Bigg Boss: ಬಿಗ್ ಬಾಸ್ ಸ್ಪರ್ಧಿ ನಮ್ರತಾ ಬಲು ದುಬಾರಿ, ನಟಿ ಬಳಸೋ ಚಪ್ಪಲಿಯ ಬೆಲೆನೇ ಇಷ್ಟೊಂದಾ?
ನಮ್ರತಾ ಗೌಡ ಬಾಲ ನಟಿಯಾಗಿಯೇ ಎಂಟ್ರಿ ಕೊಟ್ಟವರು. 'ಪುಟ್ಟಗೌರಿ' ಮದುವೆ ಧಾರಾವಾಹಿಯಾದ ಮೇಲೆ 'ನಾಗಿಣಿ 2' ಧಾರಾವಾಹಿಯಲ್ಲಿ ಶಿವಾನಿಯಾಗಿ ಗಮನ ಸೆಳೆದಿದ್ದರು. 'ನಾಗಿಣಿ 2' ಮುಗಿದ ಮೇಲೆ ಅವಕಾಶಗಳೇನು ಅರಸಿ ಬಂದಂತೆ ಕಂಡಿಲ್ಲ. ಯೂಟ್ಯೂಬ್ ಟ್ರೆಂಡಿಂಗ್ ಇದ್ದ ಕಾರಣ, ನಮ್ರತಾ ಕೂಡ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರಂ ಬಳಕೆ ಮಾಡುವುದಕ್ಕೆ ಶುರು ಮಾಡಿದರು.
ಧಾರಾವಾಹಿ ಮುಗಿಯುತ್ತಿದ್ದಂತೆ ಒಳ್ಳೊಳ್ಳೆ ಟ್ರಿಪ್ ಹೊಡೆದರು. ಟ್ರಾವೆಲ್ ಎಂಜಾಯ್ ಮಾಡಿದರು. ಕನಸಿನ ಮನೆಯನ್ನು ಖರೀದಿಸಿ, ಗೃಹ ಪ್ರವೇಶ ಕೂಡ ಮುಗಿಸಿದ್ದಾರೆ. ಇದೇ ಬೆನ್ನಲ್ಲೇ ಬಿಗ್ ಬಾಸ್ ಅವಕಾಶ ಬಂದಿದೆ. ಅದನ್ನ ಒಪ್ಪಿಕೊಂಡು ಬಿಗ್ ಬಾಸ್ ಮನೆಗೂ ಎಂಟ್ರಿಯಾಗಿದ್ದಾರೆ. ಆದರೆ ಅವರು ಹಾಕುವ ಸ್ಲಿಪ್ಪರ್ ಗಳ ಬೆಲೆ ಕೇಳಿದರೇನೆ ಶಾಕ್ ಆಗುತ್ತೆ. ಅಷ್ಟು ಕಾಸ್ಟ್ಲಿ ಸ್ಲಿಪ್ಪರ್ ಹಾಕುತ್ತಾರೆ.

ನಮ್ರತಾ ಬಗ್ಗೆ ನೆಟ್ಟಿಗರ ಆಕ್ರೋಶ
ನಮ್ರತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಅವರ ಯೂಟ್ಯೂಬ್ ವಿಡಿಯೋಗಳನ್ನು ನೋಡಿದ ಸಾಕಷ್ಟು ಜನ ಅವರ ಅಭಿಮಾನಿಗಳಾಗಿದ್ದರು, ಸ್ಪೂರ್ತಿಯಾಗಿ ಟ್ರೀಟ್ ಮಾಡಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಮುಖದಲ್ಲಿಯೇ ಆ ಮುಗ್ಧತೆ ಕಾಣುತ್ತದೆ. ಆದರೆ ಬಿಗ್ ಬಾಸ್‌ಗೆ ಬಂದಿರುವ ನಮ್ರತಾ ಬೇರೆ ರೀತಿಯಾಗಿಯೇ ಕಾಣುತ್ತಾರೆ. ಅವರ ಮಾತುಗಳು ಬೇರೆ ರೀತಿಯಾಗಿಯೇ ಕೇಳಿಸುತ್ತಿವೆ. ಹೀಗಾಗಿ ಫಾಲೋವರ್ಸ್ ಕೂಡ ಇದಾ ನಾವೂ ನೋಡಿದ ನಮ್ರತಾ ಎಂದೇ ಕಮೆಂಟ್ಸ್ ಮಾಡುತ್ತಿದ್ದಾರೆ.
ಮಾಡ್ರರ್ನ್ ಗರ್ಲ್ ನಮ್ರತಾ
ಮಾಡ್ರರ್ನ್ ವಿಚಾರದಲ್ಲಿ ನಮ್ರತಾ ಸೂಪರ್. ಅವರ ಸೋಷಿಯಲ್ ಮೀಡಿಯಾ ನೋಡಿದವರಿಗೆ ಅದು ಅರ್ಥವಾಗುತ್ತದೆ. ಡ್ರೆಸ್ ಕಲೆಕ್ಷನ್, ಮೇಕಪ್ ವಿಚಾರದಲ್ಲಿ ಸ್ಪೂರ್ತಿಯಾಗುತ್ತಾರೆ. ಯಾವುದೇ ಡ್ರೆಸ್ ಹಾಕಿದರು, ಅದಕ್ಕೆ ಚಂದ ಕಾಣುವಂತ ಮೇಕಪ್ ಮಾಡುತ್ತಾರೆ. ಬಿಗ್ ಬಾಸ್ ಮನೆಯಲ್ಲೂ ಅಷ್ಟೇ ಎದ್ದ ಕೂಡಲೇ ಮೇಕಪ್ ಮಾಡಿಕೊಂಡು ಮುಂದಿನ ಕೆಲಸ ನೋಡುತ್ತಾರೆ. ಇದೇ ವಿಚಾರಕ್ಕೆ ತನಿಷಾ ಗರಂ ಆಗಿದ್ದರು ಕೂಡ.

ನಮ್ರತಾ ಹಾಕುವ ಚಪ್ಪಲಿ ಬೆಲೆ ಎಷ್ಟು ಗೊತ್ತಾ?
ನಮ್ರತಾ ವೈಯಕ್ತಿಕ ಜೀವನದಲ್ಲೂ ಕಾಸ್ಟ್ಲೀ ಲೈಫ್ ಲೀಡ್ ಮಾಡುತ್ತಿದ್ದಾರೆ. ಅದು ಅವರ ಸೋಷಿಯಲ್ ಮೀಡಿಯಾ ಫಾಲೋ ಮಾಡಿದವರಿಗೇನೆ ಅರ್ಥವಾಗುತ್ತದೆ. ಅದಕ್ಕೆ ತಕ್ಕಂತೆ ಅವರ ಬಳಿ ಇರುವ ಚಪ್ಪಲಿಗಳು ಅಷ್ಟೇ. ದುಬಾರಿ ಬೆಲೆಯನ್ನೇ ಹೊಂದಿವೆ. 5000, 3000, 2999, 2500 ಹೀಗೆ ನೋಡುವುದಕ್ಕೆ ಸಿಂಪಲ್ ಎನಿಸುವಂತೆ ಕಂಡರು, ದುಬಾರಿ ಬೆಲೆಯ ಶೂಗಳನ್ನು ಧರಿಸಿದ್ದಾರೆ. ಇದು ಅವರದ್ದೇ ಯೂಟ್ಯೂಬ್ ಚಾನೆಲ್‌ನಲ್ಲಿ ಶೂ ಕಲೆಕ್ಷನ್ ವಿಡಿಯೋ ಮಾಡಿ ಹಾಕಿದ್ದರಿಂದ, ಗೊತ್ತಾಗಿದೆ.
ದುಬಾರಿ ಆದರೂ ಕಲೆಕ್ಷನ್ ಜಾಸ್ತಿ
ನಮ್ರತಾ ಅವರನ್ನು ನೋಡಿದರೆ ಮೇಕಪ್‌ಗೆ ಎಷ್ಟು ಪ್ರಾಶಸ್ತ್ಯ ನೀಡುತ್ತಾರೋ, ಚಪ್ಪಲಿ, ಡ್ರೆಸ್‌ಗಳ ಕಲೆಕ್ಷನ್‌ಗೂ ಅಷ್ಟೇ ಪ್ರಾಶಸ್ತ್ಯ ನೀಡುತ್ತಾರೆ ಎನಿಸದೆ ಇರುವುದಿಲ್ಲ. ಹೊಸ ಮನೆಗೆ ಶಿಫ್ಟ್ ಆದ ಹೊಸತರಲ್ಲಿ ಚಪ್ಪಲಿಗಳ ವಿಡಿಯೋ ಮಾಡಿದ್ದಾರೆ. ಹಳೆ ಮನೆಯಲ್ಲೂ ಒಂದಷ್ಟು ಚಪ್ಪಲಿ ಇದೇ ಎಂದೇ ಆ ವಿಡಿಯೋದಲ್ಲಿ ತಿಳಿಸಿದ್ದಾರೆ. ಈಗ ಇನ್ನಷ್ಟು ದುಬಾರಿ ಚಪ್ಪಲಿಗಳ ಸಂಖ್ಯೆ ಹೆಚ್ಚಾಗಿರಬಹುದು.


Click it and Unblock the Notifications











