BBK 10: ಕಳಪೆ ಪಟ್ಟ ಹೊತ್ತು ಎರಡನೇ ಬಾರಿ ಜೈಲಿಗೆ ಹೋದ ಸಂಗೀತಾ, ಈ ವಾರ ವಿನಯ್ ಉತ್ತಮ

By ಶ್ರುತಿ ಹರೀಶ್ ಗೌಡ

ಬಿಗ್ ಬಾಸ್ ಸೀಸನ್ 10 ಹಲವಾರು ವಿಶೇಷತೆಗಳಿಂದ ಕೂಡಿದ್ದು ಈಗ ಶತ್ರುಗಳಾಗಿದ್ದವರು ಮಿತ್ರರಾಗುತ್ತಿದ್ದಾರೆ. ಮಿತ್ರರಾಗಿದ್ದವರು ಶತ್ರುಗಳಾಗುತ್ತಿದ್ದಾರೆ. ಸಂಗೀತಾ ತಮ್ಮ ಅಹಂ ಎಲ್ಲರ ಬಳಿಯಲ್ಲಿ ಶತ್ರುತ್ವವನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಸಂಗೀತಾ ಮಾತ್ರ ನಾನು ಯಾರ ತಂಡಕ್ಕೂ ಸೇರೋದಿಲ್ಲ ಸಿಂಗಲ್ ಆಗಿಯೇ ಆಟವನ್ನು ಆಡುತ್ತೇನೆ ಎಂದು ಪ್ರಮಾಣವನ್ನು ಮಾಡಿದಂತಿದೆ. ಇದೇ ವೇಳೆ ಒಬ್ಬರೇ ಕುಳಿತುಕೊಂಡು "ಯಾರು ಇರಲಿ ಇಲ್ಲದೆ ಇರಲಿ ನಾನಂತೂ ಒಬ್ಬಳೇ ಆಟವನ್ನು ಆಡುತ್ತೇನೆ. ಕೊನೆಗೆ ಎಲ್ಲರೂ ಮೋಸ ಮಾಡಿಬಿಟ್ಟರು" ಎಂದು ಕಣ್ಣೀರನ್ನು ಕೂಡ ಹಾಕಿದ್ದಾರೆ. ನಾನು ವಿನಯ್ ಗೆ ಏನು ಮಾಡಲಿಲ್ಲ ಆದರೂ ಕೂಡ ವಿನಯ್ ಪ್ರತಿ ಬಾರಿ ನನ್ನನ್ನು ಟಾರ್ಗೆಟ್ ಮಾಡುತ್ತಾ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Bigg Boss Kannada Season 10 dec 22nd episode Sangeetha became worst and went jail

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಮಾತ್ರ ಸಂಗೀತಾ ಜೊತೆಗೆ ಚೆನ್ನಾಗಿ ಮಾತನಾಡುತ್ತಾ ಇದ್ದಾರೆ. ಇನ್ನು ಸಂಗೀತಾ ತಂಡದಲ್ಲಿ ಇದ್ದಾಗ ಆಡಿದ ಮಾತನ್ನು ನಮ್ರತಾ, ವಿನಯ್ ಮುಂದೆ ಹೇಳುತ್ತಿದ್ದರು. ಹೀಗಾಗಿ ಸಂಗೀತಾಗೆ ನಮ್ರತಾ ಮೇಲೆ ಕೂಡ ನಂಬಿಕೆ ಇಲ್ಲ. ಈಗ ಏನಿದ್ದರೂ ಪ್ರತಾಪ್ ಜೊತೆ ಮಾತ್ರ ಸಂಗೀತಾ ಮಾತನಾಡುತ್ತಾ ಇದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈಗ ವಾರದ ಕೊನೆಯ ಹಂತಕ್ಕೆ ಬಂದಿದ್ದು, ಇಂದು ಕಳಪೆ ಪ್ರದರ್ಶನ ಹಾಗೂ ಉತ್ತಮ ಪ್ರದರ್ಶನ ಪಡೆದವರು ಯಾರು ಎಂಬುದರ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯುತ್ತಿದೆ. ಎಲ್ಲರೂ ಕೂಡ ಒಮ್ಮತದಿಂದ ಸಂಗೀತಾ ಅವರದ್ದು ಕಳಪೆ ಪ್ರದರ್ಶನ ಎಂದು ಹೇಳಿದ್ದಾರೆ. ಜಿಯೋ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಂಗೀತಾ ಎರಡನೇ ಬಾರಿ ಜೈಲು ಸೇರಿದ್ದಾರೆ.

ಎರಡನೇ ಬಾರಿ ಜೈಲಿಗೆ ಹೋದ ಸಂಗೀತಾ

ಈ ವಾರ ಸಂಗೀತಾ ಜೊತೆ ಯಾರೂ ಕೂಡ ಇರಲಿಲ್ಲ. ಬಕೆಟ್ ಹಿಡಿಯುತ್ತಾ ಇದ್ದಾರೆ ಅನ್ನೋ ಮಾತಿಗೆ ಬೇಸರ ಮಾಡಿಕೊಂಡು ಕಾರ್ತಿಕ್ ಕೂಡ ಸಂಗೀತಾ ಜೊತೆ ಇನ್ಮುಂದೆ ಇರುವುದಿಲ್ಲ ಎಂದು ಹೊರಗೆ ಬಂದಿದ್ದಾರೆ. ವಾರ ಪೂರ್ತಿ ಸಂಗೀತಾ ಸಿಂಗಲ್ ಆಗಿ ಆಟವನ್ನು ಆಡಿಕೊಂಡು ಬಂದಿದ್ದಾರೆ. ಇನ್ನು ಈ ವಾರದ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಸಂಗೀತಾ ಜೈಲಿಗೆ ಹೋಗಿದ್ದಾರೆ. ಮನೆಯಲ್ಲಿರುವ ಅಷ್ಟು ಸದಸ್ಯರು ಕೂಡ ಸಂಗೀತಾ ಹೆಸರನ್ನೇ ತೆಗೆದುಕೊಂಡಿದ್ದು ವಿಶೇಷ.

Bigg Boss Kannada Season 10 dec 22nd episode Sangeetha became worst and went jail

ಈ ವಾರ ವಿನಯ್‌ಗೆ ಉತ್ತಮ ಎಂಬ ಪಟ್ಟ ಸಿಕ್ಕಿದೆ. ನಮ್ರತಾ ಈ ವಾರ ಉತ್ತಮ ಪ್ರದರ್ಶನ ನೀಡಿದವರು ಎಂಬ ಪದಕವನ್ನು ತಂದು ಹಾಕಿದ್ದಾರೆ. ಕಾರ್ತಿಕ್ ಕೂಡ ವಿನಯ್ ಈ ವಾರ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ. ಈ ಮಾತು ಕೇಳಿ ಸಂಗೀತಾಗೆ ಬೇಸರವಾಗಿದೆ. ಯಾಕೆಂದರೆ ಕಾರ್ತಿಕ್ ಒಮ್ಮೆಯೂ ಕೂಡ ಸಂಗೀತಾಗೆ ಕಳಪೆ ಪ್ರದರ್ಶನ ನೀಡಿದ್ದಾರೆಂದು ಹೇಳಿರಲಿಲ್ಲ. ಆದರೆ, ಈ ವಾರ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ್ದು ಬೇಸರ ತರಿಸಿದೆ.

"ಕಾಲವೇ ಉತ್ತರಿಸುತ್ತೆ" ಎಂದ ಸಂಗೀತಾ

ಇನ್ನು ಜೈಲಿಗೆ ಹೋಗುವ ವೇಳೆ ಸಂಗೀತಾ ಇದೆಲ್ಲದಕ್ಕೂ ಕೂಡ ಕಾಲವೇ ಉತ್ತರವನ್ನು ನೀಡುತ್ತದೆ ಎಂದಿದ್ದಾರೆ. ಪ್ರತಾಪ್ ಜೊತೆಯಲ್ಲಿ ಈ ಮನೆಯಲ್ಲಿ ಯಾರನ್ನೂ ಕೂಡ ನಂಬಬಾರದು ಎಂಬ ಮಾತನ್ನು ಹೇಳಿದ್ದಾರೆ. ನಮ್ರತಾ, ಸಂಗೀತಾಗೆ ಜೈಲಿಗೆ ಹೋಗುವ ಬಟ್ಟೆಯನ್ನು ತಂದು ಕೊಟ್ಟಿದ್ದು, ಸಂಗೀತಾ ಎರಡನೇ ಬಾರಿಗೆ ಜೈಲಿಗೆ ಹೋಗಿದ್ದಾರೆ.

ಮೊದಲ ಬಾರಿ ಹೋದಾಗಲೂ ಸಹ ಕಣ್ಣೀರು ಹಾಕಿದ್ದರು. ಜೈಲಿನಿಂದ ಹೊರಗೆ ಬಂದಾಗ ಕಾರ್ತಿಕ್, ಸಂಗೀತಾ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದರು. ಆದರೆ, ಈ ವಾರ ಏನು ಆಗುವುದಿಲ್ಲ. ಸಂಗೀತಾ ಒಬ್ಬಂಟಿಯಾಗಿ ಜೈಲಿಗೆ ಹೋಗಿದ್ದು, ಕಾರ್ತಿಕ್ ಹಾಗೂ ತನಿಷಾ ಅವರ ಸಂತ್ವಾನದ ಮಾತು‌ ಕೂಡ ಸಿಗುವುದಿಲ್ಲ. ಸಂಗೀತಾ ಈಗ ಬಿಗ್ ಬಾಸ್ ಮನೆಯಲ್ಲಿ ಒಬ್ಬಂಟಿಯಾಗಿದ್ದಾರೆ.

More from Filmibeat

English summary
Bigg Boss Kannada Season 10 dec 22nd episode Sangeetha became worst and went jail for second time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X