BBK10:ಅಭಿಮಾನಿ ಎದೆ ಮೇಲೆ ವರ್ತೂರು ಸಂತೋಷ್ ಟ್ಯಾಟೂ; ಫೇಕ್..ಫೇಕ್ ಎಂದಿದ್ದೇಕೆ ನೆಟ್ಟಿಗರು?
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿ ವರ್ತೂರು ಸಂತೋಷ್‌ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದಾರೆ. ಹಳ್ಳಿಕಾರ್ ತಳಿಗಳನ್ನು ಸಾಕುವ ಮೂಲಕ ಫೇಮಸ್ ಆದವರು ವರ್ತೂರು ಸಂತೋಷ್. ಈ ಖ್ಯಾತಿಯಿಂದಾನೇ ಬಿಗ್ ಬಾಸ್‌ಗೂ ಎಂಟ್ರಿ ಪಡೆದಿದ್ದರು. ಅಸಮರ್ಥರಾಗಿ ಬಂದು, ಇಂದು ಸಮರ್ಥರಂತೆ ಗುರುತಿಸಿಕೊಂಡಿದ್ದಾರೆ. ಫಿನಾಲೆಗೂ ಎಂಟ್ರಿ ಕೊಡಬಹುದಾ? ಅನ್ನೋ ಕುತೂಹಲವಿದೆ.
ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ವರ್ತೂರು ಸಂತೋಷ್‌ಗೆ ನಿರೀಕ್ಷೆಯೇ ಮಾಡದಷ್ಟು ವೋಟ್‌ಗಳು ಬರುತ್ತಿವೆ. ಮನೆಯಲ್ಲಿ ಇರುವುದಕ್ಕೆ ನನ್ನಿಂದ ಸಾಧ್ಯವಿಲ್ಲ ಎಂದು ವರ್ತೂರು ಸಂತೋಷ್ ಹಠ ಮಾಡುತ್ತಿದ್ದಾಗ ಎಷ್ಟು ಲಕ್ಷ ಜನ ನಿಮಗೆ ಸಪೋರ್ಟ್ ಮಾಡುತ್ತಿದ್ದಾರೆಂದು ತಿಳಿ ಹೇಳಿದ್ದರು. ಈಗಾಗಲೇ, ತೆರೆಮೇಲೆ ಗುರುತಿಸಿಕೊಂಡಿದ್ದವರೇ ವರ್ತೂರು ಸಂತೋಷ್‌ಗೆ ಬಂದಿದ್ದ ವೋಟ್‌ಗಳನ್ನು ಕೇಳಿ ಶಾಕ್ ಆಗಿದ್ದರು.

ವರ್ತೂರು ಸಂತೋಷ್ ಟ್ಯಾಟೂ ಕ್ರೇಜ್
ತಮಗಿಷ್ಟವಾದವರ ಫೋಟೊಗಳನ್ನು ಟ್ಯಾಟೂ ಹಾಕಿಸಿಕೊಳ್ಳುವುದು ಕ್ರೇಜ್. ಅದರಲ್ಲೂ ವರ್ತೂರು ಸಂತೋಷ್ ಬಗ್ಗೆ ಕ್ರೇಜ್ ಏನು ಕಡಿಮೆ ಇಲ್ಲ. ಬಿಗ್ ಬಾಸ್‌ನಲ್ಲಿರುವ ಕಲಾವಿದರಿಗಿಂತ ಹೆಚ್ಚು ಕ್ರೇಜ್ ಇರುವುದು ವರ್ತೂರು ಸಂತೋಷ್ ಅವರಿಗೇನೆ. ಸೋಷಿಯಲ್ ಮೀಡಿಯಾ ಓಪನ್ ಮಾಡಿದರೇನೆ ವರ್ತೂರು ಸಂತೋಷ್‌ಗೆ ಬೆಂಬಲ ನೀಡುತ್ತಿರುವ ಪೋಸ್ಟ್‌ಗಳು ಕಾಣಿಸುತ್ತವೆ. ಈಗ ವರ್ತೂರು ಸಂತೋಷ್ ಟ್ಯಾಟು ಸದ್ದು ಮಾಡುತ್ತಿದೆ.
ಫೇಕ್.. ಫೇಕ್ ಎಂದು ಕಮೆಂಟ್ ಯಾಕೆ?
ವರ್ತೂರು ಸಂತೋಷ್ ಫ್ಯಾನ್ ಪೇಜ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಅಭಿಮಾನಿಯೊಬ್ಬನ ಎದೆ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದು. ಈ ವಿಡಿಯೋ ಈಗಾಗಲೇ 3 ಮಿಲಿಯನ್ ಓಡಿದೆ. ಆ ವಿಡಿಯೋ ಕಮೆಂಟ್ಸ್ ಸುರಿಮಳೆಯು ಸುರಿದಿದೆ. ಅಭಿಮಾನಿಗಳ ಪೇಜ್ ಆಗಿರುವ ಕಾರಣ, ವರ್ತೂರು ಸಂತೋಷ್ ಅಣ್ಣನಿಗೆ ಜೈ ಎನ್ನಿರೋ ಅಂತೆಲ್ಲಾ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಅದರ ಜೊತೆಗೆ ಇದು ಫೇಕ್ ವಿಡಿಯೋ ಎಂದೇ ಕಮೆಂಟ್ ಹಾಕುತ್ತಿರುವವರು ಹೆಚ್ಚು.
ಫೇಕ್ ಎನಿಸಿದ್ದು ಯಾಕೆ..?
ಈ ವಿಡಿಯೋಗೆ ಹೆಚ್ಚಾಗಿ ಬಂದಿರುವುದು ಫೇಕ್ ಎಂಬ ಕಮೆಂಟ್‌ಗಳು. ಬಳಿಕ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆ ವಿಡಿಯೋ ಖಂಡಿತ ಫೇಕ್ ಎಂಬುದು ಗೊತ್ತಾಗುತ್ತಿದೆ. ವಿಡಿಯೋ ಆರಂಭದಲ್ಲಿ ಚಿತ್ರದ ಮುಖ ಬೇರೆ ಕಡೆಗೆ ಇದೆ. ಟ್ಯಾಟೂ ಶೋ ಮಾಡುವ ಸಂದರ್ಭದಲ್ಲಿ ಮೇಲಿದ್ದ ಟ್ಯಾಟೂ ತೀರಾ ಕೆಳಗಡೆ ಇದ್ದಂತೆ ಕಾಣುತ್ತಿದೆ. ಇದೆಲ್ಲದರಿಂದ ಈ ವಿಡಿಯೋ ಫೇಕ್ ಎಂಬುದು ನೆಟ್ಟಿಗರ ವಾದ. ಈ ಸಣ್ಣ ಸಣ್ಣ ವಿಚಾರಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಅಭಿಮಾನಿಗಳು ಇದೊಂದು ಫೇಕ್ ವಿಡಿಯೋ ಎಂದೇ ಕಮೆಂಟ್ ಹಾಕುತ್ತಿದ್ದಾರೆ.
ವರ್ತೂರು ಸಂತೋಷ್ ಗೆಲುವಿಗೆ ಫ್ಯಾನ್ಸ್ ಬೆಂಬಲ
ವರ್ತೂರು ಸಂತೋಷ್ ಮೊದಲಿಂದ ಹೇಗಿದ್ದಾರೋ ವ್ಯಕ್ತಿತ್ವ ಹಾಗೆ ಇದೆ. ಟಾಸ್ಕ್‌ಗಳಲ್ಲೂ ಅಷ್ಟೇ, ಆಡುವುದಕ್ಕೆ ನಿಂತರೆ ಅದ್ಭುತವಾದ ರಿಸಲ್ಟ್ ನೀಡುತ್ತಾರೆ. ಮನೆಯಲ್ಲಿ ಇಷ್ಟವಾಗದೆ ಇದ್ದಾಗ ಅದನ್ನು ನೇರವಾಗಿಯೇ ಹೇಳುತ್ತಾರೆ. ಬೆಂಕಿ ಮೇಲೆ ಲೈಟಾಗಿ ಕ್ರಶ್ ಆಗಿದೆ ಎಂಬುದನ್ನು ವರ್ತೂರು ಸಂತೋಷ್ ಒಪ್ಪಿಕೊಂಡಿದ್ದರು. ಆದರೆ, ಬೆಂಕಿ ತನಿಷಾ ತಪ್ಪು ಮಾಡುತ್ತಿರುವುದು ವರ್ತೂರು ಸಂತೋಷ್ ಗಮನಕ್ಕೆ ಬಂದ ನಂತರ, ಅದನ್ನು ತುಕಾಲಿ ಬಳಿ ನೇರವಾಗಿಯೇ ಹೇಳಿದರು. ಅವರ ನೇರ ನಡೆ-ನುಡಿಗೆ ಹೆಚ್ಚೆಚ್ಚು ವೋಟ್‌ಗಳು ಬರುತ್ತಿವೆ.


Click it and Unblock the Notifications











