BBK10: ಮತ್ತೆ ಟಾರ್ಗೆಟ್ ಆದ್ರಾ ಪ್ರತಾಪ್? ತಂಡ ಸೋಲಿನಿಂದ ಸೈಲೆಂಟ್ ಆಗಿ ಹೋದ್ರಾ..?
ಬಿಗ್ ಬಾಸ್ ಶೋ ಆರಂಭವಾಗಿ 57 ದಿನ ಕಳೆದಿದೆ. ಇನ್ನು 43 ದಿನಗಳ ಜರ್ನಿ ಇದೆ. ಈ ಬಾರಿ ಅಸಮರ್ಥರಾಗಿ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯೊಳಗೆ ಬಂದಿದ್ದ ಬಂದಿದ್ದಾರೆ. ಆರಂಭದಲ್ಲಿ ನೋಡಿದಾಗ ಪ್ರತಾಪ್ ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ, ಯಾರ ಜೊತೆಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಮನೆಯಲ್ಲಿ ರೇಗಿಸುತ್ತಾ ಇದ್ದವರೇ ಜಾಸ್ತಿ. ಸುಮ್ಮನೆ ಕಣ್ಣೀರು ಹಾಕುತ್ತಾ ಇದ್ದರು.
ಪ್ರತಾಪ್ ವಿಚಾರದಲ್ಲಿ ಮನೆಯಲ್ಲಿ ಆರಂಭದಲ್ಲಿ ನಡೆದುಕೊಂಡ ರೀತಿಗೆ ಬಿಗ್ ಬಾಸ್ ವೀಕ್ಷಕರಿಗೂ ಬೇಸರವಾಗಿತ್ತು. ಇದು ಕಿಚ್ಚ ಸುದೀಪ್ ಗಮನಕ್ಕೂ ಬಂದಿತ್ತು. ಹೀಗಾಗಿ ಮನೆಯವರ ಮನಸ್ಥಿತಿಯನ್ನು ಬದಲಿಸಿ, ಪ್ರತಾಪ್‌ಗೆ ಒಂದಷ್ಟು ಶಕ್ತಿಯನ್ನು ತುಂಬಿದ್ದರು. ಹೀಗಾಗಿ ಪ್ರತಾಪ್ ಮೊದಲ ವಾರದಲ್ಲಿಯೇ ಫುಲ್ ಆಕ್ಟಿವ್ ಆಗಿದ್ದರು. ಆದರೆ ಈಗ ಮತ್ತೆ ಹಳೆಯ ಪ್ರತಾಪ್ ಆದಂತೆ ಆಗಿದ್ದಾರೆ.

ಪ್ರಶ್ನೆ ಬಿಟ್ಟು ಉತ್ತರ ಕೇಳಿದ ಬಿಗ್ ಬಾಸ್
ಬಿಗ್ ಬಾಸ್ ಬಗ್ಗೆ ಹಲವು ಪ್ರಶ್ನೆಗಳು ಎಲ್ಲರನ್ನು ಕಾಡುತ್ತದೆ. ಅದಕ್ಕೆ ಉತ್ತರ ಪಡೆಯುವುದು ಅವರು ಹೊರಗೆ ಬಂದ ಮೇಲೆ. ಆದರೆ ಇದೀಗ ಹಲವು ಪ್ರಶ್ನೆಗಳಿಗೆ ಬಿಗ್ ಬಾಸ್ ಮನೆಯಲ್ಲಿಯೇ ಉತ್ತರ ಸಿಕ್ಕಿದೆ. ಅದಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇಡೀ ಸೀಸನ್‌ನಲ್ಲಿ ಚೇಲನಾಗಿಯೇ ಇರುವ ಸದಸ್ಯ ಯಾರು..? ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಸದಸ್ಯ ಯಾರು..? ಫಿನಾಲೆಗೆ ತಲುಪುವ ಸ್ಪರ್ಧಿ ಯಾರು..? ಎಪಿಸೋಡ್‌ನಲ್ಲಿ ಕಡಿಮೆ ಕಾಣಿಸಿಕೊಳ್ಳುವ ಸದಸ್ಯ ಯಾರಾಗಿರಬಹುದು..? ಆಟಕ್ಕಾಗಿ ಬೆನ್ನಿಗೆ ಚೂರಿ ಹಾಕಲು ಹಿಂದೇಟು ಹಾಕದ ಸದಸ್ಯ ಯಾರು..? ಆಟ ಮುಗಿದ ಮೇಲೆ ಸಂಪರ್ಕ ಇಟ್ಟುಕೊಳ್ಳಲು ಲಾಯಕ್ಕಿಲ್ಲದ ವ್ಯಕ್ತಿ ಯಾರು..? ಎಂಬ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಫಿನಾಲೆ ವಿಚಾರದಲ್ಲಿ ವಿನಯ್ ಆಂಡ್ ಕಾರ್ತಿಕ್ ಹೆಸರಿನ ಜೊತೆಗೆ ತುಕಾಲಿ ಸಂತೋಷ್ ಹೆಸರು ಕೂಡ ಬಂದಿರುವುದು ಒಳ್ಳೆಯ ಬೆಳವಣಿಗೆ ತೋರಿಸಲಾಗಿದೆ.
ಪ್ರತಾಪ್ ಬುದ್ದಿವಂತಿಕೆ ಬಗ್ಗೆ ಮನೆ ಮಂದಿಗೆ ಕೋಪ
ತಾನೇ ಬುದ್ದಿವಂತ ಎಂದು ಬದುಕುತ್ತಿರುವ ಬುದ್ದಿವಂತ ದಡ್ಡ ಯಾರು.? ಎಂದು ಬಿಗ್ ಬಾಸ್ ಪ್ರಶ್ನೆ ಕೇಳಿತ್ತು. ಇದಕ್ಕೆ ಬೋರ್ಡ್‌ನಲ್ಲಿ ಹಲವು ಹೆಸರುಗಳನ್ನು ಬರೆಯಲಾಗಿತ್ತು. ಆದರೆ, ಹೆಚ್ಚಿನದಾಗಿ ಪ್ರತಾಪ್ ಹೆಸರೇ ಬಂದಿತ್ತು. ಅದಕ್ಕೆ ಸೂಕ್ತ ಉತ್ತರಗಳನ್ನು ನೀಡಲಾಗಿತ್ತು. ತಾನೇ ಬುದ್ದಿವಂತ, ಮನೆಯಲ್ಲಿ ಉಳಿದವರೆಲ್ಲ ದಡ್ಡರು ಎಂದೇ ನಂಬಿದ್ದಾರೆ ಅವರು ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಮನೆಯ ಬೋರಿಂಗ್ ಸದಸ್ಯ ಪ್ರತಾಪ್
ಮನೆಯ ಬೋರಿಂಗ್ ಸದಸ್ಯ ಯಾರು ಎಂದಾಗಲೂ ಪ್ರತಾಪ್ ಹೆಸರನ್ನೇ ತೆಗೆದುಕೊಂಡಿದ್ದಾರೆ. ಮಂಗಳವಾರ, ಬುಧವಾರ, ಚೆನ್ನಾಗಿರುತ್ತಾರೆ. ವೀಕೆಂಡ್ ಬಂತು ಅಂದ್ರೆ ಪ್ರೊಫೆಸರ್ ಆಗಿ ಬಿಡುತ್ತಾರೆ. ಯಾರ ಜೊತೆಗೂ ಮಾತನಾಡುವುದಿಲ್ಲ. ಅವನಿಗೆ ಬೇಕಾದಾಗ ಮಾತ್ರ ಮಾತನಾಡುತ್ತಾನೆ. ಗುಡ್ ಮಾರ್ನಿಂಗ್ ಹೇಳಿದರೂ ರೆಸ್ಪಾನ್ಸ್ ಇರುವುದಿಲ್ಲ. ವೀಕೆಂಡ್‌ನಲ್ಲಿ ಮಾತ್ರ ಅವರ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕು. ಬ್ಲಾಕ್ ಅಂಡ್ ವೈಟ್‌ನಲ್ಲಿ ಇರುತ್ತಾರೋ ಅದೇ ರೀತಿ ಇರುತ್ತಾರೆ ಎಂದೆಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ತಪ್ಪು ನಿರ್ಧಾರ ಮತ್ತೆ ಸೈಲೆಂಟ್ ಮಾಡೀತಾ..?
ಆದರೆ, ಇವತ್ತೆಲ್ಲ ಪ್ರತಾಪ್ ಮುಖ ನೋಡಿದಾಗ ನಗು ಕಳೆದುಕೊಂಡಿದ್ದಾರೆ ಎನಿಸಿದ್ದಂತು ನಿಜ. ನಾಮಿನೇಷನ್‌ನಿಂದ ಪಾರಾಗುವುದಕ್ಕೆ ವಾದ ಮಾಡಬೇಕಿತ್ತು. ಆದರೆ, ನಮ್ರತಾ ಜೊತೆಗೆ ವಾದಕ್ಕೆ ಇಳಿಯಲಿಲ್ಲ. ನಾನು ತೆಗೆದುಕೊಂಡ ಒಂದು ನಿರ್ಧಾರದಿಂದ ಈ ರೀತಿ ಆಗಿರಬಹುದು. ನಮ್ರತಾ ದೀದಿ ಅವರನ್ನೇ ಸೇವ್ ಮಾಡಿ ಎಂದು ಕೈತೊಳೆದುಕೊಂಡು ಬಿಟ್ಟರು. ಈ ವಾದದ ನಡುವೆ ಪ್ರತಾಪ್ ಮನಸ್ಥೈರ್ಯ ಮತ್ತೆ ಕುಸಿದಿರುವುದು ಗೊತ್ತಾಗುತ್ತಿದೆ.


Click it and Unblock the Notifications











