ಏಳು ಮಂದಿ ಸದಸ್ಯರಲ್ಲಿ ನಾಮಿನೇಟ್ ಆಗೋದು ಯಾರು..!? ತಮ್ಮ ಗೇಮ್ ಚೇಂಜ್ ಮಾಡಿದ್ರಾ ಕಾರ್ತಿಕ್..!

By Shruthi Harishgowda

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಸಂಕುಚಿತವಾಗುತ್ತಾ ಹೋಗುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಂಟು ಮಂದಿ ಸದಸ್ಯರು ಅಷ್ಟೇ ಇದ್ದಾರೆ. ಅದರಲ್ಲಿ ಏಳು ಮಂದಿಗೆ ನಾಮಿನೇಷನ್ ಭೂತ ಕಾಡುತ್ತಿದೆ. ಮನೆಯಲ್ಲಿ ಇರುವ ಸದಸ್ಯರು ತಮಗೆ ಯಾರು ಇಷ್ಟ ಇಲ್ಲವೋ ಅವರನ್ನ ನ್ಯಾಮಿನೇಟ್ ಮಾಡುವ ಬರದಲ್ಲಿ ಇದ್ದಾರೆ. ಎಲ್ಲರಿಗೂ ಕೂಡ ಟಾಪ್ ಫೈವ್‌ನಲ್ಲೆ ನನ್ನ ಹೆಸರು ಇರಬೇಕು ಎಂಬ ಆಸೆ ಕಾಡುತ್ತಿರುವಂತೆ ಇದೆ. ವಿನಯ್ ಅಂತು ನಾನೇ ಈ ಸಲದ ಬಿಗ್ ಬಾಸ್ ವಿನ್ನರ್ ಎಂಬಂತೆ ನಡೆದುಕೊಳ್ಳುತ್ತಾ ಇದ್ದಾರೆ.

ವರ್ತೂರು ಸಂತೋಷ್ ಕೂಡ ನಾನು ಈ ಬಾರಿಯೂ ಕೂಡ ನಾಮಿನೇಷನ್ ಆಗುತ್ತೇನೆ ಎಂದು ತನಿಷಾ ಜೊತೆಯಲ್ಲಿ ಹೇಳಿದ್ದಾರೆ. ನೀನು ಕಾರ್ತಿಕ್ ಜೊತೆಯಲ್ಲಿ ಅತಿ ಹೆಚ್ಚು ಸೇರಬೇಡ ನೀನು ಇನ್ಮುಂದೆ ನಿನ್ನದೇ ಆಟವನ್ನು ಶುರು ಮಾಡಿ ಟಾಪ್ 5ನಲ್ಲಿ ಬರಬೇಕು ಎಂಬ ಸಲಹೆ ಕೊಟ್ಟಿದ್ದಾರೆ. ಪ್ರತಾಪ್ ಹಾಗೂ ವರ್ತೂರು ಸಂತೋಷ್ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ಅಷ್ಟೇ ಅಲ್ಲದೆ ಕಾರ್ತಿಕ್ ಅಂದು ಹೇಳಿದಂತೆ ಗೇಮ್ ಚೇಂಜ್ ಮಾಡಿಕೊಳ್ಳುತ್ತಾ ಇದ್ದಾರೆ. ವಿನಯ್ ನಾನು ಇನ್ಮುಂದೆ ನಾನು ಯಾವ ರೀತಿ ಇದ್ದೆ ಅದೇ ರೀತಿ ಅಗ್ರೆಸ್ಸಿವಾಗಿ ಇರುತ್ತೇನೆ ಎಂದಿದ್ದಾರೆ.

Bigg Boss Kannada Season 10: Details about Bigg boss 14 week nomination

ಬಿಗ್ ಬಾಸ್ ಸೆಮಿ ಫೈನಲ್‌ಗೆ ಸಮೀಪಿಸುತ್ತಿದ್ದು ಈ ವಾರದ ಎಲಿಮಿನೇಷನ್ ಯಾವ ರೀತಿ ಇರಲಿದೆ ಎಂಬುವುದು ಕುತೂಹಲ ಕೆರಳಿಸಿದೆ. ಮನೆಯಲ್ಲಿ ಎಂಟು ಮಂದಿ ಸದಸ್ಯರಿದ್ದಾರೆ. ಫೈನಲ್‌ಗೆ ಐದು ಮಂದಿ ಅಷ್ಟೇ ಹೋಗಲಿದ್ದು ಈ ಬಾರಿ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. ಪ್ರತಾಪ್ ಹಾಗೂ ವರ್ತೂರು ಸಂತೋಷ್ ರವರು ಈ ಬಾರಿಯೂ ಕೂಡ ನಾಮಿನೇಟ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಈ ವಾರದಿಂದ ಮತ್ತಷ್ಟು ತಪ್ಪು ಕಾಂಪಿಟೇಶನ್ ಬಿಗ್ ಬಾಸ್ ಮನೆಯಲ್ಲಿ ನಡೆಯಲಿದೆ.

ಏಳು ಮಂದಿ ಸದಸ್ಯರಿಗೆ ನಾಮಿನೇಷನ್ ಸಂಕಟ

ಬಿಗ್ ಬಾಸ್ ಮನೆಯಲ್ಲಿ ಈಗ ಎಂಟು ಮಂದಿ ಸದಸ್ಯರು ಇದ್ದಾರೆ. ಪ್ರತಾಪ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ತನಿಷಾ, ನಮ್ರತಾ, ಸಂಗೀತಾ ಹಾಗೂ ವಿನಯ್ ಇಷ್ಟು ಜನರಲ್ಲಿ ಏಳು ಮಂದಿ ಸದಸ್ಯರಿಗೆ ನಾಮಿನೇಷನ್ ಸಂಕಟ ಎದುರಾಗಿದೆ. ಈ ವಾರ ಸಂಗೀತಾ ಕ್ಯಾಪ್ಟನ್ ಆಗಿದ್ದರಿಂದ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಸಂಗೀತಾ ಕೊನೆಯಲ್ಲಿ ಕ್ಯಾಪ್ಟನ್ ಆಗಿದ್ದು ಸಂಗೀತಾಗೆ ಬೋನಸ್ ಪಾಯಿಂಟ್ ಸಿಕ್ಕಿದೆ. ಸದ್ಯಕ್ಕೆ ಏಳು ಮಂದಿ ಸದಸ್ಯರಲ್ಲಿ ಅತಿ ಹೆಚ್ಚು ಟಾರ್ಗೆಟ್ ಆಗುತ್ತಿರುವುದು ವರ್ತೂರು ಸಂತೋಷ್ ಹಾಗೂ ಪ್ರತಾಪ್. ನಮ್ರತಾ ಹೆಸರನ್ನು ಕೂಡ ಮನೆಯ ಇಬ್ಬರು ಸದಸ್ಯರು ನಾಮಿನೇಟ್ ಮಾಡಲು ತೆಗೆದುಕೊಂಡಿದ್ದಾರೆ. ಅದರಲ್ಲಿ ತನಿಷಾ ಕೂಡ ಒಬ್ಬರಾಗಿದ್ದಾರೆ.

ನಮ್ರತಾ ಅವರ ಹೆಸರನ್ನು ತನಿಷಾ ತೆಗೆದುಕೊಂಡಿದ್ದಾರೆ. ನಮ್ರತಾ ಕಳೆದ ನಾಲ್ಕೈದು ವಾರದಿಂದಲೂ ಕೂಡ ನ್ಯಾಮಿನಟ್ ಆಗಿರಲಿಲ್ಲ ಸದ್ಯಕ್ಕೆ ಈ ವಾರ ನಾಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ. ಮೊದಲಿನಿಂದಲೂ ವಿನಯ್ ಹಾಗೂ ಪ್ರತಾಪ್ ನಡುವೆ ಶೀತಲ ಸಮರ ನಡೆಯುತ್ತಿದೆ. ಈಗ ಪ್ರತಾಪ್ ಹಾಗೂ ವಿನಯ್ ಅವರು ಒಬ್ಬರಿಗೊಬ್ಬರು ನಾಮಿನೇಟ್ ಮಾಡಿಕೊಂಡಿದ್ದಾರೆ.

Bigg Boss Kannada Season 10: Details about Bigg boss 14 week nomination

ಗೇಮ್ ಚೇಂಜ್ ಮಾಡಿದ ಕಾರ್ತಿಕ್

ಕಾರ್ತಿಕ್ ಹಾಗೂ ತನಿಷಾ ಇಬ್ಬರೂ ಕೂಡ ಒಬ್ಬರಿಗೊಬ್ಬರನ್ನು ರಕ್ಷಣೆ ಮಾಡಿಕೊಂಡು ಆಟವಾಡುತ್ತಾ ಇದ್ದರು. ತನಿಷಾ ಕ್ಯಾಪ್ಟನ್ ಆದಾಗ ಕೆಲವು ಬಾರಿ ಕಾರ್ತಿಕ್ ಅವರನ್ನು ಮನೆಯಲ್ಲೇ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನವನ್ನು ಮಾಡಿದ್ದರು. ಆದರೆ ಈಗ ಕಾರ್ತಿಕ್ ಅವರು ತಮ್ಮ ಗೇಮ್ ಚೇಂಜ್ ಮಾಡಿದಂತೆ ಇದೆ ಇದಕ್ಕಾಗಿ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಅವರು ಕೆಲವೊಮ್ಮೆ ಮಾತನಾಡುವ ಮಾತಿಗೆ ಕ್ಲಾರಿಟಿ ಇರೋದಿಲ್ಲ ಎಂದು ಹೇಳುವ ಮೂಲಕ ಈ ವಾರದ ನಾಮಿನೇಷನ್ ಲಿಸ್ಟ್‌ಗೆ ತನಿಷಾ ಹೆಸರು ತೆಗೆದುಕೊಂಡಿದ್ದಾರೆ.

ವರ್ತೂರು ಸಂತೋಷ್ ಅವರನ್ನು ನಮ್ರತಾ ಹಾಗೂ ಕಾರ್ತಿಕ್ ಇಬ್ಬರು ಕೂಡ ನಾಮಿನೇಟ್ ಮಾಡಿದ್ದಾರೆ. ಇನ್ನೂ ಒಂದು ವೋಟ್ ಬಿದ್ದರೆ ವರ್ತೂರು ಸಂತೋಷ್ ಅವರು ಈ ವಾರವೂ ಕೂಡ ನಾಮಿನೇಷನ್ ಲಿಸ್ಟ್ ನಲ್ಲಿ ಇರಲಿದ್ದಾರೆ. ಪ್ರತಾಪ್ ವಿನಯ್ ಅವರು ಈ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಮಾತನಾಡೋದಿಲ್ಲ ಅವರ ನಾಲಿಗೆಗೆ ಲಗಾಮು ಹಾಕಿಕೊಳ್ಳದವರು ಈ ಮನೆಯಲ್ಲಿ ಇರಲು ಯೋಗ್ಯರಲ್ಲ ಎಂದು ಕಾರಣವನ್ನಾಗಿ ನೀಡಿ ವಿನಯ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ವಿನಯ್ ಕೂಡ ಪ್ರತಾಪ್ ಸಿಂಪತಿ ಕಾರ್ಡ್ ಪ್ಲೇ ಮಾಡಿಕೊಂಡೆ ಇಲ್ಲಿತನಕ ಬಂದಿದ್ದಾನೆ ಅವನು ಈ ಮನೆಯಲ್ಲಿ ಉಳಿಯಲು ಯೋಗ್ಯನಲ್ಲ ಎಂದು ನಾಮಿನೇಟ್ ಮಾಡಿದ್ದಾರೆ. ಇಲ್ಲೂ ಕೂಡ ವಿನಯ್ ಹಾಗೂ ಪ್ರತಾಪ್ ಜಗಳ ಕ್ಯಾರಿ ಆಗುತ್ತಿದೆ.

More from Filmibeat

English summary
Bigg Boss Kannada 10: details about 14 week nomination.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X