ಅಪ್ಪ ತಪ್ಪಾಯಿತು ಎಂದು ಬಿಕ್ಕಿ ಬಿಕ್ಕಿ ಅತ್ತ ಡ್ರೋನ್ ಪ್ರತಾಪ್: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಕಿಚ್ಚನ ಪಂಚಾಯಿತಿ

ಈ ಬಾರಿಯ ಕನ್ನಡ ಬಿಗ್ ಬಾಸ್ ಸೀಸನ್ ಹತ್ತು ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಒಬ್ಬೊಬ್ಬರ ವರ್ತನೆ ಒಂದೊಂದು ತರಹ ಬದಲಾಗುತ್ತಿದೆ. ಮೊದಲಿಗೆ ವೈರಿಗಳಂತೆ ಕಿತ್ತಾಡುತಿದ್ದವರು ಈಗ ಒಂದಾಗಿದ್ದಾರೆ. ಸ್ನೇಹಿತರಂತೆ ಇದ್ದವರು ಜಗಳವಾಡಿಕೊಂಡಿದ್ದಾರೆ. ಇವರಲ್ಲರ ನಡುವೆ ಇದ್ದು ಇಲ್ಲದಂತಿದ್ದ ಡ್ರೋನ್ ಪ್ರತಾಪ್ ಕನ್ನಡಿಗರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಹೌದು, ಮೊದ ಮೊದಲು ಸದ್ದಿಲ್ಲದೆ ಇರುತ್ತಿದ್ದ ಡ್ರೋನ್ ಪ್ರತಾಪ್ ಕ್ರಮೇಣ ಇತರ ಸ್ಪರ್ಧಿಗಳ ಜೊತೆಗೆ ಬೆರೆಯುತ್ತಾ ಹೋದರು. ತಮ್ಮ ಸೌಮ್ಯ ಸ್ವಭಾವ ಮತ್ತು ಭಾವುಕತೆಯಿಂದಾಗಿ ಕೋಟ್ಯಾಂತರ ಜನರ ಮನ ಕದ್ದಿರುವ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಅಪಾರ. ಆದರೆ, ಅವರು ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದು ತೀರಾ ಕಡಿಮೆ. ಆದರೆ, ಈ ಬಾರಿಯ ಕಿಚ್ಚನ ಪಂಚಾಯಿತಿ ಡ್ರೋನ್ ಪ್ರತಾಪ್ ಅವರ ಕಣ್ಣೀರಿಗೆ ಸಾಕ್ಷಿಯಾಗಿದೆ.

drone-prathap-got-emotional-hearing

ಕುಟುಂಬದ ಬಗ್ಗೆ ಮಾತನಾಡಿದ್ದ ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್ ಮೊದಲಿನಿಂದಲೂ ತಮ್ಮ ತಂದೆ, ತಾಯಿ, ತಂಗಿ ಕುಟುಂಬದವರ ಬಗ್ಗೆ ಮಾತಾಡಿದ್ದು ತುಂಬಾ ಕಡಿಮೆ. ಆದರೆ ನಟಿ ತಾರಾ ಬಿಗ್ ಬಾಸ್ ಮನೆಗೆ ಬಂದಾಗ ಭಾವುಕರಾಗಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದರು. ಅದಾದ ಮೇಲೆ ಅವರು ಎಷ್ಟೋ ವರ್ಷಗಳಿಂದ ಕುಟುಂಬದಿಂದ ದೂರವಿದ್ದಾರೆ ಎಂಬುದನ್ನು ತಿಳಿಸಿದ್ದರು. ತಮ್ಮ ಕುಟುಂಬ ಅದರಲ್ಲೂ ತಂದೆಯ ಜತೆಗೆ ಮಾತಾಡಬೇಕು ಎಂದು ನೋವು ತೋಡಿಕೊಂಡಿದ್ದರು.

ಇಂತಹ ಸನ್ನಿವೇಶದಲ್ಲೇ ಕಳೆದ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ತಮ್ಮ ಕುಟುಂಬದವರು ಬರೆದ ಪತ್ರಗಳನ್ನು ಪಡೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಡ್ರೋನ್ ಪ್ರತಾಪ್ ತಮಗೆ ತಮ್ಮ ತಂದೆ ತನ್ನ ಜೊತೆಗೆ ಮಾತನಾಡುತ್ತಾರೆಯೇ ಎಂದು ತಿಳಿದುಕೊಳ್ಳುವ ಆಸೆಯಿತ್ತು. ಆದರೆ ಪತ್ರ ಸಿಗಲಿಲ್ಲ. ಇದೇ ನೋವಿನಲ್ಲಿದ್ದ ಡ್ರೋನ್ ಪ್ರತಾಪ್‌ಗೆ ಕಿಚ್ಚ ಸುದೀಪ್ ಸರ್ಪ್ರೈಸ್ ನೀಡಿದ್ದಾರೆ.

drone-prathap-got-emotional-hearing

ಡ್ರೋನ್ ಪ್ರತಾಪ್‌ಗೆ ಕಿಚ್ಚನ ಉಡುಗೊರೆ

ಟಾಸ್ಕ್‌ನಲ್ಲಿ ಸೋತು ಮನೆಯ ಪತ್ರ ಮಡೆಯುವಲ್ಲಿ ವಿಫಲರಾಗಿರುವ ಪ್ರತಾಪ್‌ಗೆ ಕಿಚ್ಚನ ಪಂಚಾಯಿತಿಯಲ್ಲಿ ಬಿಗ್ ಬಾಸ್ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಪತ್ರದ ಬಗ್ಗೆ ಭಾರಿ ಆಸೆ ಇಟ್ಟುಕೊಂಡಿದ್ದ ಪ್ರತಾಪ್ ಅವರನ್ನು ಮಾತನಾಡಿಸಿರುವ ಸುದೀಪ್, ನಿಮ್ಮ ಮನೆಯಿಂದ ಬರುತ್ತಿದ್ದ ಪತ್ರದಲ್ಲಿ ನೀವು ಏನು ನಿರೀಕ್ಷಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಪ್ರಶ್ನೆ ಕೇಳುತ್ತಿದ್ದಂತೆ ಭಾವುಕರಾಗಿ ಅಪ್ಪ... ಎಂದು ತಡವರಿಸಿದ ಡ್ರೋನ್ ಪ್ರತಾಪ್...ಅಪ್ಪಾ ತಪ್ಪಾಯಿತು... ನನ್ನ ಕ್ಷಮಿಸಿಬಿಡಿ. ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೀನಿ ಎಂದು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ್ದಾರೆ. ಅಷ್ಟರಲ್ಲೇ ಕಿಚ್ಚನ ಪಂಚಾಯಿತಿ ವೇದಿಕೆಯಿಂದ ಪ್ರತಾಪ್ ಅವರ ತಂದೆಯ ಧ್ವನಿ ಕೇಳಿ ಬಂದಿದೆ. ತಂದೆಯ ಧ್ವನಿ ಕೇಳಿ ಮತ್ತಷ್ಟು ಜೋರಾಗಿ ಅಳಲು ಶುರು ಮಾಡಿದ ಪ್ರತಾಪ್ ಪದೇ ಪದೇ ನಾನು ತಪ್ಪು ಮಾಡಿದ್ದಿನಿ ಕ್ಷಮಿಸಿ ಕ್ಷಮಿಸಿ ಎಂದು ಬೇಡಿಕೊಂಡಿದ್ದಾರೆ.

ಇಷ್ಟು ವರ್ಷದ ಮಗನ ಜೊತೆಗೆ ಮಾತನಾಡದ ತಮದೆ ಇಂದು ಪ್ರತಾಪ್ ಜೊತೆಗೆ ಮಾತನಾಡುತ್ತಾರಾ...? ಮಗನಿಗಾಗಿ ಮುನಿಸು ಬಿಡುತ್ತಾರಾ ಎಂಬುದನ್ನು ಕಿಚ್ಚನ ಪಂಚಾಯಿತಿಯಲ್ಲಿ ನೋಡಬೇಕು. ಇನ್ನು, ಈ ಘಟನೆ ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲರ ಕಣ್ಣೀರಿಗೂ ಸಾಕ್ಷಿಯಾಗಿದೆ. ಇಷ್ಟು ದಿನ ಮೋಜು, ಕುಸ್ತಿಗೆ ಸಾಕ್ಷಿಯಾಗುತ್ತಿದ್ದ ಬಿಗ್ ಬಾಸ್ ಇಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.

More from Filmibeat

English summary
Bigg Boss Kannada: Drone Prathap got emotional hearing his father's voice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X