Bigg Boss:ನಮ್ರತಾ ಸೋತಿದ್ದ ಟಾಸ್ಕ್‌ನಲ್ಲಿ ಸಂಗೀತಾ-ಪ್ರತಾಪ್ ಗೆಲುವು; ಮತ್ತೆ ಬಂತು ₹50 ಲಕ್ಷ ವಾಪಾಸ್
ಬಿಗ್ ಬಾಸ್ ಶೋಗೆ ಬರುವವರು ಗೆಲ್ಲಲೇಬೇಕು ಅಂತಾನೇ ಬರುತ್ತಾರೆ. ಎಷ್ಟು ದಿನ ಇರುತ್ತಾರೋ ಅಷ್ಟು ದಿನವೂ ಹಣ ಸಿಗಲಿದೆ. ಆದರೆ ಕೊನೆಯಲ್ಲಿ ಗೆಲ್ಲುವವರಿಗೆ 50 ಲಕ್ಷ ಹಣ ಸಿಗಲಿದೆ. ಅದರ ಜೊತೆಗೆ ಟ್ರೋಫಿಯೂ ಸಿಗಲಿದೆ. ಎಲ್ಲರು ಟಾರ್ಗೆಟ್ ಫಿಕ್ಸ್ ಮಾಡಿಕೊಳ್ಳುವುದು ಫಿನಾಲೆಗೆ. ಆದರೆ, ಎಲ್ಲರಿಗೂ ಆ ಅದೃಷ್ಟ ಇರುವುದಿಲ್ಲ.
ಇನ್ನು ಒಂದು ವಾರವಷ್ಟೇ. ಮುಂದಿನ ವಾರ ಫಿನಾಲೆಗೆ ವೇದಿಕೆ ರೆಡಿಯಾಗಿರುತ್ತದೆ. ಐದು ಜನರ ಹಾರ್ಟ್ ಬೀಟ್ ಜೋರಾಗಿರುತ್ತದೆ. ಇನ್ನಿಬ್ಬರು ಫಿನಾಲೆಯಿಂದ ವಾಪಾಸ್ ಬರಲಿದ್ದಾರೆ. ಫಿನಾಲೆಯಲ್ಲಿ ಎಡಗಡೆ ಒಬ್ಬರು ಬಲಗಡೆ ಒಬ್ಬರು ನಿಂತು, ಅಲ್ಲೂ ಗೆಲ್ಲುವವರು ಯಾರೆಂಬ ಕುತೂಹಲ ಇದ್ದೇ ಇರುತ್ತದೆ. ಸುದೀಪ್ ಯಾರ ಕೈ ಎತ್ತುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

25 ಲಕ್ಷ ಕಳೆದುಕೊಂಡಿದ್ದ ಸದಸ್ಯರು
ಈ ಹಿಂದೆ ದಿನಸಿಗಾಗಿ ಬಿಗ್ ಬಾಸ್ ಒಂದು ಟಾಸ್ಕ್ ನೀಡಿತ್ತು. ಅದರಲ್ಲಿ ಮಾನ, ಮೌಲ್ಯ, ನಿರ್ಧಾರದ ಟಾಸ್ಕ್ ನೀಡಲಾಗಿತ್ತು. ಅದರಲ್ಲೂ ಸಾಕಷ್ಟು ಕಿತ್ತಾಟಗಳು ನಡೆದಿದ್ದವು. ಸದಸ್ಯರ ನಿರ್ಲಕ್ಷ್ಯದಿಂದ ಅಂದು 25 ಲಕ್ಷ ಕಳೆದುಕೊಂಡಿತು. ನಾಮಿನೇಷನ್ ಆದವರ ಕೊರಳಲ್ಲಿ ಇದ್ದ ಮೌಲ್ಯದ ಒಟ್ಟು ಮಾಡಿ, ಅದರಲ್ಲಿ ಮೈನಸ್ ಮಾಡಿದ್ದ ಬಿಗ್ ಬಾಸ್, ಗೆಲ್ಲುವವರ ಮೊತ್ತದಲ್ಲಿ 25 ಲಕ್ಷ ಹಿಂಪಡೆದಿತ್ತು.
ಹಣ ಗಳಿಸಲು ಟಾಸ್ಕ್ ನೀಡಿದ್ದ ಬಿಗ್ ಬಾಸ್
ಬಿಗ್ ಬಾಸ್‌ನಲ್ಲಿ ಅಷ್ಟು ಕಷ್ಟಪಡುವುದೇ ಕೊನೆಯ 50 ಲಕ್ಷದ ಮೊತ್ತಕ್ಕಾಗಿ. ಆದರೆ ಅರ್ಧಕ್ಕೆ ಅರ್ಧ ಕಳೆದುಕೊಂಡ ತಕ್ಷಣ ಮನೆಯಲ್ಲಿ ಹಲವರು ಶಾಕ್ ಆಗಿದ್ದರು. ಬಳಿಕ 25 ಲಕ್ಷ ಹಣ ಗಳಿಸಲು ವಾರಪೂರ್ತಿ ಟಾಸ್ಕ್‌ಗಳನ್ನು ಬಿಗ್ ಬಾಸ್ ನೀಡುತ್ತಾ ಬಂದಿತ್ತು. ಆ ಮೂಲಕ ಮನೆ ಸದಸ್ಯರು ಹಣ ಗಳಿಸುವುದಕ್ಕೆ ಶುರು ಮಾಡಿದರು.
ಎರಡು ಲಕ್ಷಕ್ಕೆ ಆ ಟಾಸ್ಕ್ ಕೊಟ್ಟ ಬಿಗ್ ಬಾಸ್
50 ಲಕ್ಷಕ್ಕೆ ಇನ್ನು ಎರಡು ಲಕ್ಷ ಬೇಕಾಗಿತ್ತು. 48 ಲಕ್ಷ ಸದಸ್ಯರ ಖಾತೆಯಲ್ಲಿ ಇತ್ತು. ಆ ಎರಡು ಲಕ್ಷ ಗೆಲ್ಲುವುದಕ್ಕೆ ಸ್ನೇಹಿತ್ ಕ್ಯಾಪ್ಟನ್ ಆಗಿದ್ದಂತ ಟಾಸ್ಕ್ ಕೊಟ್ಟಿದ್ದರು. ಕಂಬಿಗಳನ್ನು ಹಿಡಿದು ಕೈಯಲ್ಲಿ ಬ್ಯಾಲೆನ್ಸ್ ಮಾಡುತ್ತಾ ನಿಲ್ಲುವಂತ ಟಾಸ್ಕ್ ಅದು. ಅದರಲ್ಲಿ ಸ್ನೇಹಿತ್ ಗೆದ್ದಿದ್ದರು, ನಮ್ರತಾ ಸೋತಿದ್ದರು. ಈಗ ಅದೇ ಟಾಸ್ಕ್ ಅನ್ನು ಎರಡು ಲಕ್ಷ ಗಳಿಸಲು ನೀಡಿದ್ದಾರೆ.
50 ಲಕ್ಷ ಗಳಿಸಿದ ಸಂಗೀತಾ-ಪ್ರತಾಪ್
ಯಾರೆ ಗೆದ್ದರು ಅವರಿಗೆ ಐವತ್ತು ಲಕ್ಷ ಗಳಿಸಿಕೊಡುವುದು ಮನೆಯಲ್ಲಿ ಉಳಿದವರ ಕರ್ತವ್ಯವಾಗಿರುತ್ತದೆ. ಹೀಗಾಗಿಯೇ ಎಲ್ಲರೂ ಟಾಸ್ಕ್‌ಗಳನ್ನು ಸರಿಯಾಗಿಯೇ ಆಡಿದ್ದಾರೆ. ಆದರೆ ಕೆಲವೊಂದು ಸಲ ಸೋಲನ್ನು ಕಂಡಿದ್ದಾರೆ. ಆದರೆ, ಇನ್ನುಳಿದ ಎರಡು ಲಕ್ಷ ಗಳಿಸುವುದಕ್ಕೆ ಸಂಗೀತಾ ಹಾಗೂ ಪ್ರತಾಪ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಕಾಲು ಮತ್ತು ಕೈ ಎರಡು ನೋವಾಗುತ್ತದೆ. ಬ್ಯಾಲೆನ್ಸ್ ಮಾಡಿ ನಿಲ್ಲುವುದು ಅಷ್ಟು ಸುಲಭವಲ್ಲ. ಆದರೂ ಪ್ರತಾಪ್ ಹಾಗೂ ಸಂಗೀತಾ ಆ ಆಟ ಗೆದ್ದಿದ್ದಾರೆ. ಫೈನಲಿ ಮನೆಯಲ್ಲಿ ಗೆಲ್ಲುವವರಿಗೆ ಐವತ್ತು ಲಕ್ಷ ರೂಪಾಯಿ ಸಿಗುವಂತೆ ಆಗಿದೆ. ಟ್ರೋಫಿ ಜೊತೆಗೆ ಐವತ್ತು ಲಕ್ಷ ಹಣವನ್ನು ಪಡೆಯುತ್ತಾರೆ.


Click it and Unblock the Notifications











