BBK10: ಟಾಸ್ಕ್‌ನಿಂದ ಕಾರ್ತಿಕ್ ಹೊರಗಿಟ್ಟು ತಪ್ಪು ಮಾಡಿದ್ರಾ ಪ್ರತಾಪ್? ಲೆಕ್ಕಾಚಾರ ತಪ್ಪಾಗಿದ್ದೆಲ್ಲಿ?
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದಕ್ಕೆ ಟಾಸ್ಕ್ ಬಹಳ ಮುಖ್ಯ. ಒಮ್ಮೊಮ್ಮೆ ಒಬ್ಬೊಬ್ಬರಿಗೆ ಟಾಸ್ಕ್ ಚಾಲೆಂಜ್ ನೀಡಿದರೆ, ಇನ್ನು ಕೆಲವೊಮ್ಮೆ ತಂಡವಾಗಿ ಅವಕಾಶ ನೀಡುತ್ತದೆ ಬಿಗ್ ಬಾಸ್. ಈ ವಾರ ಎರಡು ತಂಡವಾಗಿ ಆಟ ಆಡಲು ಅವಕಾಶ ನೀಡಿತ್ತು. ಎರಡು ತಂಡವನ್ನು ಮಾಡಲಾಗಿತ್ತು.
ಎರಡು ತಂಡದಲ್ಲಿ ಸಮಾನವಾಗಿ ಜನ ಇರಬೇಕಿತ್ತು. ಆದರೆ, ಪ್ರತಾಪ್ ಮಣ್ಣಿನ ಮಗ ತಂಡದಲ್ಲಿ ಒಬ್ಬರು ಹೆಚ್ಚಾಗಿದ್ದರು. ಬಿಗ್ ಬಾಸ್ ಅದಕ್ಕೆ ಸೂಚನೆ ನೀಡಿದ್ದರು. ಒಬ್ಬರನ್ನು ಹೊರಗೆ ಇಡಬೇಕು ಎಂಬ ಸೂಚನೆ ನೀಡಿದಾಗ ಪ್ರತಾಪ್ ಹೊರಗೆ ಇಟ್ಟಿದ್ದು ಕಾರ್ತಿಕ್ ಅವರನ್ನು.

ಎಲ್ಲಾ ಆಟಗಳ ಉಸ್ತುವಾರಿ ವಹಿಸಿದ್ದ ಕಾರ್ತಿಕ್
ಪ್ರತಾಪ್ ಪ್ಲ್ಯಾನ್ ಸಾಕಷ್ಟು ಬಾರಿ ವರ್ಕೌಟ್ ಆಗಿದೆ. ಆದರೆ, ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಪ್ರತಾಲ್ ಎಡವಿದರಾ ಎಂಬ ಅನುಮಾನ ಕಾಡಿದೆ. ಈ ವಾರದ ಟಾಸ್ಕ್‌ನಲ್ಲಿ ಕಾರ್ತಿಕ್ ಅವರನ್ನು ಪ್ರತಾಪ್ ಹೊರಗಿಟ್ಟರು. ಆದರೆ, ಬಿಗ್ ಬಾಸ್ ಕಾರ್ತಿಕ್ ಅವರನ್ನು ಸುಮ್ಮನೆ ಕೂರುವುದಕ್ಕೆ ಬಿಡಲಿಲ್ಲ. ಎಲ್ಲಾ ಟಾಸ್ಕ್‌ಗಳಲ್ಲಿಯೂ ಉಸ್ತುವಾರಿ ವಹಿಸುವುದಕ್ಕೆ ಸೂಚನೆ ನೀಡಿತ್ತು. ಅದರಂತೆ ಕಾರ್ತಿಕ್ ಉಸ್ತುವಾರಿ ವಹಿಸಿದ್ದರು.
ವಿಕ್ರಾಂತ್ ತಂಡದಿಂದ ಅಗ್ರೆಸ್ಸಿವ್ ಆಟ
ಮಣ್ಣಿನ ಮಗ ಹಾಗೂ ವಿಕ್ರಾಂತ್ ಎರಡು ತಂಡಗಳು ಹಲವು ಆಟಗಳನ್ನು ಆಡುವುದಕ್ಕೆ ಶುರು ಮಾಡಿದವು. ಈ ವಾರ ಫಿಸಿಕಲ್ ಟಾಸ್ಕ್ ಅನ್ನೇ ಹೆಚ್ಚಾಗಿ ನೀಡಿತ್ತು. ವಿಕ್ರಾಂತ್ ತಂಡದಲ್ಲಿ ಜೋರು ಮಾತು, ಸ್ಟ್ರಾಂಗ್ ಆಗಿ ಆಡುವವರೇ ಇದ್ದರು. ಆದರೆ, ಮಣ್ಣಿನ ಮಗ ತಂಡದಲ್ಲಿ ಅಗ್ರೆಸ್ಸಿವ್ ಆಗಿ ಆಡುವಂತಹ ಕಾರ್ತಿಕ್ ಅವರನ್ನೇ ಹೊರಗೆ ಇಡಲಾಗಿತ್ತು. ಹೀಗಾಗಿಯೇ ಎಲ್ಲಾ ಆಟದಲ್ಲೂ ವಿಕ್ರಾಂತ್ ತಂಡ ಗೆಲುವು ಸಾಧಿಸಿತ್ತು. ಇದು ತುಕಾಲಿಯ ಗಮನಕ್ಕೂ ಬಂದಿತ್ತು. ಹೀಗಾಗಿ ಪ್ರತಾಪ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಪ್ರಶ್ನೆ ಮಾಡಿದರು.

ಕಾರ್ತಿಕ್ ಉಸ್ತುವಾರಿ ಹೇಗಿತ್ತು..?
ಟಾಸ್ಕ್ ಎಲ್ಲವೂ ಮುಗಿದ ಮೇಲೆ ಬಿಗ್ ಬಾಸ್ ಮನೆಯವರ ಅಭಿಪ್ರಾಯ ಕೇಳಿದೆ. ಅದರಲ್ಲಿ ಕಾರ್ತಿಕ್ ಅವರ ಉಸ್ತುವಾರಿ ಹೇಗಿತ್ತು ಎಂದು ಪ್ರಶ್ನೆ ಹಾಕಲಾಗಿತ್ತು. ಇದಕ್ಕೆ ತುಕಾಲಿ ಸಂತೋಷ್, ವರ್ತೂರು ಸಂತೋಷ್, ಪ್ರತಾಪ್ ಇದರ ಬಗ್ಗೆ ಸಮಾಧಾನಗೊಂಡಿರಲಿಲ್ಲ. ಆದರೆ, ಇನ್ನುಳಿದಂತೆ ಎಲ್ಲರಿಂದಾನೂ ಉಸ್ತುವಾರಿ ಚೆನ್ನಾಗಿಯೇ ಇತ್ತು ಎಂದು ಹೇಳಿದ್ದಾರೆ. ಹೀಗಾಗಿ ಬಹುಮತ ಬಂದ ಕಾರಣಕ್ಕೆ ಉಸ್ತುವಾರಿ ಚೆನ್ನಾಗಿದೆ ಎಂಬ ನಿರ್ಧಾರಕ್ಕೆ ಬಿಗ್ ಬಾಸ್ ಬಂದಿದ್ದಾರೆ.
ಬಿಗ್ ಬಾಸ್ ಕಡೆಯಿಂದ ಸಿಕ್ಕಿತು ಸ್ಪೆಷಲ್ ಆಫರ್
ಕಾರ್ತಿಕ್ ಒಳ್ಳೆಯ ಆಟಗಾರ ಎಂಬುದು ಎಲ್ಲರಿಗೂ ಗೊತ್ತು. ವಿನಯ್‌ಗೆ ಟಕ್ಕರ್ ಕೊಡುವುದಕ್ಕೆ ಕಾರ್ತಿಕ್ ಬೆಸ್ಟ್ ಆಗಿದ್ದರು. ಆದರೆ, ಪ್ರತಾಪ್ ಹೊರಗೆ ಇಟ್ಟರು. ಕೊಟ್ಟ ಉಸ್ತುವಾರಿ ಕೆಲಸವನ್ನು ಸರಿಯಾಗಿ ಮಾಡಿದ ಕಾರ್ತಿಕ್, ಬಿಗ್ ಬಾಸ್ ಕಡೆಯಿಂದ ಪ್ರಶಂಸೆ ಪಡೆದಿದ್ದಾರೆ. ಟಾಸ್ಕ್ ಆಡದೆಯೇ ಈ ವಾರದ ಕ್ಯಾಪ್ಟನ್ಸಿ ಟಸ್ಕ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ. ಅದು ಉಸ್ತುವಾರಿಯನ್ನು ಅದ್ಭುತವಾಗಿ ಮಾಡಿದ್ದಕ್ಕೆ. ಇದು ಮನೆಯ ಮಂದಿ ಎಲ್ಲರಿಗೂ ಆಶ್ಚರ್ಯವಾಗಿದೆ. ಪ್ರತಾಪ್ ಹೊರಗೆ ಇಟ್ಟರು ಕೂಡ ಬಿಗ್ ಬಾಸ್ ಕಡೆಯಿಂದ ಅವಕಾಶ ಸಿಕ್ಕಿದೆ. ಕರ್ಮ ರಿಟರ್ನ್ ಎಂಬ ಮಾತು ಕೂಡ ಕೇಳಿ ಬಂದಿದೆ.


Click it and Unblock the Notifications











