ಬಿಗ್ ಬಾಸ್ ಮನೆಯಲ್ಲಿ ನೆಗೆಟಿವ್ ಸದಸ್ಯ ಪ್ರತಾಪ್..?: ಮತ್ತೆ ಟಾರ್ಗೆಟ್ ಆಗ್ತಿದ್ದಾರಾ ಡ್ರೋನ್ ಪ್ರತಾಪ್..!?

ಕನ್ನಡ ಬಿಗ್ ಬಾಸ್ ಈಗ 12ನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಪರಸ್ಪರ ಸ್ಪರ್ಧೆ ಕೂಡ ಹೆಚ್ಚಾಗುತ್ತಿದೆ. ಎಲಿಮಿನೇಷನ್, ಡಬಲ್ ಎಲಿಮಿನೇಷನ್‌ಗಳ ಮೂಲಕ ಪದೇ ಪದೇ ಶಾಕ್‌ ನೀಡುತ್ತಿದೆ. ಭಾನುವಾರ ಕೂಡ ಇಬ್ಬರು ಮನೆ ಬಿಟ್ಟು ಹೋಗಿದ್ದಾರೆ. ಆದರೆ, ಅದರ ಬಗ್ಗೆ ಬಿಗ್ ಬಾಸ್ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಇನ್ನು, ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ವೋಟ್ ಪಡೆದ ಸಾಲಿನಲ್ಲಿ ವರ್ತೂರ್ ಸಂತೋಷ್ ಮತ್ತು ಡ್ರೋನ್ ಪ್ರತಾಪ್ ಇದ್ದಾರೆ. ಒಂದು ವಾರ ಇವರು, ಒಂದು ವಾರ ಅವರು...ಹೀಗೆ ಬದಲಾಗುತ್ತಿದೆ. ಮೊದ ಮೊದಲು ಆಕ್ಟಿವ್ ಆಗಿರದ ಡ್ರೋನ್ ಪ್ರತಾಪ್ ಈಗ ಕೂಡ ಮನೆಯಲ್ಲಿ ಸಕತ್ ಆಗಿ ಆಟವಾಡುತ್ತಿದ್ದಾರೆ. ಜೊತೆಗೆ ಮನೆಯವರ ಟಾರ್ಗೆಟ್‌ಗೂ ಒಳಗಾಗುತ್ತಿದ್ದಾರೆ. ಈಗ ಮತ್ತೊಮ್ಮೆ ಟಾರ್ಗೆಟ್ ಆಗಿದ್ದಾರೆ.

Bigg Boss Kannada Season 10: Drone Prathap Spreading Negative says other contestants

ಮನೆಯಲ್ಲಿ ನೆಗೆಟಿವಿಟಿ ಹರಡುತ್ತಿದ್ದಾರಾ ಡ್ರೋನ್ ಪ್ರತಾಪ್!?

ಬಿಗ್ ಬಾಸ್ ಮನೆಯಲ್ಲಿ ಈಗ ಟ್ರೋನ್ ಪ್ರತಾಪ್ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದಾರೆ. ಹೀಗಾಗಿ ದೊಡ್ಮನೆಯಿಂದ ಅವರನ್ನು ಹೊರ ಹಾಕಬೇಕು ಎಂದು ಮನೆಯ ಇತರೆ ಸದಸ್ಯರು ಪ್ರಯತ್ನ ಪಡುತ್ತಿದ್ದಾರೆ. ಹಲವು ಬಾರಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಕಳೆದ ವಾರದ ಮುದ್ದೆ ವಿಚಾರ ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್.

ಸದ್ಯ ಕಲರ್ಸ್ ಕನ್ನಡ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಡ್ರೋನ್ ಪ್ರತಾಪ್ ಟಾರ್ಗೆಟ್ ಆಗಿರಯವುದು ಕಾಣಿಸುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ನೆಗೆಟಿವ್ ಸದಸ್ಯ ಯಾರು ಎಂದು ಪ್ರಶ್ನೆ ಕೇಳಿದೆ. ಇದಕ್ಕೆ ಮನೆಯ ಸದಸ್ಯರು ಒಂದು ಬೋರ್ಡ್‌ನಲ್ಲಿ ಉತ್ತರ ಬರೆದು ತೋರಿಸಬೇಕು ಜೊತೆಗೆ ಕಾರಣವನ್ನು ಹೇಳಬೇಕು.

ಈ ಪ್ರಶ್ನೆಗೆ ಮನೆಯ ಹಲವು ಸದಸ್ಯರು ಡ್ರೋನ್ ಪ್ರತಾಪ್ ಹೆಸರು ತೆಗೆದುಕೊಂಡಿದ್ದಾರೆ. ವಿನಯ್ ಗೌಡ ಜೊತೆಗೆ ಮೊದಲಿನಿಂದರೂ ಪ್ರತಾಪ್ ಜೊತೆ ಆಪ್ತವಾಗಿದ್ದ ವರ್ತೂರು ಸಂತೋಷ್, ತುಕಾಲಿ ಸಂತೋಷ್, ತನಿಷಾ ಕೂಡ ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಡ್ರೋನ್ ಕೂಡ ತಿರುಗಿ ಬಿದ್ದಿದ್ದಾರೆ. ಉಳಿಸ ಸದಸ್ಯರು ಯಾರ ಹೆಸರು ತೆಗೆದುಕೊಂಡಿದ್ದಾರೆ ಎಂಬುದು ಇನ್ನು ತಿಳಿದಿಲ್ಲ.

Bigg Boss Kannada Season 10: Drone Prathap Spreading Negative says other contestants

ಸಮಯವಿದೆ ಬದಲಾಗಿ: ಡ್ರೋನ್‌ಗೆ ಮನೆಯ ಸದಸ್ಯರ ಮನವಿ!

ಪ್ರತಾಪ್ ತಮಗೆ ಬೇಕಾದಾಗ ಮಾತ್ರ ಎದುರುಗಡೆ ಇರುವ ವ್ಯಕ್ತಿಯನ್ನ ಪರಿಗಣಿಸುತ್ತಾನೆ ಎಂದು ವರ್ತೂರು ಸಂತೋಷ್ ಆರೋಪಿಸಿದ್ದಾರೆ. ಇದಕ್ಕೆ ಸುಮ್ಮನೆ ಇಲ್ಲದೆ ಇರುವುದನ್ನು ಹೇಳಬಾರದು ಎಂದು ಪ್ರತಾಪ್ ಟಕ್ಕರ್ ಕೊಟ್ಟಿದ್ದಾರೆ. ಮುದ್ದೆ ವಿಷಯಕ್ಕೆ ಟಾರ್ಗೆಟ್ ಮಾಡಿದ್ದ ತನಿಷಾ ಕೂಡ, ಪ್ರತಾಪ್ ಅವರಿಗೆ ಬೇಕಾದ ಜಾಗದಲ್ಲಿ ವಾಯ್ಸ ರೈಸ್ ಮಾಡುವುದು ಗೊತ್ತಿರುತ್ತೆ... ಆದ್ರೆ ಅವರ ಉತ್ತರ ಬೇಕಾದ ಕಡೆಗಳಲ್ಲಿ ಸತ್ಯ ಮುಚ್ಚಿಡುತ್ತಾರೆ ಇಲ್ಲ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಸಮರ್ಥನೆ ನೀಡಿರುವ ಡ್ರೋನ್ ಪ್ರತಾಪ್, ಅವರ ಆದೇಶವನ್ನು ಒಪ್ಪಿಕೊಳ್ಳೋಕೆ ಇಲ್ಲಿ ಅವರ್ಯಾರು ಅಲ್ಲ ಎಂದಿದ್ದಾರೆ. ತಕ್ಷಣ ತುಕಾಲಿ ಸಂತೋಷ್ ಕೂಡ ನೀವು ನೆಗೆಟಿವ್‌ನೇ ಅದನ್ನ ಚೇಂಜ್ ಮಾಡಿಕೊಳ್ಳಿ. ಅದಕ್ಕೆ ಅವಕಾಶವಿದೆ ಎಂದು ಹೇಳಿದ್ದಾರೆ. ಆದರೆ, ಬಿಗ್ ಬಾಸ್ ವೀಕ್ಷಕರು ಮಾತ್ರ ಡ್ರೋನ್ ಪ್ರತಾಪ್‌ ಕಡೆ ಒಲವು ತೋರುತ್ತಿದ್ದಾರೆ. ಕಾಮೆಂಟ್ ಬಾಕ್ಸ್ ತುಂಬಾ ಪ್ರತಾಪ್ ಇಸದ ಬೆಸ್ಟ್, ಪ್ರತಾಪ್ ವಿನ್ನರ್ ಎಂದು ಹೇಳುತ್ತಿದ್ದಾರೆ.

More from Filmibeat

English summary
Drone Prathap Spreading Negative in Bigg Boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X