Bigg Boss 10 Finale: ವೈಭವದ ಫಿನಾಲೆಗೆ ಸ್ಪರ್ಧಿಗಳು ರೆಡಿ: ಗೆಲ್ಲೋದು ಸಮರ್ಥರಾ.. ಅಸಮರ್ಥರಾ..!?
ಬಿಗ್ ಬಾಸ್ ಸೀಸನ್ ಹತ್ತರ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಿದ್ದವಾಗಿದೆ. ಶನಿವಾರ ಸಂಜೆ 7.30 ರಿಂದಲೇ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದ್ದಾರೆ. ಈ ಬಾರಿ ವೋಟಿಂಗ್ ಮಾಡುವ ಮೂಲಕ ಸಮರ್ಥರು ಹಾಗೂ ಅಸಮರ್ಥರು ಎಂಬುದಾಗಿ ಎರಡು ಗುಂಪುಗಳಾಗಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟರು. ನಂತರ ಎರಡು ಗುಂಪುಗಳ ನಡುವೆ ಆಟ, ಮಾತು, ಕೋಪ, ಜಗಳ ಇಷ್ಟು ಸಹ ನಡೆದವು. ನಂತರ ಸ್ನೇಹಿತರೇ ಶತ್ರುಗಳ ರೀತಿ ವರ್ತಿಸಿದರು.
ಸ್ನೇಹಿತ್, ವಿನಯ್, ನಮ್ರತಾ, ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ, ತುಕಾಲಿ ಸಂತೋಷ್, ಭಾಗ್ಯ, ಸಿರಿ, ಮೈಕಲ್, ನೀತು ವನಜಾಕ್ಷಿ, ಇಶಾನಿ ಸಮರ್ಥರಾಗಿ ಬಿಗ್ ಬಾಸ್ ಮನೆಗೆ ಬಂದಿದ್ದರು. ವರ್ತೂರು ಸಂತೋಷ್, ಕಾರ್ತಿಕ್, ಸಂಗೀತಾ, ತನಿಷಾ, ರಕ್ಷಕ್, ಪ್ರತಾಪ್ ಅಸಮರ್ಥರಾಗಿ ಎಂಟ್ರಿಯನ್ನು ಕೊಟ್ಟರು. ಇಲ್ಲಿ ಕಾರ್ತಿಕ್ ಹಾಗೂ ವಿನಯ್ ಮೊದಲಿನಿಂದಲೂ ಸ್ನೇಹಿತರು. ಕಾರ್ತಿಕ್ ಅನ್ನು ನೋಡಿದ ವಿನಯ್ ಕಾರ್ತಿಕ್ ಬಳಿಯಲ್ಲಿ ಮಚ್ಚಾ ಸುದೀಪ್ ಅವರ ಕೈನಲ್ಲಿ ಒಂದು ನನ್ನ ಕೈ ಇನ್ನೊಂದರಲ್ಲಿ ನಿನ್ನ ಕೈ ಇರಬೇಕು ಎಂದು ಆಸೆ ಇದೆ ಎಂದಿದ್ದರು.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ನಡುವೆ ಕಾರ್ತಿಕ್, ವಿನಯ್ ಹಾಗೂ ಸಂಗೀತಾ ಈ ಮೂವರು ಕೂಡ ಹಲವಾರು ವಿಷಯಗಳಿಗೆ ಜಗಳವಾಡಿಕೊಂಡರು. ಇನ್ನು ಸಂಗೀರಾ ಕಾರ್ತಿಕ್ ಜೊತೆಯಲ್ಲಿ ತುಂಬಾ ಚೆನ್ನಾಗಿ ಇದ್ದರು ಬರುವ ಸ್ನೇಹದ ನಡುವೆಯೂ ಕೂಡ ಬಿರುಕು ಮೂಡಿ ಕಾರ್ತಿಕ್ ಒಂಟಿಯಾದರು. ಸದ್ಯಕ್ಕೆ ಸೆಮಿ ಫೈನಲ್ ನಲ್ಲಿ ಆರು ಮಂದಿ ಸ್ಪರ್ಧಿಗಳು ಇದ್ದು, ಯಾರಿಗೆ ಗೆಲುವು ಲಭಿಸಲಿದೆ ಎಂಬುದೇ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಗ್ರ್ಯಾಂಡ್ ಫಿನಾಲೆಗೆ ಬಿಗ್ ಬಾಸ್ ವೇದಿಕೆ ಸಜ್ಜು
ಬಿಗ್ ಬಾಸ್ ಸೀಸನ್ ಹತ್ತರ ಗ್ರ್ಯಾಂಡ್ ಫಿನಾಲೆಗೆ ವೈಭವದ ವೇದಿಕೆ ಸಜ್ಜಾಗಿದೆ. 112 ದಿನದ ಆಟ ಮುಕ್ತಾಯವಾಗಿದ್ದು, ಹೊರಗಡೆ ಏನಾಗುತ್ತಿದೆ ಎಂಬ ಬಗ್ಗೆ ಅರಿವು ಇಲ್ಲದೇ ಆಟವನ್ನು ಆಡುತ್ತಾ ಇದ್ದರು. ಆಗ್ಗಾಗೆ ಕುಟುಂಬಸ್ಥರ ಮಾತು ಹಾಗೂ ಶುಭ ಸಮಾಚಾರವಿದ್ದರೆ ಅದನ್ನು ತುಂಬಾ ರಿಕ್ವೆಸ್ಟ್ ಮಾಡಿದ ಮೇಲೆ ಬಿಗ್ ಬಾಸ್ ಟಾಸ್ಕ್ ಆಡಿ ಅದನ್ನು ಪಡೆದುಕೊಳ್ಳುತ್ತಾ ಇದ್ದರು. ಈಗ ಎಲ್ಲದ್ದಕ್ಕೂ ಕೂಡ ಬ್ರೇಕ್ ಬಿದ್ದಿದ್ದು ಫಿನಾಲೆ ಹಂತಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಬಂದು ತಲುಪಿದೆ. ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಬರಲು ಕಾತುರದಿಂದ ಕಾಯುತ್ತಾ ಇದ್ದಾರೆ.

ಫಿನಾಲೆ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಲು ಆರು ಮಂದಿ ಚನ್ನಾಗಿ ರೆಡಿಯಾಗುತ್ತಾ ಇದ್ದಾರೆ. ಈಗಾಗಲೇ ಬ್ಯೂಟಿಷಿಯನ್‌ಗಳು ಸ್ಪರ್ಧಿಗಳಿಗೆ ಟಚ್ ಆಫ್ ಮಾಡಿದ್ದಾರೆ. ಇಷ್ಟು ದಿನ ಅವರವರೇ ರೆಡಿಯಾಗುತ್ತಾ ಇದ್ದರು ಈಗ ಮತ್ತಷ್ಟು ಮಿಂಚಲು ಸಜ್ಜಾಗಿದ್ದಾರೆ. ಇವರು ಎಲ್ಲಾ ಸ್ಪರ್ಧಿಗಳಲ್ಲೂ ಕೂಡ ಆತ್ಮವಿಶ್ವಾಸ ಹೆಚ್ಚಾಗಿದೆ ನಾನೇ ಗೆಲುವು ಪಡೆಯೋದು ಎಂದು ಲೆಕ್ಕಾಚಾರ ಹಾಕಿದ್ದಾರೆ.
ಬಿಗ್ ಬಾಸ್ ಗೆಲ್ಲೋದು ಸಮರ್ಥರ ಅಸಮರ್ಥರ?
ಆರು ಮಂದಿ ಸ್ಪರ್ಧಿಗಳ ಎದೆಯಲ್ಲೂ ಕೂಡ ಈಗ ಢವ ಢವ ಶುರುವಾಗಿದೆ. ನಮ್ಮಲ್ಲಿ ಯಾರಪ್ಪ ಗೆಲ್ತಾರೆ ಎಂಬುವುದು ಅವರಲ್ಲಿಯೇ ಗೊಂದಲವನ್ನು ಸೃಷ್ಟಿಸಿದೆ. ಎಲ್ಲರಿಗೂ ಕೂಡ ಅಭಿಮಾನಿಗಳು ಇದ್ದಾರೆ ಯಾರು ಅತಿ ಹೆಚ್ಚು ಮತಗಳನ್ನು ಪಡೆದು ವಿನ್ನರ್ ಆಗುತ್ತಾರೆ ಎಂಬುದನ್ನು ಈಗ ನಿಖರವಾಗಿ ಹೇಳಲು ಸಾಧ್ಯವಾಗದಾಗಿದೆ. ಸಂಗೀತಾ, ಕಾರ್ತಿಕ್, ಪ್ರತಾಪ್ ಹಾಗೂ ವಿನಯ್ ನಡುವೆ ಭಾರೀ ಪೈಪೋಟಿ ಇದೆ. ವರ್ತೂರ್ ಸಂತೋಷ್ ಗೆಲುವು ಪಡೆಯಲಿದ್ದಾರೆ ಎಂಬುದು ಅವರ ಅಭಿಮಾನಿಗಳ ವಾದವಾಗಿದೆ.
ಈಗ ಬಿಗ್ ಬಾಸ್ ಮನೆಯಲ್ಲಿ ಸಮರ್ಥರಿಗಿಂತ ಅಸಮರ್ಥರಾಗಿ ಎಂಟ್ರಿ ಕೊಟ್ಟ ಗುಂಪಿನ ಸಂಖ್ಯೆಯೇ ದೊಡ್ಡದಿದೆ. ಸಮರ್ಥರಾಗಿ ವಿನಯ್ ಹಾಗೂ ತುಕಾಲಿ ಸಂತೋಷ್ ಮಾತ್ರ ಉಳಿದುಕೊಂಡಿದ್ದಾರೆ. ಅಸಮರ್ಥರಾಗಿ ಕಾರ್ತಿಕ್, ಸಂಗೀತಾ, ವರ್ತೂರು ಸಂತೋಷ್, ಪ್ರತಾಪ್ ನಾಲ್ಕು ಮಂದಿ ಇದ್ದು ಯಾರ ಮುಡಿಗೆ ಬಿಗ್ ಬಾಸ್ 10ರ ಟ್ರೋಫಿ ಏರಲಿದೆ ಎಂಬುದನ್ನು ನೋಡಬೇಕಾಗಿದೆ.


Click it and Unblock the Notifications











