ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಅಮ್ಮಂದಿರು..! ಡ್ರೋನ್ ಪ್ರತಾಪ್ ಮನೆಯವರು ಬರ್ತಾರಾ?
ಬಿಗ್ ಬಾಸ್‌ಗೆ ಬಂದು ತಮ್ಮ ಮನೆಯವರನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದ ಸ್ಪರ್ಧಿಗಳಿಗೆ ಪ್ರತಿ ಸಲವೂ ಕೂಡ ಬಿಗ್ ಬಾಸ್ ಅವರ ಮನೆಯಿಂದ ಒಬ್ಬರನ್ನ ಕರೆಯಿಸಿ ಸರ್ಪ್ರೈಸ್ ನೀಡುತ್ತಾರೆ. ಈ ಸಲವೂ ಎಲ್ಲಾ ಸ್ಪರ್ಧಿಗಳಿಗೂ ಕೂಡ ಸರ್ಪ್ರೈಸ್ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 10 ಈ ದಿನ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ನಮ್ರತಾ ಅಂತೂ ತಮ್ಮ ಮನೆಯವರನ್ನ ನೆನಪಿಸಿಕೊಳ್ಳದ ದಿನವೇ ಇಲ್ಲ. ಒಂದು ಲೆಟರ್‌ಗಾಗಿ ಸಾಕಷ್ಟು ಕಣ್ಣೀರನ್ನು ಹಾಕಿದ್ದರು.
ವಿನಯ್ ತನ್ನ ತಂದೆ ತಾಯಿಯ ಬಳಿ ಅಷ್ಟು ಅಟ್ಯಾಚ್ಮೆಂಟ್ ಇಟ್ಟುಕೊಂಡಿಲ್ಲ. ಯಾಕೆಂದರೆ ಅವರು ತಮ್ಮ ತಂದೆ ತಾಯಿಯನ್ನೇ ತೊರೆದು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ತಮ್ಮ ಪ್ರೀತಿಯ ಮಡದಿ ಹಾಗೂ ಮಗನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದಾರೆ .ಸದ್ಯಕ್ಕೆ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋ ದಲ್ಲಿ ನಮ್ರತಾ ಹಾಗೂ ವರ್ತೂರು ಸಂತೋಷ್ ಅವರ ಅಮ್ಮ ಮಾತ್ರ ಬಂದಿರುವುದನ್ನು ತೋರಿಸಲಾಗಿದೆ. ಉಳಿದ ಸ್ಪರ್ಧಿಗಳ ಮನೆಯಿಂದ ಯಾರು ಬಂದಿದ್ದಾರೆ ಎಂಬುದನ್ನು ಕುತೂಹಲವಾಗಿ ಇಡಲಾಗಿದೆ.

ಬಿಗ್ ಬಾಸ್ ಸೆಮಿ ಫೈನಲ್‌ಗೆ ತಲುಪುತ್ತಿದ್ದು ವಿನಯ್ ಕೂಡ ಈಗ ಯಾರೊಂದಿಗೂ ಜಗಳ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಇನ್ನು ಈ ವಾರ ಎಲ್ಲರು ಕೂಡ ಸಾಫ್ಟ್ ಆಗಿ ಇರುವಂತೆ ಕಾಣಿಸುತ್ತಿದೆ. ಇನ್ನು ವಿನಯ್ ಸಂಗೀತಾ ಜೊತೆಗೂ ಕೂಡ ಚೆನ್ನಾಗಿಯೇ ಇದ್ದಾರೆ. ಇನ್ನು ಡ್ರೋನ್ ಪ್ರತಾಪ್ ಬಗ್ಗೆ ವೀಕ್ಷಕರಲ್ಲಿ ಅತಿ ಹೆಚ್ಚು ಕುತೂಹಲ ಹುಟ್ಟಿದೆ. ಯಾಕೆಂದರೆ ತಂದೆ ತಾಯಿಯಿಂದ ಮೂರು ವರ್ಷ ದೂರವಾಗಿ ಇದ್ದೇನೆ ಎಂದು ಡ್ರೋನ್ ಪ್ರತಾಪ್ ತಿಳಿಸಿದ್ದರು.
ಬಿಗ್ ಬಾಸ್ ಮನೆಗೆ ಬಂದ ಅಮ್ಮಂದಿರು, ಭಾವುಕ ಕ್ಷಣಕ್ಕೆ ಸಾಕ್ಷಿಯಾದ ದೊಡ್ಮನೆ
ಪೋಷಕರನ್ನ ಬಿಗ್ ಬಾಸ್ ಮನೆಗೆ ಕರೆಯಿಸಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಸ್ಪೆಷಲ್ ಉಡುಗೊರೆ ಕೊಟ್ಟಿದೆ. ಮೊಬೈಲ್ ಹಾಗೂ ಮನೆಯವರನ್ನ ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ತಮ್ಮ ಪೋಷಕರನ್ನ ನೋಡಿ ಕಣ್ತುಂಬಿ ಕೊಂಡಿದ್ದಾರೆ. ಎಲ್ಲರೂ ಏನೇನೋ ಚಟುವಟಿಕೆ ಮಾಡುತ್ತಾ ಇರುವಾಗ ಬಿಗ್ ಬಾಸ್ ನಿಂತಲ್ಲೇ ನಿಂತುಕೊಳ್ಳಬೇಕು ಎಂಬ ಆದೇಶವನ್ನು ನೀಡಿತ್ತು. ನಂತರ ನಮ್ರತಾ ಮನೆಯಿಂದ ಬರ್ತಾ ಇದ್ದಾರೆ ಗುರು ಎಂದು ಕುಣಿದು ಕುಪ್ಪಳಿಸಿದ್ದರು. ಜೊತೆಗೆ ಅಮ್ಮ ಎಂದು ಜೋರಾಗಿ ಕೂಗಿದಾಗ ಅವರ ಅಮ್ಮ ಪಾಪು ಎಂದು ಕೂಗಿದ್ದಾರೆ ಈ ವೇಳೆ ನಮ್ರತಾ ಕಣ್ಣೀರನ್ನು ಹಾಕಿದ್ದಾರೆ.
ನಮ್ರತಾ ಅವರ ಅಮ್ಮ ಬಂದವರೇ ಮಗಳನ್ನು ಜೋರಾಗಿ ತಬ್ಬಿಕೊಂಡು ಅಳಬಾರದು ಎಂದು ಹೇಳಿದ್ದಾರೆ. ಇನ್ನು ವೀಕ್ಷಕರು ನಾವು ಇದೊಂದು ಎಪಿಸೋಡ್ ನೋಡಲು ಕಾಯುತ್ತಾ ಇದ್ದೇವೆ ಎಂದು ಹೇಳಿದ್ದಾರೆ. ಆದರೆ ಕೆಲವೊಬ್ಬರು ನೆಗೆಟಿವ್ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇಷ್ಟು ದಿನ ನಡೆದ ನಾಟಕಕ್ಕಿಂತ ಈ ದಿನ ಸ್ಪರ್ಧಿಗಳು ಬೇರೆಯ ರೀತಿಯಲ್ಲಿ ನಾಟಕವನ್ನು ಆಡುತ್ತಾರೆ ಎಂದೆಲ್ಲಾ ಹೇಳಿದ್ದಾರೆ.

ಅಮ್ಮನನ್ನು ತಬ್ಬಿಕೊಂಡ ವರ್ತೂರು ಸಂತೋಷ್
ಡ್ರೋನ್ ಪ್ರತಾಪ್ ಮನೆಯಿಂದ ಯಾರು ಬಂದಿದ್ದಾರೆ..?
ಎರಡನೇ ಬಾರಿಗೆ ವರ್ತೂರು ಸಂತೋಷ ಅವರ ಅಮ್ಮ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ಹಿಂದೆ ಮಗನನ್ನ ಸಂತೈಸಲು ಬಿಗ್ ಬಾಸ್ ಮನೆಗೆ ಬಂದಿದ್ದರು ಈಗ ಮಗನನ್ನ ನೋಡಲು ಬಂದಿದ್ದಾರೆ. ಇನ್ನು ಅಮ್ಮ ಬಂದ ತಕ್ಷಣವೇ ವರ್ತೂರು ಸಂತೋಷ್ ಓಡಿ ಹೋಗಿ ತಬ್ಬಿಕೊಂಡಿದ್ದಾರೆ. ಇನ್ನು ಇದೇ ವೇಳೆ ವರ್ತೂರ್ ಅವರ ಅಮ್ಮ ಸಂಗೀತಾ ಹಾಗೂ ವಿನಯ್ ಗೆ ಒಂದಷ್ಟು ಬುದ್ಧಿವಾದ ಹೇಳಿದ್ದಾರೆ. ಸಂಗೀತಾಗೆ ನೀವು ಯಾಕೆ ಜಾಸ್ತಿ ಅಳುತ್ತೀರಾ ಎಂದು ಕೇಳಿದ್ದಾರೆ. ಇನ್ನು ವಿನಯ್ ಗೆ ಏನೋ ಹೇಳಿದ್ದು ಈ ಮನೆಯಲ್ಲಿ ನಾನು ಒಬ್ಬನೇನಾ ವಿಲ್ಲನ್ ಎಂದು ವಿನಯ್ ಕೇಳಿದ್ದಾರೆ. ಇದಕ್ಕೆ ಅಮ್ಮ ಸುಮ್ಮನೆ ಇರು ಎಂದು ವರ್ತೂರು ಸನ್ನೆ ಮಾಡಿದ್ದಾರೆ.
ಇಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ವಿಷಯ ಏನೆಂದರೆ ಅದು ಡ್ರೋನ್ ಪ್ರತಾಪ್ ಫ್ಯಾಮಿಲಿಯ ಬಗ್ಗೆ. ಪ್ರತಾಪ್ ತಾನು ಮೂರು ವರ್ಷದಿಂದ ತಮ್ಮ ಮನೆಗೆ ಹೋಗಿಲ್ಲ ಎಲ್ಲರಿಂದಲೂ ದೂರ ಇದ್ದೇನೆ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದರು. ಈ ಒಂದು ವಿಚಾರಕ್ಕಾಗಿ ಪ್ರತಾಪ್ ಮನೆಯಿಂದ ಯಾರು ಬಂದಿರಬಹುದು ಎಂಬ ಕುತೂಹಲ ಸಹಜವಾಗಿಯೇ ಇದೆ. ಆದರೆ ಎಲ್ಲೂ ಕೂಡ ಪ್ರತಾಪ್ ಫ್ಯಾಮಿಲಿ ತೋರಿಸದ ಕಾರಣ ಕುತೂಹಲ ಮತ್ತಷ್ಟು ಕೆರಳಿಸಿದೆ.


Click it and Unblock the Notifications











