Bigg Boss Kannada Season 10: ಬಿಗ್‌ಬಾಸ್ ಮನೆಗೆ ಹೋಗುವವರನ್ನು ಡಿಸೈಡ್ ಮಾಡೋದು ಪ್ರೇಕ್ಷಕ ಮಹಾಪ್ರಭು ಅಂತೆ!

ಇನ್ನೇನು ಬಿಗ್‌ ಬಾಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲರು ಕಾತುರದಿಂದ ಕಾಯುತ್ತಿರುವ ಕನ್ನಡದ ದೊಡ್ಡ ರಿಯಾಲಿಟಿ ಶೋಗಾಗಿ ಕಲರ್ಸ್ ಕನ್ನಡ ಹಲವು ಅಪ್‌ಡೇಟ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದೆ. ಸ್ಪರ್ಧಿಗಳ ಬಗ್ಗೆ ಇರುವ ಕಾತುರ ಹೆಚ್ಚಾಗಿದೆ. ಅವರು ಬರುತ್ತಾರೆ, ಇವರು ಬರುತ್ತಾರೆ... ಎಂಬ ಅಂತೆ ಕಂತೆಗಳಿಗೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ನಟ ಕಿಚ್ಚ ಸುದೀಪ್ ಈ ಬಾರಿಯ ಬಿಗ್‌ ಬಾಸ್ ತುಂಬಾನೇ ಸ್ಪೆಷಲ್ ಅಂತ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಹೀಗಾಗಿ ಬಿಗ್ ಬಾಸ್ ಪ್ರಿಯರಲ್ಲಿ ಮತ್ತಷ್ಟು ಆಸಕ್ತಿ ಉಂಟಾಗಿದೆ. ಅದರಲ್ಲೂ ಬಿಗ್ ಬಾಸ್‌ ಮನೆಗೆ ಹತ್ತನೆ ಸ್ಪರ್ಧಿಯಾಗಿ ರಕ್ಷಿತ್ ಶೆಟ್ಟಿ ಅಭಿನಯದ ರಾಷ್ಟ್ರೀಯ ಪ್ರಶಸ್ತಿ ಪಡೆದ 'ಚಾರ್ಲಿ 777' ಸಿನಿಮಾದ ನಾಯಿ ಕೂಡ ಭಾಗವಹಿಸುತ್ತಿದೆ ಎಂದಾಗಲಿನಿಂದ ಜನರು ಆಶ್ಚರ್ಯದಿಂದ ಈ ಶೋಗಾಗಿ ಕಾಯುತ್ತಿದ್ದಾರೆ.

Bigg Boss Kannada Season 10: Do you know who will decide the Bigg Boss contestants?

ಬಿಗ್ ಬಾಸ್‌ಗೆ ಬರಲಿರುವ ಸ್ಪರ್ಧಿಗಳ ಎಷ್ಟು ಜನ??, ಸುದೀಪ್ ಕೊಟ್ಟ ಸುಳಿವೇನು?

ಇದು ಬಿಗ್‌ಬಾಸ್ ಕನ್ನಡದ ಹತ್ತನೇ ಸೀಸನ್.... ಹೀಗಾಗಿ ಸ್ಪರ್ಧಿಗಳು ಎಷ್ಟು ಜನ ಬರಬಹುದು ಎಂಬುದು ಕೂಡ ಒಂದು ಪ್ರಶ್ನೆಯಾಗಿದೆ. ಬಿಗ್ ಬಾಸ್ ಸೀಸನ್ 10 ಇಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಇದರ ಜೊತೆಗೆ ಬಿಗ್ ಬಾಸ್ ಕನ್ನಡದಲ್ಲಿ ಒಟ್ಟು 9 ಸೀಸನ್‌ಗಳು ಇದುವರೆಗೂ ಪ್ರಸಾರ ಕಂಡಿದ್ದು, ಒಂದೊಂದು ಸೀಸನ್‌ನಲ್ಲೂ ಸ್ವರ್ಧಿಗಳ ಸಂಖ್ಯೆಯಲ್ಲಿ ಏರಿಳಿತವಿತ್ತು.

ಆದರೆ, ಈ ಬಾರಿ ಹತ್ತು ಮಂದಿ ಸ್ಪರ್ಧಿಗಳು ಇರಲಿದ್ದಾರೆ ಎಂಬ ಬಗ್ಗೆ ನಿರೂಪಕ ಸುದೀಪ್ ಸುಳಿವು ಬಿಟ್ಟುಕೊಟ್ಟಿದ್ದಾರೆ. ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ನಟ ಸುದೀಪದ ಈ ಬಗ್ಗೆ ಸುಳಿವು ನೀಡಿದ್ದಾರೆ. ಒಂದು ಮನೆ ಒಬ್ಬ ರಾವಣ ಮತ್ತು ಹತ್ತು ತಲೆ ಎಂದು ಹೇಳಿದ್ದಾರೆ. ಅಂದರೆ ಈ ಬಾರಿ ಹತ್ತು ಮಂದಿ ಬಿಗ್ ಬಾಗ್ ಮನೆಯೊಳಗೆ ಹೋಗುವುದು ಖಚಿತವಾಗಿದೆ.

ಬಿಗ್ ಬಾಸ್ ಸ್ಪರ್ಧಿಗಳನ್ನು ಡಿಸೈಡ್ ಮಾಡೋರು ಯಾರು ಗೊತ್ತೆ?

ಇನ್ನು, ಇದೇ ವಿಡಿಯೋದಲ್ಲಿ ಬಿಗ್ ಬಾಸ್ ಸ್ಪರ್ಧಿಗಳನ್ನು ಡಿಸೈಡ್ ಮಾಡೋರು ಯಾರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಹೌದು... ಹೊಸ ವಿಡಿಯೋನಲ್ಲಿ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗುವವರನ್ನು ನಿರ್ಧರಿಸುವವರು ಪ್ರೇಕ್ಷಕ ಮಹಾಪ್ರಭು ಎಂದು ಹೇಳಲಾಗಿದೆ.

ಭಾನುವಾರ ಸಂಜೆ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಮನೆಯೊಳಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂಬುದನ್ನು ಜನ ಡಿಸೈಡ್ ಮಾಡ್ತಾರಂತೆ. ಹೀಗಾಗಿ ಪ್ರೋಮೋದಲ್ಲಿ ಪ್ರೇಕ್ಷಕರ ಕೈಯಲ್ಲಿ ವೋಟಿಂಗೆ ಮಿಷನ್ ಇರುವುದು ಮತ್ತು ಜನ ವೋಟ್ ಮಾಡುತ್ತಿರುವುದನ್ನು ತೋರಿಸಲಾಗಿದೆ. ಹೊಸ ಪ್ರೋಮೋದಲ್ಲಿ ಬಿಗ್ ಬಾಸ್ ವಿನ್ನರ್‌ಗಳಾದ ನಟಿ ಶೃತಿ, ಪ್ರಥಮ್, ರ್ಯಾಪರ್ ಚಂದನ್ ಶೆಟ್ಟಿ ಮತ್ತು ಹಾಸ್ಯ ನಟ ಮಂಜು ಪಾವಗಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.

ನಟ ಸುದೀಪ್ ಕೂಡ ಈ ಬಾರಿಯ ಹತ್ತನೇ ಸೀಸನ್‌ನ ಅಸಲಿ ಆಟ ಶುರುವಾಗುವುದೇ ಈ ವೇದಿಕೆ ಮೇಲಿಂದ ಎಂದು ಹೇಳಿ ಆಟ ಇಲ್ಲಿಂದಲೇ ಆರಂಭ ಎಂಬುದನ್ನು ತಿಳಿಸಿದ್ದಾರೆ. ಒಟ್ಟು ಈ ಸೀಸನ್ ಹೆಚ್ಚು ವಿಶೇಷ ಎಂಬುದನ್ನು ಕಲರ್ಸ್ ಕನ್ನಡ ಮತ್ತು ಬಿಗ್‌ ಬಾಸ್ ಟೀಂ ಒತ್ತಿ ಒತ್ತಿ ಹೇಳಿಕೊಳ್ಳುತ್ತಿದೆ. ಆದರೆ, ಇವಕ್ಕೆಲ್ಲಾ ಇನ್ನೇನು ಕೆಲವೆ ಗಂಟೆಗಳಲ್ಲಿ ಉತ್ತರ ಕೂಡ ಸಿಗಲಿದೆ.

More from Filmibeat

English summary
Bigg Boss Kannada Season 10: Do you know who will decide the Bigg Boss contestants?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X