BBK10: ನಾನು ಹಲವರಿಗೆ ಪ್ರಶ್ನೆ ಕೇಳಿದ್ದೇನೆ.. ನನ್ನ ಬಗ್ಗೆ ಪ್ರಶ್ನೆಗಳಿರಬಹುದು ಎನ್ನುತ್ತ ದೊಡ್ಮನೆಗೆ ಪತ್ರಕರ್ತ ಗೌರೀಶ್ ಅಕ್ಕಿ
ಅಂತೂ ಇಂತೂ ಬಿಗ್‌ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಪ್ರೀಮಿಯರ್‌ಗೆ ತೆರೆಗೆ ಬಿದ್ದಿದೆ. ಒಟ್ಟು 17 ಜನ ಸ್ಪರ್ಧಿಗಳು ಈ ಬಾರಿ ದೊಡ್ಮನೆ ಸೇರಿಕೊಂಡಿದ್ದಾರೆ. 19 ಜನ ವೇದಿಕೆಗೆ ಬಂದಿದ್ದರು. ಇಬ್ಬರು ಮಾತ್ರ ತಮ್ಮ ಮನೆಗೆ ವಾಪಸ್ ಆಗಿದ್ದು ಉಳಿದವರೆಲ್ಲಾ ಬಿಗ್‌ಬಾಸ್ ಟಿಕೆಟ್ ಪಡೆದುಕೊಂಡಿದ್ದಾರೆ.
ಇನ್ನು ವೀಕ್ಷಕರಲ್ಲಿ ಬಹಳ ಕುತೂಹಲ ಕೆರಳಿಸಿದ್ದ ಚಾರ್ಲಿ ಇನ್ನು ಬಿಗ್‌ಬಾಸ್ ಮನೆ ಪ್ರವೇಶ ಮಾಡಿಲ್ಲ. ಶೀಘ್ರದಲ್ಲೇ ಚಾರ್ಲಿ ಕೂಡ ದೊಡ್ಮನೆ ಸದಸ್ಯರ ಜೊತೆ ಕಾಣಿಸಿಕೊಳ್ಳಲಿದೆ. ಪತ್ರಕರ್ತ ಗೌರೀಶ್ ಅಕ್ಕಿ ಕೂಡ ಈ ಬಾರಿ ಅಚ್ಚರಿ ಎನ್ನುವಂತೆ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಂಭಾವ್ಯನೀಯರ ಪಟ್ಟಿಯಲ್ಲಿ ಅವರ ಹೆಸರು ಅಷ್ಟಾಗಿ ಕೇಳಿಬಂದಿರಲಿಲ್ಲ.

ಟಿವಿ9, ಸುವರ್ಣ ನ್ಯೂಸ್ ಸುದ್ದಿವಾಹಿನಿಗಳಲ್ಲಿ ಗೌರೀಶ್ ಅಕ್ಕಿ ನಿರೂಪಕರಾಗಿ ಕೆಲಸ ಮಾಡಿದ್ದರು. ಇದೀಗ ತಮ್ಮದೇ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದು ತಮ್ಮ ಸರಳ ನಿರೂಪಣೆಯಿಂದ ಹೆಚ್ಚು ಗುರ್ತಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ಪತ್ರಕರ್ತರು ಬಿಗ್‌ಬಾಸ್ ಮನೆಗೆ ಹೋಗಿದ್ದಾರೆ. ಬಿಗ್‌ಬಾಸ್ ಕನ್ನಡ 3ನೇ ಸೀಸನ್‌ನಲ್ಲೇ ರೆಹಮಾನ್ ಹಾಸನ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. 100 ದಿನ ದೊಡ್ಮನೆಯಲ್ಲಿ ಇದ್ದು 4ನೇ ಸ್ಥಾನ ಪಡೆದಿದ್ದರು.
ಪತ್ರಕರ್ತರಾದ ರವಿ ಬೆಳೆಗೆರೆ ಹಾಗೂ ಸೋಮಣ್ಣ ಮಾಚೀಮಡ ಕೂಡ ದೊಡ್ಮನೆ ಎಂಟ್ರಿ ಕೊಟ್ಟಿದ್ದರು. ರವಿ ಬೆಳಗೆರೆ ಬಹಳ ದಿನ ಒಳಗೆ ಇರಲಿಲ್ಲ. ಸೋಮಣ್ಣ ಒಳ್ಳೆ ಪೈಪೋಟಿ ಕೊಟ್ಟಿದ್ದರು. ಇದೀಗ ಸೌಮ್ಯ ಸ್ವಭಾವದ ಪತ್ರಕರ್ತ ಗೌರೀಶ್ ಅಕ್ಕಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ.
ಪತ್ರಕರ್ತನಾಗಿ ಮನುಷ್ಯರನ್ನು ಅರ್ಥ ಮಾಡಿಕೊಳ್ಳುವುದು ನನ್ನ ಕೆಲಸ, ಅದರ ಜೊತೆಗೆ ನನ್ನನ್ನು ನಾನು ಅರ್ಥ ಮಾಡಿಕೊಳ್ಳುವುದು ಸಹ ನನ್ನ ಕೆಲಸ. ಕೆಲವು ಗಂಟೆಗಳು ಅಥವಾ ನಿಮಿಷಗಳಿಗೆ ಕ್ಯಾಮೆರಾ ಎದುರು ಹೇಗೆ ವರ್ತಿಸಬೇಕು ಎಂಬುದನ್ನು ನಾವು ಪ್ಲ್ಯಾನ್ ಮಾಡಬಹುದು ಆದರೆ ಎಲ್ಲೆಡೆ, ಎಲ್ಲ ಸಮಯದಲ್ಲಿಯೂ ಕ್ಯಾಮೆರಾ ಇದ್ದಾಗ ಅದನ್ನು ಮರೆಯಲೇ ಬೇಕು, ಹಾಗಾಗಿ ಬಿಗ್‌ಬಾಸ್ ಮನೆಯಲ್ಲಿ ನಟಿಸಲು ಸಾಧ್ಯವಿಲ್ಲ ಎಂದರು.
ಪತ್ರಕರ್ತನಾಗಿ ಮನುಷ್ಯರನ್ನು ಅರ್ಥ ಮಾಡಿಕೊಳ್ಳುವುದು ನನ್ನ ಕೆಲಸ, ಇದರ ಜೊತೆಗೆ ನನ್ನನ್ನು ಕೂಡ ನಾನು ಅರ್ಥ ಮಾಡಿಕೊಳ್ಳಬೇಕಿದೆ. ಕೆಲವು ಗಂಟೆಗಳು ಅಥವಾ ನಿಮಿಷಗಳಿಗೆ ಕ್ಯಾಮೆರಾ ಎದುರು ಹೇಗೆ ವರ್ತಿಸಬೇಕು ಎಂಬುದನ್ನು ನಾವು ಪ್ಲ್ಯಾನ್ ಮಾಡಬಹುದು. ಆದರೆ ನಮ್ಮ ಸುತ್ತಾ ಮುತ್ತಾ ಎಲ್ಲಾ ಸಮಯದಲ್ಲಿಯೂ ಕ್ಯಾಮೆರಾ ಇದ್ದಾಗ ಅದನ್ನು ಮರೆಯಲೇ ಬೇಕು, ಬಿಗ್‌ಬಾಸ್ ಮನೆಯಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಗೌರೀಶ್ ಅಕ್ಕಿ ಹೇಳಿದ್ದಾರೆ.
ಯಾಕೆ ಬಿಗ್‌ಬಾಸ್ ಮನೆಗೆ ಹೋಗಬೇಕು ಎನ್ನುವ ಪ್ರಶ್ನೆಗೆ "ನಾನು ಹಲವರಿಗೆ ಪ್ರಶ್ನೆ ಕೇಳಿದ್ದೇನೆ, ಹಲವರಿಗೆ ನನ್ನ ಬಗ್ಗೆ ಕೂಡ ಪ್ರಶ್ನೆಗಳು ಇರಬಹುದು. ಅಂಥಹ ಪ್ರಶ್ನೆಗಳಿಗೆ ಇಲ್ಲಿ ಉತ್ತರ ದೊರೆಯಬಹುದು. ಹೊಸ ಪ್ರಶ್ನೆಗಳು ಹುಟ್ಟಲೂ ಬಹುದು. ಈ ಮನೆಯಲ್ಲಿ ಕನಿಷ್ಟ ಒಂದು ತಿಂಗಳು ಉಳಿಯಬೇಕು ಎಂದು ಕೊಂಡಿದ್ದೇನೆ. ನಾನು ತುಸು ನಾಚಿಕೆ ಸ್ವಭಾವದ ವ್ಯಕ್ತಿ. ಮಹಿಳೆಯರ ಬಳಿ ತುಸು ನಾಚಿಕೆ ಸ್ವಭಾವದ ವ್ಯಕ್ತಿ. ಅದನ್ನೆಲ್ಲ ಸರಿಪಡಿಸಿಕೊಳ್ಳಬೇಕಿದೆ ಎಂದರು.
ಸದ್ಯ ಗ್ರ್ಯಾಂಡ್ ಪ್ರೀಮಿಯರ್ ಡ್ರೋಣ್ ಪ್ರತಾಪ್, ಸ್ನೇಕ್ ಶ್ಯಾಮ್, ಸಂಗೀತಾ ಶೃಂಗೇರಿ, ಸಿರಿಜಾ ಸೇರಿದಂತೆ 17 ಜನ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದಾರೆ. ಕೆಲವೇ ಗಂಟೆಗಳಲ್ಲಿ ಮೊದಲ ಎಪಿಸೋಡ್ ಪ್ರಸಾರವಾಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ದೊಡ್ಮನೆಯಲ್ಲಿ ಏನೆಲ್ಲಾ ನಡೆಯುತ್ತೆ ಎನ್ನುವುದನ್ನು ಉಚಿತವಾಗಿ ನೋಡುವ ಅವಕಾಶ ಸಿಗಲಿದೆ. ಇನ್ನುಳಿದಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ.


Click it and Unblock the Notifications











