BBK10: ವಿನಯ್ ಸಿಗದೇ ಇದ್ದಿದ್ರೆ ದೀಕ್ಷೆ ಪಡೆಯುತ್ತಿದ್ರಂತೆ ಅಕ್ಷತಾ; ಬಿಗ್ ಬಾಸ್ ಸ್ಪರ್ಧಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ವಿನಯ್ ಅಂದರೆ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಹೋಗಿದ್ದಾರೆ. ಎದುರಾಳಿಯಾಗಿ ಕಾರ್ತಿಕ್ ಇದ್ದರು ಕೂಡ, ಆ ಗತ್ತು, ಗಾಂಭೀರ್ಯ ವಿನಯ್ ಅವರಂತೆ ಬರುವುದಿಲ್ಲ. ಹಾಗಂತ ವಿನಯ್ ಸ್ವಾರ್ಥದ ಆಟ ಆಡುವುದಿಲ್ಲ. ತಮಗೆ ಇಷ್ಟವಾದವರನ್ನು ಪುಶ್ ಮಾಡುವ ಪ್ರಯತ್ನವನ್ನು ಮಾಡುತ್ತಾರೆ. ಅದಕ್ಕೆ ಉದಾಹರಣೆ ಸ್ನೇಹಿತ್‌ಗೆ ನೀಡಿದ ಸಪೋರ್ಟ್, ವರ್ತೂರು ಸಂತೋಷ್‌ರನ್ನು ಕ್ಯಾಪ್ಟನ್ ಮಾಡಿದ್ದು.

ವಿನಯ್ ಕಡೆಯಿಂದಾನೂ ಒಂದಷ್ಟು ತಪ್ಪುಗಳು ನಡೆದಿವೆ. ಕೆಲವೊಮ್ಮೆ ಅಗ್ರೆಸ್ಸಿವ್ ಆಟಗಳು ಕಂಡಿವೆ. ಆದರೂ ತನ್ನನ್ನು ಎಲ್ಲಿಯೂ ಕಡಿಮೆ ಮಾಡಿಕೊಂಡಿಲ್ಲ. ತಾನು ಇರುವುದೇ ಹಾಗೇ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಅಷ್ಟು ಅಗ್ರೆಸ್ಸಿವ್ ಆಗಿ ಆಡುವ, ತೆರೆಮೇಲೆ ವಿಲನ್ ಲುಕ್ ಕೊಡುವ ವಿನಯ್ ಜೀವನದಲ್ಲಿ ಸುಂದರವಾದ ಪ್ರೇಮಕಥೆಯೊಂದು ಇದೆ.

Bigg Boss Kannada Season 10 contestant Vinay and akshatha love story

ವಿನಯ್ -ಅಕ್ಷತಾ ಲವ್ ಸ್ಟೋರಿ

ಬಿಗ್ ಬಾಸ್ ಸ್ಪರ್ಧಿ ವಿನಯ್ ಲವ್ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್. ಆ ಬಗ್ಗೆ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ಮದುವೆ ಸ್ಟೋರಿ ಹೇಳಬೇಕು ಎಂದರೆ ಐದು ಎಪಿಸೋಡ್ ಬೇಕಾಗುತ್ತದೆ. ಆದರೆ ಇದೊಂದು ಫೋಟೋ ನೋಡಿದರೆ ಒಂದು ಎಪಿಸೋಡಿಗೆ ಕಥೆ ಮುಗಿಸಬಹುದು. ಇದು 10 ವರ್ಷ ಒಳಗಿನ ವಯಸ್ಸಿನ ಫೋಟೋ ಇದು. ನಾನು ನನ್ನ ಹೆಂಡತಿ. ಇವರು ನಮ್ಮ ಅತ್ತೆ ಮಗಳೇನೆ. ನಮ್ಮದು 25 ವರ್ಷದ ಲವ್ ಸ್ಟೋರಿ. ಸೂಪರ್ ಜೋಡಿ ಮಾಡಿದಾಗ ಒಂದು ವಿಡಿಯೋ ಮಾಡಿದ್ದರು‌. ನಾವೂ ಚಿಕ್ಕ ಚಿಕ್ಕವರಿದ್ದಾಗಿನ ವಿಡಿಯೋ ಎಲ್ಲಾ ಅದರಲ್ಲಿ ಇತ್ತು." ಎಂದು ವಿನಯ್ ಹೇಳಿಕೊಂಡಿದ್ದರು.

ಇಬ್ಬರ ಲವ್ ಸ್ಟೋರಿ ಗ್ಯಾಪ್ ಆಗಿದ್ದು ಯಾಕೆ..?

"ನಮ್ಮ ಅಂಕಲ್ ಮದುವೆಯಲ್ಲಿ ಗಂಡು ಹೆಣ್ಣು ತೋರಿಸಿದ್ದಕ್ಕಿಂತ ಹೆಚ್ಚು ನಮ್ಮ ವಿಡಿಯೋ ತೋರಿಸಿರುವುದೇ ಹೆಚ್ಚು. ಗಂಡು ಹೆಣ್ಣು ಕಾರು ಹತ್ತಿ ಹೋದರೆ, ಕ್ಯಾಮರಾ ಪ್ಯಾನ್ ಮಾಡಿದರೆ ಇವಳ ಕೈಹಿಡಿದುಕೊಂಡು ನಾನು ಹೋಗುತ್ತಿದ್ದೆ. ನಮ್ಮ ಪೋಷಕರು ಆ ವಿಡಿಯೋ ತೋರಿಸಿ ಯಾವಾಗಲೂ ರೇಗಿಸುತ್ತಾ ಇರುತ್ತಾರೆ. ಅಲ್ಲಿಂದ ನಮ್ಮಿಬ್ಬರ ಲವ್ ಸ್ಟೋರಿ ಆರಂಭವಾಯಿತು. ಆದರೆ, ಮಧ್ಯದಲ್ಲಿ ಸ್ವಲ್ಪ ಗ್ಯಾಪ್ ಆಗಿತ್ತು. ಯಾಕಂದ್ರೆ ಅವರಿದ್ದಿದ್ದು ಚಿಕ್ಕಮಗಳೂರು. ನಾವು ಇದ್ದದ್ದು ಬೆಂಗಳೂರಿನಲ್ಲಿ. ರಜೆ ಬಂತು ಅಂದರೆ ಇವಳನ್ನು ನೋಡುವುದಕ್ಕೆ ಚಿಕ್ಕಮಗಳೂರಿಗೆ ಓಡುತ್ತಿದ್ದೆ" ಎಂದು ವಿನಯ್ ಹೇಳಿಕೊಂಡಿದ್ದರು.

Bigg Boss Kannada Season 10 contestant Vinay and akshatha love story

ಮನೆಯ ಕಿರಿಕಿರಿಯಿಂದ ಮುಂಬೈ ಸೇರಿದ್ದ ವಿನಯ್

"2000ನಲ್ಲಿ ಮನೆ ಬಿಟ್ಟು ಮುಂಬೈ ಸೇರಿದ್ದೆ. ಸ್ವಲ್ಪ ಭಿನ್ನಾಭಿಪ್ರಾಯ ಇತ್ತು. ಆಮೇಲೆ ಯಾರ ಟೆನ್ಶನ್ ಇರಲಿಲ್ಲ. ಮತ್ತೆ ಐದು ವರ್ಷ ಬಿಟ್ಟು ಬೆಂಗಳೂರಿಗೆ ಬಂದೆ. ಇವಳನ್ನ ಹೇಗೆ ಸಂಪರ್ಕ ಮಾಡಬೇಕು ಗೊತ್ತಿಲ್ಲ. ಮದುವೆ ಆಗಿದ್ಯಾ ಇಲ್ವಾ, ಕಾಯ್ತಾ ಇದಾಳ ಇಲ್ವಾ ಏನು ಗೊತ್ತಿರಲಿಲ್ಲ. ಅವಳ ಅಕ್ಕನ ನಂಬರ್ ತೆಗದುಕೊಂಡು ಕಾಲ್ ಮಾಡಿದ್ದೆ. ಅವಳು ನನಗಾಗಿ ಕಾಯ್ತಾ ಇದ್ದಳು" ಎಂದು ಹೇಳಿದ್ದಾರೆ.

ದೀಕ್ಷೆ ಪಡೆಯಲು ಹೊರಟಿದ್ದ ಅಕ್ಷತಾ

"ಮದುವೆ ಆದರೆ ನನ್ನೇ ಆಗೋದು ಅಂತ ಹಠ ಮಾಡಿದ್ದೆ. ಹೇಳಬೇಕು ಅಂದರೆ ದೀಕ್ಷೆ ತೆಗೆದುಕೊಳ್ಳುವುದಕ್ಕೆ ಹೊರಟಿದ್ದೆ. ಎರಡು ಸಲ ದೀಕ್ಷೆ ತೆಗೆದುಕೊಳ್ಳುವುದಕ್ಕೆ ಹೋಗಿದ್ದೆ. ಅಲ್ಲಿ ನಿಮಗಿನ್ನು ಸಮಯ ಕೂಡಿ ಬಂದಿಲ್ಲ ಅಂತ ವಾಪಾಸ್ ಕಳುಹಿಸಿದ್ದರು. ಮೂರನೇ ಬಾರಿಗೆ ಇವರೇ ಸಿಕ್ಕಿದರು. ಆಗ ಫುಲ್ ದೀಕ್ಷೆ ತೆಗೆದುಕೊಂಡೆ" ಅಂತ ತಮ್ಮ ಲವ್ ಸ್ಟೋರಿ ಶುರುವಾಗಿದ್ದು ಬಗ್ಗೆ ವಿನಯ್ ಹಾಗೂ ಅಕ್ಷತಾ ಮನಬಿಚ್ಚಿ ಮಾತನಾಡಿದ್ದಾರೆ.

More from Filmibeat

English summary
BBK 10 Vinay and Akshatha love story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X