BBK10: ಚಾರ್ಲಿ ಬೆಡಗಿಯ ಬಾಯ್ ಫ್ರೆಂಡ್ ಬಗ್ಗೆನೇ ಚರ್ಚೆ, ಕಾರ್ತಿಕ್ ಮುಂದೆಯೇ ಹೀಗೆ ಹೇಳಿದ್ಯಾಕೆ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ದಿನಗಳು ಉರುಳುತ್ತಿವೆ. ಫೈನಲ್ ಹತ್ತಿರವಾಗುತ್ತಿದೆ. ಹೀಗಾಗಿ ಮನೆ ಮಂದಿಯೆಲ್ಲಾ ಆಟದ ಕಡೆಗೆ ಗಮನ ನೀಡುತ್ತಿದ್ದಾರೆ. ಮನೆಯವರಿಂದ ದೂರ ಇದ್ದು, ಡಲ್ ಆಗಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಇತ್ತೀಚೆಗಷ್ಟೇ ಬೂಸ್ಟ್ ನೀಡಿತ್ತು. ಪ್ರೀತಿ ಪಾತ್ರರನ್ನು ಕರೆಸಿ, ಧೈರ್ಯ ತುಂಬಿದ್ದರು. ಮನೆಯವರಿಂದ ದೂರವಿದ್ದ ಸ್ಪರ್ಧಿಗಳು ಮನೆಯವರನ್ನು ಕಂಡು ಸಿಕ್ಕಾಪಟ್ಟೆ ಖುಷಿ ಪಟ್ಟರು.

ಮನೆಯವರ ಜೊತೆಗೆ ಮಾತನಾಡಿದ ಮೇಲೆ ಆ ಗುಂಗಿನಿಂದಾನೇ ತೇಲಾಡುತ್ತಿದ್ದರು. ಮನೆಯವರು ಹೇಳಿದ ಮಾತುಗಳು, ಅವರ ಸ್ಪೂರ್ತಿಯ ಮಾತುಗಳು, ತಮ್ಮ ಬಗ್ಗೆ ಯಾವುದೇ ಬೇಸರವಿಲ್ಲದ ಇರುವುದು ಈ ಎಲ್ಲಾ ವಿಚಾರಗಳು ಸ್ಪರ್ಧಿಗಳಿಗೆ ಸಂತಸವನ್ನು ನೀಡಿತ್ತು. ಇದೇ ಖುಷಿಯಲ್ಲಿ ಸಂಗೀತಾ ಡ್ರೀಮ್ ಬಾಯ್ ಕನಸನ್ನು ಬಿಚ್ಚಿಟ್ಟಿದ್ದಾರೆ.

Bigg Boss Kannada season 10 Dec 30th episode about Sangeethas dream boy qualification

ಸಂಗೀತಾ ಡ್ರೀಮ್ ಬಾಯ್ ಬಗ್ಗೆ ಕುತೂಹಲ

ಮನೆಯವರೆಲ್ಲ ಬಂದು ಹೋದ ಮೇಲೆ ಮನೆ ಮಂದಿ ತುಂಬಾ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಸಂಗೀತಾ ಫುಲ್ ನಗುಮುಖದಲ್ಲಿದ್ದಾರೆ. ಅದರಲ್ಲೂ ಸಂಗೀತಾ‌ ಮನೆ ಕಡೆಯಿಂದ ಅಪ್ಪ-ಅಮ್ಮ, ಅಣ್ಣ-ಅತ್ತಿಗೆ ಬಂದಿದ್ದರು. ಯಾವ ಸ್ಪರ್ಧಿಗಳಿಗೂ ಅಷ್ಟೊಂದು ಜನ ಮನೆಯೊಳಗೆ ಬಂದಿರಲಿಲ್ಲ. ಇದೇ ಖುಷಿಯಲ್ಲಿದ್ದ ಸಂಗೀತಾ, ತನ್ನ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿರಿ ಜೊತೆಗೆ ಅಡುಗೆ ಮನೆಯಲ್ಲಿ ಕುಳಿತು ತಮ್ಮ ಡ್ರೀಮ್ ಬಾಯ್ ಬಗ್ಗೆ ಮಾತನಾಡಿದ್ದಾರೆ.

ಸಂಗೀತಾ ಡ್ರೀಮ್ ಬಾಯ್ ಹೇಗಿರಬೇಕು?

ಸಿರಿಗೆ ಕುತೂಹಲವೂ ಹೆಚ್ಚಾಗಿತ್ತು. ಸಂಗೀತಾ ಲೈಫ್ ಪಾರ್ಟ್ನರ್ ಆಗುವವರು ಹೇಗಿರಬೇಕು ಎಂಬ ಕುತೂಹಲವಿತ್ತು. ಹೀಗಾಗಿ ಸಂಗೀತಾ ಅವರನ್ನು ಕೇಳುತ್ತಾ ಕುಳಿತರು. ಮ್ಯೂಸಿಕ್ ಕೇಳುವವನಾಗಿರಬೇಕು, ನನ್ನ ಅರ್ಥ ಮಾಡಿಕೊಳ್ಳಬೇಕು, ರೊಮ್ಯಾಂಟಿಕ್ ಇರಬೇಕು, ಎಲ್ಲಿಯೂ ನನ್ನ ಬಿಟ್ಟುಕೊಡಬಾರದು. ಹಾಗೇ ಮಾಡಿದರೆ ನನಗೆ ಕೋಪ ಬಂದು ಬಿಡುತ್ತದೆ. ಎಲ್ಲರೂ ಹೇಳುತ್ತಾರೆ, ಅಂಥ ಹುಡುಗ ನಿನಗೆ ಸಿಗುವುದು ಬಹಳ ಕಷ್ಟ ಅಂತ ಎಂದು ಸಂಗೀತಾ ಹೇಳಿಕೊಂಡಿದ್ದಾರೆ.

ಕಾರ್ತಿಕ್‌ಗೂ ಹೆಚ್ಚಾಯ್ತು ಕುತೂಹಲ

ಸಂಗೀತಾ ತನ್ನ ಡ್ರೀಮ್ ಬಾಯ್ ಬಗ್ಗೆ ಹೇಳುವಾಗ ಕಾರ್ತಿಕ್ ಪಾತ್ರೆ ತೊಳೆಯುತ್ತಾ ಇದ್ದರು. ಆಸಕ್ತಿ ಅದೇಗೆ ಬಂತೋ ಏನೋ ತಕ್ಷಣ, ನಾನು ಬರುತ್ತೀನಿ ಅಂತ ಸಂಗೀತಾ ಮುಂದೆ ಕೂತು ಕೇಳುವುದಕ್ಕೆ ಶುರು ಮಾಡಿದರು. ಸಿರಿ ಅವರಿಗೆ ಹೇಳುತ್ತಿದ್ದ ಸಂಗೀತಾ, ಅದನ್ನೇ ಮುಂದುವರೆಸಿದ್ದರು. ಸಂಗೀತಾ ಅಪ್ಪ- ಅಮ್ಮ ಮನೆಗೆ ಬಂದಾಗಲೂ ಚಿಕ್ಕವಳಿದ್ದಾಗಿನಿಂದ ಇದೇ ರೀತಿಯ ಹಠ ಎಂಬುದನ್ನು ಹೇಳಿ ಹೋಗಿದ್ದರು. ಈಗ ಕಾರ್ತಿಕ್ ಮುಂದೆ ಕುಳಿತಾಗ ತನಗೆ ಇಷ್ಟವಾಗದೆ ಇರುವ ರೀತಿ ನಡೆದುಕೊಂಡರೆ ತಿರುಗಿಯೂ ನೋಡಲ್ಲ ಎಂಬುದನ್ನು ಕಾರ್ತಿಕ್‌ಗೆ ಸ್ಪಷ್ಟಪಡಿಸಿದ್ದಾರೆ.

ಕಾರ್ತಿಕ್‌ಗೆ ಉರಿಸುವುದಕ್ಕೆ ಹೀಗೆ ಹೇಳಿದ್ರಾ?

ಬಿಗ್ ಬಾಸ್ ಮನೆಗೆ ಬಂದ ಮೇಲೆ ಕಾರ್ತಿಕ್ ಹಾಗೂ ಸಂಗೀತಾ ಆರಂಭದಿಂದಾನೂ ಕ್ಲೋಸ್ ಆಗಿಯೇ ಇದ್ದವರು. ನೋಡುಗರಿಗೆ ಅದು ಪ್ರೀತಿ-ಪ್ರೇಮ ಅನ್ನಿಸಿತ್ತು. ಆದರೆ ಅದು ಅದಲ್ಲ ಅಂತ ಸಂಗೀತಾ ಸ್ಪಷ್ಟಪಡಿಸಿದ್ದರು. ಫ್ರೆಂಡ್ಸ್ ಅಂತ ಅಕ್ಸೆಪ್ಟ್ ಮಾಡಿಕೊಂಡ ಮೇಲೆ ಎಲ್ಲಾ ಸಮಯದಲ್ಲೂ ಜೊತೆಗೆ ನಿಲ್ಲಬೇಕು ಎಂದು ಸಂಗೀತಾ ಬಯಸುತ್ತಾರೆ. ಕಾರ್ತಿಕ್ ಈ ವಿಚಾರದಲ್ಲಿ ಎಡವಿದ ಮೇಲೆ ಸಂಗೀತಾ ತನ್ನ ಫ್ರೆಂಡ್ಶಿಪ್ ಕಳೆದುಕೊಂಡಿದ್ದಾರೆ. ಹೇಗೆ ಅಂದರೆ‌ ಮನೆಯಲ್ಲಿ ಕಾರ್ತಿಕ್ ಹಾಗೂ ತನಿಷಾ ಇದ್ದರು ಇಲ್ಲವೆಂಬಂತೆ ನೋಡುತ್ತಿದ್ದಾರೆ.

More from Filmibeat

English summary
BBK 10 about Sangeetha talking about dream boy qualification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X