BBK 10: ಕಿಚ್ಚ ಸುದೀಪ್‌ಗೆ ಡ್ರೋನ್ ಪ್ರತಾಪ್ ಥ್ಯಾಂಕ್ಸ್ ಹೇಳಿದ್ದೇಕೆ.. ಅಂತಹದ್ದೇನು ನಡೀತು ಮನೆಯಲ್ಲಿ?

By ಶ್ರುತಿ ಹರೀಶ್ ಗೌಡ

ಬಿಗ್ ಬಾಸ್‌ಗೆ ಬಂದ ಒಂದು ವಾರದಲ್ಲಿ ಸಾಕಷ್ಟು ಅವಮಾನಕ್ಕೆ ಡ್ರೋನ್ ಪ್ರತಾಪ್ ಒಳಗಾದರು. ಸಹ ಸ್ಪರ್ಧಿಗಳು ಡ್ರೋನ್‌‌ ವಿಷಯವನ್ನು ಹಿಡಿದುಕೊಂಡು ಪ್ರತಾಪ್‌ಗೆ ಅವಮಾನವನ್ನ ಮಾಡಿ ತಾವೇ ಜನರ ಕಣ್ಣಲ್ಲಿ ಚೀಪಾದರು. ಇನ್ನು ಜನರು ಮೊದಲು ಡ್ರೋನ್ ಪ್ರತಾಪ್ ಬಗ್ಗೆ ಇದ್ದಂತಹ ಅಭಿಪ್ರಾಯವನ್ನ ಬದಲಿಸಿಕೊಳ್ಳಲು ಇದು ಒಂದು ಪ್ಲಸ್ ಪಾಯಿಂಟ್ ಆಯಿತು. ಪ್ರತಾಪ್ ನನ್ನ ದ್ವೇಷಿಸುವವರು ಕೂಡ ಈಗ ಪ್ರತಾಪ್ ಕ್ಯಾರೆಕ್ಟರ್‌ಗೆ ಫಿದಾ ಆಗಿದ್ದು ಪ್ರತಾಪ್ ಗೆದ್ದು ಬರಲಿ ಎಂದು ಕಾಮೆಂಟ್‌ಗಳ ಮೂಲಕ ಶುಭ ಹಾರೈಸುತ್ತಿದ್ದಾರೆ.

ಇಷ್ಟಕ್ಕೆಲ್ಲ ಕಾರಣ ತುಕಾಲಿ ಸಂತೋಷ್.. ತುಕಾಲಿ ಸಂತೋಷ್ ಪ್ರತಾಪ್‌ನನ್ನ ಪದೇ ಪದೆ ತಮಾಷೆಯ ವಿಷಯವನ್ನಾಗಿ ಇಟ್ಟುಕೊಂಡು ಕೆಣಕುತ್ತಾ ಇದ್ದರು.‌ ತುಕಾಲಿ ಜೊತೆಗೆ ವರ್ತೂರು ಸಂತೋಷ್ ಸೇರಿದಂತೆ ಮತ್ತೆ ಹಲವರು ಪ್ರತಾಪ್‌ನನ್ನ ಕೆಣಕುವ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಪ್ರತಾಪ್ ತಾಳ್ಮೆಯನ್ನು ಕಳೆದುಕೊಳ್ಳದೆ ಅವರಿಗೆ ತಮ್ಮ ಮೌನದಲ್ಲಿಯೇ ಉತ್ತರವನ್ನು ಕೊಟ್ಟಿದ್ದರು. ಜನರೆಲ್ಲರೂ ಸಹ ಇವರೆಲ್ಲರ ವರ್ತನೆಗೆ ಛೀಮಾರಿಯನ್ನು ಸಹ ಹಾಕಿದ್ದರು.

bigg-boss-kannada-season-10-drone-pratap-inspired-by-kichcha-sudeeps-motivational-words

ಇನ್ನು ವಾರದ ಕಥೆ ಕಿಚ್ಚನ ಜೊತೆಯಲ್ಲಿ ಪ್ರತಾಪ್‌ಗೆ ಮೋಟಿವೇಶನ್ ಆಗಿ ಕಿಚ್ಚ ಸುದೀಪ್ ಮಾತನಾಡಿದರು. ನೀವು ಸಹ ಎಲ್ಲರಂತೆ ಓಪನ್ ಅಪ್ ಆಗಬೇಕು. ಇದೇ ರೀತಿ ಇದ್ದರೆ, ಆಟವನ್ನು ಆಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೇ ಪ್ರತಾಪ್ ಅವರು ಸೀರಿಯಸ್‌ ಆಗಿ ತೆಗೆದುಕೊಂಡು ತುಂಬಾ ಚೆನ್ನಾಗಿ ಮನೆಯಲ್ಲಿ ಆಟವಾಡುತ್ತಿದ್ದಾರೆ. ತಾವು ಸಹ ಒಬ್ಬ ಸ್ಪರ್ಧಿ ಎಂದು ಮನೆಯಲ್ಲಿರುವವರಿಗೆ ತೋರಿಸುತ್ತಿದ್ದಾರೆ. ಮನೆಯಲ್ಲಿರುವ ಎಲ್ಲರ ಜೊತೆಗೆ ಸಾಕಷ್ಟು ತಾಳ್ಮೆಯಿಂದ ವ್ಯವಹರಿಸುತ್ತಾ ಇದ್ದಾರೆ.

ಕಿಚ್ಚ ಸುದೀಪ್‌ಗೆ ಥ್ಯಾಂಕ್ಸ್ ಹೇಳಿದ ಪ್ರತಾಪ್

ಪ್ರತಾಪ್‌ ಬಿಗ್ ಬಾಸ್ ಮನೆಗೆ ಬಂದರು ಸಹ ಯಾರೊಂದಿಗೂ ಬೆರೆಯದೆ ತಮ್ಮ ಪಾಡಿಗೆ ತಾವು ಇದ್ದರು. ಆದರೆ, ಕಾಲ ಕಳೆಯುತ್ತಾ ಅವರು ಸಹ ಎಲ್ಲರೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ನಿರ್ಧರಿಸಿದರು. ಆದರೆ, ಮನೆಯಲ್ಲಿರುವ ಕೆಲವೊಂದಷ್ಟು ಮಂದಿ ಪ್ರತಾಪ್ ಮನಸ್ಸಿಗೆ ಘಾಸಿ ಮಾಡುವ ಕೆಲಸ ಮಾಡಿದರು. ಇದೇ ವೇಳೆ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಪ್ರತಾಪ್ ಮನಸ್ಸನ್ನು ಕಿಚ್ಚ ಸುದೀಪ್ ಬದಲಾಯಿಸಿದ್ದಾರೆ.

ಪ್ರತಾಪ್ ನನ್ನ ಗೇಲಿ ಮಾಡಿದವರಿಗೆ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡು ಪ್ರತಾಪ್ ಓಪನ್ ಆಪ್ ಆಗುವಂತೆ ಮಾಡಿದರು. ಇದೇ ವಿಚಾರಕ್ಕಾಗಿ ಈಗ ಬಿಗ್ ಬಾಸ್ ಮನೆಯಲ್ಲಿ ಮನಸು ಬಿಚ್ಚಿ ಡ್ರೋನ್‌ ಪ್ರತಾಪ್ ಮಾತನಾಡಿದ್ದಾರೆ. ಅಂದು ಕಿಚ್ಚ ಸುದೀಪ್ ಸರ್ ಇಲ್ಲದೆ ಇದ್ದಿದ್ದರೆ ನಾನು ಇನ್ನಷ್ಟು ಭಯವನ್ನು ಪಡುತ್ತಿದ್ದೆ. ಅವರ ಮಾತುಗಳೇ ನನಗೆ ಸ್ಫೂರ್ತಿಯನ್ನು ಕೊಟ್ಟಿದೆ ಎಂದು ಹೇಳಿದ್ದಾರೆ. ಅಂದು ಸುದೀಪ್ ಸರ್ ನನಗೆ ಸ್ಪೂರ್ತಿಯನ್ನು ನೀಡಿಲ್ಲ ಎಂದರೆ ನಾನು ಇವತ್ತಿಗೂ ಕೂಡ ಭಯಭೀತನಾಗೆ ಇರುತ್ತಿದ್ದೆ ಎಂದು ಸುದೀಪ್ ಅವರು ಮಾಡಿದ ಉಪಕಾರವನ್ನು ಪ್ರತಾಪ್ ನೆನಪಿಸಿಕೊಂಡಿದ್ದಾರೆ.

ಎಲ್ಲರಿಗೂ ಶಾಕ್ ಕೊಟ್ಟ ಪ್ರತಾಪ್

ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿರುವವರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಪ್ರತಾಪ್ ತಮ್ಮನ್ನೇ ತಾವು ಚೇಂಜ್ ಮಾಡಿಕೊಂಡಿದ್ದಾರೆ. 'ಬೃಂದಾವನ' ಧಾರಾವಾಹಿಯ ತಂಡ ಬಿಗ್ ಬಾಸ್ ಮನೆಗೆ ಬಂದಿದ್ದು ಇದೇ ವೇಳೆ ಪ್ರತಾಪ್ ಚೆನ್ನಾಗಿ ಕುಣಿದು ಕಳಿಸಿದ್ದಾರೆ. ಕಿಚ್ಚ ಸುದೀಪ್ ಸಾಂಗ್‌ಗೆ ಜೋಶ್‌ನಲ್ಲಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರೂ ಸಹ ಶಾಕ್ ಆಗುವಂತೆ ಮಾಡಿದ್ದಾರೆ. ನಾನು ಯಾರಿಗೂ ಸಹ ಕಮ್ಮಿ ಇಲ್ಲ. ನಿಮಗಿಂತ ಚೆನ್ನಾಗಿ ನನಗೆ ಆಟವಾಡಲು ಬರುತ್ತದೆ ಎಂಬ ಮೆಸೇಜ್ ಅನ್ನು ಕೊಟ್ಟಿದ್ದಾರೆ.

ಹಲವಾರು ಟೀಕೆಗಳನ್ನ ಎದುರಿಸಿದ ಪ್ರತಾಪ್‌ಗೆ ಸುದೀಪ್ ಮಾತುಗಳು ಎನರ್ಜಿಯ ಟಾನಿಕ್ ಆಗಿ ಪರಿಣಮಿಸಿವೆ. ತಪ್ಪು ಮಾಡೋದು ಸಹಜ ತಿದ್ದಿಕೊಂಡು ಬಾಳಬೇಕು ಎಂಬುದನ್ನು ಪ್ರತಾಪ್‌ ಕಲಿತಿರುವಂತೆ ಕಾಣುತ್ತದೆ.ಸ್ಪರ್ಧಿಗಳು ಕೂಡ ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿದ್ದಾರೆ. ಕೊನೆ ತನಕ ಆಟವಾಡಿ ಫೈನಲ್ ಲಿಸ್ಟ್ ಆಗುತ್ತಾರೆ ಎಂಬುದೇ ಈಗ ಕುತೂಹಲವಾಗಿದೆ.

More from Filmibeat

English summary
Bigg Boss Kannada season 10, Drone Pratap, inspired by Kichcha Sudeep's motivational words
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X