BBK10: ಬಿಗ್ ಬಾಸ್ ಮಂದಿಯ ಬಾಲ್ಯ ಇಷ್ಟು ಕೆಟ್ಟದಾಗಿತ್ತಾ? ಕಿರಿಕಿರಿ ಮಾಡಿದ್ರಾ ಸದಸ್ಯರು?
ಬಾಲ್ಯ ಎಂಬುದು ಎಲ್ಲರಿಗೂ ಒಂದೇ ಸಲ ಬರುವುದು. ಯಾವ ಜವಬ್ದಾರಿಗಳು ಇರುವುದಿಲ್ಲ, ಲೋಕದ ಜಂಜಾಟದ ಅರಿವು ಇರುವುದಿಲ್ಲ. ತನ್ನದೇ ಆದ ಲೋಕದಲ್ಲಿ ತನ್ನದೇ ವಯಸ್ಸಿನವರ ಜೊತೆಗೆ ತಿಳಿದಂತೆ ಬದುಕುವುದು. ತಪ್ಪು ಎನಿಸಿದ್ದನ್ನು ತಿದ್ದಿ ತೀಡಿದರೆ, ಬಾಲ್ಯ ಅಲ್ವಾ ಬಹಳ ಬೇಗನೇ ತಿದ್ದಿಕೊಳ್ಳುವ ಸಾಮರ್ಥ್ಯ ಇರುತ್ತದೆ.
ಒಮ್ಮೆ ಬಾಲ್ಯ ಕಳೆದು ದೊಡ್ಡವರಾಗಿ ಬಿಟ್ಟರೆ, ಎಷ್ಟೇ ಬಯಸಿದರು ಆ ಬಾಲ್ಯ ವಾಪಾಸ್ ಬರುವುದಿಲ್ಲ. ನೆನಪಿರುವಷ್ಟು ಮಾತ್ರ ಬಾಲ್ಯದ ನೆನಪುಗಳು ನಮ್ಮ ಬುತ್ತಿಯಲ್ಲಿ ಸಿಗುವುದು. ಬೇರೆ ಮಕ್ಕಳನ್ನು ನೋಡಿದಾಗ ನಮಗೂ ಇನ್ನು ಬಾಲ್ಯ ಇರಬೇಕು ಎನಿಸದೇ ಇರುವುದಿಲ್ಲ. ಆ ದಿನಗಳು ಕಾಡದೆ ಇರುವುದಿಲ್ಲ. ಬಿಗ್ ಬಾಸ್ ಮನೆ ಮಂದಿಗೆ ಮತ್ತೆ ಬಾಲ್ಯಕ್ಕೆ ಹೋಗುವ ಅವಕಾಶವನ್ನು ನೀಡಿದೆ. ಆದರೆ ಆ ಬಾಲ್ಯದ ಲೋಕದಲ್ಲಿ ಬ್ಯೂಟಿಫುಲ್ ಮೂಮೆಂಟ್ ಕ್ರಿಯೇಟ್ ಮಾಡುವ ಬದಲು, ಕಿರಿಕಿರಿ ಮಾಡಿಬಿಟ್ಟರಾ ಎಂಬ ಪ್ರಶ್ನೆ ಮೂಡಿದೆ.

ಎಲ್ಲರೂ ಕಿತಾಪತಿ ಸ್ಟೂಡೆಂಟ್ಸ್ ಸಿಕ್ಕಿದರಾ..?
ಸ್ಕೂಲ್ ಆಗಲಿ, ಕಾಲೇಜ ಆಗಲೀ, ವಿಭಿನ್ನತೆಯ ವಿದ್ಯಾರ್ಥಿಗಳು ಸಿಗುವುದು ಸತ್ಯ. ಓದುವುದರಲ್ಲಿ ಹಿಂದೆ ಉಳಿದವರು, ತಲೆ ಹರಟೆ ಮಾಡುವುದು, ತುಂಟಾಟ ಮಾಡುವುದು ಹೀಗೆ ಬೇರೆ ಬೇರೆ ರೀತಿಯ ವಿದ್ಯಾರ್ಥಿಗಳು ಸಿಗುತ್ತಾರೆ. ನೂರು ಜನ ವಿದ್ಯಾರ್ಥಿಗಳಲ್ಲಿ ಹತ್ತು ವಿದ್ಯಾರ್ಥಿಗಳು ಟೀಚರ್ಸ್ ಗಳಿಗೆ ಕಿರಿಕಿರಿ ಮಾಡುವವರು ಇರುತ್ತಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಇರೋ ಬರುವವರೆಲ್ಲಾ ಕಿರಿಕಿರಿ ಮಾಡುವುದಕ್ಕೆ ಶುರು ಮಾಡಿದ್ದಾರೆ. ದೊಡ್ಡವರು ಮಕ್ಕಳಾದರೆ ಅದು ಸಂಪೂರ್ಣ ನಾಟಕ ಎಂಬಂತೆ ಫೀಲ್ ಆಗುತ್ತಿದೆ.
ಬಿಗ್ ಬಾಸ್ ಶಾಲೆ ಅಲ್ಲ ಕಾಲೇಜು
ಪ್ರೌಢಶಾಲೆಯಲ್ಲಿ ಶಿಕ್ಷಕರನ್ನು ರೇಗಿಸುವುದು ಕೊಂಚ ಕಡಿಮೆಯೇ. ಆದರೆ ಬಿಗ್ ಬಾಸ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಂತೆಯೇ ಇರಬೇಕು ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡು ವಿಚಿತ್ರವಾಗಿ ನಟಿಸುತ್ತಿದ್ದಾರೆ. ಬಾಲ್ಯದ ದಿನಗಳನ್ನು ಮೆಲುಕು ಹಾಕಿದಂತೆ ಕಾಣಿಸುತ್ತಿಲ್ಲ, ಹಿಂಗೂ ಇರುತ್ತಾ ಬಾಲ್ಯ ಎಂಬ ಪ್ರಶ್ನೆ ಮೂಡುವಂತೆ ಮಾಡಿಬಿಟ್ಟಿದೆ.

ಹೆಚ್ಚಿನ ಸ್ಟಾರ್ ಪಡೆದವರಿಗೆ ದುಬಾರಿ ಬಜೆಟ್
ಬಿಗ್ ಬಾಸ್ಈ ವಾರ ಲಕ್ಸುರಿ ಬಜೆಟ್ ಪಡೆಯುವುದಕ್ಕೆ ಹೊಸ ಟಾಸ್ಕ್ ನೀಡಿದೆ. ವಿದ್ಯಾರ್ಥಿಗಳಾಗಿ ಯಾರು ಹೆಚ್ಚಿನ ಸ್ಟಾರ್ ಗಳನ್ನು ಪಡೆಯುತ್ತಾರೋ ಅವರಿಗೆ ಹಾಗೂ ಶಿಕ್ಷಕರಲ್ಲಿ ಕಡಿಮೆ ದೂರು ಪಡೆದವರು ಲಕ್ಸುರಿ ಬಜೆಟ್ ಪಡೆಯುತ್ತಾರೆ ಎಂಬುದು. ಟಾಸ್ಕ್ ಶುರುವಾಗಿದೆ. ಎಲ್ಲರೂ ನಾನಾ ರೀತಿಯ ಅವತಾರಗಳನ್ನು ತೋರಿಸಿದ್ದಾರೆ. ಮಾತಿಗೆ ಮುಂಚೆ ಟೀಚರ್ ಗೇನೆ ಹೊಗಳಿದ್ದಾರೆ.
ಸ್ಟಾರ್‌ಗಾಗಿ ಹಿಂದೆ ಬಿದ್ದ ವಿನಯ್
ಶಿಕ್ಷಕರಿಂದ ಹೆಚ್ಚು ಸ್ಟಾರ್ ಪಡೆದವರು ಗೆಲ್ಲುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದೆ ತಡ, ವಿನಯ್ ನಡವಳಿಕೆ ಬದಲಾಗಿತ್ತು. ಸುಮ್ಮ ಸುಮ್ಮನೆ ತನಿಷಾರನ್ನು ಹೊಗಳಿದ್ದಾರೆ. ವರ್ತೂರು ಸಂತೋಷ್ ಕೂಡ ಮಾತಿಗೆ ಮುಂಚೆ ನೀವೂ ಚೆನ್ನಾಗಿ ಕಾಣಿಸುತ್ತಾ ಇದ್ದೀರಾ ಅಂದ್ರೆ, ನಮ್ರತಾ ಟೀಚರ್ ನಾಚಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ರೇಗಿಸಿದ್ದಾರೆ. ವಿನಯ್‌ಗೆ ತನಿ ಮಿಸ್ ಅಂದ್ರೆ ಇಷ್ಟವಂತೆ. ಅದಕ್ಕೆ ನಮ್ರತಾ ಹಾಗೂ ತುಕಾಲಿ ಮನಸ್ಸು ಬದಲಾಯಿಸುವ ಕೆಲಸ ಮಾಡುತ್ತಿದ್ದರು. ಅವರಿಗೆ ಈಗಾಗಲೇ ಮದುವೆ ಆಗಿದೆ ಎಂದು ಸಮಾಧಾನಿಸಿದರು. ಇಷ್ಟೆಲ್ಲಾ ಬೆಳವಣಿಗೆಯ ನಡುವೆ ವಿನಯ್ ಗೆ ಸಿಕ್ಕಿತು ಸ್ಟಾರ್ ಸಿಕ್ಕಿದೆ. ವರ್ತೂರು ಸಂತೋಷ್ ಬೇಸರ ಮಾಡಿಕೊಂಡಿದ್ದಾರೆ. ನಮ್ಮ ಮಿಸ್ ನಂಗೆ ಕೊಡುತ್ತಾರೆ ಎಂದುಕೊಂಡಿದ್ದೆ ಎಂದಿದ್ದಾರೆ.


Click it and Unblock the Notifications











