BBK10: ಬೂದಿ ಮುಚ್ಚಿದ ಕೆಂಡದಂತಿದ ಬಿಗ್ ಬಾಸ್ ಮನೆ, ಕಿಚ್ಚನ ಮುಂದೆ ಕ್ಷಮೆ ಕೇಳಿದ್ದೆಲ್ಲಾ ಸುಳ್ಳಾ?

By ಎಸ್ ಸುಮಂತ್

ಸ್ಚಂತ ಮನೆಯಲ್ಲಿಯೇ ಇರುವ ಮೂರು ಮತ್ತೊಂದು ಮಂದಿಗಳಲ್ಲಿಯೇ ಮನ:ಸ್ತಾಪ ಸಹಜ. ಇನ್ನು ಹೊರಗಿನ ಪ್ರಪಂಚದ ಸಂಪರ್ಕವೇ ಇಲ್ಲದ, ನೋಡಿದವರ, ಮಾತನಾಡಿದವರ ಜೊತೆಗೆ ತಿಂಗಳುಗಟ್ಟಲೇ ಜೀವನ ನಡೆಸುವ ಮನೆ ಮಂದಿಯಲ್ಲಿ ಜಗಳ ಬರುವುದಿಲ್ಲವಾ..? ಜಗಳ ಬಂದರೆ ಖಂಡಿತಾ ಅಲ್ಲಿ ಸಮಸ್ಯೆಯೇ ಇರುವುದಿಲ್ಲ. ಆದರೆ, ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ನಡುವೆ ದ್ವೇಷದ ಬೀಜ ದೊಡ್ಡದಾಗಿ ಬೆಳೆಯುತ್ತಿದೆ.

ಮನ:ಸ್ತಾಪಗಳು, ಕೋಪ ಎಲ್ಲವೂ ಸಹಜ. ಒಂದೇ ದಿ‌ನಕ್ಕೆ ಈ ಜರ್ನಿ ಮುಗಿಯುವುದಲ್ಲ. ಅದಕ್ಕೆ ಅಂತಾನೇ ಕಿಚ್ಚ ಸುದೀಪ್ ವಾರಕ್ಕೆರಡು ಬಾರಿ, ತನ್ನ ಪಂಚಾಯ್ತಿಯಲ್ಲಿ ಸರಿ ತಪ್ಪುಗಳ ಲೆಕ್ಕಚಾರ ಮಾಡಿ, ಮನೆಯವರಿಗೆ ಮನವರಿಕೆ ಮಾಡಿಕೊಡುತ್ತಾರೆ. ಆಮೇಲೆ ಸರಿ ಆಗುತ್ತಾರೆ. ಆದರೆ, ಮತ್ತೆ ತಮ್ಮದೇ ರೀತಿಯಲ್ಲಿ ನಡೆದು ಮತ್ತೆ ಡ್ಯಾಮೇಜ್ ಮಾಡಿಕೊಳ್ಳುತ್ತಾರೆ. ಈಗ ಆಗಿದ್ದು ಅದೆ.

Bigg Boss Kannada Season 10 dec 11th promo about nomination time

ನಾಮಿನೇಷನ್ ಪ್ರಕ್ರಿಯೆ ಆರಂಭ

ಬಿಗ್ ಬಾಸ್ ಮನೆಯಲ್ಲಿ ದಿನಗಳು ಉರುಳುತ್ತಿವೆ. ಕಾಂಪಿಟೇಷನ್ ಟಫ್ ಆಗುತ್ತಿದೆ. ಕಳೆದ ವಾರ ಎಲಿಮಿನೇಷನ್ ಪ್ರಕ್ರಿಯೆಯೇ ಇರಲಿಲ್ಲ. ಇಬ್ಬರು ಹೊಸದಾಗಿ ಬೇರೆ ಸೇರಿಕೊಂಡಿದ್ದು ಆಗಿದೆ. ಇನ್ನು ಮುಂದೆ ಡಬ್ಬಲ್ ಎಲಿಮಿನೇಷನ್ ಆದರೂ ಆಗಬಹುದು. ಹೀಗಾಗಿ ಮನೆಯವರು ಗಮನ ಕೊಡಲೇಬೇಕಾಗಿದೆ. ಸೋಮವಾರ ಬಂದಿದೆ. ನಾಮಿನೇಷನ್ ಶುರು ಮಾಡಿದ್ದಾರೆ. ಪ್ರತಿ ಸಲದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಿನ್ನತೆ ಇರುತ್ತದೆ. ಅದರಂತೆ ಇಂದು ಫೋಟೋ ಅಂಟಿಸಿ, ಕಾರಣ ಹೇಳುವಂತೆ ಬಿಗ್ ಬಾಸ್ ತಿಳಿಸಿದೆ.

ಯಾರೆಲ್ಲಾ ನಾಮಿನೇಟ್ ಆದರೂ ಗೊತ್ತಾ..?

ನಾಮಿನೇಷನ್ ಆದವರನ್ನು ಉಳಿಸಿಕೊಳ್ಳುವುದು ಜನರ ಕೈನಲ್ಲಿ ಇರುತ್ತದೆ. ಯಾರು ಅರ್ಹರೋ ಅವರನ್ನು ಜನ ಖಂಡಿತ ಉಳಿಸುತ್ತಾರೆ. ಸೋಮವಾರವೇ ನಾಮಿನೇಷನ್ ಆದರೂ ಅವರನ್ನು ಉಳಿಸಲು ವೋಟಿಂಗ್ ಲೈನ್ ಆನ್ ಆಗುವುದೇ ಶುಕ್ರವಾರ ರಾತ್ರಿ. ಆಲ್ಮೋಸ್ಟ್ ಈ ವಾರ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಪವಿ, ಸಿರಿ, ವಿನಯ್, ಮೈಕೆಲ್, ಸಂಗೀತಾ, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಕಾರ್ತಿಕ್ ನಾಮಿನೇಷನ್ ಆಗಿದ್ದಾರೆ.

ಅಕ್ಕ-ತಮ್ಮ ಟಾರ್ಗೆಟ್ ಆದರಾ..?

ಬಿಗ್ ಬಾಸ್ ಮನೆಯಲ್ಲಿ ಎರಡು ಗುಂಪುಗಳು ಅಂದಿನಿಂದಲೂ ಮುಂದುವರೆದು ಬಿಟ್ಟಿದೆ. ಒಂದು ವಿನಯ್ ಗುಂಪು, ಮತ್ತೊಂದು ಸಂಗೀತಾ ಗುಂಪು. ಏನೇ ಮಾಡಿದರೂ ಎದುರಾಳಿ ತಂಡವನ್ನೇ ಟಾರ್ಗೆಟ್ ಮಾಡುತ್ತಾರೆ. ಕಳಪೆ, ನಾಮಿನೇಷನ್ ವಿಚಾರದಲ್ಲೂ ಅಷ್ಟೇ. ಈಗ ಸಂಗೀತಾ ಹಾಗೂ ಪ್ರತಾಪ್‌ರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ವರ್ತೂರು ಸಂತೋಷ್, ತನಿಷಾ ನಾಮಿನೇಟ್ ಮಾಡಿ, ಎದುರಾಳಿ ತಂಡಕ್ಕೆ ಗೌರವ ಕೊಡಲ್ಲ ಎಂದಿದ್ದಾರೆ. ಜಗಳ ಆಡುವುದಕ್ಕೆ, ಅವಾಂತರ ಆಗುವುದಕ್ಕೆ ಸಂಗೀತಾ ಕಾರಣ ಅಂತ ತುಕಾಲಿ ಹೇಳಿದ್ದಾರೆ. ಮೇಲ್ನೋಟಕ್ಕೆ ಚೆನ್ನಾಗಿ ಇದ್ದರು, ಮನಸ್ಸೊಳಗೆ ಅನುಮಾನವಿದೆ ಅಂತ ತುಕಾಲಿ ಹೇಳಿದ್ದಾರೆ.

Bigg Boss Kannada Season 10 dec 11th promo about nomination time

ಕಿಚ್ಚನ ಮಾತು ವ್ಯರ್ಥವಾಗಿ ಹೋಯಿತಾ..?

ನಿನ್ನೆ 'ಸೂಪರ್ ಸಂಡೇ ವಿತ್ ಸುದೀಪ' ಪಂಚಾಯ್ತಿಯಲ್ಲಿ ಹೂಗಳನ್ನು ನೀಡುವ ಮೂಲಕ ಕ್ಷಮೆ ಕೇಳುವ ಅವಕಾಶ ನೀಡಲಾಗಿತ್ತು. ಆಗ ಪ್ರತಾಪ್ ಬಳಿ ತುಕಾಲಿ ಸಂತೋಷ್, ತುಕಾಲಿ ಬಳಿ ಸಂಗೀತಾ ಬದಲಾವಣೆ ಬಯಸಿದರು. ಕ್ಷಮೆ ಕೇಳಿದರು. ತನಿಷಾ ಹಾಗೂ ವರ್ತೂರು ನಡುವೆ ಭಿನ್ನಾಭಿಪ್ರಾಯ ಇರುವುದನ್ನು ನೋಟೀಸ್ ಮಾಡಿ ಚರ್ಚೆ ಮಾಡಲಾಗಿತ್ತು. ಆದರೆ ಇಂದು ನಾಮಿನೇಷನ್‌ಗಾಗಿ ನೀಡಿದ ಕಾರಣಗಳು ಪಂಚಾಯ್ತಿಯ ಚರ್ಚೆಯನ್ನೆ ಉಲ್ಟಾ ಮಾಡಿಬಿಟ್ಟವು.

More from Filmibeat

English summary
BBK 10 December 11th episode about nomination time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X