Bigg Boss Vinay: ಸಲಗ ಎಂದಿದ್ದಕ್ಕೆ ಬಿಗ್ ಬಾಸ್ ಮನೆಯಲ್ಲಿ ಮದವೇರಿದಂತೆ ಆಡುತ್ತಿದ್ದಾರೆ ವಿನಯ್ ಗೌಡ!

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್​ 10ರ ಮನೆಯಲ್ಲಿ ಯಾರು ಸ್ಟ್ರಾಂಗ್ ಎಂದು ಕೇಳಿದರೆ ಮೊದಲು ನೆನಪಾಗುವುದ ವಿನಯ್ ಗೌಡ. ಮೂರು ವಾರಗಳಿಂದ ಚೆನ್ನಾಗಿ ಆಟವಾಡುತ್ತಿದ್ದರು. ಅವರಿಗೆ ಒಳ್ಳೆ ಫ್ಯಾನ್ ಬೇಸ್ ಕೂಡ ಇತ್ತು. ಆದರೆ, ಇತ್ತೀಚೆಗೆ ಅವರ ವರ್ತನೆ ಬಿಗ್ ಬಾಸ್ ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಸ್ಟರ್‌ಗಳು ಕಾಣಿಸಿಕೊಳ್ಳುತ್ತಿವೆ.

ಬಿಗ್ ಬಾಸ್ ವೀಕ್ಷಕರು ಮೊನ್ನೆಯಷ್ಟೇ ವಿನಯ್ ಗೌಡ ಅವರಿಗೆ ಕಿಚ್ಚನ ಪಂಚಾಯ್ತಿ ವೇಳೆ ಆನೆಯ ಬೊಂಬೆ ಕಳಿಸಿ 'ಸಲಗ' ಎಂದು ಬಿರುದು ನೀಡಿದ್ದರು. ವಿನಯ್‌ ಅವರಿಗೆ ಯಾರೂ ಸರಿ ಸಮಾನರಲ್ಲ ಎಂದು ಬರೆದಿತ್ತು. ಆದರೆ, ಈಗ ಅದೇ ತಪ್ಪಾಗಿದೆ ಎನ್ನುತ್ತಿದ್ದಾರೆ. ಆನೆಯಂತೆ ಗಂಭೀರವಾಗಿ ಇರುವುದು ಬಿಟ್ಟು ಮದವೇರಿದ ಆನೆಯಂತೆ ಆಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮನೆಯಲ್ಲಿರುವ ಇತರ ಸ್ಪರ್ಧಿಗಳ ವಿರುದ್ಧ ಕೂಗಾಡುವುದು, ತಾನೇ ಸರಿ ಎಂಬಂತೇ ಓಡಾಡುವುದು ಮಾಡಿತ್ತಿದ್ದಾರೆ.

bigg-boss-kannada-season-10

ಅಹಂ ಆವರಿಸಿಕೊಂಡಿತಾ ವಿನಯ್ ಗೌಡಗೆ..?

ಆನೆ ಗಿಫ್ಟ್ ಸಿಕ್ಕು, ವಿನಯ್‌ ಅವರಿಗೆ ಯಾರೂ ಸರಿ ಸಮಾನರಲ್ಲ ಎಂದು ಜನ ಅಂದುಕೊಂಡಿದ್ದಾರೆ ಎಂದು ತಿಳಿದಿದ್ದೇ ತಡ ಅವರ ವರಸೆಯೇ ಬದಲಾಗಿದೆ. ಮನೆಯಲ್ಲಿ ನಾನೇ ಎಲ್ಲಾ ಎನ್ನುವಂತೆ ವರ್ತಿಸುತ್ತಿದ್ದಾರೆ. ಇದು ನೆಟ್ಟಿಗರು ಮತ್ತು ಮನೆಯ ಇತರ ಸದಸ್ಯರ ಕೋಪಕ್ಕೆ ಕಾರಣವಾಗಿದೆ.

ಮನೆಗೆ ಬಂದ ಮೊದಲ ವಾರವೇ ನಟಿ ಸಂಗೀತಾ ಶೃಂಗೇರಿ ಅವರನ್ನು ಟಾರ್ಗೆಟ್ ಮಾಡಿದ್ದರು. ಅವರನ್ನು ಕೆಣಕುತ್ತಾ ಹೀಯಾಳಿಸುತ್ತಿದ್ದರು. ಇದು ಮನೆಯ ಇತರ ಸದಸ್ಯರಿಗೂ ಅರಿವೆಗೆ ಬಂದಿತ್ತು. ಈಗ ಮತ್ತೆ ಮನೆಯ ಇತರ ಸ್ಪರ್ಧಿಗಳ ಮೇಲೆ ವಿನಯ್ ದರ್ಪ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ತಾನೇ ಸರಿ, ತನ್ನನ್ನು ಯಾರು ಪ್ರಶ್ನೆ ಮಾಡಬಾರದು ಎಂಬ ರೀತಿ ವರ್ತಿಸುತ್ತಿದ್ದಾರೆ ಎಂದು ವೀಕ್ಷಕರು ಅಸಮಾಧಾನಗೊಂಡಿದ್ದಾರೆ.

ಡ್ರೋನ್ ಪ್ರತಾಪ್ ಹಾಗೂ ಭಾಗ್ಯಶ್ರೀ ಟಾರ್ಗೆಟ್

ಈ ವಾರ ವಿನಯ್ ಗೌಡ ಅವರ ಟಾರ್ಗೆಟ್ ಆಗಿರುವುದು ಡ್ರೋನ್ ಪ್ರತಾಪ್ ಹಾಗೂ ಭಾಗ್ಯಶ್ರೀ. ಪ್ರತಾಪ್ ಮೇಲೆ ವಿನಯ್ ಈ ಹಿಂದೆಯೂ ಮುಗಿಬಿದ್ದಿದ್ದರು. ಈ ವಾರ ಮತ್ತೆ ನಾಮಿನೇಷನ್ ಪಾಸ್ ವಿಷಯದಲ್ಲಿ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಡ್ರೋನ್ ಪ್ರತಾಪ್‌ಗೆ ನಾಮಿನೇಷನ್ ಪಾಸ್ ಸಿಕ್ಕಿದ್ದು, ಅವರು ವಿನಯ್ ಗೌಡ ಅವರನ್ನೇ ನಾಮಿನೇಟ್ ಮಾಡಿರುವುದು ಇದಕ್ಕೆ ಕಾರಣ.

ಇನ್ನು, ಭಾಗ್ಯಶ್ರೀ ಅವರ ವಿಷಯಕ್ಕೆ ಬಂದರೆ, ಅವರು ಕೂಡ ವಿನಯ್ ಹಾಗೂ ಸ್ನೇಹಿತ್ ಅವರನ್ನು ನಾಮಿನೇಟ್ ಮಾಡಿದ್ದರು. ಇದೇ ಕಾರಣಕ್ಕೆ ವಿನಯ್ ಭಾಗ್ಯಶ್ರೀ ವಿರುದ್ಧ ಕಿಡಿಕಾರುತ್ತಿದ್ದಾರೆ. ಮಾತಿನಲ್ಲೇ ಚುಚ್ಚುತ್ತಿರುವ ಅವರು ಭಾಗ್ಯಶ್ರೀ ಅವರ ಅಳುವನ್ನು ಸೀರಿಯಲ್ ಡ್ರಾಮಾ ಎಂದು ಕರೆದಿದ್ದಾರೆ. ಕಣ್ಣೀರು ಹಾಕಿದ ಭಾಗ್ಯಶ್ರಿ ಬಿಗ್ ಬಾಸ್‌ನಿಂದಲೇ ಹೋಗುತ್ತೇನೆ ಎಂದು ನೊಂದಿದ್ದರು. ಇದೆಲ್ಲಾ ಬಿಗ್ ಬಾಸ್ ವೀಕ್ಷಕರಿಗೆ ಕೊಂಚವೂ ಇಷ್ಟವಾಗಿಲ್ಲ.

bigg-boss-kannada-season-10

ವಿನಯ್ ವರ್ತನೆಗೆ ವೀಕ್ಷಕರ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣಗಳಲ್ಲಿ ವಿನಯ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. "ನಿನ್ನಂತ ಕಚಡಾ ನನ್ ಮಗನ ನನ್ ಲೈಫ್ ಅಲ್ಲಿ ನೋಡಿಲ್ಲ ಗುರು. ಗೇಮ್ ಅಲ್ಲಿ ಏನೂ ಕಿಸಿಯಲ್ಲ, ಆದ್ರೆ ಮಾತು ನೋಡಿದ್ರೆ ಒಳ್ಳೆ ಗೋಲ್ಡ್ ಮೆಡಲ್ ತೆಗ್ಡಿರೋ ಥರ ಆಡ್ತಿಯ Loafer ನನ್ ಮಗನೆ. ವಡೆ ವಿನಯ್ - ಸರಿಯಾಗಿ ಇಟ್ಟಿದ್ದಾರೆ ಹೆಸ್ರು ನಿಂಗೆ!" ಎಂದು ನೆಟ್ಟಿಗರೊಬ್ಬರು ಬೈದಿದ್ದಾರೆ.

ಮತ್ತೊಬ್ಬರು, "ಈ ಸೆಡೆ ವಿನಯ್ ಬಗ್ಗೆ ಒಳ್ಳೆ ಅಭಿಪ್ರಾಯ ಇತ್ತು.... ತುಕಾಲಿ ವಿನಯ್ ಎಲ್ಲ ಹೋಯ್ತು....ದೊಡ್ದ ತೋಪು ಅಂಕೊಂಡವ್ನೆ ಡೆಟಾಲ್ ಅಲ್ಲೇ ಹುಟ್ಡಾಂಗೆ ಅಡ್ತವ್ನೆ" ಎಂದು ಟೀಕಿಸಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಕೂಡ ಅವರನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

More from Filmibeat

English summary
Bigg Boss kannada viewers reaction on contestant vinay behaviour.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X