'ನೀವು ಅತ್ತರೆ ಪ್ರೀತಿ ನಾನು ಅಪ್ಪ ಅಮ್ಮನನ್ನು ನೆನೆಸಿಕೊಂಡು ಅತ್ತರೆ ಸಿಂಪತಿನಾ?: ವಿನಯ್‌ಗೆ ತಿರುಗೇಟು ಕೊಟ್ಟ ಪ್ರತಾಪ್!
ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಕೂಡ ಪ್ರತಾಪ್ ಬಾಯಿ ಮುಚ್ಚಿಕೊಂಡೆ ಇದ್ದು ಇಲ್ಲಿಯ ತನಕ ಬಂದಿದ್ದಾರೆ. ಯಾರು ಏನೇ ಅಂದರೂ ಕೂಡ ಅದಕ್ಕೆ ಓವರ್ ರಿಯಾಕ್ಟ್ ಮಾಡದೆ ಜನರ ಮನಸ್ಸನ್ನು ಗೆದ್ದಿದ್ದಾರೆ. ವೋಟ್ ಮೂಲಕ ಅವರನ್ನು ಗೆಲ್ಲಿಸಿಕೊಂಡು ಗ್ರಾಂಡ್ ಫಿನಾಲೆ ತನಕ ಬಂದಿದ್ದಾರೆ. ಇದು ವಿನಯ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲಾ ವಿಷಯದಲ್ಲೂ ಪ್ರತಾಪ್ ಹಾಗೂ ವಿನಯ್ ನಡುವೆ ಶೀತಲ ಸಮರ ನಡೆಯುತ್ತಿದೆ.
ದೊಡ್ಮನೆಗೆ ಪ್ರತಾಪ್ ಕಾಲಿಟ್ಟಾಗಿನಿಂದಲೂ ವಿನಯ್ ಒಂದಲ್ಲ ಒಂದು ವಿಚಾರಕ್ಕೆ ಅವರನ್ನ ಕೆಣಕುತ್ತಲೇ ಬಂದಿದ್ದಾರೆ. ಮೊದಲು ನೀನು ಯಾವ ಡ್ರೋನ್ ಕಂಡು ಹಿಡಿದಿದ್ದೀಯಾ ಎಂದು ಶುರು ಮಾಡಿ, ಸಿಂಪತಿ ಕಾರ್ಡ್ ಪ್ಲೇ ಎಂದೆಲ್ಲಾ ಮಾತಾಡಿದ್ದಾರೆ. ಕಳೆದೆರಡು ವಾರದ ಹಿಂದೆ ಕೂಡ ಪ್ರತಾಪ್ ಜೊತೆಗೆ ವಿನಯ್ ಜೋರಾಗಿ ಜಗಳವನ್ನು ಮಾಡಿಕೊಂಡಿದ್ದರು. ಪ್ರತಾಪ್ ಏನು ಕಡಿಮೆ ಇಲ್ಲ ವಿನಯ್ ತಮ್ಮ ಹೆಸರನ್ನು ಎಲ್ಲೆಲ್ಲಿ ತೆಗೆದುಕೊಳ್ಳುತ್ತಾರೋ ಅಲ್ಲಿ ವಿನಯ್ ಹೆಸರನ್ನೇ ಪ್ರತಾಪ್ ತೆಗೆದುಕೊಳ್ಳುತ್ತಾರೆ.

ಬಿಗ್ ಬಾಸ್ ಮನೆಯಲ್ಲಿ ಫೈನಲಿಸ್ಟ್ ಆಗಲು ಯಾರಿಗೆ ಅರ್ಹತೆ ಇಲ್ಲ ಎಂದು ಕೇಳಿದಾಗ ವಿನಯ್ ಪ್ರತಾಪ್ ಹೆಸರು ಹೇಳಿದ್ದರು. ಪ್ರತಾಪ್ ಕೂಡ ವಿನಯ್ ಹೆಸರನ್ನ ಹೇಳಿದ್ದರು. ಜೊತೆಗೆ ವಿನಯ್ ಅವರಿಗೆ ಆರನೇಯ ಸ್ಥಾನವನ್ನು ಕೊಟ್ಟಿದ್ದರು. ವಿನಯ್ ಕೂಡ ಪ್ರತಾಪ್ ಗೆ ಆರನೇ ಸ್ಥಾನವನ್ನೇ ಕೊಟ್ಟಿದ್ದರು. ಹೀಗೆ ಪ್ರತಾಪ್ ಹಾಗೂ ವಿನಯ್ ನಡುವೆ ಶೀತಲ ಸಮರ ನಡೆಯುತ್ತಿದೆ.
ಡ್ರೋನ್‌ಗೆ ವಾರ್ನಿಂಗ್ ಮಾಡಿದ ದೊಡ್ಮನೆಯ ಆನೆ
ಪ್ರತಾಪ್ ಹಾಗೂ ವಿನಯ್ ನಡುವಿನ ಜಟಾಪಟಿ ಇಂದಿನ ಟಾಸ್ಕ್ ವೇಳೆ ಮತ್ತೆ ಬೆಳಕಿಗೆ ಬಂದಿದೆ. ಇದರಲ್ಲಿ ವಿನಯ್ ಪ್ರತಾಪ್‌ಗೆ ವಾರ್ನಿಂಗ್ ಮಾಡಿದಂತೆ ಕಾಣಿಸುತ್ತಾ ಇದೆ. ನನ್ನ ಬಗ್ಗೆ ಸರಿಯಾದ ರೀತಿಯಲ್ಲಿ ಮೊದಲು ಮಾತನಾಡುವುದನ್ನ ಕಲಿತುಕೋ ಎಂದು ಹೇಳಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋದ ವಿನಯ್ ಪರಿಣಾಮ ನೆಟ್ಟಗೆ ಇರೋದಿಲ್ಲ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ. ನಂತರ ಪ್ರತಾಪ್ ಫೋಟೋವನ್ನು ಅಂಟಿಸಿ ಜೋರಾಗಿ ಹೊಡೆದಿದ್ದಾರೆ. ಇಲ್ಲಿ ಪ್ರತಾಪ್ ಫೋಟೋಗೆ ಹೊಡೆಯುವಾಗ ವಿನಯ್ ಮುಖದಲ್ಲಿ ಅಷ್ಟೇ ಕೋಪವಿರುವುದು ಎಂದು ಕಾಣುತ್ತಿದೆ.

ವಿನಯ್‌ಗೆ ತಿರುಗೇಟು ಕೊಟ್ಟ ಪ್ರತಾಪ್
ಪ್ರತಾಪ್‌ಗೆ ವಿನಯ್ ಹೇಳಿದ್ದು ಸ್ವಲ್ಪವೂ ಸಹ ಇಷ್ಟವಾಗಿಲ್ಲ ಇದಕ್ಕೆ ಸರಿಯಾದ ರೀತಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ವಿನಯ್ ರೀತಿಯಲ್ಲಿ ಮಿಮಿಕ್ರಿಯನ್ನ ಮಾಡಿ ಮನೆಯ ಎಲ್ಲರನ್ನು ಕೂಡ ನಗಿಸಿದ್ದಾರೆ. ಪ್ರತಾಪ್ ಪ್ರತಾಪ್ ಎಂದು ಜೋರು ಮಾತಿನಲ್ಲಿ ಮಾತನಾಡಿದರೆ ಇಲ್ಲಿ ಯಾರೂ ಕೂಡ ಹೆದರಿಕೊಳ್ಳುವವರು ಇಲ್ಲ ಎಂದು ಹೇಳಿದ್ದಾರೆ. ನೀವು ಅತ್ತರೆ ಅದು ಪ್ರೀತಿ ನಾನು ನನ್ನ ತಂದೆ-ತಾಯಿಯನ್ನು ನೆನೆಸಿಕೊಂಡು ಅತ್ತರೆ ಅದು ಸಿಂಪತಿ ಎಂಬ ಮಾತನ್ನು ಕೂಡ ಇಲ್ಲಿ ಪ್ರತಾಪ್ ಮುಂದೆ ಹೇಳಿದ್ದಾರೆ. ವಿನಯ್ ಏನೋ ಮಾತನಾಡಲು ಬಂದಾಗ ಇಲ್ಲಿ ನಾನು ಮಾತನಾಡಿದ್ದನ್ನು ನೀವು ಕೇಳಿಸಿಕೊಳ್ಳಬೇಕು ಎಂದು ಕೂಡ ಹೇಳಿದ್ದು ಸಂಗೀತಾ ಮುಖದಲ್ಲಿ ನಗು ಬಂದಿದೆ.
ವರ್ಕ್ ಆಯ್ತ ಕಿಚ್ಚ ಸುದೀಪ್ ಮಾತು
ಈಶಾನಿ ಕಾಗೆ ಕಕ್ಕ ಮಾಡಿಕೊಂಡು ಮನೆಯ ತುಂಬೆಲ್ಲ ಓಡಾಡುತ್ತಿದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಾಪ್‌ಗೆ ಕಿಚ್ಚ ಸುದೀಪ್ ಒಂದು ಕಿವಿಮಾತು ಹೇಳಿದ್ದರು. ಯಾರೇ ಏನೇ ಮಾತನಾಡಿದರು ಅದಕ್ಕೆ ವಾಪಸ್ ತಿರುಗೇಟು ನೀಡಬೇಕು ಎಂದು ಹೇಳಿದ್ದರು. ಅದೇ ಮಾತನ್ನು ಇಲ್ಲಿ ಪ್ರತಾಪ್ ಪಾಲಿಸುತ್ತಾ ಇರುವಂತೆ ಕಾಣಿಸುತ್ತಿದೆ. ಯಾರು ಏನೇ ಅಂದರೂ ಕೂಡ ಈಗ ಸುಮ್ಮನೆ ಇರದೆ ಅವರಿಗೆ ತಿರುಗೇಟನ್ನ ನೀಡುತ್ತಿದ್ದು ಇಲ್ಲಿ ಕಿಚ್ಚ ಸುದೀಪ್ ಅವರು ಹೇಳಿದ ಮಾತು ವರ್ಕೌಟ್ ಆಗಿರುವಂತೆ ಕಾಣಿಸುತ್ತಿದೆ.


Click it and Unblock the Notifications











