ತಾರಾ, ಅನುಪ್ರಭಾಕರ್ ಜೊತೆ ಕಾಣಿಸಿಕೊಂಡ ಬಿಗ್‌ಬಾಸ್ ಬೆಂಕಿ; ಕಪ್ಪು ಸೀರೆಯುಟ್ಟು ಮಿಂಚಿಂಗ್
ಧಾರಾವಾಹಿಗಳಲ್ಲಿ ವಿಲನ್ ಪಾತ್ರ ಮಾಡುತ್ತಾ ಎಲ್ಲರ ಮನಗೆದ್ದ ನಟಿ ತನಿಷಾ ಕುಪ್ಪಂಡ. ಸಖತ್ ರಗಡ್ ಲುಕ್ ಕೊಡುತ್ತಾ, ಹಾಗೆಯೇ ಮಾತಿನಲ್ಲೂ ಆರ್ಭಟಿಸುತ್ತಾ ಜನಪ್ರಿಯರಾಗಿರುವ ನಟಿಯೀಕೆ. ತನಿಷಾ ಧಾರಾವಾಹಿಗಳಲ್ಲೂ ಕೂಡ ನೋಡುಗರನ್ನೂ ಮತ್ತಷ್ಟು ಕುತೂಹಲಕ್ಕೆ ತಳ್ಳಿ ಬಿಡುತ್ತಿದ್ದರು. 'ಮಂಗಳಗೌರಿ' ಮದುವೆ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ .
ಇತ್ತೀಚಿನ ದಿನಗಳಲ್ಲಿ ತನಿಷಾ ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದರು. ಅಲ್ಲಿಯೂ ಕೂಡ ಬೆಂಕಿ ಅಂತಲೇ ಸಖತ್ ಸದ್ದು ಮಾಡಿದ್ದರು. ನಟಿಯ ನೇರ ನುಡಿಗೆ ಅನೇಕ ಜನರು ಫಿದಾ ಆಗಿದ್ದಾರೆ. ಇದೀಗ ತನಿಷಾ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸಿಂಪಲ್ ಆಗಿ ಸೀರೆಯುಟ್ಟು ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಇವರ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ. ಇತ್ತೀಚಿನ ದಿನಗಳಲ್ಲಿ ತನಿಷಾ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ .

ತನಿಷಾ ಕಪ್ಪು ಬಣ್ಣದ ಸೀರೆಯನ್ನು ಉಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಬ್ಲ್ಯಾಕ್ ಕಲರ್ ಫ್ಯಾನ್ಸಿ ಸೀರೆ ಉಟ್ಟುಕೊಂಡಿದ್ದು, ಹಾಗೆಯೇ ಸಿಲ್ವರ್ ಹಾಗೂ ಬ್ಲ್ಯಾಕ್ ಕಾಂಬಿನೇಷನ್ ನೆಕ್ಲೆಸ್ ಧರಿಸಿದ್ದಾರೆ. ಹಾಗೇ ಸಿಲ್ವರ್ ಬಿಂದಿ ಹಣೆಗಿಟ್ಟುಕೊಂಡು, ರೆಡ್ ನೇಲ್ ಪಾಲಿಶ್ ಹಚ್ಚಿ ತಮ್ಮ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.
ತನಿಷಾ ಕಣ್ಣಿನ ನೋಟಕ್ಕೆ ಫ್ಯಾನ್ಸ್ ಫಿದಾ
ತನಿಷಾ ಈ ಲುಕ್ನಲ್ಲಿ ತುಂಬಾ ಆಕರ್ಷಕವಾಗಿ ಕಾಣಿಸಿದ್ದಾರೆ. ಹಾಗೆಯೇ ತನಿಷಾ ಕಣ್ಣೋಟಕ್ಕೆ ಅಭಿಮಾನಿಗಳು ಕಳೆದೇ ಹೋಗಿದ್ದಾರೆ. ಹಾಗೆಯೇ ತನಿಷಾ ಸಿಂಪಲ್ ಆಗಿ ಸೀರೆಯುಟ್ಟು ಕ್ಯೂಟ್ ಆಗಿ ಕಾಣಿಸುತ್ತಿರುವುದನ್ನು ನೋಡಿ ಅಭಿಮಾನಿಗಳು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ "ಸೋ ಕ್ಯೂಟ್" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾಗೆಯೇ ಸಾಕಷ್ಟು ಲೈಕ್ ಹಾಗೂ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
"ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ ತನಿಷಾ ಯಾವ ಬೆಂಕಿಯು ನಾಶವಾಗುವುದಿಲ್ಲ, ಅದು ಮತ್ತಷ್ಟು ಗಟ್ಟಿಯಾಗುತ್ತದೆ" ಎಂದು ತನಿಷಾ ಅವರು ಫೋಟೋಸ್ಗೆ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಇನ್ನೂ ನಮ್ಮಮ್ಮ ಸೂಪರ್ ಸ್ಟಾರ್‌ನಲ್ಲಿ ನನ್ನ ಕುಕ್ಕಿಂಗ್ ಟ್ಯಾಲೆಂಟ್ ಎಲ್ಲರಿಗೂ ತೋರಿಸಿದ್ದಕ್ಕೆ ಬಹಳ ಥ್ಯಾಂಕ್ಸ್ ಎಂದು ಹೇಳಿಕೊಂಡಿದ್ದಾರೆ. ಈ ಮುದ್ದು ಮೊಗದ ಚೆಲುವೆ ಏನೇ ಕಷ್ಟಗಳು ಬಂದರೂ ಅದೆಲ್ಲವನ್ನೂ ಎದುರಿಸಲು ತನಿಷಾ ಸನ್ನದ್ಧವಾಗಿ ಇರುತ್ತಾರೆ.

ಸ್ಟೈಲಿಶ್ ಫೋಟೋಗೆ ಸಾಕಷ್ಟು ಲೈಕ್
ತನಿಷಾ ಫೋಟೋಗೆ ಸಾಕಷ್ಟು ಕಾಮೆಂಟ್‌ಗಳು ಹರಿದು ಬರುತ್ತಿದೆ. ಮುದ್ದು ಮೊಗದ ಸುಂದರಿ ಹಾಗೆಯೇ ಸ್ಟೈಲಿಶ್ ಎಂದೆಲ್ಲ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ತನಿಷಾ, ತಾರಾ ಹಾಗೂ ಅನುಪ್ರಭಾಕರ್ ಅವರ ಜೊತೆಗಿನ ಫೋಟೋ ಅಪ್ಲೋಡ್ ಮಾಡಿದ್ದಾರೆ. ಹಾಗೆಯೇ "ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಖುಷಿ ಆಗಿದೆ: ಎಂದು ಬರೆದುಕೊಂಡಿದ್ದಾರೆ.
ತಾರಮ್ಮನ ಜೊತೆ ಫೋಟೋ ತೆಗೆಸಿಕೊಂಡ ನಟಿ
ಈ ಫೋಟೋಗಳಿಗಂತು ಬಹಳ ಲೈಕ್ ಕೂಡ ಬಂದಿದ್ದು ಅಭಿಮಾನಿಗಳು ಫೋಟೋ ನೋಡಿ ಮೆಚ್ಚಿಕೊಂಡಿದ್ದಾರೆ. ಏನೇ ಇರಲಿ ತನಿಷಾ ಅವರು ತೊಟ್ಟಿರುವ ಸಿಂಪಲ್ ಸೀರೆ ಆಕೆಗೆ ಬಹಳ ಅದ್ಭುತವಾಗಿ ಕಾಣಿಸುತ್ತ ಇದ್ದಿದ್ದು ಮಾತ್ರ ಸತ್ಯ. ಹಾಗೆಯೇ ಸಾಕಷ್ಟು ಕಾಮೆಂಟ್‌ಗಳು ಬರುತ್ತಿದ್ದು, ನೆಚ್ಚಿನ ನಟಿಯ ಮುಂದಿನ ಉಜ್ವಲ ಜೀವನಕ್ಕಾಗಿ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.


Click it and Unblock the Notifications











