Bigg Boss kannada season 10: ಬಿಗ್‌ಬಾಸ್ ಸ್ಪರ್ಧಿಗಳ ಲಿಸ್ಟ್ ಲೀಕ್? ಸದ್ದಿಲ್ಲದೇ ಇವರೆಲ್ಲಾ ಮನೆಯೊಳಗೆ ಎಂಟ್ರಿ ಕೊಟ್ರಾ?

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 10ಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಚಿತ್ರೀಕರಣವಾಗುತ್ತಿದ್ದು ಯಾರೆಲ್ಲಾ ದೊಡ್ಮನೆ ಒಳಗೆ ಪ್ರವೇಶ ಪಡೆದಿದ್ದಾರೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ.

ಈ ಬಾರಿ 10ನೇ ಸೀಸನ್ ಆಗಿರುವುದರಿಂದ ಸಂಥಿಂಗ್ ಸ್ಪೆಷಲ್ ಎಂದು ಕಲರ್ಸ್ ಕನ್ನಡ ಹೇಳಿದೆ. ಅದಕ್ಕೆ ತಕ್ಕಂತೆ ಇನೋವೇಟಿವ್ ಫಿಲ್ಮ್ ಸಿಟಿ ಬಿಟ್ಟು ದೊಡ್ಡ ಆಲದ ಮರದ ಬಳಿ ಮನೆಯ ಸೆಟ್ ಹಾಕಲಾಗಿದೆ. ಈ ಬಾರಿ ಬಿಗ್‌ಬಾಸ್ ಮನೆಯೇ ಸ್ಪೆಷಲ್ ಎನ್ನಲಾಗ್ತಿದೆ. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಬೃಹತ್ ಮನೆ ನಿರ್ಮಿಸಲಾಗಿದೆ.

Bigg Boss kannada season 10 contestants list leaked?; these 6 celebrities to enter the house?

ಕನ್ನಡ ಬಿಗ್‌ಬಾಸ್ ಮೊದಲೆರಡು ಸೀಸನ್ ಪುಣೆಯಲ್ಲಿ ನಡೆದಿತ್ತು. ಬಳಿಕ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿಗೆ ಶಿಫ್ಟ್ ಆಗಿತ್ತು. ಇದೀಗ 3ನೇ ಬಾರಿಗೆ ಬಿಗ್‌ಬಾಸ್ ಮನೆಯ ಸ್ಥಳವನ್ನು ಬದಲಿಸಲಾಗಿದೆ. ಮೊದಲ ಬಾರಿಗೆ ಅಲ್ಲಿ ಚಿತ್ರೀಕರಣ ನಡೆಸುತ್ತಿರುವುದರಿಂದಲೋ ಏನೋ ಒಂದು ದಿನ ಮೊದಲೇ ಚಿತ್ರೀಕರಣ ಆರಂಭವಾಗಿದೆ. ಹಾಗಾಗಿ ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಿರುವ ಸ್ಪರ್ಧಿಗಳು ಹೆಸರುಗಳು ಲೀಕ್ ಆಗ್ತಿರೋ ಸಾಧ್ಯತೆಯಿದೆ.

ಶ್ವಾನ ಚಾರ್ಲಿ ಬಿಗ್‌ಬಾಸ್ ಮನೆಗೆ ಹೋಗುವ ಸುದ್ದಿ ಕೆಲ ದಿನಗಳ ಹಿಂದೆಯೇ ರಿವೀಲ್ ಆಗಿತ್ತು. ಇನ್ನು ಮೈಸೂರಿನ ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಬಿಗ್‌ಬಾಸ್ ಮನೆ ಪ್ರವೇಶ ಪಡೆದಿರುವುದು ಖಚಿತವಾಗಿದೆ. ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಕೂಡ ಬಿಗ್‌ಬಾಸ್ ಮನೆಗೆ ಈ ಬಾರಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ನಾಗಿಣಿ ಧಾರಾವಾಹಿ ಖ್ಯಾತಿಯ ನಟಿ ನಮ್ರತಾ ಗೌಡ ಹೆಸರು ಸಂಭಾವ್ಯನೀಯರ ಪಟ್ಟಿಯಲ್ಲಿ ಕೇಳಿಬರ್ತಿತ್ತು. ಆಕೆ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಬಗ್ಗೆ ಸುಳಿವು ಸಿಗುತ್ತಿದೆ. 'ಹರ ಹರ ಮಹಾದೇವ್' ಧಾರಾವಾಹಿ ನಟ ವಿಜಯ್ ಗೌಡ, ಮಂಗಳಮುಖಿ ನೀತು ವನಜಾಕ್ಷಿ ಕೂಡ ಈ ಬಾರಿ ಬಿಗ್‌ಬಾಸ್ ಶೋಗೆ ಸ್ಪರ್ಧಿಯಾಗಿ ಹೋಗಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಹಾಸ್ಯ ನಟ ಕೋಮಲ್, ನಿರೂಪಕ ಗೌರೀಶ್ ಅಕ್ಕಿ, ಬಿಗ್‌ಬಾಸ್ ಮಿನಿ ಸೀಸನ್ ಸ್ಪರ್ಧಿ ತ್ರಿವಿಕ್ರಮ್, ರ್ಯಾಪರ್ ಎಶಾನಿ ಸೇರಿದಂತೆ ಕೆಲವರು ಬಿಗ್‌ಬಾಸ್‌ ಮನೆಗೆ ಹೋಗುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಭಾನುವಾರ(ಅಕ್ಟೋಬರ್ 8) ಸಂಜೆ 6 ಗಂಟೆಗೆ ಬಿಗ್‌ಬಾಸ್ ಕನ್ನಡ ಸೀಸನ್ 10ರ ಗ್ರ್ಯಾಂಡ್ ಪ್ರೀಮಿಯರ್ ಆರಂಭವಾಗಲಿದೆ. ಆ ಬಳಿಕ ಸ್ಪರ್ಧಿಗಳ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.

ಸೋಮವಾರದಿಂದ 100 ದಿನಗಳ ಕಾಲ ಸ್ಪರ್ಧಿಗಳು ಬಿಗ್‌ಬಾಸ್ ಮನೆಯೊಳಗೆ ಇರುತ್ತಾರೆ. ವಾರಕ್ಕೊಬ್ಬರು ಎಲಿಮಿನೇಟ್ ಆಗುತ್ತಾರೆ. ಕೊನೆಯವರೆಗೂ ಉಳಿದುಕೊಂಡವರಲ್ಲಿ ಒಬ್ಬರು ಬಿಗ್‌ಬಾಸ್ ಕನ್ನಡ ಸೀಸನ್ 10 ಟ್ರೋಫಿಗೆ ಮುತ್ತಿಡಲಿದ್ದಾರೆ. ವಿನ್ನರ್‌ಗೆ 50 ಲಕ್ಷ ರೂ. ಬಹುಮಾನದ ಹಣ ಸಿಗಲಿದೆ. ರನ್ನರ್ ಅಪ್‌ಗಳಿಗೂ ಬಹುಮಾನಗಳು ಸಿಗಲಿವೆ. ಈ ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್ ಸ್ಪೆಷಲ್ ಎಂದು ಆಯೋಜಕರು ಹೇಳಿದ್ದಾರೆ. ಯಾವ ರೀತಿಯಲ್ಲಿ ಸ್ಪೆಷಲ್ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಸ್ಪರ್ಧಿಗಳ ಪಟ್ಟಿ ಸಿಗಲಿದೆ. ಸೋಮವಾರದಿಂದ ರಾತ್ರಿ 9.30ಕ್ಕೆ ಬಿಗ್‌ಬಾಸ್ ಶೋ ಪ್ರಸಾರವಾಗಲಿದೆ. ಈ ಬಾರಿ ಜಿಯೋ ಟಿವಿಯಲ್ಲೂ ನೀಡುವ ಅವಕಾಶ ಸಿಗಲಿದೆ.

More from Filmibeat

English summary
Bigg Boss kannada season 10 leaked contestants list;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X