BBK10: ಗಂಡನ ಖಾಲಿ ಸೀಟು ಕಂಡು ಕಣ್ಣೀರು ಹಾಕಿದ ಅಕ್ಷತಾ; ಕಾಂಪಿಟೇಟರ್ ಆದ್ರೂ ಪ್ರತಾಪ್ ಶಾಕ್!

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 10 ಶೋಗೆ ತೆರೆ ಬಿದ್ದಿದೆ. ಈ ಬಾರಿ ವಿನ್ ಆಗುವುದು ಯಾರು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಯಾಕಂದರೆ, ಈ ಬಾರಿಯ ಅದೆಷ್ಟೋ ಊಹೆಗಳು ತಪ್ಪಾಗಿದೆ. ಹೀಗಾಗಿ ಕೊನೆಯ ತನಕ ಫಿನಾಲೆಯನ್ನು ಕುತೂಹಲದಿಂದ ಕಾದಿದ್ದಾರೆ.

ಆರಂಭದಿಂದ ವಿನಯ್, ಕಾರ್ತಿಕ್, ಸಂಗೀತಾ ನಡುವೆ ಟಫ್ ಕಾಂಪಿಟೇಷನ್ ಇತ್ತು. ಇದರ ಜೊತೆಗೆ ಫಿನಾಲೆಗೆ ತಲುಪುವುದಕ್ಕೆ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಅರ್ಹತೆ ಪಡೆದುಕೊಂಡಿದ್ದರು. ಆದರೆ, ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸ್ಟ್ರಾಂಗ್ ಆಗಿ ಗುರುತಿಸಿಕೊಂಡಿದ್ದು ಮಾತ್ರ ವಿನಯ್ ಗೌಡ. ಸುದೀಪ್ ಅವರ ಒಂದು ಕೈ ವಿನಯ್ ಅವರದ್ದು ಕೂಡ ಆಗಿರುತ್ತೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈಗ ಅದೆಲ್ಲವೂ ಉಲ್ಟಾ ಆಗಿದೆ. ಅಕ್ಷರಶಃ ಪ್ರತಾಪ್ ಕೂಡ ಶಾಕ್ ಆಗಿದ್ದಾರೆ.

Bigg Boss Kannada Season 10 contestant Vinays wife became emotional

ತಿರುಗಿಸುವ ಆಟದಲ್ಲಿ ಟ್ವಿಸ್ಟ್

ಬಿಗ್ ಬಾಸ್ ಫಿನಾಲೆಗೆ ನಾಲ್ಕು ಜನ ಇದ್ದರು. ವಿನಯ್, ಸಂಗೀತಾ, ಕಾರ್ತಿಕ್, ಪ್ರತಾಪ್ ಇದ್ದರು. ಈಗ ಒಬ್ಬರು ಹೊರಗೆ ಹೋಗಬೇಕು. ಯಾರು ಹೋಗ್ತಾರೆ ಎಂಬ ಪ್ರಶ್ನೆ ಬಂದಾಗ ಕಾರ್ತಿಕ್ ಹಾಗೂ ಪ್ರತಾಪ್ ಹೆಸರನ್ನೇ ಹೇಳಿದ್ದರು ಮಾಜಿ ಸ್ಪರ್ಧಿಗಳು. ಬಿಗ್ ಬಾಸ್ ಒಂದು ಟಾಸ್ಕ್ ನೀಡಿತ್ತು. ಉಳಿದ ನಾಲ್ಕು ಜನ ತಿರುಗುವ ಕುರ್ಚಿಯಲ್ಲಿ ಕೂರಬೇಕಿತ್ತು. ಯಾರು ಕಾಣೆಯಾಗುತ್ತಾರೆ, ಅವರ ಜರ್ನಿ ಮುಗಿದಂತೆಯೇ ಸರಿ. ಆದರೆ, ಸಂಗೀತಾ, ಪ್ರತಾಪ್ ಅವರು ಆರಂಭದಲ್ಲಿ ನಾಪತ್ತೆಯಾಗಿದ್ದರು. ಮತ್ತೆ ಪ್ರತ್ಯಕ್ಷರಾದರು. ವಿನಯ್ ಕೂಡ ಅದೇ ರೀತಿ ನಾಪತ್ತೆಯಾದಾಗ, ಮತ್ತೆ ಬರಬಹುದು ಎಂಬ ಊಹೆ ಇತ್ತು. ಆದರೆ ಅದು ಸುಳ್ಳಾಗಿತ್ತು.

ಗಂಡ ಔಟ್ ಆಗಿದ್ದಕ್ಕೆ ಅಕ್ಷತಾ ಕಣ್ಣೀರು

ವಿನಯ್ ಆಟ, ಟಾಸ್ಕ್‌ಗಳಲ್ಲಿ ಎಲ್ಲಿಯೂ ಬಿಡದಂತೆ ಗೆಲ್ಲುತ್ತಿದ್ದ ರೀತಿಗೆ ವಿನಯ್ ಅವರ ಮನೆಯವರಿಗೆ ಸಾಕಷ್ಟು ಹೋಪ್ ಇತ್ತು. ಫಿನಾಲೆಯಲ್ಲಿ ಸುದೀಪ್ ಅವರ ಒಂದು ಕೈ ವಿನಯ್ ಅವರದ್ದೇ ಆಗಿರುತ್ತದೆ ಎಂದು ಅವರ ಮನೆಯವರು ನಂಬಿದ್ದರು. ಅಷ್ಟೇ ಯಾಕೆ ಅವರ ಹೆಂಡತಿಗೆ ಸಾಕಷ್ಟು ವಿಶ್ವಾಸವಿತ್ತು. ಆದರೆ, ಅದ್ಯಾವಾಗ ತಿರುಗುವ ಖುರ್ಚಿಯಲ್ಲಿ ವಿನಯ್ ಕಾಣದೆ ಇದ್ದಾಗ ಅಕ್ಷತಾ ಕಣ್ಣಲ್ಲಿ ನೀರು ತುಂಬಿತ್ತು.

Bigg Boss Kannada Season 10 contestant Vinays wife became emotional

ನಮ್ರತಾ, ಇಶಾನಿ ಶಾಕ್

ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ವಿನಯ್ ಅವರು ಒಂದು ತಂಡವನ್ನೇ ಕಟ್ಟಿಕೊಂಡಿದ್ದರು. ಆ ತಂಡದಲ್ಲಿ ಇಶಾನಿ, ಮೈಕಲ್, ರಕ್ಷಕ್, ಸ್ನೇಹಿತ್, ನಮ್ರತಾ ಇದ್ದರು. ಎಲ್ಲರೂ ಒಬ್ಬೊಬ್ಬರಾಗಿಯೇ ಔಟ್ ಆಗುತ್ತಿದ್ದರು. ಆದರೂ, ಇವರೆಲ್ಲರೂ ವಿನಯ್ ಅವರಿಗೆ ಬೆಂಬಲ ನೀಡಿದ್ದರು. ವಿನಯ್ ಗೆಲ್ಲಲಿ ಎಂದೇ ಹಾರೈಸುತ್ತಿದ್ದರು. ಇದೀಗ ಆ ತಂಡದಿಂದ ಆನೆ ಎಂದು ಘರ್ಜಿಸಿದ್ದ ವಿನಯ್ ಕೂಡ ಔಟ್ ಆಗಿದ್ದಾರೆ. ಇದು ಇಡೀ ತಂಡಕ್ಕೆ ಶಾಕ್ ಆಗಿದೆ.

ಔಟ್ ಆಗಿದ್ದಕ್ಕೆ ಶಾಕ್ ಆದ ವಿನಯ್

ವಿನಯ್ ಪತ್ನಿ ಅಕ್ಷತಾ ಈ ಸನ್ನಿವೇಶ ಕಂಡು ಕಣ್ಣೀರಾಕಿದ್ದರು. ಮಗ ಕೂಡ ನೋವು ಪಟ್ಟುಕೊಂಡಿದ್ದ. ಆರಂಭದಿಂದಾನೂ ಎಲ್ಲಿಯೂ ವಿನಯ್ ಗ್ರಾಫ್ ಕಡಿಮೆಯಾಗಲಿಲ್ಲ ಎಂಬುದು ಅಕ್ಷತಾ ಅವರ ಅಭಿಪ್ರಾಯವಾಗಿತ್ತು. ಆದರೆ, ವಿನಯ್ ಹೊರ ಬಂದಿದ್ದು ಮಾತ್ರ ಶಾಕ್ ಆಗಿತ್ತು. ವಿನಯ್ ಕೂಡ ಸುದೀಪ್ ಅವರ ಬಳಿ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಾನು ಇಷ್ಟು ಬೇಗ ಹೊರಗೆ ಬರುತ್ತೀನಿ ಎಂದುಕೊಂಡಿರಲಿಲ್ಲ ಎಂದಿದ್ದಾರೆ. ಜೊತೆಗೆ ಪ್ರತಾಪ್ ಬಗ್ಗೆ ಕೂಡ ಬಿಗ್ ಬಾಸ್ ಗೆ ಬರುವಂತ ಕ್ಯಾರೆಕ್ಟರ್ ಆಗಿರಲಿಲ್ಲ ಎಂಬಂತೆ ಹೇಳಿದ್ದಾರೆ.

More from Filmibeat

English summary
BBK 10 Vinay wife emotional
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X