BBK10: ನಮ್ರತಾರನ್ನ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟು ಸೇಡು ತೀರಿಸಿಕೊಂಡ ಪ್ರತಾಪ್.. ಇದು ಮುಯ್ಯಿಗೆ ಮುಯ್ಯಿನಾ?

By Shruthi Harishgowda

ಬಿಗ್ ಬಾಸ್ ಆರಂಭವಾದ ದಿನದಿಂದಲೂ ಕೂಡ ವಿನಯ್ ಸ್ನೇಹಿತ್ ಹಾಗೂ ನಮ್ರತಾ ಈ ಮೂವರು ಕೂಡ ಡ್ರೋನ್ ಪ್ರತಾಪ್ ಮೇಲೆ ಎಲ್ಲೆಂದರೆ ಅಲ್ಲಿ ಮುಗಿ ಬೀಳುತ್ತಿದ್ದರು. ಇನ್ನು ನಮ್ರತಾ ಅಂತೂ ಒಂದು ಕೈ ಮುಂದೆ ಹೋಗಿ "ಪ್ರತಾಪ್ ನನ್ನ ಜೊತೆ ಸರಿಯಾದ ರೀತಿಯಲ್ಲಿ ಮಾತನಾಡಲ್ಲ". ಅವನು ನೋಡುವ ರೀತಿಯೇ ಸರಿಯಿಲ್ಲ" ಎಂದು ಹೇಳಿದ್ದರು. ಅದನ್ನ ಕಿಚ್ಚ ಸುದೀಪ್ ರವರೇ ತಮ್ಮ ಪಂಚಾಯಿತಿಯಲ್ಲಿ ಪ್ರತಾಪ್ ನೋಡುವ ದೃಷ್ಟಿ ಸರಿಯಾಗಿ ಇಲ್ವಾ ಎಂದು ಪ್ರಶ್ನೆಯನ್ನು ಕೇಳುವ ಮೂಲಕ ನಮ್ರತಾ ತಪ್ಪುಗ್ರಹಿಕೆಯನ್ನು ಪರಿಹಾರಿಸಿದ್ದರು. ಆದರೆ, ಪ್ರತಾಪ್‌ ಮನಸ್ಸಿನ ಮೇಲೆ ಘಾಸಿಯನ್ನುಂಟು ಮಾಡಿತ್ತು.

ಅದಕ್ಕಾಗಿ ನಮ್ರತಾಗೆ ಸರಿಯಾಗಿ ಪೆಟ್ಟು ಕೊಡಬೇಕು. ನಮ್ರತಾರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಡೆ ಇಟ್ಟು ಕಣ್ಣಲ್ಲಿ ನೀರು ಹಾಕಿಸಿ ತಮ್ಮ ದ್ವೇಷವನ್ನು ತೀರಿಸಿಕೊಂಡಂತಿದೆ ಅನ್ನೋದು ಈಗ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಚರ್ಚೆ.

Bigg Boss Kannada Season 10: Did Prathap take revenge against Namratha

ವಿನಯ್ ಕೂಡ ಟಾಸ್ಕ್ ವಿಷಯದಲ್ಲಿ ಪ್ರತಾಪ್‌ರನ್ನು ಆಟದಿಂದ ಹೊರಗಡೆ ಇಟ್ಟಿದ್ದರು. ಅದು ಅಲ್ಲದೆ ನಮ್ರತಾ ಹಾಗೂ ಸ್ನೇಹಿತ್ ಇದಕ್ಕೆ ಸಾಥ್ ಕೊಟ್ಟಿದ್ದರು ಎಂಬ ಕಾರಣವೂ ಕೂಡ ನಮ್ರತಾರನ್ನ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಆಡಬಾರದು ಎಂಬ ನಿರ್ಧಾರವನ್ನು ಪ್ರತಾಪ್ ತೆಗೆದುಕೊಂಡಿದ್ದಾರೆ ಎಂಬ ವಿಚಾರಗಳು ಈಗ ಚರ್ಚೆಗೆ ಬರುತ್ತಿವೆ. ಇನ್ನು ಸ್ನೇಹಿತ್ ಮೇಲೆ ಪ್ರತಾಪ್‌ಗೆ ಸಾಕಷ್ಟು ಕೋಪವಿದೆ. ಯಾಕೆಂದರೆ ಆರಂಭದಿಂದಲೂ ಕೂಡ ಸ್ನೇಹಿತ್, ಪ್ರತಾಪ್ ಮೇಲೆ ಕೋಪ ಮಾಡಿಕೊಂಡು ಜಗಳ ಮಾಡಿಕೊಂಡೆ ಬರುತ್ತಿದ್ದರು. ಸ್ನೇಹಿತ್ ಹೊರಗಡೆ ಹೋಗಲೇಬೇಕು ಎಂಬ ಕಾರಣಕ್ಕೇ ಪ್ರತಾಪ್ ಮನೆಗೆ ಬಂದಿರುವ ಹೊಸ ಸದಸ್ಯರ ಬಳಿ ಸಿರಿಯನ್ನು ನ್ಯಾಮಿನೇಷನ್‌ನಿಂದ ಪಾರು ಮಾಡಿ ಎಂದು ಕೇಳಿಕೊಂಡಿದ್ದರು.

ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಮೈಂಡ್ ಗೇಮ್ ಅನ್ನು ಚೆನ್ನಾಗಿ ಆಡುತ್ತಿದ್ದಾರೆ ಎಂದೆನಿಸುತ್ತಿದೆ. ಹಲವಾರು ಪ್ಲಾನ್‌ಗಳನ್ನು ಮಾಡಿದ್ದಾರೆ ಎಂದು ಅವರ ಮುಖಭಾವವೇ ತಿಳಿಸುತ್ತದೆ. ಇನ್ನು ಈ ವಾರ ಕಾರ್ತಿಕ್ ಅನ್ನು ಸಹ ತಂಡದಲ್ಲಿ ಆಡದಂತೆ ಪ್ರತಾಪ್ ಹೇಳಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆಂದರೆ, ವಿನಯ್ ಟೀಮ್‌ ಅಷ್ಟು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ. ಕಾರ್ತಿಕ್ ಇದ್ದಿದ್ದರೆ ಎಷ್ಟೋ ಸಹಾಯವಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಡ್ರೋನ್ ಪ್ರತಾಪ್ ಇಲ್ಲಿ ಕಾರ್ತಿಕ್ ಶಕ್ತಿಯನ್ನು ಕುಗ್ಗಿಸಿವ ಕೆಲಸವನ್ನ ಮಾಡಿದ್ದಾರೆ. ಈ ವಾರ ಯಾವುದೇ ಟಾಸ್ಕ್‌ಗಳಲ್ಲಿ ಭಾಗಿಯಾಗಿಲ್ಲ ಎಂದರೆ ಮುಂದಿನ ವಾರ ಡಲ್ ಆಗುತ್ತಾರೆ. ಮುಂದಿನ ವಾರದ ನಾಮಿನೇಷನ್‌ನಲ್ಲಿ ಕಾರ್ತಿಕ್ ಹೆಸರು ಬರಬಹುದು ಎಂಬ ಪ್ಲಾನ್ ಸಹ ಇದ್ದಂತಿದೆ.

ಸೇಡು ತೀರಿಸಿಕೊಂಡ್ರಾ ಪ್ರತಾಪ್..?

ನಮ್ರತಾ, ಪ್ರತಾಪ್ ಮಾತು ನಂಬಿಕೊಂಡು ಅವರ ಟೀಮ್‌ನ್ನು ಸೇರಿದ್ದಾರೆ. ಆದರೆ ಪ್ರತಾಪ್ ಮಾತ್ರ ನಮ್ರತಾಗೆ ಪ್ರಾಮಿಸ್ ಮಾಡಿದಂತೆ ಕ್ಯಾಪ್ಟೆನ್ಸಿ ಟಾಸ್ಕ್ ಆಡಿಸದೆ, ನಮ್ರತಾ ಮೇಲೆ ಸೇಡನ್ನು ತೀರಿಸಿಕೊಂಡಿದ್ದಾರೆ ಅನ್ನೋ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಮನೆಗೆ ಬಂದಾಗ ಸ್ನೇಹಿತ್, ಪ್ರತಾಪ್‌ಗೆ ನೀನು ಹೊರಗಡೆ ಏನೆಲ್ಲಾ ಮಾಡಿದ್ದೀಯಾ ಎಂಬುದು ನನಗೆ ಗೊತ್ತಿದೆ ಎಂದೆಲ್ಲ ಹಂಗಿಸಿದ್ದರು. ನಿನ್ನ ಡ್ರೋನ್ ಡೋಂಗಿ ಎಂದು ವಿನಯ್ ಹೇಳಿದ್ದರು. ಇನ್ನು ಪ್ರತಾಪ್ ಎಲ್ಲೇ ಕಂಡರೂ, ನಮ್ರತಾ ಮಾತ್ರ ಕೋಪದಿಂದಲೇ ಮಾತನಾಡುತ್ತಾ ಇದ್ದರು.

ಆದರೆ, ಪ್ರತಾಪ್ ಸರಿಯಾಗಿ ಮಾತನಾಡುವುದಿಲ್ಲ ಎಂದೆಲ್ಲಾ ಹೇಳಿದರು. ಕೊನೆಗೆ ಪ್ರತಾಪ್ ನೋಡುವ ನೋಟವೇ ಸರಿ ಇಲ್ಲ ಎಂದು ಹೇಳುವ ಮೂಲಕ ಪ್ರತಾಪ್ ಮನಸಿಗೆ ಬೇಸರ ಮಾಡಿದ್ದರು. ಎಲ್ಲವನ್ನು ನುಂಗಿಕೊಂಡು ಪ್ರತಾಪ್ ಕ್ಯಾಪ್ಟನ್ಸಿ‌ ಟಾಸ್ಕ್‌ನಲ್ಲಿ ಆಡುವುದೇ ಬೇಡ ಎಂಬ ಶಾಕ್ ಕೊಟ್ಟು ಎಲ್ಲಾ ಸೇಡನ್ನು ಒಟ್ಟಿಗೆ ತೀರಿಸಿಕೊಂಡಿದ್ದಾರೆ. ಇದು ಮುಯ್ಯಿಗೆ ಮುಯ್ಯಿ ಅಷ್ಟೇ ಎಂದು ಹೇಳುವಂತೆ ಮಾಡಿದ್ದಾರೆ. ಆದರೆ ಪ್ರತಾಪ್ ತೆಗೆದುಕೊಂಡ ಈ ನಿರ್ಧಾರಕ್ಕೆ ಪರ ಹಾಗೂ ವಿರೋಧ ಎರಡನ್ನು ಸಹ ವೀಕ್ಷಕರು ವ್ಯಕ್ತಪಡಿಸಿದ್ದಾರೆ.

ಸ್ನೇಹಿತ್ ಮೇಲೂ ಕೋಪ

ಸ್ನೇಹಿತ್ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗಬೇಕು ಎಂದು ಪ್ರತಾಪ್ ತಲೆಯಲ್ಲಿ ಇದ್ದಂತಿದೆ. ಅದಕ್ಕೆ ಟಾಸ್ಕ್‌ನಲ್ಲಿ ಸಿರಿಗೆ ಸಪೂರ್ಟ್ ಮಾಡಿದ್ದಾರೆ. ದಯವಿಟ್ಟು ಬಿಗ್ ಬಾಸ್ ಮನೆಯಲ್ಲಿಯೇ ಉಳಿಸಿ ಎಂದು ಹೊಸ ಸದಸ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ ಡೈರೆಕ್ಟ್ ಆಗಿ ನಾಮಿನೇಟ್ ಆಗಿರುವ ಸ್ನೇಹಿತ್ ಮನೆಯಿಂದ ಹೊರಗೆ ಹೋಗಲಿ ಆಗ ಸ್ನೇಹಿತ್ ಮೇಲೆ ಇದ್ದ ಕೋಪವೂ ಸಹ ಕಡಿಮೆಯಾಗಬಹುದು ಎಂದುಕೊಂಡು ಆ ರೀತಿ ಮಾತನಾಡಿದ್ದಾರೆ ಎಂಬಂತಹ ಒಂದು ಚರ್ಚೆಯು ನಡೆಯುತ್ತಿದೆ.

ಆದರೆ ಈ ವಾರ ಪೂರ್ತಿ ಟಾಸ್ಕ್‌ನಿಂದ ಕಾರ್ತಿಕ್ ಅನ್ನು ಹೊರಗಡೆ ಇಟ್ಟಿದ್ದು, ವೀಕ್ಷಕರಲ್ಲಿ ಬೇಸರ ತರಿಸಿದೆ. ಯಾಕೆಂದರೆ ವಿನಯ್ ವಿರುದ್ಧ ಈಗಾಗಲೇ ಸಾಕಷ್ಟು ಟಾಸ್ಕ್‌ಗಳನ್ನು ಕಾರ್ತಿಕ್ ಗೆದ್ದಿದ್ದಾರೆ. ಇದಕ್ಕಾಗಿ ಕಾರ್ತಿಕ್ ಉಳಿಸಿಕೊಳ್ಳಬೇಕಾಗಿತ್ತು. ಎಲ್ಲವೂ ಸಹ ಫಿಸಿಕಲ್ ಟಾಸ್ಕ್ ಆಗಿರುವುದರಿಂದ ಕಾರ್ತಿಕ್ ಏನಾದರೂ ಒಂದು ಐಡಿಯಾವನ್ನು ಮಾಡಿ ತಂಡವನ್ನು ಗೆಲ್ಲಿಸಿಕೊಳ್ಳುವ ಕೆಲಸ ಮಾಡುತ್ತಿದ್ದರು. ಆದರೆ, ಪ್ರತಾಪ್ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಪ್ರತಾಪ್ ಮನಸ್ಸಿನಲ್ಲಿ ಏನೇನು ಓಡುತ್ತಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಆಟವನ್ನು ಆಡುವ ಜೊತೆಗೆ ಸೇಡನ್ನು ತೀರಿಸಿಕೊಳ್ಳುತ್ತಿದ್ದಾರಾ? ಇದು ನಿಜನಾ? ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಬಹುದು.

More from Filmibeat

English summary
Bigg Boss Kannada Season 10: Did Prathap take revenge against Namratha?:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X