Bigg Boss Kannada: ಗಂಡಸಿನ ತರ ಆಟ ಆಡು... ಕಿತ್ತೋದೋಳು... ಕಪಾಳಕ್ಕೆ ಬಾರಿಸು... ಅಬ್ಬಾ ಬಿಗ್ ಬಾಸ್‌ ಅಲ್ಲ..ಇದು ರಣರಂಗ!

ಅಬ್ಬಾ.. ಈ ಬಿಗ್‌ ಬಾಸ್ ಕನ್ನಡ ಹತ್ತನೇ ಸೀಸನ್ ರಿಯಾಲಿಟಿ ಶೋಗಿಂತ ಯಾವುದೋ ಕಿತ್ತಾಟದ ಶೋನಂತೆ ಕಾಣುತ್ತಿದೆ. ಒಬ್ಬರಿಗೊಬ್ಬರು ಗೌರವ ಕೊಡದೆ ನಡೆದುಕೊಳ್ಳುತ್ತಿದ್ದಾರೆ. ಏಕವಚನದಲ್ಲಿ ಬೈದಾಡಿಕೊಳ್ಳುತ್ತಿದ್ದಾರೆ. ಮಹಿಳಾ ಸ್ಪರ್ಧಿಗಳಿಗೆ ಗೌರವ ಕೊಡದೆ ಇರುವುದು, ವಿನಯ್ ಅವರ ಅಹಂಕಾರದ ನಡೆ ಸಕತ್ ಚರ್ಚೆಗೆ ಕಾರಣವಾಗಿದೆ.

ಬುಧವಾರ (ನವೆಂಬರ್ 01) ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಮನೆ ಮಂದಿ ಬಾಯಿಗೆ ಬಂದಂತೆ ಕಿತ್ತಾಡುತ್ತಿರುವುದು ಕಾಣಿಸಿದೆ. ಒಂದು ತಿಂಗಳಿನಲ್ಲಿಯೇ ಮನೆ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ. ಸ್ಪರ್ಧಿಗಳು ಟಾಸ್ಕ್‌ಗಳಲ್ಲಿ ಗೆಲ್ಲುವ ಭರದಲ್ಲಿ ಒಬ್ಬರಿಗೊಬ್ಬರು ತುಂಬಾ ಕೀಳಾಗಿ ಬೈದಾಡುಕೊಳ್ಳುತ್ತಿದ್ದಾರೆ.

bigg-boss-kannada-season-10

ಟಾಸ್ಕ್ ಗೆಲ್ಲಲು ತೀವ್ರ ಪೈಪೋಟಿ

ಬಿಗ್ ಬಾಸ್ ಮನೆಯಲ್ಲಿ ಹಳ್ಳಿಯ ಸೆಟ್ ಹಾಕಲಾಗಿದ್ದು, ಮನೆಯ ಸದಸ್ಯರಿಗೆ ವಿಭಿನ್ನವಾದ ಟಾಸ್ಕ್ ನೀಡಲಾಗಿದೆ. ಎಲ್ಲಾ ಸ್ಪರ್ಧಿಗಳು ಹಳ್ಳಿಯ ಸೆಟ್‌ನಲ್ಲಿ ವಾಸ ಮಾಡಬೇಕಿದೆ. ಎರಡು ಗುಂಪುಗಳನ್ನು ಮಾಡಲಾಗಿದ್ದು, ವಿನಯ್ ಮತ್ತು ಸಂಗೀತಾ ಕ್ಯಾಪ್ಟನ್ ಆಗಿದ್ದಾರೆ. ಈಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಸ್ಪರ್ಧೆ ಆರಂಭಕ್ಕೂ ಮುನ್ನವೇ ವಿನಯ್ ತಮ್ಮ ಗುಂಪಿನ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಟಾಸ್ಕ್ ವೇಳೆ ತಳ್ಳಲು ಬಂದರೆ ಸೀದಾ ಕಪಾಳಕ್ಕೆ ಹೊಡೆದುಬಿಡುವ ಎಂದು... ಇಲ್ಲಿಂದಲೇ ಅವರು ಕಠೋರ ವ್ಯಕ್ತಿಯಾಗಿ ಪಂದ್ಯಕ್ಕೆ ಇಳಿದಿದ್ದಾರೆ. ಪಂದ್ಯದ ವೇಳೆ ಎರಡು ತಂಡಗಳು ಮುನ್ನುಗ್ಗಿದ್ದು, ವಸ್ತುವನ್ನು ಎತ್ತಿಕೊಳ್ಳುವಾಗ ಗಲಾಟೆ ನಡೆದಿದೆ.

ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಕಿತ್ತಾಟ

ಬಿಗ್ ಬಾಸ್ ಮನೆಗೆ ಬಂದಾಗಿನಿಂದ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಮೊದಲ ಕೆಲ ವಾರ ತಮ್ಮ ಜೊತೆಗೆ ಹರ ಹರ ಮಹಾದೇವಾದಲ್ಲಿ ಸತಿಯಾಗಿ ಕಾಣಿಸಿಕೊಂಡಿದ್ದ ನಟಿ ಸಂಗೀತಾ ಅವರನ್ನು ವಿನಯ್ ಟಾರ್ಗೆಟ್ ಮಾಡಿದ್ದರು. ಇದು ಕಾರ್ತಿಕ್‌ಗೆ ಇಷ್ಟ ಆಗಿರಲಿಲ್ಲ. ಇದಾದ ನಂತರ ಇಬ್ಬರು ಸ್ನೇಹಿತರಾಗಿದರು. ಈಗ ಮತ್ತೆ ಇಬ್ಬರ ಕಿತ್ತಾಟ ಮುಂದುವರೆದಿದೆ.

bigg-boss-kannada-season-10

ಗಂಡಸಿನ ತರ ಆಟ ಆಡು.... ಮರ್ಯಾದೆ ಇಲ್ಲದವರು. .ಮೈ ಮುಟ್ಟಬೇಡ ಹಾಗೆ ಹೀಗೆ ಎಂದು ವಿನಯ್ ಬೈದಿದ್ದು, ಇದಕ್ಕೆ ಕಾರ್ತಿಕ್ ಕೂಡ ಆವೇಶಭರಿತರಾಗಿ ವಿನಯ್ ಮೇಲೆ ಮುಗಿಬಿದ್ದಿದ್ದಾರೆ. ಮಧ್ಯೆ ಸಂಗೀತಾ ಕೂಡ ಮಾತನಾಡಿದ್ದಾರೆ. ಆದರೂ ವಿನಯ್ ಅವರ ಗಂಟಲು ಜೋರಾಗಿದ್ದು, ಮನೆ ಮಂದಿಯ ಜೊತೆಗೆ ಪ್ರೇಕ್ಷಕ ಪ್ರಭು ಕೂಡ ವಿನಯ್ ಮೇಲೆ ಕೋಪಗೊಂಡಿದ್ದಾರೆ.

ಬಾಯಿ ಮುಚ್ಚು..ಕಿತ್ತೋದವಳೇ ಎಂದು ನಮ್ರತಾ, ಸಂಗೀತಾ ಗಯ್ಯಾಳಿತ!

ಇನ್ನು, ನಟಿ ನಮ್ರತಾ ಗೌಡ ಮತ್ತು ಸಂಗೀತಾ ಕಿರಗೂರಿನ ಗಯ್ಯಾಳಿಗಳ ಹಾಗೆ ಜಗಳಕ್ಕೆ ಬಿದ್ದಿದ್ದಾರೆ. ನಮ್ರತಾ ಅವರನ್ನು ಸಂಗೀತಾ ಬಾಯಿ ಮುಚ್ಕೊಂಡು ಆಟ ಆಡು ಎಂದಿದ್ದಾರೆ. ಅದಕ್ಕೆ ನಮ್ರತಾ ಬಾಯಿ ಮುಚ್ಕೊಂಡು ಆಡು ಅನ್ನೋಕೆ ನೀನ್ಯಾವಳೆ ಎಂದು ತಿರುಗಿಬಿದ್ದಿದ್ದಾರೆ. ಇಷ್ಟಕ್ಕೆ ಮುಗಿಯದ ಇವರ ಜಗಳ, ಕಿತ್ತೋದವಳೇ ಎಂಬ ಪದ ಬಳಕೆವರೆಗೂ ಬಂದಿದೆ. ಇದಕ್ಕೆ ನೀನು ಕಿತ್ತೋದವಳು ಎಂದು ಸಂಗೀತಾ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ನಮ್ರತಾ ಗೌಡ ಅವರು ನಟಿ ತನಿಷಾ ಕುಪ್ಪಂಡ ಅವರ ಮೇಲೂ ಸಕತ್ ಜೋರು ಮಾಡಿದ್ದರು. ಇದು ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ನಮ್ರತಾ ಅವರನ್ನು ಪ್ರೇಕ್ಷಕರು ಚಮಚ ಗೀಫ್ಟ್ ಕಳಿಸಿ ಚಮಚಾಗಿರಿ ಮಾಡಬೇಡಿ ಎಂದಿದ್ದರು. ಇನ್ನು, ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.

More from Filmibeat

English summary
Bigg Boss kannada season 10 contestants fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X