Pavi Poovappa: ಬಂದ ಪುಟ್ಟ ಹೋದ ಪುಟ್ಟ ಆದ ಮಾಡೆಲ್ ಪವಿ ಪೂವಪ್ಪ, ಮೂರೇ ವಾರಕ್ಕೆ ದೊಡ್ಮನೆಯಿಂದ ಔಟ್!
ಬಿಗ್ಬಾಸ್ ಕನ್ನಡ ಸೀಸನ್ 10 ಇದೀಗ 10ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ದೊಡ್ಮನೆಯಿಂದ ಹೊರ ಹೋಗುವವರು ಯಾರು ಎನ್ನುವ ಕುತೂಹಲ ಹೆಚ್ಚಾಗಿತ್ತು. ನಟಿ ಸಿರಿ ಮತ್ತು ಮಾಡೆಲ್ ಪವಿ ಪೂವಪ್ಪ ಅವರಲ್ಲಿ ಒಬ್ಬರು ಮನೆಯಿಂದ ಹೋಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ವರದಿಗಳ ಪ್ರಕಾರ ಪವಿ ಪೂವಪ್ಪ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ.
ಮೂಲಗಳ ಪ್ರಕಾರ ಇತ್ತೀಚೆಗೆ ಬಿಗ್ಬಾಸ್ ಮನೆಗೆ ವೈಲ್ಡ್ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಪವಿ ಪೂವಪ್ಪ ಮೂರೇ ವಾರಕ್ಕೆ ಮನೆಯಿಂದ ಹೊರ ಬರುತ್ತಿದ್ದಾರೆ. ಪವಿ ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದ ಅವಿನಾಶ್ ಶೆಟ್ಟಿ ಸೇಫ್ ಆಗಿದ್ದಾರೆ. ಈ ಮೂರು ವಾರಗಳಲ್ಲಿ ಒಂದು ವಾರ ಬಿಟ್ಟು ಉಳಿದ ವಾರಗಳಲ್ಲಿ ಪವಿ ನಾಮಿನೇಟ್ ಆಗಿದ್ದರು.

ಬಿಗ್ ಬಾಸ್ ಜರ್ನಿ ಮುಗಿಸಿದ ಪವಿ ಪೂವಪ್ಪ!
ಈ ವಾರ ಬಿಗ್ ಬಾಸ್ ಮನೆಯಲ್ಲಿ ಆರು ಮಂದಿ ನಾಮಿನೇಟ್ ಆಗಿದ್ದರು. ಸಿರಿ, ಪವಿ ಪೂವಪ್ಪ, ಮೈಕಲ್ ಅಜಯ್, ವಿನಯ್ ಗೌಡ , ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದರು. ಈ ಆರು ಮಂದಿಯಲ್ಲಿ ಟಾಸ್ಕ್‌ಗಳಲ್ಲಿ ಚನ್ನಾಗಿ ಆಡುವ ವಿನಯ್, ಮೈಕಲ್, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಸಿರಿ ಮತ್ತು ಪವಿ ಪೂವಪ್ಪ ಇಬ್ಬರಲ್ಲಿ ಒಬ್ಬರು ಮನೆ ಖಾಳಿ ಮಾಡಬೇಕಿತ್ತು. ವೀಕ್ಷಕರು ಸಿರಿ ಅವರನ್ನು ಸೇವ್ ಮಾಡಿದ್ದಾರೆ.
ಪವಿ ಪೂವಪ್ಪ ಬಿಗ್ ಬಾಸ್ ನೀಡುವ ಟಾಸ್ಕ್‌ಗಳಲ್ಲಿ ಅಷ್ಟು ಚೆನ್ನಾಗಿ ಆಡುತ್ತಿರಲಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳಾಗುತ್ತಿತ್ತು. 10 ವಾರದಲ್ಲಿಯೂ ಟಾಸ್ಕ್ನಲ್ಲೂ ಚೆನ್ನಾಗಿ ಆಡಿರಲಿಲ್ಲ. ಇದೇ ಕಾರಣಕ್ಕೆ ಈ ವಾರ 'ಕಳಪೆ' ಪಟ್ಟ ಪಡೆದಿದ್ದರು. ತುಕಾಲಿ ಸಂತೋಷ್ 'ಉತ್ತಮ' ಪಟ್ಟ ಪಡೆದರು.

ಸಿರಿಗಿಂತ ವೀಕ್ ಕಂಟೆಸ್ಟೆಂಟ್ ಆದ ಪವಿ ಪೂವಪ್ಪ
ಪವಿ ಪೂವಪ್ಪ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗುವ ಮೊದಲು ದೊಡ್ಮನೆಯಲ್ಲಿ ವೀಕ್ ಕಂಟೆಸ್ಟೆಂಟ್ ಎಂದರೆ 'ಸಿರಿ' ಎನ್ನುವಂತಾಗಿತ್ತು. ಅವರು ಹಲವು ಬಾರಿ ನಾಮಿನೇಟ್ ಆಗಿದ್ದರು. ಆದರೂ ಸೇವ್ ಆಗಿದ್ದಾರೆ. ಆದರೆ, ಪವಿ ಬಂದ ಮೇಲೆ ಸಿರಿ ಅವರಿಗಿಂತ ವೀಕ್ ಸ್ಪರ್ಧಿಯಾಗಿ ಕಾಣತೊಡಗಿದರು. ಅದರಲ್ಲೂ ಸಿರಿ ಅವರು ಪಡೆದಿರುವ ಜನಪ್ರಿಯತೆ ಕೂಡ ಜಾಸ್ತಿ.
ಪವಿ ಅವರು ಮಾಡೆಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ. ಆದರೆ, ಸಿರಿ ಅವರು ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳ ಮೂಲಕ ಜನರ ಮನೆಗಳನ್ನು ತಲುಪಿದ್ದಾರೆ. ಹೀಗಾಗಿ ಪವಿ ಪೂವಪ್ಪ ಅವರಿಗಿಂತ ಸಿರಿ ಅವರನ್ನು ಜನ ಉಳಿಸಿಕೊಂಡಿದ್ದಾರೆ. ಬಂದ ಮೂರೇ ವಾರಕ್ಕೆ ಪವಿ ದೊಡ್ಮನೆ ತೊರೆದಿದ್ದಾರೆ.
ಪವಿ ಪೂವಪ್ಪ
ಕೊಡಗು ಮೂಲದ ಪವಿ ಪೂವಪ್ಪ ಪೂರ್ತಿ ಹೆಸರು ಪಾನಿಕುಟ್ಟೀರ ಪವಿತ್ರಾ ಪೂವಪ್ಪ ಎಂದು. 2013 ರಲ್ಲಿ ಫ್ಯಾಷನ್ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇನ್ಟಾಗ್ರಾಮ್‌ನಲ್ಲಿ ಇವರಿಗೆ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. 2015 ರಲ್ಲಿ ಮಿಸ್ಟರ್ ಮತ್ತು ಮಿಸ್ ಫ್ಲೆಮಿಂಗೊ ಸ್ಯಾಂಡಲ್‌ವುಡ್ ಸ್ಟಾರ್ ಸ್ಪರ್ಧಿ ಪ್ರಶಸ್ತಿಯನ್ನು ಗೆದ್ದರು. 2016 ರಲ್ಲಿ ರಿಜ್ ಫ್ಯಾಷನ್ ಮಿಸ್ ಆಸಮ್ ಬೆಂಗಳೂರು ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಇವರು ಬಿಗ್ ಬಾಸ್‌ಗೆ ಬಂದಾಗ ಸಕತ್ ಪೈಪೋಟಿ ಉಂಟಾಗಲಿದೆ ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ, ಅದು ನಿರಾಸೆಯಾಗಿದೆ.


Click it and Unblock the Notifications











