ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಶಾಕ್: ಶನಿವಾರವೇ ದೊಡ್ಮನೆಯಿಂದ ಹೊರಬಂದ ಇಶಾನಿ!

ಬಿಗ್‌ಬಾಸ್ ಕನ್ನಡ ಸೀಸನ್ 10 ಆರು ವಾರಗಳನ್ನು ಮುಗಿಸಿದೆ. ಈಗಾಗಲೇ ಮೂವರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಕೆಲ ಕಾರಣಗಳಿಂದ ಎರಡು ವಾರಗಳಲ್ಲಿ ಎಲಿಮಿನೇಷನ್ ನಡೆದಿರಲಿಲ್ಲ. ಇದೇ ಕಾರಣಕ್ಕೆ ಈ ಬಾರಿ ಇಬ್ಬರು ಮನೆ ಬಿಟ್ಟು ಹೋಗಲಿದ್ದಾರೆ ಎಂಬುದು ತಿಳಿದಿತ್ತು.

5 ಮತ್ತು 2 ನೇ ವಾರ ಯಾರು ಹೊರ ಹೋಗದ ಕಾರಣ ಈ ಬಾರಿ ಡಬಲ್ ಎಲಿಮಿನೇಷನ್ ನಿಜ ಆಗಿದ್ದು, ಶನಿವಾರವೇ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರ ಕರೆಯಲಾಗಿದೆ. ಗಾಯಕಿ ಇಶಾನಿ ಬಿಗ್ ಬಾಸ್ ಕನ್ನಡ 10 ರ ಆರನೇ ವಾರಾಂತ್ಯದಲ್ಲಿ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

bigg-boss-kannada-season-10-eshani-eliminated-from-bigg-boss-house

ಶನಿವಾರವೇ ಎಲಿಮಿನೇಷನ್ ಶಾಕ್!

ಬಿಗ್ ಬಾಸ್ ವೀಕ್ಷಕರು ಕಾಯುವುದು ನಟ ಸುದೀಪ್ ನಡೆಸಿಕೊಡುವ​ ಕಿಚ್ಚನ ಪಂಚಾಯಿತಿಗಾಗಿ. ಮನೆಯಲ್ಲಿ ವಾರಪೂರ್ತಿ ನಡೆಯುವ ವಿಷಯಗಳನ್ನು ಇಲ್ಲಿ ಚರ್ಚಿಸಿ, ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಈ ಬಾರಿ ಪಂಚಾಯಿತಿ ಶುರುವಾಗುತ್ತಿದ್ದಂತೆ ನಟ ಎಲಿಮಿನೇಷನ್ ಬಗ್ಗೆ ಮಾತನಾಡಿ ಇಬ್ಬರು ಹೊರ ಹೋಗುವುದು ಖಚಿತ ಎಂದು ಸೂಚನೆ ನೀಡಿದ್ದರು.

ಪ್ರತಿ ಭಾನುವಾರ ಎಲಿಮಿನೇಷನ್ ಯಾರು ಆಗುತ್ತಾರೆ ಎಂಬುದು ತಿಳಿಯುತ್ತಿತ್ತು. ಆದರೆ, ಈ ಬಾರಿ ಇಬ್ಬರು ಇದ್ದ ಕಾರಣ ಶನಿವಾರವೇ ಇಶಾನಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಭಾನುವಾರ ಮತ್ತೊಬ್ಬ ಸ್ಪರ್ಧಿ ಹೊರ ಹೋಗಲಿದ್ದಾರೆ. ಹೀಗಾಗಿ ದಸರಾ ಮತ್ತು ವರ್ತೂರ್ ಸಂತೋಷ್ ಕಾರಣಕ್ಕೆ ಮಿಸ್ ಆಗಿದ್ದ ಎಲಿಮಿನೇಷನ್ ಪ್ರಕ್ರಿಯೆ ಮುಂದುವರೆದಿದೆ.

ಕಿಚ್ಚ ಹೆಸರು ಕೂಗುವ ಮುನ್ನವೆ ಎದ್ದು ನಿಂತ ಇಶಾನಿ!

ಇನ್ನು, ಈ ವಾರ ಯಾರು ಮನೆ ಬಿಟ್ಟು ಹೋಗಲಿದ್ದಾರೆ ಎಂದು ಕಿಚ್ಚ ಕೇಳುತ್ತಿದ್ದಂತೆ ಗಾಯಕಿ ಇಶಾನಿ ತಾವೇ ಎದ್ದು ನಿಂತಿದ್ದರು. ಕಿಚ್ಚ ಸುದೀಪ್ "ಇಂದು ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ" ಎಂದರು. ತಕ್ಷಣವೇ ಇಶಾನಿ ಎದ್ದು ನಿಂತುಕೊಂಡರು.

bigg-boss-kannada-season-10-eshani-eliminated-from-bigg-boss-house

ಈ ವೇಳೆ ಕಿಚ್ಚ ಸುದೀಪ್, ಮೊದಲ ಬಾರಿಗೆ ಬಿಗ್ ಬಾಸ್‌ನಲ್ಲಿ ಇಂತಹ ಘಟನೆ ನಡೆದಿದೆ. ಸ್ಪರ್ಧಿಯೊಬ್ಬರು ತಾವೇ ಹೊರ ಹೊಗುತ್ತಿರುವುದು ಎಂದು ನಿಂತಿದ್ದಾರೆ. ಇಲ್ಲಿ ಮತ್ತೊಂದು ವಿಷಯವೆಂದರೇ ಅದು ನಿಜ ಕೂಡ ಎಂದು ಹೇಳಿದ್ದಾರೆ. ಜೊತೆಗೆ ನಿಮ್ಮ ಬಿಗ್‌ ಬಾಸ್‌ ಪಯಣ ಮುಗಿಯಿತು, ಈ ವೇದಿಕೆಯಲ್ಲಿ ಸಿಗೋಣ ಎಂದು ಹೇಳಿದ್ದಾರೆ.

ಇಶಾನಿ ಹೇಳಿದ್ದೇನು...?

ಬಿಗ್ ಬಾಸ್ ಮನೆಯಲ್ಲಿ ತಾವು ಆಟಗಳನ್ನು ಆಡುವಾಗ ಮತ್ತು ಇಲ್ಲಿಯೇ ಉಳಿದುಕೊಳ್ಳಲು ಸಾಕಷ್ಟು ಎಫರ್ಟ್ ಹಾಕಲಿಲ್ಲ ಎಂಬುದನ್ನು ಇಶಾನಿ ಒಪ್ಪಿಕೊಂಡಿದ್ದಾರೆ, "ನಾನು ಇನ್ನಷ್ಟು ಎಫರ್ಟ್ಸ್ ಹಾಕಬೇಕಾಗಿತ್ತು. ಆದರೆ ಹಾಗೆ ಆಗಲಿಲ್ಲ. ಈ ಮನೆಯಿಂದ ಸಾಕಷ್ಟು ಕಲಿತಿದ್ದಿನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್‌ ದಿ ಬೆಸ್ಟ್" ಎಂದು ಕಣ್ಣೀರು ಹಾಕುತ್ತಾ ಇಶಾನಿ ತಿಳಿಸಿದ್ದಾರೆ. ಮನೆಯಿಂದ ಹೊರ ಹೋಗಲಿರುವ ಮತ್ತೊಬ್ಬ ಸ್ಪರ್ಧಿ ಯಾರು ಎಂಬುದು ಭಾನುವಾರ ತಿಳಿಯಲಿದೆ.

ಇನ್ನು, ಈ ಶನಿವಾರ ಕಿಚ್ಚನ ಪಂಚಾಯಿತಿ ಡ್ರೋನ್ ಪ್ರತಾಪ್ ಮತ್ತು ಅವರ ತಂದೆ ನಡುವಿನ ಸಂಭಾಷಣೆ ಕಾರಣಕ್ಕೆ ಭಾವುಕವಾಗಿ ಬದಲಾಗಿತ್ತು. ಮೂರು ವರ್ಷಗಳ ಬಳಿಕ ಡ್ರೋನ್ ಪ್ರತಾಪ್ ತಮ್ಮ ತಂದೆಯ ಬಳಿ ಮಾತನಾಡಿದ್ದಾರೆ.

More from Filmibeat

English summary
Bigg Boss Kannada elimination: Eshani out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X