೆ. ಅವನಿಗೂ ಅಕ್ಕ ಅಮ್ಮ ಇದಾರೆ. ನಂಗೆ ಗೊತ್ತಾಗುವುದಿಲ್ಲವಾ ಅಮ್ಮ ಎಂದರೆ ಏನು ಅಕ್ಕ ಎಂದರೆ ಏನು ಅಂತ" ಅಂತೆಲ್ಲಾ ವಿನಯ್ ಕೇಳಿದ್ದಾರೆ.

ವಿನಯ್ ಆರೋಪಕ್ಕೆ ಕಾರ್ತಿಕ್ ಕಣ್ಣೀರು

ವಿನಯ್ ಮಾಡಿದ ಅಮ್ಮ - ಅಕ್ಕ ಎಂಬ ಆರೋಪವನ್ನು ಕಾರ್ತಿಕ್ ತಳ್ಳಿ ಹಾಕಿದ್ದಾರೆ. ಕಾರ್ತಿಕ್ ಮಾತ್ರವಲ್ಲ ಅವರ ಇಡೀ ಟೀಂ ಆ ವಿಚಾರವನ್ನು ತಳ್ಳಿ ಹಾಕಿದ್ದಾರೆ. ನಾನು ಉಪಯೋಗಿಸಿದ್ದು ಮೈಮ್ ಎಂದು ಕಾರ್ತಿಕ್ ಹೇಳಿದ್ದಾರೆ. ನಿನ್ನ ಯೋಗ್ಯತೆಗೆ ಇಷ್ಟು. ಎಲ್ಲೆಲ್ಲಿಂದ ಬಂದು ಬಿಡುತ್ತಾರೋ ಎಂದು ವಿನಯ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ಬಿಗ್ ಬಾಸ್ ಬಳಿ ಕಣ್ಣೀರು ಹಾಕಿ, ನಾನು ಆ ರೀತಿ ಪದ ಬಳಕೆ ಮಾಡಿದ್ದರೆ ಈಗಲೇ ನನ್ನನ್ನು ಹೊರಗೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.

More from Filmibeat

English summary
BBK 10 December 6th episode about Bigg Boss members have forgotten their humanity
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X