BBK10: ಪ್ರತಾಪ್ ಐಡಿಯಾ ಉಲ್ಟಾ; ನಮ್ರತಾ, ಸಂಗೀತಾ ಕೂಡ ಫಿನಾಲೆಗೆ ಎಂಟ್ರಿ!
ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಹೆಚ್ಚು ಅಂಕ ಪಡೆದವರು ಫಿನಾಲೆಗೆ ನೇರವಾಗಿ ಹೋಗುವ ಅವಕಾಶ ಇರುತ್ತೆ ಎಂಬುದನ್ನು ಬಿಗ್ ಬಾಸ್ ಸೂಚಿಸಿತ್ತು. ಅದಕ್ಕೆ ಸದಸ್ಯರು ಆಟವನ್ನು ಸೀರಿಯಸ್ ಆಗಿ ಆಡುವುದಕ್ಕೆ ಶುರು ಮಾಡಿದರು. ದೀದಿ, ಫ್ರೆಂಡ್ ಎಂಬ ಭಾವಗಳನ್ನೆಲ್ಲಾ ಮರೆತು ಆಟವಾಡಿದರು. ಇದೀಗ ಫೈನಲಿ ಮೂರು ಜನ ಟಿಕೆಟ್ ಪಡೆದಿದ್ದಾರೆ.
ಈ ವಾರವಿಡಿ ಮನೆಯ ಸದಸ್ಯರಿಗೆ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಲಾಗಿತ್ತು. ಮನರಂಜನೆಯ ಜೊತೆಗೆ ರಿಸ್ಕಿ ಟಾಸ್ಕ್ ಗಳು ಇದಾಗಿತ್ತು. ಆಶ್ಚರ್ಯವೆಂಬಂತೆ ಈ ಬಾರಿ ಫಿನಾಲೆಯ ಟಿಕೆಟ್ ಅನ್ನು ನಮ್ರತಾ ಕೂಡ ನೇರವಾಗಿ ಪಡೆದಿದ್ದಾರೆ.

ಸಂಗೀತಾರನ್ನು ಆಟದಿಂದ ದೂರವಿಟ್ಟ ಪ್ರತಾಪ್
ಇವತ್ತು ಟಿಕೆಟ್ ಟು ಫಿನಾಲೆ ಟಾಸ್ಕ್ ಕಡೆಯ ದಿನವಾಗಿದೆ. ಕಡೆಯ ಟಾಸ್ಕ್‌ನಲ್ಲಿ ತುಕಾಲಿಗೆ ಅವಕಾಶ ನೀಡಲಾಗಿತ್ತು. ಬಾಕ್ಸ್ ಗಳನ್ನು ಕಡ್ಡಿಯಲ್ಲಿ ಬ್ಯಾಲೆನ್ಸ್ ಮಾಡಿ, ಬಾಕ್ಸ್ ಒಳಗಿಂದ ತಂದು ಮೇಲೆ ನೇತಾಕಬೇಕಿತ್ತು. ಇದರಲ್ಲಿ ವಿನಯ್, ವರ್ತೂರು, ಸಂಗೀತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು ತುಕಾಲಿ. ಆದರೆ ಪ್ರತಾಪ್‌ಗೆ ವಿಶೇಷ ಅಧಿಕಾರ ಸಿಕ್ಕಾಗ ಸಂಗೀತಾ ಅವರನ್ನು ತೆಗೆದಿದ್ದರು. ಯಾಕಂದ್ರೆ ಅಂಕ ಹತ್ತಿರವಿದೆ. ಈ ಆಟದಲ್ಲಿ ಗೆದ್ದರೆ ಸಂಗೀತಾ ಮುಂದೆ ಹೋಗುತ್ತಾರೆ ಅಂತ.
ಪ್ರತಾಪ್ ನಿರೀಕ್ಷೆಗೂ ಮೀರಿ ಗೆದ್ದ ಸಂಗೀತಾ
ಟಾಸ್ಕ್ ಶುರು ಮಾಡುವುದಕ್ಕೂ ಮುನ್ನ ಬಿಗ್ ಬಾಸ್ ಉಳಿದ ಸದಸ್ಯರಿಗೆ ಒಂದು ಅವಕಾಶ ನೀಡಿತ್ತು. ಗೆಲ್ಲುವ ಸದಸ್ಯನನ್ನು ಗುರುತಿಸಿದರೆ ಅವರಿಗೆ 40 ಮಾರ್ಕ್ಸ್ ಸಿಗುತ್ತದೆ ಎಂದು ಘೋಷಣೆ ಮಾಡಿತ್ತು. ಅದರಂತೆ ತನಿಷಾ, ಕಾರ್ತಿಕ್, ನಮ್ರತಾ ವಿನಯ್, ಸಂಗೀತಾ ಹೆಸರನ್ನು ಗುರುತಿಸಿದ್ದರು. ಆದರೆ ಸಂಗೀತಾ ಅವರು ಪ್ರತಾಪ್ ಹೆಸರನ್ನೇ ಬರೆದಿದ್ದರು. ಹೀಗಾಗಿ 40 ಅಂಕಗಳು ಸಿಕ್ಕಿದೆ.
420 ಅಂಕ ಪಡೆದ ಪ್ರತಾಪ್
ಫಿನಾಲೆ ಟು ಟಾಸ್ಕ್ ನಲ್ಲಿ ತುಕಾಲಿ 140, ತನಿಷಾ- 140, ಕಾರ್ತಿಕ್ - 170, ವಿನಯ್ - 180, ಸಂತೋಷ್ - 200, ನಮ್ರತಾ - 210, ಸಂಗೀತಾ - 300, ಪ್ರತಾಪ್ - 420 ಅಂಕಗಳು ಬಂದಿದೆ. ಈ ಅಂಕಗಳ ಆಧಾರದ ಮೇಲೆ ಮೂರು ಜನರನ್ನು ಬಿಗ್ ಬಾಸ್ ಆಯ್ಕೆ ಮಾಡಿದೆ. ಹೆಚ್ಚು ಅಂಕ ಪಡೆದವರು ನೇರವಾಗಿ ಫಿನಾಲೆ ಕಡೆಗೆ ಹೆಜ್ಜೆ ಹಾಕಲಿದ್ದಾರೆ. ಮುಂದಿನ ವಾರದ ಎಲಿಮಿನೇಷನ್ ನಿಂದ ಕೂಡ ಪಾರಾಗುತ್ತಾರೆ. ಇನ್ನೊಂದು ವಾರ ಕಳೆದರೆ ಫಿನಾಲೆಗೆ ಕಾಲಿಡಲಿದ್ದಾರೆ.

ಫಿನಾಲೆ ಟಿಕೆಟ್ ಪಡೆದ ಮೂವರು
ಟಿಕೆಟ್ ಟು ಫಿನಾಲೆಯಲ್ಲಿ ಸಂಗೀತಾ, ಪ್ರತಾಪ್ ಜೊತೆಗೆ ನಮ್ರತಾ ಕೂಡ ಟಿಕೆಟ್ ಪಡೆದಿದ್ದಾರೆ. ಇದು ನಮ್ರತಾಗೆನೇ ನಂಬುವುದಕ್ಕೆ ಆಗಲಿಲ್ಲ. ಮನೆಯಲ್ಲಿ ಉಳಿದವರೆಲ್ಲಾ ಶುಭ ಕೋರಿದ್ದಾರೆ. ಈಗ ಮನೆಯವರ ಮುಂದೆ ಚರ್ಚೆಗೆ ನಿಲ್ಲಿಸಿದ್ದಾರೆ. ಮೂವರಲ್ಲಿ ನಿಮ್ಮಲ್ಲಿ ಯಾರು ಬೆಸ್ಟ್ ಎಂಬುದನ್ನು ಸಮರ್ಥಿಸಿಕೊಳ್ಳಬೇಕು. ಉಳಿದ ಸದಸ್ಯರ ಬಳಿ ಮನವಿ ಮಾಡಬೇಕು. ಅವರಿಗೆ ಯಾರೂ ಬೆಸ್ಟ್ ಆಗುತ್ತಾರೆ ಅವರಿಗೆ ವೋಟ್ ಮಾಡಲಿದ್ದಾರೆ. ಫಿನಾಲೆಗೆ ಟಿಕೆಟ್ ತೆಗೆದುಕೊಳ್ಳುವುದಕ್ಕೆ ಇದು ಕೂಡ ಮುಖ್ಯವಾಗಿದೆ. ಟಾಸ್ಕ್ ಗಳಲ್ಲಿ ಗೆದ್ದ ಸದಸ್ಯರು ಮನೆಯವರ ಮನಸ್ಸು ಗೆಲ್ಲುತ್ತಾರಾ ಎಂಬುದನ್ನು ನೋಡಬೇಕಿದೆ.


Click it and Unblock the Notifications











