BBK 10: ಡ್ರೋನ್ ಪ್ರತಾಪ ವೈಟಿಂಗ್ ಲೀಸ್ಟ್ .. ಬಂದ ವೋಟಿಂಗ್ ಎಷ್ಟು..?
ಬಹಳ ದಿನಗಳಿಂದ ಕಾಯುತ್ತಿದ್ದಂತ ದೊಡ್ಡ ರಿಯಾಲಿಟಿ ಶೋಗೆ ಇಂದಿನಿಂದ ತೆರೆ ಬಿದ್ದಿದೆ. ನಾಳೆಯಿಂದ ನೂರು ದಿನಗಳ ರಿಯಲ್ ಆಟ ಶುರುವಾಗಲಿದೆ. ಆದರೆ, ಇಂದು ಅದ್ದೂರಿ ವೇದಿಕೆ ಮೂಲಕ, ಅವರನ್ನು ರಾಜ್ಯದ ಜನತೆಗೆ ಪರಿಚಯಿಸಿ, ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಡಲಾಗುತ್ತಿದೆ. ಆದರೆ, ಈ ಬಾರಿ ಇದರಲ್ಲಿಯೇ ಒಂದು ಟ್ವಿಸ್ಟ್ ಇದೆ.
ಈ ಬಾರಿ ನಡೆಯುತ್ತಿರುವುದು ಬಿಗ್ ಬಾಸ್ 10. ಸೀಸನ್ 10 ಒಂದಲ್ಲ, ಎರಡಲ್ಲ ಸಾಕಷ್ಟು ವಿಶೇಷತೆ ಹೊಂದಿದೆ. ಅದರಲ್ಲೂ ಮನೆಯನ್ನು ಬದಲಾಯಿಸಲಾಗಿದೆ. ಹೊಸ ಮನೆಗೆ ಹೊಸ ಅತಿಥಿಯಾಗಿ ಹೋಗಬೇಕಾದರೆ ಅಲ್ಲಿ ಕುಳಿತಿರುವವರ ಮನಸ್ಸು ಗೆಲ್ಲಲೇಬೇಕಾಗಿದೆ. ಅದರಲ್ಲಿ ಡ್ರೋನ್ ಪ್ರತಾಪ್ ವೈಟಿಂಗ್ ಲೀಸ್ಟ್‌ನಲ್ಲಿದ್ದಾರೆ.

ಬಿಗ್ ಬಾಸ್ ವೇದಿಕೆಯಲ್ಲಿ ಡ್ರೋನ್ ಪ್ರತಾಪ್
ಬಿಗ್ ಬಾಸ್ ಆರಂಭವಾಗುತ್ತಿದೆ ಎಂದಾಗಲೇ ಜನರು ಸಾಕಷ್ಟು ಊಹೆಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ಅದರಲ್ಲೂ ಸ್ಪರ್ಧಿಗಳ ಹುಡುಕಾಟವೇ ಜಾಸ್ತಿಯಾಗಿತ್ತು. ಈ ಬಾರಿ ಯಾರೆಲ್ಲಾ ಹೋಗಬಹುದು ಎಂದೇ ದೊಡ್ಡ ಲೀಸ್ಟ್ ರೆಡಿಯಾಗಿತ್ತು. ಅದರಲ್ಲಿ ಡ್ರೋನ್ ಪ್ರತಾಪನ ಹೆಸರು ಇತ್ತು. ಇದೀಗ ಜನರ ಊಹೆ ಸತ್ಯವಾಗಿದೆ. ಡ್ರೋನ್ ಪ್ರತಾಪ ಕೂಡ ಬಿಗ್ ಬಾಸ್ ವೇದಿಕೆಗೆ ಬಂದಾಗಿದೆ.
ಜನರ ಮನಸ್ಸಲ್ಲಿದ್ದ ಪ್ರಶ್ನೆ ಕೇಳಿದ ಕಿಚ್ಚ
ಡ್ರೋಣ್ ಪ್ರತಾಪ ಎಂದಾಕ್ಷಣ ಜನರ ಮನಸ್ಸಲ್ಲೂ ಸಾಕಷ್ಟು ಪ್ರಶ್ನೆಗಳಿದ್ದವು. ಡ್ರೋನ್ ಪ್ರತಾಪ್ ಪರಿಚಯವಾದ ಕೂಡಲೇ ಜನ ಸಾಕಷ್ಟು ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದರು. ಪ್ರತಾಪ್ ಹೇಳಿದ ಎಲ್ಲಾ ಮಾತುಗಳನ್ನು ಜನ ಸುಲಭವಾಗಿ ನಂಬಿದ್ದರು. ಜನರು ಮಾತ್ರ ಅಲ್ಲ, ಎಷ್ಟೋ ಕಂಪನಿಗಳು ನಂಬಿದ್ದವು. ಆದರೆ ಬಹಳ ಬೇಗ ಪ್ರತಾಪ್ ಹೇಳಿದ್ದೆಲ್ಲವು ಸುಳ್ಳು ಎಂಬುದು ಗೊತ್ತಾಗಿತ್ತು. ಇದೀಗ ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಜನರ ಮನಸ್ಸೊಳಗಿದ್ದ ಎಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ.
ಟ್ರೋಲರ್‌ಗಳಿಗೆ ಪ್ರತಾಪ್ ಹೇಳಿದ್ದೇನು ?
ಡ್ರೋನ್ ಪ್ರತಾಪಗೆ ಸುದೀಪ್ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಜನರ ನಂಬಿಕೆಗೆ ಮೋಸ ಮಾಡಿದ್ರಿ, ಸುಳ್ಳು ಹೇಳಿದ್ರಿ, ಜೀವನದಲ್ಲಿ ಕಂಡ ಏರಿಳಿತ, ನೆಗೆಟಿವ್ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನಿದೆ ಎಂದು ಕೇಳಿದರು. ಇದಕ್ಕೆಲ್ಲ ಉತ್ತರ ನೀಡಿದ ಡ್ರೋನ್, ಕೆಲವೊಂದು ಕಡೆ ನನ್ನಿಂದಾನೇ ಸಣ್ಣ ಪುಟ್ಟ ತಪ್ಪಾಗಿರಬಹುದು. ಸುಳ್ಳು ಹೇಳಿದೆ ಅನ್ನೋದಕ್ಕಿಂತ, ನಾನು ಎಲ್ಲಿಯೂ ಬರೆದುಕೊಂಡು ಮಾತನಾಡಲ್ಲ ಮಾತಾಡುವ ಬರದಲ್ಲಿ ಆಗಿರಬಹುದು. ಒಬ್ಬ ವ್ಯಕ್ತಿಯನ್ನು ತುಳಿಬೇಕು ಅಂತಾನೇ ತುಳಿದಿದ್ದಾರೆ. ನಂಬಿಕೆ ಅಂದ್ರೆ ಒಬ್ಬರನ್ನ ಪ್ರೀತಿಸುವುದು. ಅದರ ಜೊತೆಗೆ ನಾವು ಮಾಡುವ ಕೆಲಸದಲ್ಲಿ ಪ್ರೀತಿ ಇರಬೇಕು. ನಂಗೆ ಈಗಲೂ ಅವಕಾಶ ಕಡಿಮೆ ಆಗಿದೆ ಅಂತ ಏನಿಲ್ಲ. ಡ್ರೋನ್ ಅಂದ್ರೆ ಕ್ಯಾಮೆರಾ ವಿಡಿಯೋಗ್ರಫಿಗೆ ಯೂಸ್ ಮಾಡ್ತಾರೆ ಅಂತ. ಆದ್ರೆ ನಾನು ಡ್ರೋನ್ ಬೇರೆ ರೀತಿಯೇ ಬಳಸುತ್ತಾ ಇದ್ದೀನಿ. ರೈತರಿಗೆ ಅನುಕೂಲ ಆಗುವ ರೀತಿ. ಮಾತು ಜಾಸ್ತಿ ಅಂದ್ರು ಅದಕ್ಕೆ ವೈಯಕ್ತಿಕವಾಗಿ ಕೆಲಸ ಜಾಸ್ತಿ ಮಾಡೋಣಾ ಅನ್ನಿಸ್ತು. ಅದಕ್ಕೆ ಕೆಲಸ ಮಾಡುತ್ತಾ ಇದ್ದೀನಿ ಎಂದಿದ್ದಾರೆ.
ವೈಟಿಂಗ್ ಲೀಸ್ಟ್‌ನಲ್ಲಿ ಡ್ರೋನ್
ಇನ್ನು ಈ ಬಾರಿ ವೋಟಿಂಗ್ ಸಿಸ್ಟಮ್ ಇದೆ. ಬಿಗ್ ಬಾಸ್ ಆಯ್ಕೆ ಮಾಡಿದ್ದರು. ಜನರ ವೋಟಿಂಗ್ ಫೈನಲ್. ಬಿಗ್ ಬಾಸ್ ವೇದಿಕೆಯಲ್ಲಿಯೇ ಕುಳಿತಿರುವ ಒಂದಷ್ಟು ಮಂದಿಗೆ ಇಷ್ಟವಾದವರನ್ನು ಮಾತ್ರ ಒಳಗೆ ಕಳುಹಿಸಲಾಗುತ್ತಿದೆ. ಇದರಲ್ಲಿ ಡ್ರೋನ್ ಕಡಿಮೆ ವೋಟಿಂಗ್ ಪಡೆದಿದ್ದಾರೆ. ಕೇವಲ 41% ಪಡೆದು ವೈಟಿಂಗ್ ಲೀಸ್ಟ್ ನಲ್ಲಿದ್ದಾರೆ. ವೈಟಿಂಗ್ ರೂಮಲ್ಲಿ ಕುಳಿತ ಪ್ರತಾಪ್, ಚಡಪಡಿಸುತ್ತಿದ್ದಾರೆ. ಸದ್ಯ ಯಾವಾಗ ಮತ್ತೆ ಕರೆಯುತ್ತಾರೋ ಗೊತ್ತಿಲ್ಲ.


Click it and Unblock the Notifications











