BBK10: ಬಿಗ್ ಬಾಸ್ ಮನೆಯಲ್ಲಿ ಫೋನ್ ಬಳಸುತ್ತಾರಾ..? ಶೃತಿ ಕೇಳಿದ ಪ್ರಶ್ನೆಗೆ ಸಾಕ್ಷಿ ಸಮೇತ ಸಿಕ್ಕಿತು ಉತ್ತರ
ಬಿಗ್ ಬಾಸ್ ಮನೆ ಅಂದರೆ ಜಗದ ಎಲ್ಲಾ ಪರಿವೆಯನ್ನು ಮರೆತು ಜೀವಿಸುವುದು. ಆಟ, ಪಾಠ, ಸ್ನೇಹ, ಬಂಧ ಎಲ್ಲವೂ ಅಲ್ಲಿಯೇ ನಡೆಯುತ್ತದೆ. ಆದರೆ ಇದೆಲ್ಲವೂ ಮನೆಯೊಳಗೆ ಎಷ್ಟು ಜನ ಹೋಗುತ್ತಾರೆ, ಎಷ್ಟು ಜನ ಇರುತ್ತಾರೆ, ಬಿಗ್ ಬಾಸ್ ಮಂದಿ ಯಾರನ್ನೆಲ್ಲಾ ಹೊಸದಾಗಿ ಕಳುಹಿಸುತ್ತಾ ಇರುತ್ತಾರೆ ಎಂಬುದರ ಮೇಲೆ ಬಾಂಧವ್ಯ ನಿರ್ಧಾರವಾಗುತ್ತದೆ. ಫೋನ್ ಬಳಕೆಯಾಗಲಿ, ಮನೆಯವರ ಸಂಪರ್ಕವಾಗಲಿ, ಹೊರಗಿನ ಸುದ್ದಿಯಾಗಲಿ ತಿಳಿಯುವುದೇ ಇಲ್ಲ.
ಆದರೆ ಕೆಲವೊಂದು ಸಲ ಬಿಗ್ ಬಾಸ್ ಮಂದಿ ನಡೆದುಕೊಳ್ಳುವುದು ಅದಕ್ಕೆ ವಿರುದ್ಧವಾಗಿರುತ್ತದೆ. ಅನುಮಾನ ಬರುವಂತೆ ಇರುತ್ತದೆ. ಇತ್ತಿಚೆಗೂ ಅಂಥದ್ದೊಂದು ಘಟನೆ ನಡೆದಿದೆ. ಅದುವೆ ಮೊಬೈಲ್ ಚಾರ್ಜರ್ ಬಳಕೆಯ ವಿಚಾರ. ಸದ್ಯ ಶೃತಿ ಮನೆಯೊಳಗೆ ಹೋಗಿದ್ದು, ಅದಕ್ಕೊಂದು ಉತ್ತರವೂ ಸಿಕ್ಕಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು ಫೋಟೋ
ಅಕ್ಕ - ತಮ್ಮ ಮಾತನಾಡುವಾಗ ಕಂಡಿದ್ದ ನೋಟ
ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಅಕ್ಕ - ತಮ್ಮ ಆಗಿ ಸಂಗೀತಾ ಹಾಗೂ ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತಾ, ಒಬ್ಬರಿಗೊಬ್ಬರು ಧೈರ್ಯ ತುಂಬುತ್ತಾ, ಮನೆಯಲ್ಲಿ ಸ್ವಂತದವರಂತೆ ಇದ್ದಾರೆ. ಆರಂಭದಲ್ಲಿ ತಮ್ಮ ಎಂದ ಸಂಗೀತಾ, ಏನೇ ಜಗಳ ಬಂದರೂ, ಮನಸ್ತಾಪಗಳು ನಡೆದರು ಪ್ರತಾಪ್ ಮತ್ತು ಸಂಗೀತಾ ನಡುವೆ ಆ ಸಮಸ್ಯೆ ಕಾಣಿಸಿಲ್ಲ. ಇಬ್ಬರು ಕೂತು ಮಾತನಾಡುವಾಗ ಚಾರ್ಜರ್ ಪಿನ್ ಗಳನ್ನು ಪ್ಲಗ್ ಮಾಡಿರುವುದು ಕಂಡು ಬಂದಿದೆ. ಅದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು.
ಮೊಬೈಲ್ ಬಗ್ಗೆ ಶೃತಿ ಪ್ರಶ್ನೆ: ತಮಾಷೆಯಾಗಿ ತೆಗೆದುಕೊಂಡ ಸ್ಪರ್ಧಿಗಳು
ಇಂದು ಕಿಚ್ಚನ ಪಂಚಾಯ್ತಿ ನಡೆಯುತ್ತಿಲ್ಲ. ಬಿಗ್ ಬಾಸ್ ವೀಕೆಂಡ್ ಶೋ ನೋಡುವವರಿಗೆ ಕೊಂಚ ಬೇಸರವಾಗಿದೆ. ಆದರೆ ಆ ಬೇಸರವನ್ನು ತುಂಬಲು ಬಂದಿರುವುದೇ ಶೃತಿ. ಮನೆ ಮಂದಿಯನ್ನೆಲ್ಲಾ ಆಕ್ಟೀವ್ ಮಾಡುವುದಕ್ಕೆ ಬಂದಿದ್ದಾರೆ. ಒಂದಷ್ಟು ಸರಿ, ತಪ್ಪುಗಳನ್ನು ತಿದ್ದುವುದಕ್ಕೆ ಬಂದಿದ್ದಾರೆ. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಚಾರವನ್ನು ಸ್ಪರ್ಧಿಗಳ ಮುಂದೆ ಇಟ್ಟಿದ್ದಾರೆ.
ಫೋಟೋ ಕಂಡು ಮನೆ ಮಂದಿ ಶಾಕ್, ನಕ್ಕವರು.. ಫೋಟೋ ನೋಡಿ ಸೈಲೆಂಟ್!
ಶೃತಿ ಮನೆ ಮಂದಿಯ ಜೊತೆಗೆ ಹಾಗೇ ಮಾತನಾಡುತ್ತಾ, ನೀವೆಲ್ಲಾ ಮನೆಯೊಳಗೆ ಮೊಬೈಲ್ ಬಳಕೆ ಮಾಡುತ್ತೀರಾ ಎಂದು ಕೇಳಿದ್ದಾರೆ. ಇದನ್ನ ಮನೆಯವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ನಕ್ಕಿದ್ದಾರೆ. ತಕ್ಷಣ ಗಂಭೀರವಾಗಿ ಮಾತು ಮುಂದುವರೆಸಿದ ಶೃತಿ, ಇದು ತಮಾಷೆಯಲ್ಲ. ಹೊರಗಡೆ ತುಂಬಾ ಸುದ್ದಿಯಾಗಿದೆ. ಬಿಗ್ ಬಾಸ್ ಪ್ಲೀಸ್ ಆ ಫೋಟೋ ಹಾಕಿ ಬಿಗ್ ಬಾಸ್ ಎಂದು ಕೇಳಿದಾಗ, ಬಿಗ್ ಬಾಸ್ ಫೋಟೋ ಹಾಕಿದ್ದಾರೆ.

ಮೈಕಲ್ - ವಿನಯ್ ಕಡೆಯಿಂದ ಕ್ಲಾರಿಟಿ
ಮೈಕಲ್ ಚಾರ್ಜರ್ ಇಟ್ಟುಕೊಂಡಿದ್ದಿದ್ದು ಯಾಕೆ..?
ಫೋಟೋ ನೋಡಿದ ಕೂಡಲೇ ಕ್ಲಾರಿಟಿ ಕೊಡುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಆಗ ಶೃತಿ, ಆ ಚಾರ್ಜರ್ ಗಳನ್ನೆಲ್ಲಾ ಮೊದಲು ತನ್ನಿ ಎಂದು ತರಿಸಿದ್ದಾರೆ. ಮೈಕಲ್ ಮತ್ತು ವಿನಯ್ ಆ ಚಾರ್ಜರ್‌ಗಳನ್ನು ತಂದಿದ್ದು, ಇದು ನಾನು ಬಳಸುವ ಚಾರ್ಜರ್. ಇದನ್ನ ಟ್ರಿಮ್ಮರ್ ಚಾರ್ಜ್ ಮಾಡುವುದಕ್ಕೆ ಬಳಸುತ್ತೀನಿ ಎಂದಿದ್ದಾರೆ. ಬಳಿಕ ಮೈಕಲ್ ಕ್ಲಾರಿಟಿ ಕೊಟ್ಟಿದ್ದು, ಇದು ಮೊಬೈಲ್ ಚಾರ್ಜರ್. ಆದರೆ ನಾನು ಕೂಡ ಟ್ರಿಮ್ಮರ್ ಚಾರ್ಜ್ ಮಾಡುವುದಕ್ಕೇನೆ ಬಳಸುವುದು ಎಂದಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಚಾರ್ಜರ್ ಬಳಕೆ ಯಾಕೆ ಆಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











