BBK10: ಮನೆ ಮಂದಿ ಬೇಜಾರಲ್ಲಿರೋದು ಯಾಕೆ? ಚಿಲ್ ಮಾಡ್ತಾರಾ ಬಿಗ್ ಬಾಸ್?

By ಎಸ್ ಸುಮಂತ್

ಬಿಗ್ ಬಾಸ್ ಮುಕ್ತಾಯದ ಹಂತ ಸನಿಹವಾಗುತ್ತಿದ್ದಂತೆ, ಸ್ಪರ್ಧಿಗಳ ಬೇಸರವೂ ಹೆಚ್ಚಾಗುತ್ತಿದೆ. ಸದಾ ಆಕ್ಟೀವ್ ಆಗಿರುವಂತ ಮಂದಿ ಏನು ಮಾಡಬೇಕೆಂದು ತೋಚದೆ ಅಲ್ಲೊಮ್ಮೆ, ಇಲ್ಲೊಮ್ಮೆ ಕುಳಿತುಕೊಳ್ಳುವಂತೆ ಆಗುತ್ತಿದೆ. ಮನಸ್ಸಿಲ್ಲದ‌ ಮನಸ್ಸಿನಲ್ಲಿ ಸಮಯ ಕಳೆಯುತ್ತಿದ್ದಾರೆ.

ಮೊದಲೇ ಇತ್ತೀಚೆಗೆ ಮನೆಯವರೆಲ್ಲ ಬಂದು ಹೋಗಿದ್ದರು. ಮನೆಯವರನ್ನು ನೋಡದೆ ಇದ್ದಾಗ ಆ ಒಂದು ತುಡಿತ ಹೆಚ್ಚಾಗಿ ಇತ್ತು. ಆದರೆ, ಮನೆಯವರೆಲ್ಲ ಬಂದು ಹೋದ ಮೇಲೆ, ಅವರೊಟ್ಟಿಗೆ ಸಂತಸದ ಸಮಯವನ್ನು ಕಳೆದ ಮೇಲೆ, ಸ್ಪರ್ಧಿಗಳು ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಈಗ ಮನೆಯವರನ್ನೆಲ್ಲಾ ಚಿಯರ್ ಅಪ್ ಮಾಡುವುದಕ್ಕೆ ಬಿಗ್ ಬಾಸ್ ಯಾವ ಟಾಸ್ಕ್ ನೀಡುತ್ತೆ ಎಂಬುದನ್ನು ನೋಡಬೇಕಿದೆ.

Bigg Boss Kannada Season 10 contestants are struggling for time

ಟಾಸ್ಕ್‌ಗಳಿಲ್ಲದೆ ಬೇಸತ್ತಿದ ಮನೆ ಮಂದಿ

ಬಿಗ್ ಬಾಸ್ ಮನೆಯಲ್ಲಿ ಶಾಂತ ವಾತಾವರಣ ಸಿಗುವುದೇ ಅಪರೂಪಕ್ಕೆ ಒಮ್ಮೆ. ಟಾಸ್ಕ್ ಅಂತ ಬಂದ ಕೂಡಲೇ ಯುದ್ದಕ್ಕೆ ಖಡ್ಗ, ಗುರಾಣಿ ತೆಗೆದುಕೊಂಡು ಹೊರಟು ಬಿಡುತ್ತಾರೆ. ಆರಂಭದಿಂದ ಬಿಗ್ ಬಾಸ್ ಸ್ಪರ್ಧಿಗಳು ನಡೆದು ಬಂದ ದಾರಿಯನ್ನು ನೋಡಿದರೆ ಜಗಳಗಳೇ ಜಾಸ್ತಿ. ಯುದ್ಧಕ್ಕೆ ನಿಂತಿರುವುದೇ ಜಾಸ್ತಿ. ಟಾಸ್ಕ್‌ಗಳು ಇಲ್ಲದೆ ಹೋದರೆ ಎಲ್ಲರೂ ಶಾಂತ ಸ್ವಭಾವಿಗಳಾಗಿ ಬಿಡುತ್ತಾರೆ.

ನಮ್ರತಾ ಮಾತಿಗೆ ಸೊಪ್ಪು ಹಾಕದ ಸಂಗೀತಾ..!

ಬಿಗ್ ಬಾಸ್ ಆರಂಭದಿಂದಲೂ ವಿನಯ್ ಹಾಗೂ ಸಂಗೀತಾ ನಡುವೆ ಜಗಳ ತಾರಕಕ್ಕೆ ಏರುತ್ತಲೆ ಇರುತ್ತದೆ‌. ಆದರೆ ಒಮ್ಮೆ ಕಾರ್ತಿಕ್ ಜೊತೆಗೆ ಮನ:ಸ್ತಾಪವಾದಾಗ ಮಾತ್ರ ವಿನಯ್ ಟೀಂ ಜೊತೆಗೆ ಬಂದಿದ್ದರು ಸಂಗೀತಾ. ಆಗ ನಮ್ರತಾ ಮಾತನ್ನು ಚೆನ್ನಾಗಿಯೇ ಕೇಳುತ್ತಿದ್ದರು. ಈಗ ಮತ್ತೆ ವಿನಯ್ ತಂಡ ಸೇರಿದ್ದಾರೆ. ಸಂಪೂರ್ಣವಾಗಿ ಅಲ್ಲ, ತ‌ನಿಷಾ ಹಾಗೂ ಕಾರ್ತಿಕ್ ನಿಂದ ದೂರವಾಗಿ ವಿನಯ್ ಅಂಡ್ ಇರುವ ಕಡೆಗೆ ಬಂದು ಕುಳಿತುಕೊಳ್ಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಮ್ರತಾ ಮಾತಿಗೆ ಸೊಪ್ಪು ಹಾಕುವುದಿಲ್ಲ.

Bigg Boss Kannada Season 10 contestants are struggling for time

ರೇಗಿಸಿಕೊಂಡು ಕಾಲ ಕಳೆಯುತ್ತಿರುವ ಸದಸ್ಯರು

ಮನೆಯಲ್ಲಿ ಇಂದು ಕಂಡಿದ್ದು ಬರೀ ಟೈಂ ಪಾಸ್ ನಡೆಗಳೆ. ಅಲ್ಲಿ ಇಲ್ಲಿ ಕುಳಿತ ಸ್ಪರ್ಧಿಗಳು ಹರಟೆ ಮಾತುಗಳನ್ನೇ ಆಡುತ್ತಿದ್ದಾರೆ. ಮೊದಲೇ ಸಂಗೀತಾ ಹಾಗೂ ತುಕಾಲಿ ನಡುವೆ ಬಾಂಧವ್ಯ ಸರಿ ಇಲ್ಲ. ಇವತ್ತು ತುಕಾಲಿ, ಸಂಗೀತಾ ಅವರನ್ನು ಇಮಿಟೇಟ್ ಮಾಡಿದ್ದಾರೆ. ಎಲ್ಲರನ್ನು ನಕ್ಕು ನಲಿಸಿದ್ದಾರೆ. ಬಳಿಕ ಬಾಲ್ಕನಿಯಲ್ಲಿ ಕುಳಿತ ವಿನಯ್ ಅಂಡ್ ಟೀಂ ಎಲ್ಲರೂ ಒಬ್ಬಿಬ್ಬರಾಗಿಯೇ ಬಂದು, ಅದ್ಯಾಕೋ ಇವತ್ತು ಎಲ್ಲೋ ಒಂದು ಕಡೆ ಬೇಸರವಾಗುತ್ತಿದೆ ಎಂದೇ ಹೇಳಿದ್ದಾರೆ. ಸಂಗೀತಾ, ನಮ್ರತಾ, ವಿನಯ್, ತುಕಾಲಿ ಬಾಯಲ್ಲಿ ಈ ಪದ ಬಂದಿದೆ.

25 ಲಕ್ಷಕ್ಕೆ ಬಿಗ್ ಬಾಸ್ ಟಾಸ್ಕ್ ಏನು..?

ಬಿಗ್ ಬಾಸ್ ಸೀಸನ್‌ನಲ್ಲಿ ಗೆದ್ದವರಿಗೆ ಕೊನೆಯಲ್ಲಿ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಆದರೆ, ಈ ಬಾರಿ 50 ಲಕ್ಷ ಹಣದಲ್ಲಿ ನಡೆದುಕೊಂಡ ರೀತಿಗೆ 25 ಲಕ್ಷ ಹಣ ಕಳೆದುಕೊಂಡಿದ್ದಾರೆ. ಮತ್ತೆ ಆ ಹಣ ಪಡೆದುಕೊಳ್ಳಬೇಕು ಎಂದರೆ ಬಿಗ್ ಬಾಸ್ ನೀಡುವ ಟಾಸ್ಕ್‌ಗಳಲ್ಲಿ ಗೆಲ್ಲಬೇಕಾಗಿದೆ. ಆದರೆ, ಇನ್ನು ಕೂಡ ಬಿಗ್ ಬಾಸ್ ಮನೆ ಮಂದಿಯಲ್ಲಿ ಆ ಸೀರಿಯಸ್ ನೆಸ್ ಕಂಡಿಲ್ಲ. ಕೊಟ್ಟ ಒಂದು ಟಾಸ್ಕ್‌ನಲ್ಲಿ ಅದಾಗಲೇ ಸೋತಿದ್ದಾರೆ. 25 ಲಕ್ಷ ನಿಜಕ್ಕೂ ಗಳಿಸುತ್ತಾರಾ ಎಂಬುದೇ ಅನುಮಾನ.

More from Filmibeat

English summary
BBK 10 contestants time pass.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X