BBK10: ಸಂಗೀತಾ ಮೂಲ ಹೆಸರು ಏನು ಗೊತ್ತಾ..? ಬಿಗ್ ಬಾಸ್ ಬೇಡವೆಂದಿದ್ದ ಚಾರ್ಲಿ ಬೆಡಗಿ ಬಂದಿದ್ದೇಗೆ..?
ಬಿಗ್ ಬಾಸ್ ಮನೆಯ ಮಂದಿಗೆ ತಮ್ಮ ಭವಿಷ್ಯದ ಬಗ್ಗೆ ನಂಬಿಕೆಯನ್ನು ಹುಟ್ಟಿಸಲು ಬಿಗ್ ಬಾಸ್ ಹೊಸ ಅತಿಥಿಯನ್ನು ಮನೆಗೆ ಕರೆಸಿದೆ. ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರನ್ನು ದೊಡ್ಮನೆಗೆ ಕರೆಸಿದೆ. ಮನೆ ಮಂದಿಗೆಲ್ಲಾ ಬಿಗ್ ಬಾಸ್ ಜರ್ನಿ ಮುಗಿಯುವ ಸಮಯ ಹತ್ತಿರವಾಗಿದೆ. ಹೀಗಾಗಿ ಎಲ್ಲರ ಮನಸ್ಸೊಳಗೂ ಒಂದಷ್ಟು ಗೊಂದಲ, ಒಂದಷ್ಟು ವೀಕ್ನೆಸ್ ಇದೆ. ಎಲ್ಲರಿಗೂ ಒಂದು ಎನರ್ಜಿ ನೀಡಿದ್ದು, ಗುರೂಜಿ.
ಗುರೂಜಿ ಮನೆಯೊಳಗೆ ಬಂದ ಕೂಡಲೇ ಎಲ್ಲರ ಗಮನ ಸೆಳೆದಿದ್ದಾರೆ. ತುಕಾಲಿ ಸಂತೋಷ್‌ಗೆ ಇರುವ ಮಚ್ಚೆಯ ಬಗ್ಗೆ ಹೇಳಿದ್ದಾರೆ. ಮನೆಯವರ ಬಗ್ಗೆ ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದ್ದಾರೆ. ಮನೆಯವರಿಗೆ ಮನಸ್ಥೈರ್ಯವನ್ನು ತುಂಬಿದ್ದಾರೆ. ಕೊಡುವುದು ಕಿತ್ತುಕೊಳ್ಳುವುದು ಭಗವಂತನಿಗೆ ಬಿಟ್ಟಿದ್ದು. ಕೆಲವೊಂದು ಗುಪ್ತಗಾಮಿನಿಯಾಗಿರಬೇಕು ಎಂದಿದ್ದಾರೆ ಗುರೂಜಿ.

ಮೊದಲಿಗೆ ಸಂಗೀತಾ ಭವಿಷ್ಯ ನುಡಿದ ಗುರೂಜಿ
ಬಿಗ್ ಬಾಸ್ ಮನೆಗೆ ಗುರೂಜಿ ಬಂದಿದ್ದು, ದೇವರಿಗೆ ಮೊದಲು ಪೂಜೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ಮನೆ ಮಂದಿಗೆಲ್ಲಾ ಭವಿಷ್ಯವನ್ನು ನುಡಿಯುತ್ತೇನೆ. ಅದರಲ್ಲಿ ಎಷ್ಟು ಸತ್ಯ ಎಂಬುದನ್ನು ಹೇಳಬೇಕು ಎಂದೇ ತಿಳಿಸಿದ್ದರು. ತಾಯಿಗೆ ಮನೆಯ ಹೆಣ್ಣು ಮಕ್ಕಳಿಂದ ಪೂಜೆ ಸಲ್ಲಿಸಿದರು. ತಾಯಿಗೆ ಉಡಿಸುವ ಸೀರೆ ಇಡಿದುಕೊಂಡು ಎಲ್ಲರೂ ತಮ್ಮ ತಮ್ಮ ಮನದಾಳದ ಆಸೆಯನ್ನು ಬೇಡಿಕೊಂಡರು. ಬಳಿಕ ಭವಿಷ್ಯ ಹೇಳುವುದಕ್ಕೆ ಆರಂಭಿಸಿದ ಗುರೂಜಿ, ಮೊದಲಿಗೆ ಸಂಗೀತಾ ಭವಿಷ್ಯವನ್ನೇ ನುಡಿದಿದ್ದಾರೆ.
ಸಂಗೀತಾ ಹುಟ್ಟು ಹೆಸರು ಏನು ಗೊತ್ತಾ..? ಸಂಗೀತಾ ಅಲ್ಲ.. ಶ್ರೀದೇವಿ..!
ಗುರೂಜಿ ಸಂಗೀತಾಗೆ ಭವಿಷ್ಯ ಹೇಳುವುದಕ್ಕೆ ಶುರು ಮಾಡಿದರು. ಆರಂಭದಲ್ಲಿಯೇ ಹೆಸರನ್ನು ಕೇಳಿದರು. ಆಗ ಸಂಗೀತಾ, ಇಂಡಸ್ಟ್ರಿಗೋಸ್ಕರ ಸಂಗೀತಾ ಶೃಂಗೇರಿ ಅಂತ ಇಟ್ಟುಕೊಂಡಿದ್ದೇನೆ. ಆದರೆ ಹುಟ್ಟು ಹೆಸರು ಶ್ರೀದೇವಿ ಅಂತ ಹೇಳಿದರು. ಬಳಿಕ ಭವಿಷ್ಯವನ್ನು ಅಮ್ಮನವರ ಮುಖಾಂತರ ಕೇಳಿದ್ದಾರೆ. ಮುಂದೆ ಏನು ನಡೆಯುತ್ತದೆ ಎಂಬುದರ ಕುತುಹಲದಿಂದ ಕೇಳಿದ್ದಾರೆ. 110 ದಳಗಳು ಸಂಗೀತಾಗೆ ಸಿಕ್ಕಿತ್ತು. ಆ ಮೂಲಕ ಗುರೂಜಿ ಭವಿಷ್ಯ ನುಡಿದಿದ್ದಾರೆ. ಚಂದ್ರ ಅಂದ್ರೆ ಮನಸ್ಸು. ಮನಸ್ಸಿನಲ್ಲಿ ತುಂಬಾ ಹಿಂಸೆ. ಇವತ್ತು ಅಂತ ಅಲ್ಲ. ಮೊದಲಿನಿಂದಾನೂ ಹಾಗೆ. ತುಂಬಾ ನಂಬಿದ್ರಿ. ಆದರೆ ಆ ನಂಬಿಕೆಯಿಂದ ದ್ರೋಹವಾಗಿದೆ ಎಂದಿದ್ದಾರೆ.
ಬಿಗ್ ಬಾಸ್ ಗೆ ಕೋಟಿ ಕೊಟ್ಟರು ಬರಲ್ಲ ಎಂದಿದ್ದ ಸಂಗೀತಾ ಬಂದಿದ್ದೇಗೆ..?
ಬಿಗ್ ಬಾಸ್ ಆರಂಭವಾದ ದಿನದಲ್ಲಿ ಸಂಗೀತಾ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಕೋಟಿ ಕೊಟ್ಟರು ಬಿಗ್ ಬಾಸ್ ಗೆ ಹೋಗುವುದಿಲ್ಲ ಎಂದಿದ್ದರು. ಈಗ ಅದೇ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದಾರೆ. ಈ ಬಗ್ಗೆ ಗುರೂಜಿ ಕೂಡ ಹೇಳಿದ್ದು, ಬೇಡ ಬೇಡ ಅಂದಿದ್ದು, ಸಂಗೀತಾ ಹಿಂದೆ ಬಂದಿದೆ ಎಂದಾಗ ಹೌದು ಗುರೂಜಿ ಬಿಗ್ ಬಾಸ್ ಕೂಡ ಎಂದಿದ್ದಾರೆ.

ಬಿಗ್ ಬಾಸ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸಂಗೀತಾ!
ಬಿಗ್ ಬಾಸ್ ಕೊನೆಯ ಹಂತದ ಜರ್ನಿಯಲ್ಲಿದ್ದಾರೆ ಎಲ್ಲರು. ಈಗ ಗುರೂಜಿ ಭವಿಷ್ಯ ಬೇರೆ ನುಡಿದಿದ್ದಾರೆ. ಸಂಗೀತಾ ಗೆಲುವಿನ ಬಗ್ಗೆ ಭವಿಷ್ಯ ಹೇಳಬಹುದಾ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಗುರೂಜಿ ಬುದ್ದಿವಂತಿಕೆ ಉತ್ತರ ನೀಡಿದ್ದಾರೆ. ಯಾರಿಗೆ ಅರ್ಹತೆ ಸಿಗುತ್ತದೆಯೋ ಅವರಿಗೆ ಸಿಗುತ್ತೆ. ನಿಮಗೆ ಅರ್ಹತೆ ಇದ್ದರೆ ಖಂಡಿತಾ ಗೆಲುವು ಸಿಗಲಿದೆ ಎಂದಿದ್ದಾರೆ. ಇದೇ ವೇಳೆ ಮದುವೆ ಬಗ್ಗೆಯೂ ಹೇಳಿದ್ದು, ಬದುಕಿನಲ್ಲಿ ಮದುವೆ ಆದ ಮೇಲೆ ತುಂಬಾ ಚೆನ್ನಾಗಿರುತ್ತೆ ಎಂದು ತಿಳಿಸಿದ್ದಾರೆ.


Click it and Unblock the Notifications











