ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹಳೆಯ ಸ್ನೇಹಿತರು: ಯಾರಿಗೆಲ್ಲಾ ಲಾಭವಾಗಲಿದೆ..!?

By Shruthi Harishgowda

ಬಿಗ್ ಬಾಸ್ ಸೀಸನ್ 10 ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿದೆ. ಕಳೆದ ಬಾರಿಯ ಬಿಗ್ ಬಾಸ್ ಶೋ ಗಳಲ್ಲಿ ಇಷ್ಟು ಜಗಳಗಳೇ ಆಗುತ್ತಿರಲಿಲ್ಲ. ಆದರೆ ಈಗ ಬಿಗ್ ಬಾಸ್ ನಲ್ಲಿ ಬರೀ ಜಗಳ ಗಳಿಂದಲೇ ಮನೆ ತುಂಬಿತ್ತು. ಸೀಸನ್ 10 ಸೆಮಿ ಫೈನಲ್ ಹಂತಕ್ಕೆ ಬಂದಿದ್ದು ಸ್ಪರ್ಧಿಗಳು ಎಲ್ಲರೂ ಪರಸ್ಪರ ಪ್ರೀತಿ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗ ಜಗಳ ಕಡಿಮೆಯಾಗಿದ್ದು ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವ ರೂಢಿಯನ್ನ ಕಲಿತುಕೊಂಡಿದ್ದಾರೆ. ಇದರ ನಡುವೆ ಎಲಿಮಿನೇಷನ್ ಆಗಿ ಹೊರ ಹೋಗಿದ್ದ ಎಲ್ಲಾ ಸ್ಪರ್ಧಿಗಳು ಕೂಡ ಬಿಗ್ ಬಾಸ್ ಮನೆಗೆ ಮತ್ತೊಮ್ಮೆ ಎಂಟ್ರಿಯನ್ನು ಕೊಟ್ಟಿದ್ದಾರೆ. ಇದರ ನಡುವೆ ಸಂಕ್ರಾಂತಿಯ ಸಂಭ್ರಮ ಹೆಚ್ಚಾಗಿದೆ.

ಸೆಮಿ ಫೈನಲ್ ಗೆ ಕೇವಲ ಇನ್ನೂ ಎರಡೇ ವಾರ ಬಾಕಿ ಇದ್ದು ಈಗ ಬಿಗ್ ಬಾಸ್ ಮನೆಗೆ ಮರಳಿ ಬಂದಿರುವ ಸ್ಪರ್ಧಿಗಳು ಎಲ್ಲಾ ಸ್ಪರ್ಧಿಗಳಿಗೂ ಕೂಡ ಯಾವ ರೀತಿ ಬೂಸ್ಟ್ ಆಫ್ ಮಾಡುತ್ತಾರೆ ಎಂಬುದನ್ನು ನೋಡಬೇಕು. ಯಾಕೆಂದರೆ ಹೊರಗೆ ಹೋಗಿರುವ ಸ್ಪರ್ಧಿಗಳು ಎಲ್ಲಾ ಎಪಿಸೋಡ್ ಗಳನ್ನು ನೋಡುತ್ತಿದ್ದಾರೆ. ಯಾರು ಯಾವ ರೀತಿ ನಡೆದುಕೊಂಡರೆ ಗೆಲುವಿಗೆ ಹತ್ತಿರವಾಗುತ್ತಾರೆ ಎಂಬ ಸೀಕ್ರೆಟನ್ನು ಕೂಡ ಇಲ್ಲಿ ಹೇಳಬಹುದು. ಅದಕ್ಕಾಗಿ ಬಿಗ್ ಬಾಸ್ ಮನೆಗೆ ವಾಪಸ್ ಬಂದಿರುವ ಹಳೆಯ ಸ್ಪರ್ಧಿಗಳಿಂದ ಯಾರಿಗೆ ಹೆಚ್ಚು ಲಾಭವಾಗುತ್ತದೆ ಎಂಬುದನ್ನು ಕುತೂಹಲವಾಗಿ ಇರಿಸಲಾಗಿದೆ.

Bigg Boss Kannada Season 10: Eliminated contestants come to bigg boss house, details Here

ಯಾರಿಗೆ ಯಾರ ಮೇಲೆ ಹೆಚ್ಚು ಒಲವಿದೆ ಎಂಬುವುದು ಈಗ ವಾಪಸ್ ಹೊರಗೆ ಹೋಗಿರುವ ಸ್ಪರ್ಧಿಗಳಿಗೆ ಗೊತ್ತಿದೆ. ತಮ್ಮ ಗೆಳೆಯರಿಗೆ ಯಾವುದರ ಬಗ್ಗೆ ಹೇಳುತ್ತಾರೆ ಯಾವ ನಡವಳಿಕೆಯನ್ನ ಬದಲಾಯಿಸಿಕೊಳ್ಳಬೇಕು ಎನ್ನುತ್ತಾರೆ. ಇದೆಲ್ಲವೂ ಕೂಡ ಈಗ ವೀಕ್ಷಕರಲ್ಲಿ ಕುತೂಹಲವನ್ನ ಕೆರಳಿಸಿದೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದು ಹೊರಗೆ ಹೋಗಿರುವ ಸ್ಪರ್ಧಿಗಳು ವಾಪಸ್ ಬಂದಿದ್ದು ಹಳೆಯ ಗೆಳೆಯರನ್ನು ನೋಡಿದ ಇತರ ಸ್ಪರ್ಧಿಗಳಿಗೆ ತುಂಬಾನೇ ಖುಷಿಯಾಗಿದೆ. ಮೈಕಲ್, ನೀತು, ಇಶಾನಿ, ಸ್ನೇಹಿತ್ ಬಿಗ್ ಬಾಸ್ ಮನೆಗೆ ಬಂದಿರುವಂತೆ ಕಾಣಿಸುತ್ತಾ ಇದೆ. ಕಲರ್ಸ್ ಕನ್ನಡದಲ್ಲಿ ಬಿಟ್ಟಿರುವ ಪ್ರೋಮೋದಲ್ಲಿ ನಾಲ್ಕು ಸ್ಪರ್ಧಿಗಳು ವಾಪಸ್ ಬಂದಿರುವಂತೆ ತೋರಿಸಲಾಗಿದೆ.

ಬಿಗ್ ಬಾಸ್ ಮನೆಗೆ ಬಂದ ಹಳೆಯ ಸ್ಪರ್ಧಿಗಳು

ಸಂಗೀತ ಬಳಿ ಬಂದು ಈಶಾನಿ ಹೇಳಿದ್ದೇನು..!?

ಬಿಗ್ ಬಾಸ್ ಸೀಸನ್ ಹತ್ತಕ್ಕೆ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಹೋಗಿದ್ದ ಸ್ಪರ್ಧಿಗಳು ಈಗ ವಾಪಸ್ ಬಂದಿದ್ದಾರೆ. ಇದು ತಮ್ಮ ಸ್ನೇಹಿತರಿಗೆ ಸರ್ಪ್ರೈಸ್ ಆಗಿದೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳನ್ನು ಗಾರ್ಡನ್ ಏರಿಯಾಗೆ ಕರೆದಿದೆ. ಹಾಗೂ ಡಬ್ಬ ಮುಚ್ಚಿದ್ದನ್ನು ತೆಗೆಯುವಂತೆ ಹೇಳಿದ್ದರು. ಮನೆಯ ಎಲ್ಲಾ ಸದಸ್ಯರಿಗೂ ಕೂಡ ಸರ್ಪ್ರೈಸ್ ಕಾದಿತ್ತು ಅದು ಏನೆಂದರೆ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದ ಸ್ಪರ್ಧಿಗಳು ವಾಪಸ್ ಮನೆಗೆ ಬಂದಿದ್ದರು. ಈ ಸರ್ಪ್ರೈಸ್ ಮನೆಯಲ್ಲಿರುವ ಎಲ್ಲರಿಗೂ ಕೂಡ ಸಂತಸವನ್ನು ಕೊಟ್ಟಿದೆ. ತುಕಾಲಿ ಸಂತೋಷ್ ಡಬ್ಬವನ್ನು ಎತ್ತಿದಾಗ ಈಶಾನಿ ಹಾಗೂ ನೀತು ಇಬ್ಬರೂ ಕೂಡ ಹೊರಗೆ ಬಂದಿದ್ದಾರೆ.

Bigg Boss Kannada Season 10: Eliminated contestants come to bigg boss house, details Here

ಈಶಾನಿ ಸಂಗೀತ ಬಳಿ ಒಂದಷ್ಟು ಮಾತುಕತೆಯನ್ನು ನಡೆಸಿದ್ದಾರೆ. ಈ ವೇಳೆ ಸಂಗೀತಾ ಪ್ರತಾಪ್ ಸಿಂಪತಿ ಕಾರ್ಡ್ ಪ್ಲೇ ಮಾಡುತ್ತಾ ಈ ಮನೆಯಲ್ಲಿ ಆಟವಾಡುತ್ತಾ ಇದ್ದಾನಾ ಎಂಬ ಪ್ರಶ್ನೆಯನ್ನು ಈಶಾನಿ ಬಳಿಯಲ್ಲಿ ಕೇಳಿದ್ದಕ್ಕೆ ಈಶಾನಿ ಹೌದು ಎಂಬ ಉತ್ತರವನ್ನು ನೀಡಿದ್ದಾರೆ. ಈ ಮೊದಲೇ ಸಂಗೀತ ಪ್ರತಾಪ್ ಮೇಲೆ ಕಿಡಿ ಕಾರುತ್ತಾ ಇದ್ದು ಈಶಾನೀ ಮಾತನ್ನು ಹೇಳಿದ ಮೇಲೆ ಪ್ರತಾಪನ್ನು ಸಂಗೀತ ಮತ್ತಷ್ಟು ಟಾರ್ಗೆಟ್ ಮಾಡಬಹುದು ಎಂಬುವುದು ಸ್ಪಷ್ಟವಾಗಿ ಕಾಣಿಸುತ್ತಾ ಇದೆ.

ಪ್ರತಾಪ್‌ಗೆ ನೀತು ಹೇಳಿದ್ದೇನು..!?, ಸ್ನೇಹಿತ್ ಉರ್ಕೊಂಡಿದ್ದಾನೆ ಎಂದ ನಮ್ರತಾ

ನೀತು ಅನ್ನು ಪ್ರತಾಪ್ ಬಹಳಷ್ಟು ಹಚ್ಚಿಕೊಂಡಿದ್ದರು ನೀತು ಮನೆಯಿಂದ ಹೊರಗೆ ಹೋದ ಮೇಲೆ ಸಂಗೀತ ಜೊತೆಗೆ ಕಾಲ ಕಳೆಯುತ್ತಿದ್ದರು ಇದೇ ವಿಚಾರವನ್ನು ನೀತು ಪ್ರತಾಪ್ ಬಳಿಯಲ್ಲಿ ಹೇಳಿದ್ದಾರೆ. ನಿನಗೆ ಸಪೋರ್ಟ್ ಇದ್ದಿದ್ದೆ ಸಂಗೀತ ಕಡೆಯಿಂದ ಆದರೆ ನೀನು ಅದನ್ನೇ ಬ್ರೇಕ್ ಆಫ್ ಮಾಡಿಕೊಂಡು ಈಗ ನೀನು ಮನೆಯಲ್ಲಿ ಒಂಟಿ ಎಂದು ಅನಿಸುತ್ತಿದೆ ಎಂಬ ಮಾತನ್ನು ಹೇಳಿದ್ದಾರೆ. ಇನ್ನು ಇದೆಲ್ಲಾ ಆದಮೇಲೆ ಇಶಾನಿ ನಮ್ರತಾ ಜೊತೆಯಲ್ಲಿ ಮಾತನಾಡುತ್ತಿದ್ದಾರೆ. ನೀನು ಯಾರ ಬಗೆಯು ಕೂಡ ತಲೆಕೆಡಿಸಿಕೊಳ್ಳಬೇಡ ನಿನ್ನ ಆಟವನ್ನು ನೀನು ಹಾಡು ಎಂಬ ಮಾತನ್ನು ಇಶಾನಿ ನಮ್ರತಾಗೆ ಹೇಳಿದ್ದಾರೆ.

ಸ್ನೇಹಿತ್ ಎಲ್ಲರೂ ಬಂದಾದ ಮೇಲೆ ಬಂದಿದ್ದಾರೆ ಮುಖಕ್ಕೆ ಪೂರ್ತಿ ಗವಸು ಧರಿಸಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈಶಾನಿ ಜೊತೆಯಲ್ಲಿ ನಮ್ರತಾ ಸ್ನೇಹಿತ್ ಕಾರ್ತಿಕ್ ವಿಷಯಕ್ಕೆ ಹುರಿದುಕೊಂಡಿರುತ್ತಾರೆ ಎಂಬ ಮಾತು ಆಡಿದ ಕೂಡಲೇ ಸ್ನೇಹಿತ್ ಪ್ರತ್ಯಕ್ಷರಾಗಿದ್ದಾರೆ. ಈ ವೇಳೆ ಸ್ನೇಹಿತ್ ಬಳಿ ಬಂದು ನಮಸ್ಕಾರ ನಮ್ರತಾ ಅವರೇ ಎಂದು ಹೇಳಿದ್ದಾರೆ. ಹಳೆಯ ಸ್ನೇಹಿತರನ್ನು ನೋಡಿರುವ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ರೀತಿಯ ಎನರ್ಜಿ ಬಂದಂತೆ ಕಾಣಿಸುತ್ತಾ ಇದ್ದು, ಯಾವ ರೀತಿ ಮತ್ತೆ ಆಟವನ್ನು ಬದಲಾಯಿಸಿಕೊಂಡು ಆಡುತ್ತಾರೆ ನೋಡಬೇಕಿದೆ.

More from Filmibeat

English summary
Bigg Boss Kannada Season 10: Eliminated contestants come to bigg boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X