BBK10 : ಈ ವಾರ ಒಂಬತ್ತು ಸ್ಪರ್ಧಿಗಳು ನಾಮಿನೇಟ್: ವಿನಯ್ ಮನೆಯಿಂದ ಹೊರ ಹೋಗಲಿ ಎಂದ ವೀಕ್ಷಕರು..!
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಗಿದಿದೆ. ಇಲ್ಲಿ 9 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲೂ ಸಹ ಹೆಚ್ಚಿನ ಸ್ಪರ್ಧಿಗಳು ವಿನಯ್ ನನ್ನ ನಾಮಿನೇಟ್ ಮಾಡಿದ್ದಾರೆ. ವಿನಯ್ ನಾಮಿನೇಟ್ ಆಗುತ್ತಿದ್ದಂತೆ ಅವರ ಕೋಪ ಎರಡರಷ್ಟಾಗುತ್ತಿದೆ. ಇದಕ್ಕಾಗಿ ಮನೆಯಲ್ಲಿ ಇತರ ಸ್ಪರ್ಧಿಗಳ ಜೊತೆ ಬಾಯಿಗೆ ಬಂದಂತೆ ಮಾತನಾಡುತ್ತಾ ವರ್ತಿಸುತ್ತಾ ಇದ್ದಾರೆ .ಅವರನ್ನ ಯಾರು ನಾಮಿನೇಟ್ ಮಾಡಿದ್ದರು ಅವರ ಮೇಲೆ ಕೋಪ ತೋರಿಸುತ್ತಿದ್ದಾರೆ. ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಮೊದಲು ನ್ಯಾಮಿನೇಟ್, ನಂತರ ನೀತು ಕೂಡ ವಿನಯ್ ಹೆಸರು ಹೇಳಿ ನ್ಯಾಮಿನೇಟ್ ಮಾಡಿದರ. ಹೀಗಾಗಿ ವಿನಯ್‌ಗೆ ತುಂಬಾನೇ ಕೋಪ ಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ಎಲ್ಲರೂ ಕೂಡ ಚೆನ್ನಾಗಿ ಆಟವನ್ನು ಆಡುತ್ತಿದ್ದಾರೆ. ಆದರೆ ವಿನಯ್ ನನ್ನು ಸೋಲಿಸುವವರು ಯಾರು ಇಲ್ಲ ಎಂಬಂತೆ ವರ್ತಿಸುತ್ತಿದ್ದರು. ಇದಕ್ಕೆ ಸರಿಯಾಗಿ ಟಾಂಗ್ ಕೊಡಲು ಎಲ್ಲರೂ ಸಿದ್ದರಾಗಿದ್ದಾರೆ. ಕೆಲವರು ವಿನಯ್ ಜೊತೆಗೆ ಇದ್ದಾರೆ. ಸಂಗೀತ ಕಾರ್ತಿಕ್ ವಿನಯ್ ಮೇಲೆ ಒಂದು ಕಣ್ಣಿಟ್ಟಿದ್ದು ಯಾವಾಗಲೂ ಸಹ ಕಾಲು ಕೆರೆದುಕೊಂಡು ಜಗಳವಾಡುತ್ತಲೇ ಇರುತ್ತಾರೆ. ಇನ್ನು ವಿನಯ್ ಹಾಗೂ ಸಂಗೀತ ಅವರಿಬ್ಬರ ನಡುವೆ ಅತಿ ಹೆಚ್ಚು ಜಗಳ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿದೆ. ಇಬ್ಬರು ಪರಸ್ಪರ ತಮ್ಮ ಯೋಗ್ಯತೆಯ ಬಗ್ಗೆ ಮಾತನಾಡಿಕೊಂಡಿದ್ದಾರೆ.

ಮೈಕಲ್ ಸಹ ತುಂಬಾ ಚೆನ್ನಾಗಿ ಆಟವನ್ನ ಆಡುತ್ತಿದ್ದರು. ಆದರೆ ಮನೆಯವರ ಜೊತೆ ಬೆರೆಯುವುದು ಅಷ್ಟಕ್ಕಷ್ಟೇ ಆಗಿತ್ತು. ವಿನಯ್ ಜೊತೆಗೆ ಯಾವಾಗಲೂ ಮೈಕಲ್ ಇರುತ್ತಿದ್ದರು. ಇನ್ನು ಇದಕ್ಕಾಗಿ ಹಲವಾರು ಮೈಕಲ್ ನನ್ನ ಮಾಮಿನೇಟ್ ಮಾಡಿದ್ದಾರೆ. ಇನ್ನು ಸ್ನೇಹಿತ್ ಮನೆಯಲ್ಲಿ ಎಲ್ಲರ ಜೊತೆ ಬೆರೆಯಬೇಕು ಎಂದು ಭಾಗ್ಯಶ್ರೀ ನ್ಯಾಮಿನೇಟ್ ಮಾಡಿದ್ದಾರೆ. ಭಾಗ್ಯಶ್ರೀ ನಾಮಿನೇಟ್ ಮಾಡಿದ್ದನ್ನು ಸ್ನೇಹಿತ್ ಬಹಳ ಖುಷಿಯಾಗಿಯೇ ಸ್ವೀಕರಿಸಿದ್ದಾರೆ.
ವರ್ತೂರು ಸಂತೋಷ್ ಅವರು ಮನೆಗೆ ಬಂದಾಗ ಎಲ್ಲರೂ ಕೂಡ ಚೆನ್ನಾಗಿಯೇ ಮಾತನಾಡಿಸಿದರು. ಆದರೆ ನಾಮಿನೇಟ್ ವಿಷಯಕ್ಕೆ ಬಂದಾಗ ಅವರ ಮೇಲೆ ಎಲ್ಲರೂ ಒಮ್ಮೆಲೇ ಮುಗಿಬಿದ್ದರು. ಅವರು ಒಂದು ವಾರದಿಂದ ಹೊರಗೆ ಇದ್ದರು ಮನೆಯಲ್ಲಿ ಯಾವುದೇ ರೀತಿಯ ಪರ್ಫಾರ್ಮೆನ್ಸ್ ನೀಡಿಲ್ಲ ಅದಕ್ಕಾಗಿ ನಾವೆಲ್ಲರೂ ಸಂತೋಷ್ ಅವರನ್ನ ನಾಮಿನೇಟ್ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಈ ಮಾತುಗಳು ಸಂತೋಷ್ ಅವರ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಯಾಕೆಂದರೆ ಮನೆಗೆ ಬಂದ ಕೂಡಲೇ ವಿವಿಧ ಬಗೆಯ ಪ್ರಶ್ನೆಗಳನ್ನು ಅವರಿಗೆ ಕೇಳಿದ.ರು ಆಗಲು ಸಹ ವರ್ತೂರು ಸಂತೋಷ್ ಬಹಳ ಸಮಾಧಾನದಿಂದಲೇ ಉತ್ತರಿಸಿದ್ದರು. ನ್ಯಾಮಿನೇಷನ್ ವಿಷಯ ಬಂದಾಗ ಮನೆಯವರ ಅಸಲಿ ಆಟ ಗೊತ್ತಾಗಿದೆ.
ನಾಮಿನೇಷನ್ ವೇಳೆ ವಿನಯ್ ಟಾರ್ಗೆಟ್..!
ವಿನಯ್ ಮನೆಯಿಂದ ಹೊರಗೆ ಬರಲಿ ಎಂದು ಪ್ರೇಕ್ಷಕರು
ನಾಮಿನೇಷನ್ ಪ್ರಕ್ರಿಯೆ ಆರಂಭವಾದಾಗ ಮನೆಯಲ್ಲಿರುವ ಸ್ಪರ್ಧಿಗಳು ವಿನಯ್ ಹೆಸರನ್ನ ಬಹಳಷ್ಟು ಮಂದಿ ತೆಗೆದುಕೊಂಡರು. ಆನೆಗೆ ಹೋಲಿಸಿದ್ದಾರೆ ಎಂದು ಮದುವೇರಿದ ಆನೆಯಂತೆ ವರ್ತಿಸುತ್ತಿದ್ದಾರೆ ಎಂದು ಮನೆಯಲ್ಲಿರುವ ಕೆಲವರು ಅಭಿಪ್ರಾಯಪಟ್ಟರು. ವಿನಯ್ ಕೂಡ ಎಲ್ಲರ ಮಾತುಗಳನ್ನ ಸಮಾಧಾನದಿಂದಲೇ ಸ್ವೀಕಾರ ಮಾಡಿದರು. ಡ್ರೋನ್ ಪ್ರತಾಪ್ ವಿನಯ್ ಮೇಲೆ ಆರೋಪವನ್ನು ಮಾಡಿದರು ನಾನು ಹೇಳುವುದು ಅವರಿಗೆ ಅರ್ಥವಾಗುತ್ತದೆ. ಆದರೆ ಅವರಿಗೆ ಅದನ್ನ ಸ್ವೀಕರಿಸುವ ಮನಸ್ಸು ಇಲ್ಲ ಎಂದು ಹೇಳಿದ್ದರು. ಇನ್ನು ಹಲವರು 10 ಬಗೆಯಲ್ಲಿ ವಿನಯ್ ಬಗ್ಗೆ ಮಾತನಾಡಿದರು.

ಒಟ್ಟು ಮನೆಯಲ್ಲಿ ಒಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ ವರ್ತೂರು ಸಂತೋಷ್, ವಿನಯ್, ಸಿರಿ, ಸ್ನೇಹಿತ್, ತುಕಾಲಿ ಸಂತೋಷ್, ರಕ್ಷಕ್, ಮೈಕಲ್, ತನಿಷಾ, ಕಾರ್ತಿಕ್ ಎಷ್ಟು ಮಂದಿ ಈಗ ನ್ಯಾಮಿನೇಟ್ ಆಗಿದ್ದು ಪ್ರೇಕ್ಷಕರು ವೋಟ್ ಮಾಡುವ ಮೂಲಕ ತಮ್ಮ ನೆಚ್ಚಿನ ಕಂಟೆಸ್ಟೆಂಟ್ ಉಳಿಸಬಹುದಾಗಿದೆ. ಕಳೆದ ಬಾರಿ ನಾಮಿನೇಟ್ ಆಗಿ ಮನೆಯಲ್ಲೇ ಉಳಿದುಕೊಂಡಿದ್ದ ಭಾಗ್ಯಶ್ರೀ ಈ ಬಾರಿ ಸೇಫ್ ಆಗಿದ್ದಾರೆ.
ಮನೆಯಲ್ಲಿ ಉಳಿದುಕೊಳ್ಳುತ್ತಾರೆ ವಿನಯ್..!?
ಬಿಗ್ ಬಾಸ್ ಮನೆಯಲ್ಲಿರುವ ವಿನಯ್ ಮೇಲೆ ಜನರು ಒಳ್ಳೆಯ ಅಭಿಪ್ರಾಯ ಹೊಂದಿಲ್ಲ. ಇತ್ತೀಚಿನ ದಿನಗಳಲ್ಲಿ ವಿನಯ್ ಆಡುತ್ತಿರುವ ಪ್ರತಿಯೊಂದು ಮಾತು ಸಹ ಜನರನ್ನ ಕೆರಳಿಸುತ್ತಿವೆ. ಇದಕ್ಕಾಗಿ ಬಿಗ್ ಬಾಸ್ ಮನೆಯಿಂದ ಆದಷ್ಟು ಬೇಗ ವಿನಯ್ ಅವರನ್ನ ಹೊರಗೆ ಕಳುಹಿಸಿ ಎಂದು ಮಾತನಾಡಿದ್ದಾರೆ. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ವಿನಯ್ ಉಳಿದುಕೊಳ್ಳುತ್ತಾರಾ ಎಂಬುದು ಕುತೂಹಲವಾಗಿದೆ.


Click it and Unblock the Notifications











